ಯುಗಾದಿಗಾಗಿ KSRTC, KKRTC, NWKSRTC, BMTCಯಿಂದ ನಿಮ್ಮೂರಿಗೆ ವಿಶೇಷ ಬಸ್ ಸೇವೆ-ಯಾವ್ಯಾವ ಮಾರ್ಗಗಳಿಗೆ?
Ugadi festival 2024: ಸಾಮಾನ್ಯವಾಗಿ ಯಾವುದಾದರೂ ಹಬ್ಬಗಳು ಹತ್ತಿರ ಬಂದಂತಹ ಸಂದರ್ಭಗಳಲ್ಲಿ ಸಾರಿಗೆ ಇಲಾಖೆಯು ಪ್ರಯಾಣಕರ ಅನುಕೂಲಕ್ಕೆ ತಕ್ಕಂತೆ ಹಾಗೂ ದಟ್ಟಣೆ ನಿಯಂತ್ರಿಸಲು ವಿಶೇಷ ಬಸ್‌ಗಳನ್ನು ರಸ್ತೆಗಳಿಸುತ್ತಲೇ ಇರುತ್ತದೆ. ಹಾಗೆಯೇ ಇದೀಗ ಯುಗಾದಿ ಹಿನ್ನೆಲೆ ಇಲಾಖೆಯಿಂದ 4 ವಿಭಾಗಗಳಿಂದಲೂ (KSRTC, KKRTC, NWKSRTC, BMTC) ವಿಶೇಷ ಬಸ್ ಬಿಡಲು ನಿರ್ಧರಿಸಿದೆ. ಹಾಗಾದರೆ ಯಾವ್ಯಾವ ಕಡೆಗೆ ಎಷ್ಟು ಬಸ್‌ಗಳು ಸಂಚರಿಸಲಿವೆ ಹಾಗೂ ಪ್ರಯಾಣ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇದೇ ಏಪ್ರಿಲ್ 9ರಂದು ಯುಗಾದಿ ಹಬ್ಬ ಹಿನ್ನೆಲೆ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತುಂಬಾ ಜನರು ಪ್ರಯಾಣ ಬೆಳೆಸುತ್ತಾರೆ. ಈ ವೇಳೆ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಸಾರಿಗೆ ಇಲಾಖೆಯಿಂದ 4 ವಿಭಾಗಗಳಿಂದಲೂ 2000ಕ್ಕೂ ಹೆಚ್ಚು ಬಸ್‌ಗಳನ್ನು ಬಿಡಲು ನಿರ್ಧರಿಸಿದೆ. ಹಾಗಾದರೆ ಯಾವ್ಯಾವ ವಿಭಾಗಳಿಂದ ಎಲ್ಲೆಲ್ಲಿಗೆ ಎಷ್ಟು ಬಸ್ ಸಂಚರಿಸಲಿವೆ ಹಾಗೂ ನಿಲ್ದಾಣಗಳ ಮಾಹಿತಿ ತಿಳಿಯಿರಿ.

ಭಾರತೀಯ ಸಾಂಪ್ರದಾಯದ ಪ್ರಕಾರ ಯುಗಾದಿ ಹಬ್ಬವನ್ನು ಹೊಸವರ್ಷ ಎಂದು ಕರೆಯಲಾಗುತ್ತದೆ. ಇನ್ನು ಈ ಸಂದರ್ಭದಲ್ಲಿ ಬೇಸಿಗೆ ರಜೆ ಹಿನ್ನೆಲೆ ನಗರ ಪ್ರದೇಶಗಳಿಂದ ಅದರಲ್ಲೂ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತುಂಬಾ ಜನ ಪ್ರಯಾಣ ಬೆಳೆಸುತ್ತಾರೆ. ಇನ್ನು ಈ ವರ್ಷದ ಯುಗಾದಿಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿಯಿದ್ದು, ಈ ವೇಳೆ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ನಾಲ್ಕು ನಿಗಮಗಳಿಂದ 2000ಕ್ಕೂ ಅಧಿಕ ವಿಶೇಷ ಬಸ್‌ಗಳನಗಳನ್ನು ಬಿಡಲು ಇಲಾಖೆ ನಿರ್ಧರಿಸಿದೆ.
ಏಪ್ರಿಲ್ 6ರಿಂದ 8ರವರೆಗೆ ಬೆಂಗಳೂರಿನಿಂದ ಬಸ್‌ಗಳು ರಾಜ್ಯದ ವಿವಿಧೆ ಜಿಲ್ಲೆಗಳಿಗೆ ಸಂಚಾರ ಮಾಡಲಿದ್ದು, ಏಪ್ರಿಲ್ 9 ಮತ್ತು 10ಕ್ಕೆ ಹಿಂದಿರುಗಲಿವೆ. ಇನ್ನು ವಾರಾಂತ್ಯದ ರಜೆಗಳೊಂದಿಗೆ ಸೋಮವಾರ ಒಂದು ದಿನ ರಜೆ ಹಾಕಿದರೆ ನಾಲ್ಕು ರಜೆಗಳು ಸಿಕ್ಕಂತಾಗುತ್ತದೆ. ಇದರ ಆಧಾರದ ಮೇಳೆ ಊರಿಗೆ ಹಾಗೂ ಪ್ರವಾಸಕ್ಕೆ ತೆರಳುವವರ ಸಂಖ್ಯೆ ಹೆಚ್ಚಿರುತ್ತಾರೆ. ಆದ್ದರಿಮದ ವಿಶೇಷ ಬಸ್‌ಗಳ ಕಾರ್ಯಾಚರಣೆ ಮಾಡಲಿವೆ ಎಂದು ಕೆಎಸ್‌ಆರ್‌ಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಯಾವ್ಯಾವ ವಿಭಾಗಗಳಿಂದ ಎಷ್ಟು?: KSRTCಯಿಂದ 1,750, NWKSRTC 145, KKRTC 200 ಹಾಗೂ BMTCಯಿಂದ 180 ವಿಶೇಷ ಬಸ್‌ಗಳು ಸಂಚಾರ ಮಾಡಲಿವೆ. ಈ ಪೈಕಿ ಕರ್ನಾಟಕ ಸಾರಿಗೆ, ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಇ.ವಿ ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, ಅಂಬಾರಿ ಉತ್ಸವ್ ಹಾಗೂ ಪಲ್ಲಕ್ಕಿ ಬಸ್‌ಗಳ ಜೊತೆಗೆ ಹೆಚ್ಚುವರಿ ಬಸ್‌ಗಳು ರಸ್ತೆಗಿಳಿಯಲಿವೆ ಎಂದು ತಿಳಿಸಿದೆ.
ರಾಜ್ಯ ರಾಜಧಾನಿ ಬೆಂಗಳೂರಿನ ಕೇಂದ್ರ ಬಿಂದು ಆಗಿರುವ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದಿಂದ ಬಿಎಂಟಿಸಿ ಬಸ್ ನಿಲ್ದಾಣದಿಂದ ಬಸ್‌ಗಳು ಪ್ರಯಾಣ ಆರಂಭಿಸಲಿವೆ. ದಾವಣಗೆರೆ, ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು, ಚಿತ್ರದುರ್ಗ ಸೇರಿದಂದತೆ ಮುಂತಾದ ಜಿಲ್ಲೆಗಳಿಗೆ ವಿಶೇಷ ಬಸ್‌ಗಳು ಸಂಚರಿಸಲಿವೆ ಎಂದು ತಿಳಿಸಿದೆ.
ಅಷ್ಟೇ ಅಲ್ಲದೆ ನೆರೆಯ ರಾಜ್ಯಗಳಾದ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚನಪಳ್ಳಿ, ಪುದುಚೇರಿ, ಮಧುರೈ, ಪಣಜಿ, ಶಿರಡಿ, ಪುಣೆ, ಎರ್ನಾಕುಲಂ, ಪಾಲ್‌ಘಾಟ್ ಸೇರಿದಂತೆ ಇತರೆ ಸ್ಥಳಗಳಿಗೆ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಇರಲಿದೆ ಎಂದು ತಿಳಿಸಿದೆ. ಒಟ್ಟಿನಲ್ಲಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಸಾರಿಗೆ ಇಲಾಖೆ ವಿಶೇಷ ಬಸ್‌ಗಳನ್ನು ಒದಗಿಸುತ್ತಾ ಬಂದಿರುವುದು ಸಂತಸದ ಸಂಗತಿಯಾಗಿದೆ.
ಅದರಲ್ಲೂ ಈ ಬಾರಿ ಯುಗಾದಿ ಹಬ್ಬಕ್ಕೆ ಬರೀ ರಾಜ್ಯ ಅಲ್ಲದೆ, ನೆರೆ ರಾಜ್ಯಗಳಿಗೂ ವಿಶೇಷ ಬಸ್‌ಗಳ ಸೇವೆ ನೀಡುತ್ತಿರುವುದು ಇನ್ನೂ ವಿಶೇಷವಾಗಿದೆ.












Click it and Unblock the Notifications