Bengaluru Karaga 2024: ಬೆಂಗಳೂರು ಕರಗಕ್ಕೆ ಕ್ಷಣಗಣನೆ ಆರಂಭ-ಎಷ್ಟು ದಿನ ಹಾಗೂ ಯಾವೆಲ್ಲ ಕಾರ್ಯಕ್ರಮಗಳಿರಲಿವೆ?-ಮಾಹಿತಿ, ವಿವರ
ಬೆಂಗಳೂರು, ಏಪ್ರಿಲ್, 14: ಇದೇ ಏಪ್ರಿಲ್ 15ರಂದು ಐತಿಹಾಸಿಕ ಬೆಂಗಳೂರು ಕರಗ ಮಹೊತ್ಸೋವಕ್ಕೆ ಚಾಲನೆ ನೀಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ಮಹೋತ್ಸವ ಎಲ್ಲಿಯವರೆಗೂ ನಡೆಯಲಿದೆ, ಈ ಬಾರಿ ಕರಗ ಹೋರುವವರು ಯಾರು ಹಾಗೂ ಯಾವೆಲ್ಲ ಕಾರ್ಯಕ್ರಮಗಳು ಇರುತ್ತವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಎಲ್ಲಿಯವರೆಗೂ ಕರಗ?: ಬೆಂಗಳೂರು ಕರಗ ಮಹೋತ್ಸವ ಏಪ್ರಿಲ್ 15ರಿಂದ 23 ರವರೆಗೆ ನಡೆಯಲಿದೆ ಎಂದು ತಿಳಿದುಬಂದಿದೆ. ಏಪ್ರಿಲ್ 23ರ ಚೈತ್ರ ಪೌರ್ಣಮಿಯ ದಿವಸದಂದು ಕರಗ ಮಹೋತ್ಸವ ಮುಕ್ತಾಯವಾಗಲಿದೆ. ಇನ್ನು ಪ್ರತಿ ವರ್ಷದಂತೆಯೇ ಈ ಬಾರಿಯ ಕರಗ ಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಲು ಧರ್ಮರಾಯಸ್ವಾಮಿ ದೇವಾಲಯದ ಆಡಳಿತ ಮಂಡಳಿ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

ಕರಗ ಹೋರುವವರು ಯಾರು: ಇನ್ನು ಕರಗವನ್ನು ಕರಗದ ಪೂಜಾರಿ ಎ.ಜ್ಞಾನೇಂದ್ರ ಅವರೇ ಹೊತ್ತು ಸಾಗಲಿದ್ದು, ಇನ್ನು ಅವರನ್ನು ಮುಜರಾಯಿ ಇಲಾಖೆ ಮತ್ತು ಧರ್ಮರಾಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಆಯ್ಕೆ ಮಾಡಿದೆ. ಇನ್ನು ಜ್ಞಾನೇಂದ್ರ ಅವರು ಹದಿಮೂರನೇ ಬಾರಿ ಹೊರುತ್ತಿರುವ ಕರಗ ಇದಾಗಿದೆ.
ಕಾರ್ಯಕ್ರಮಗಳ ಪಟ್ಟಿ: ಏಪ್ರಿಲ್ 15ರ ರಾತ್ರಿ 10ಕ್ಕೆ ರಥೋತ್ಸವ ಧ್ವಜಾರೋಹಣ, ಏಪ್ರಿಲ್ 16ರಿಂದ 19 ಪ್ರತಿ ದಿನ ವಿಶೇಷ ಪೂಜೆ ಮತ್ತು ಮಂಗಳಾರತಿ, ಏಪ್ರಿಲ್ 21 ಹಸಿ ಕರಗ ಆಯೋಜನೆ, ಏಪ್ರಿಲ್ 23 ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯ ರಥೋತ್ಸವ, ಏಪ್ರಿಲ್ 24 ದೇವಸ್ಥಾನದಲ್ಲಿ ಗಾವು ಪೂಜೆ ನಡೆಯಲಿದ್ದು, ಕೊನೆಯ ದಿನವಾದ ಏಪ್ರಿಲ್ 25ಕ್ಕೆ ವಸಂತೋತ್ಸವ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications