Get Updates
Get notified of breaking news, exclusive insights, and must-see stories!

NWKRTC Special Bus: ಯುಗಾದಿ ಹಬ್ಬಕ್ಕೆ ವಾಯುವ್ಯ ಸಾರಿಗೆಯಿಂದ 'ವಿಶೇಷ ಬಸ್‌ಗಳ' ವ್ಯವಸ್ಥೆ: ಗಮನಿಸಿ

ಹುಬ್ಬಳ್ಳಿ, ಏಪ್ರಿಲ್ 03: ಕರ್ನಾಟಕ ಜನರು ಯುಗಾದಿ ಹಬ್ಬ ಬರ ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಮನೆ ಮನೆಗಳಲ್ಲೂ ಅಗತ್ಯ ಸಿದ್ಧತೆ ನಡೆಯುತ್ತಿದೆ. ಭಾರತೀಯರ ಪಾಲಿನ ಈ ಹೊಸ ವರ್ಷವನ್ನು ಬಹು ವಿಜೃಂಭಯಿಂದ ಆಚರಿಸಲಾಗುತ್ತದೆ. ಬೇರೆ ಕೆಲಸ ಮಾಡುವವರು ಈ ದಿನ ತಮ್ಮ ಊರುಗಳಿಗೆ ತೆರಳಿ ಹಬ್ಬ ಆಚರಿಸುತ್ತಾರೆ. ಈ ಕಾರಣಕ್ಕೆ ಊರುಗಳಿಗೆ ತೆರಳುವವರಿಗೆ ಅನುಕೂಲವಾಲೆಂದು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಹಬ್ಬಕ್ಕೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ.

ಹೌದು, ಯುಗಾದಿ ಹಬ್ಬಕ್ಕೆ ಸಾಲು ಸಾಲು ರಜೆ ರಜೆಗಳು ಇವೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.

NWKRTC Will Operate Special Buses from Hubballi for Ugadi Festival Know Route Details

ಏ. 6- 15 ರವರೆಗೆ ವಿಶೇಷ ಬಸ್‌ ವ್ಯವಸ್ಥೆ

ಯುಗಾದಿ ಜೊತೆಗೆ ಕೆಲವೇ ದಿನ ಅಂತರದಲ್ಲಿ ಮುಸಲ್ಮಾನರ ರಂಜಾನ್ ಹಬ್ಬ ಸಹ ಇದೆ. ಹಬ್ಬದ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರ ಓಡಾಡುವ ಕಾರಣಕ್ಕೆ ಏಪ್ರಿಲ್ 6 ರಿಂದ 15 ರವರೆಗೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಬೆಂಗಳೂರು, ಪುಣೆ, ಗೋವಾ ಮತ್ತಿತರ ಪರ ಊರುಗಳಲ್ಲಿ ನೆಲೆಸಿರುವ ಸರ್ಕಾರಿ, ಖಾಸಗಿ ಉದ್ಯೋಗಿಗಳು, ಉದ್ಯಮಿಗಳು, ಮತ್ತಿತರ ಹಲವರು ಹಬ್ಬದ ಆಚರಣೆಗಾಗಿ ಸ್ವಂತ ಊರುಗಳಿಗೆ ಆಗಮಿಸಲಿದ್ದಾರೆ. ಅವರ ಅನುಕೂಲಕ್ಕಾಗಿ ಏಪ್ರಿಲ್ 5ರಂದು ಶುಕ್ರವಾರ ದಿಂದ 7 ರವಿವಾರ ವವರೆಗೆ ಬೆಂಗಳೂರು, ಪುಣೆ, ಗೋವಾ ಮತ್ತಿತರ ಪ್ರಮುಖ ಸ್ಥಳಗಳಿಂದ ಹುಬ್ಬಳ್ಳಿಗೆ ಹೆಚ್ಚುವರಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

NWKRTC Will Operate Special Buses from Hubballi for Ugadi Festival Know Route Details

ಹುಬ್ಬಳ್ಳಿಯಿಂದ ವಿವಿಧೆಡೆ ಬಸ್ ಸಂಚಾರ

ಇನ್ನು ಹಬ್ಬದ ದಿನಗಳ ರಜೆ ಮುಗಿಸಿ ಮತ್ತೆ ತಮ್ಮ ಕೆಲಸದ ಸ್ಥಳಗಳಿಗೆ ಮರಳುವವರಿಗೆ ಸಹಕಾರಿಯಾಗಲೆಂದು ಏಪ್ರಿಲ್ 14 ರಂದು ರವಿವಾರ ಹಾಗೂ 15 ರಂದು ಸೋಮವಾರ ಹುಬ್ಬಳ್ಳಿ- ಬೆಂಗಳೂರು, ಪುಣೆ, ಗೋವಾ, ಮಂಗಳೂರು, ವಿಜಯಪುರ, ಬಾಗಲಕೋಟೆ ಇನ್ನಿತರ ಜಿಲ್ಲೆಗಳಿಗೂ ಹೆಚ್ಚುವರಿ ವಿಶೇಷ NWKRTC ಬಸ್‌ಗಳನ್ನು ಬಿಡಲಾಗುತ್ತದೆ.

ಈ ಅವಧಿಯಲ್ಲಿ ಜಿಲ್ಲೆಯೊಳಗೆ ವಿವಿಧ ಸ್ಥಳಗಳು ಹಾಗೂ ಅಕ್ಕಪಕ್ಕದ ಜಿಲ್ಲೆಗಳ ನಡುವೆಯೂ ಸಹ ಪ್ರಯಾಣಿಕರ ಹೆಚ್ಚಳಕ್ಕೆ ತಕ್ಕಂತೆ ಹೆಚ್ಚುವರಿ ಬಸ್ಸುಗಳನ್ನು ಬಿಡಲಾಗುತ್ತದೆ ಎಂದು ರಾಮನಗೌಡರ ಮಾಹಿತಿ ನೀಡಿದರು.

ವಿಶೇಷ ಬಸ್‌ಗಳ ಆಸನ ಕಾಯ್ದಿರಿಸಲು ಸಂಪರ್ಕಿಸಿ

ಎಂದಿನಂತೆ ಈ ಭಾರಿಯು ಹಬ್ಬದ ಸಂದರ್ಭದಲ್ಲಿ ಬಸ್‌ನ ನಾಲ್ಕು ಅಥವಾ ಹೆಚ್ಚಿನ ಸೀಟುಗಳನ್ನು ಕಾಯ್ದಿರಿಸಿದರೆ ಏಕಮುಖ ಪ್ರಯಾಣಕ್ಕೆ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಎರಡು ಬದಿ ಪ್ರಯಾಣ ಆಸನ ಕಾಯ್ದಿರಿಸಿದವರಿಗೆ ಶೇಕಡಾ 10ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಅವರು ಹೇಳಿದರು. ಟಿಕೆಟ್ ಬುಕ್ಕಿಂಗ್‌ಗಾಗಿ ಪ್ರಯಾಣಿಕರು https://www.ksrtc.in ಅಥವಾ KSRTC Mobile App ಗೆ ಸಂಪರ್ಕಿಸಬೇಕಿದೆ.

ಹಬ್ಬಗಳಿಗೆ ರಜೆ ಹಾಕುವವರ ಸಂಖ್ಯೆಯು ಹೆಚ್ಚಿರುತ್ತದೆ. ಏಪ್ರಿಲ್ 7 ರಂದು ರವಿವಾರ, 9 ರಂದು ಮಂಗಳವಾರ ಚಾಂದ್ರಮಾನ ಯುಗಾದಿ, 11ರಂದು ಗುರುವಾರ ರಂಜಾನ್,13 ರಂದು ಎರಡನೇ ಶನಿವಾರ ಹಾಗೂ14 ರಂದು ರವಿವಾರ ಹೀಗೆ ಎಂಟು ದಿನಗಳ ಅವಧಿಯಲ್ಲಿ 5 ಸಾರ್ವಜನಿಕ ರಜೆಗಳು ಇವೆ. ಕೆಲವು ಮುಂದಿನ ವಾರಪೂರ್ತಿ ರಜೆ ಹಾಕುವವರಿದ್ದಾರೆ. ಒಟ್ಟಾರೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಶೇಷ ಬಸ್ ಬಿಡಲಾಗಿದೆ.

ಈ ಹಿಂದೆ ವಾಯವ್ಯ ಸಾರಿಗೆ ಸಂಸ್ಥೆ ವಿವಿಧ ಜಿಲ್ಲೆಗಳಿಗೆ ಹೊಸ ಬಸ್‌ಗಳನ್ನು ಆರಂಭಿಸಿತ್ತು. ಇದೀಗ ಯುಗಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಇದರಿಂದ ಊರಿಗೆ ಹೋಗುವವರಿಗೆ ಬರುವವರಿಗೆ ಸಹಾಯವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+