Modi Ugadi Wishes: ಯುಗಾದಿಗೆ ಮೋದಿ ಶುಭಾಶಯ: ಕನ್ನಡ ಸೇರಿ ವಿವಿಧ ಭಾಷೆಯಲ್ಲಿ ಟ್ವೀಟ್
ದೆಹಲಿ ಏಪ್ರಿಲ್ 9: ರಾಜಕೀಯ ಗಣ್ಯರು ನಾಡಿನ ಸಮಸ್ತ ಜನರಿಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಾಡಿನ ಸಮಸ್ತ ಜನರಿಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಇಂದು ಎಕ್ಸ್ ಮೂಲಕ ಕನ್ನಡದಲ್ಲಿ ಯುಗಾದಿ ಹಬ್ಬದ ಶುಭ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, 'ಯುಗಾದಿಯು ಹೊಸತನ ಮತ್ತು ನವೀಕರಣದ ಭರವಸೆಯೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಶುಭಾಶಯಗಳು. ಎಲ್ಲರಿಗೂ ಅಪರಿಮಿತ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿದ ವರ್ಷವನ್ನು ಆಶಿಸುತ್ತೇನೆ. ಈ ಶುಭ ಸಂದರ್ಭವು ಜೀವನದ ಪ್ರತಿಯೊಂದು ವಿಷಯದಲ್ಲೂ ನಿಮಗೆ ಸಂತೋಷವನ್ನು ತರಲಿ' ಎಂದಿದ್ದಾರೆ.

ಜೊತೆಗೆ ಸಿಎಂ ಸಿದ್ದರಾಮಯ್ಯ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ 'ಎಕ್ಸ್' ನಲ್ಲಿ, 'ದುಃಖದ ಕಹಿಬೇವು, ಸಂತಸದ ಸಿಹಿಬೆಲ್ಲ, ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ, ಭರವಸೆಯೊಂದಿಗೆ ಮುನ್ನಡೆಯಬೇಕು ಎನ್ನುವುದೇ ಯುಗಾದಿಯ ಜೀವನ ಸಂದೇಶ. ಯುಗ ಪರಿವರ್ತನೆಯ ಸಂದೇಶದ ಯುಗಾದಿ ಹಬ್ಬ ನಾವೆಲ್ಲ ಬಯಸುವ ಬದಲಾವಣೆಯನ್ನು ಹೊತ್ತು ತರಲಿ. ಸಮಸ್ತ ಜನರ ಬಾಳಲ್ಲಿ ಹೊಸ ಉತ್ಸಾಹ, ಹೊಸ ಚಿಂತನೆ, ಹೊಸ ಭರವಸೆಗಳನ್ನು ತುಂಬಲಿ. ಬೆಲ್ಲದಂತ ಸುಖ - ಸಮೃದ್ಧಿ ಮಾತ್ರವೇ ನಿಮ್ಮೆಲ್ಲರ ಬದುಕಲ್ಲಿ ತುಂಬಿರಲಿ ಎಂದು ಹಾರೈಸುತ್ತೇನೆ. ನಾಡಬಾಂಧವರಿಗೆ ಯುಗಾದಿಯ ಶುಭಾಶಯಗಳು' ಎಂದು ಬರೆದಿದ್ದಾರೆ.
ಎಲ್ಲರಿಗೂ ಯುಗಾದಿಯ ಶುಭಾಶಯಗಳು! pic.twitter.com/P0tL19AZ9D
— Narendra Modi (@narendramodi) April 9, 2024
ಅಲ್ಲದೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಯುಗಾದಿ ಹಬ್ಬದ ಶುಭ ಕೋರಿದ್ದಾರೆ. 'ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಹೊಸತು ಎಂದರೆ ಸಂಭ್ರಮ. ಹೊಸತು ಎಂದರೆ ಉಲ್ಲಾಸ. ಹೊಸತು ಎಂದರೆ ಉತ್ಸಾಹ, ಹೊಸತು ಎಂದರೆ ಉತ್ಸವ. ಈ ಯುಗಾದಿ ಎಲ್ಲ ಹೊಸತನಕ್ಕೆ ಮುನ್ನುಡಿಯಾಗಲಿ. ಅನ್ನದಾತನ ಬದುಕು ಹಸನಾಗಲಿ, ದುಡಿವ ಕೈಗಳಿಗೆ ಶಕ್ತಿ ತುಂಬಲಿ. ಎಲ್ಲರ ಬದುಕು ನವೀಕರಣಗೊಳ್ಳಲಿ. ನಲಿವು ನಿರಂತರವಾಗಿರಲಿ' ಎಂದು ಬರೆದಿದ್ದಾರೆ. ಇದರೊಂದಿಗೆ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.
— DK Shivakumar (@DKShivakumar) April 9, 2024
ಹೊಸತು ಎಂದರೆ ಸಂಭ್ರಮ. ಹೊಸತು ಎಂದರೆ ಉಲ್ಲಾಸ. ಹೊಸತು ಎಂದರೆ ಉತ್ಸಾಹ, ಹೊಸತು ಎಂದರೆ ಉತ್ಸವ. ಈ ಯುಗಾದಿ ಎಲ್ಲ ಹೊಸತನಕ್ಕೆ ಮುನ್ನುಡಿಯಾಗಲಿ.
ಅನ್ನದಾತನ ಬದುಕು ಹಸನಾಗಲಿ, ದುಡಿವ ಕೈಗಳಿಗೆ ಶಕ್ತಿ ತುಂಬಲಿ. ಎಲ್ಲರ ಬದುಕು ನವೀಕರಣಗೊಳ್ಳಲಿ. ನಲಿವು ನಿರಂತರವಾಗಿರಲಿ.#HappyUgadi pic.twitter.com/Z8XcIA27bQ
ಕೇಂದ್ರ ಸಚಿವ ಅಮಿತ್ ಶಾ ಕೂಡ ಯುಗಾದಿ ಹಬ್ಬದ ಶುಭಾಶಯಗಳನ್ನು ಕನ್ನಡದಲ್ಲಿ ಹಂಚಿಕೊಂಡಿದ್ದಾರೆ. 'ಯುಗಾದಿಯ ಶುಭ ಸಂದರ್ಭದಲ್ಲಿ ಕರ್ನಾಟಕದ ನನ್ನ ಎಲ್ಲಾ ಸಹೋದರ-ಸಹೋದರಿಯರಿಗೆ ಹೊಸ ವರ್ಷದ ಶುಭಕಾಮನೆಗಳು. ಸಂತೋಷದ ಈ ಸಂದರ್ಭದಲ್ಲಿ ಹಬ್ಬದ ಸ್ಫೂರ್ತಿ ಮತ್ತು ಸೊಬಗು ಸದಾ ನಿಮ್ಮ ಜೊತೆಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು' ಎಂದು ಅವರು ಬರೆದಿದ್ದಾರೆ.
ಯುಗಾದಿಯ ಶುಭ ಸಂದರ್ಭದಲ್ಲಿ ಕರ್ನಾಟಕದ ನನ್ನ ಎಲ್ಲಾ ಸಹೋದರ-ಸಹೋದರಿಯರಿಗೆ ಹೊಸ ವರ್ಷದ ಶುಭಕಾಮನೆಗಳು. ಸಂತೋಷದ ಈ ಸಂದರ್ಭದಲ್ಲಿ ಹಬ್ಬದ ಸ್ಫೂರ್ತಿ ಮತ್ತು ಸೊಬಗು ಸದಾ ನಿಮ್ಮ ಜೊತೆಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
— Amit Shah (Modi Ka Parivar) (@AmitShah) April 9, 2024
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. pic.twitter.com/kGoFOlQ2pG
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಯುಗಾದಿ ಹಬ್ಬದ ಶುಭ ಹಾರೈಸಿದ್ದಾರೆ. 'ನಾಡಿನ ಸಮಸ್ತ ಜನತೆ ಹಿಂದೂ ನವ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಶ್ರೀ ಕ್ರೋಧಿ ನಾಮ ಸಂವತ್ಸರವು ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಭರವಸೆಯನ್ನು ನೀಡಿ, ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಮೂಡಿಸಲಿ ಎಂದು ಪ್ರಾರ್ಥಿಸುತ್ತೇನೆ. ಸರ್ವರಗೂ ಶುಭವಾಗಲಿ....' ಎಂದು ಬರೆದಿದ್ದಾರೆ.
ನಾಡಿನ ಸಮಸ್ತ ಜನತೆ ಹಿಂದೂ ನವ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
— Basavaraj S Bommai (Modi Ka Parivar) (@BSBommai) April 9, 2024
ಶ್ರೀ ಕ್ರೋಧಿ ನಾಮ ಸಂವತ್ಸರವು ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಭರವಸೆಯನ್ನು ನೀಡಿ, ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಮೂಡಿಸಲಿ ಎಂದು ಪ್ರಾರ್ಥಿಸುತ್ತೇನೆ.
ಸರ್ವರಗೂ ಶುಭವಾಗಲಿ....#bommaiforhaverigadag pic.twitter.com/4qCRAZScAA












Click it and Unblock the Notifications