Ugadi 2024: ನಿಮ್ಮ ಪ್ರೀತಿಪಾತ್ರರಿಗೆ ಯುಗಾದಿ ಹಬ್ಬದ ಶುಭಾಶಯ ಹೀಗಿರಲಿ!
ನಾಡಿನೆಲ್ಲಡೆ ಯುಗಾದಿ ಹಬ್ಬದ ಸಂಭ್ರಮ. ಹಿಂದೂಗಳ ಪಾಲಿನ ಮೊದಲ ಹಬ್ಬ, ವರ್ಷದ ಮೊದಲ ಸಂಭ್ರಮ ಈ ಯುಗಾದಿ ಹಬ್ಬ. ಇದು ಹಿಂದೂಗಳ ಹೊಸ ವರ್ಷ ಕೂಡ ಹೌದು. ಇಲ್ಲಿಂದ ವರ್ಷದ ಮೊದಲ ದಿನಗಳು ಆರಂಭವಾಗುತ್ತದೆ. ಹೀಗಾಗಿ ಬಹಳ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಬೇವು ಬೆಲ್ಲವನ್ನು ಸ್ವೀಕರಿಸುವ ಮೂಲಕ ವರ್ಷದ ಖುಷಿ-ಸಂತೋಷಗಳನ್ನು ಬರ ಮಾಡಿಕೊಳ್ಳಿವುದೇ ಈ ಹಬ್ಬದ ವಿಶೇಷ.
ಯುಗಾದಿ ಹಬ್ಬದ ಸಂಭ್ರಮ ಮನೆಯಲ್ಲಿ ಹೊಸ ಚೈತನ್ಯ ತರುತ್ತದೆ. ಈ ದಿನ ಮನೆಯಲ್ಲಿ ಸಂತೋಷ ನೆಲೆ ಸಿರುತ್ತದೆ. ಹೊಸ ಬಟ್ಟೆ, ರುಚಿ-ರುಚಿಯಾದ ಅಡುಗೆ ಹೀಗೆ ಯುಗಾದಿ ಅಂದ್ರನೆ ಸಂಭ್ರಮ. ಇಂತಹ ಸಂಭ್ರಮದ ಗಳಿಗೆಯಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಮನಸಾರೆ ಶುಭಾಶಯ ಕೋರಿ ಹಾಗೂ ಹಿರಿಯವರು ಕಿರಿಯವರಿಗೆ ಹಾರೈಸಿ. ನಿಮ್ಮ ಮನೆಯವರಿಗೆ ಹಾಗೂ ಪ್ರೀತಿಪಾತ್ರರಿಗೆ ಶುಭಾಶಯ ಕೋರಲು ಇಲ್ಲಿದೆ ಕೆಲವು ವಿಶೇಷ ಸಂದೇಶಗಳು.

*ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ.. ಯುಗಾದಿ ಹಬ್ಬದ ಶುಭಾಶಯಗಳು.
*ಈ ವರ್ಷದ ಯುಗಾದಿ ನಿಮಗೆ ಹೊಸ ಭರವಸೆ ಮತ್ತು ಹೊಸ ಆರಂಭಗಳನ್ನು ತರಲಿ..ಯುಗಾದಿಯ ಶುಭಾಶಯಗಳು.
*ನಿಮ್ಮ ಬಾಳಲ್ಲಿ ಬೇವಿನ ಕಹಿಗಿಂತ ಬೆಲ್ಲದ ಸಿಹಿಯೇ ಹೆಚ್ಚಾಗಿರಲಿ ಸುಖ, ಸಮೃದ್ಧಿ, ಶಾಂತಿ ಮತ್ತು ಸೌಹಾರ್ದತೆ ನಿಮ್ಮ ಜೀವನದಲ್ಲಿ ಹೆಚ್ಚಲಿ ಯುಗಾದಿಯ ಶುಭಾಶಯಗಳು.
*ಈ ಯುಗಾದಿಯು ನಿಮ್ಮನ್ನು ನಿಮ್ಮ ಕನಸುಗಳತ್ತ ಕರೆದುಕೊಂಡು ಹೋಗಲಿ, ಈ ವರ್ಷದ ನಿಮ್ಮ ಕನಸು ನನಸಾಗಲಿ. ಯುಗಾದಿ ಹಬ್ಬದ ಶುಭಾಶಯಗಳು.

*ಬೇವು ಎಂದರೆ ಕಷ್ಟ, ಬೆಲ್ಲ ಎಂದರೆ ಸುಖ, ಕಷ್ಟಗಳೇ ಬರಲಿ ಸುಖವೇ ಬರಲಿ ಬಾಳಿನಲ್ಲಿ ಎರಡನ್ನು ಸಮಾನವಾಗಿ ಕಾಣಬೇಕು ಎಂದು ಬೇವು ಮತ್ತು ಬೆಲ್ಲ ಸೇರಿಸಿ ಯುಗಾದಿ ಯಂದು ಸವಿಯುವ ಸಂಪ್ರದಾಯವೇ ಯುಗಾದಿ. ಯುಗಾದಿ ಹಬ್ಬದ ಶುಭಾಶಯಗಳು.
*ಈ ಹೊಸ ವರ್ಷ ನಿಮಗೆ ಹೊಸ ಆರಂಭ ಭರವಸೆ ಯಶಸ್ಸಿನಿಂದ ತುಂಬಿರಲಿ ಹಳೆ ಕಹಿ ಘಟನೆಗಳನ್ನು ಮರೆತು ಈ ಹೊಸ ವರ್ಷ ನಿಮಗೆ ಹೊಸ ಹರ್ಷ ನೀಡಲೆಂದು ಹಾರೈಸುತ್ತ. ನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಯುಗಾದಿ ಹಬ್ಬದ ಶುಭಾಶಯಗಳು.
*ಬದುಕಿನ ಎಲ್ಲಾ ಕಷ್ಟಗಳೆಂಬ ಕಹಿ ದೂರಾಗಲಿ, ಬರೀ ಖುಷಿಯ ಸಿಹಿಯಷ್ಟೇ ತುಂಬಿರಲಿ ಯುಗಾದಿ ಹಬ್ಬದ ಶುಭಾಶಯಗಳು.
*ಯುಗಾದಿಯ ಸೂರ್ಯನ ಬೆಳಕು ಗತಕಾಲದ ಅಂಧಕಾರವನ್ನು ಹೋಗಲಾಡಿಸಿ ಉಜ್ವಲ ಭವಿಷ್ಯದ ಹಾದಿಯನ್ನು ಬೆಳಗಿಸಲಿ. ಯುಗಾದಿಯ ಶುಭಾಶಯಗಳು.
*ಯುಗಾದಿಯ ಈ ಶುಭ ಸಂದರ್ಭದಲ್ಲಿ, ನಿಮ್ಮ ಜೀವನವು ನಗು, ಪ್ರೀತಿ ಮತ್ತು ಹೊಸ ಆರಂಭಗಳಿಂದ ತುಂಬಿರಲಿ. ಯುಗಾದಿಯ ಶುಭಾಶಯಗಳು.












Click it and Unblock the Notifications