ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಬ್ಬಕ್ಕೆ ಮನೆ ಅಲಂಕಾರ ಹೇಗೆ ಮಾಡ್ತೀರಾ?

|
Google Oneindia Kannada News

Navratri Festival 5 Home Decor Ideas
ನವರಾತ್ರಿ ಹಿಂದಿಂದೆಯೇ ಅನೇಕ ಹಬ್ಬಗಳೂ ಬರುತ್ತವೆ. ಆದ್ದರಿಂದ ಮನೆಯನ್ನು ಹಬ್ಬಕ್ಕೆ ತಯಾರಿ ಮಾಡುವುದು ಅಷ್ಟು ಸುಲಭವಲ್ಲ. ಈ ಸಮಯದಲ್ಲಿ ಸರಳಸುಂದರವಾಗಿ ಮನೆಯನ್ನು ಸಿಂಗಾರಗೊಳಿಸುವ ಈ ಐದು ಅಂಶ ಪಾಲಿಸಿದರೆ ಮನೆಗೆ ಹಬ್ಬದ ಕಳೆ ತಾನಾಗಿಯೇ ಬರುತ್ತದೆ.

ಹಬ್ಬದ ದಿನ ಮನೆ ಅಲಂಕಾರಕ್ಕೆ 5 ಸರಳ ಸೂತ್ರ:

1. ತೋರಣ:
ತೋರಣವಿದ್ದರೇನೆ ಹಬ್ಬಕ್ಕೆ ಕಳೆ. ಮನೆಯ ಮುಖ್ಯ ಬಾಗಿಲು ಮತ್ತು ಪೂಜಾ ಕೋಣೆಯ ಬಾಗಿಲನ್ನು ಹಸಿರು ತೋರಣ ಅಥವಾ ಹೂವಿನ ತೋರಣದಿಂದ ಅಲಂಕಾರ ಮಾಡಬಹುದು. ಇಲ್ಲವೆಂದರೆ ಈಗ ಲಭ್ಯವಿರುವ ಪ್ಲಾಸ್ಟಿಕ್ ಹೂವು ಮತ್ತು ಮೆಟಲ್ ತೋರಣವನ್ನು ಹಾಕಬಹುದು. ಹಸಿರು ಎಲೆ ಮತ್ತು ಬಣ್ಣ ಬಣ್ಣದ ಹೂವಿನಿಂದ ಬಾಗಿಲನ್ನು ಅಲಂಕರಿಸಿದರೆ ಅದು ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.

2. ಅಲಂಕಾರಿಕ ವಸ್ತುಗಳು:
ಮನೆಯ ಅಲಂಕಾರಕ್ಕೆಂದು ಹೆಚ್ಚು ಹಣ ಖರ್ಚು ಮಾಡುವ ಅಗತ್ಯವಿಲ್ಲ. ಹಬ್ಬದ ದಿನ ಕುಷನ್ ಕವರ್, ಬೆಡ್ ಸ್ಪ್ರೆಡ್ ಗಳನ್ನು ಬದಲಾಯಿಸಿ ಚೆಂದವಾಗಿದ್ದನ್ನು ಹಾಕಿದರೆ ಮನೆ ತಂತಾನೆ ಸ್ವಚ್ಛ ಸುಂದರವಾಗಿ ಕಾಣುತ್ತದೆ. ಜೊತೆಗೆ ವಿಧವಿಧ ಹೂವು, ರಂಗೋಲಿ, ದೀಪಗಳನ್ನು ಬಾಗಿಲಲ್ಲಿ ಮತ್ತು ದೇವರ ಕೋಣೆಯಲ್ಲಿ ಅಲಂಕಾರಕ್ಕೆ ಇಟ್ಟರೆ ಹಬ್ಬದ ಕಳೆ ಎತ್ತಿ ತೋರುತ್ತದೆ.

3. ಸುಗಂಧ: ಮನೆಯಲ್ಲಿ ಹಬ್ಬದ ದಿನದಂದು ಸುಗಂಧ ತುಂಬಿರಲಿ. ಕರ್ಪೂರ, ಸುಗಂಧ ಪೂರಿತ ಗಂಧದ ಕಡ್ಡಿಗಳನ್ನು ಹೊತ್ತಿಸಿಡಿ. ಸುಗಂಧಪೂರಿತ ಎಣ್ಣೆಯೂ ಲಭ್ಯವಿರುವುದರಿಂದ ಅದನ್ನು ಕೊಂಡು ದೀಪಕ್ಕೆ ಬಳಸಬಹುದು. ಮನೆಗೆಂದೇ ಇರುವ ಸುಗಂಧ ದ್ರವ್ಯವನ್ನೂ ಈ ದಿನ ಬಳಸಿದರೆ ಚೆಂದ.

4. ಊಟೋಪಚಾರದ ವೈಖರಿ: ಹಬ್ಬ ಎಂದ ಮೇಲೆ ಊಟೋಪಚಾರ ಇರಲೇಬೇಕು. ಊಟ ಮಾಡಲು ಕೂರುವ ಡೈನಿಂಗ್ ಟೇಬಲ್ ಮೇಲೆ ಅಡುಗೆ ನಂತರ ಪಾತ್ರೆಗಳಲ್ಲಿ ಒಪ್ಪವಾಗಿ ಇಟ್ಟು ಜೋಡಿಸಿದರೆ ಕೂತು ತಿನ್ನಲು ಮತ್ತು ಹಬ್ಬವನ್ನು ಸಂತೋಷವಾಗಿ ಆಚರಿಸಲು ನೆರವಾಗುತ್ತದೆ ಮತ್ತು ಮನೆಗೆ ಬಂದ ಅತಿಥಿಗಳಿಗೆ ಒಳ್ಳೆಯ ಛಾಪನ್ನು ಮೂಡಿಸುತ್ತದೆ.

5. ಹೂವಿನ ಕುಂಡ: ಹಬ್ಬದ ದಿನ ಮನೆಯಲ್ಲಿರುವ ಹೂವಿನ ಕುಂಡಗಳಿಗೆ ತಾಜಾ ಹೂವನ್ನು ಬಳಸಿ ಅಥವಾ ಪ್ಲಾಸ್ಟಿಕ್ ಹೂವುಗಳಿದ್ದರೆ ಅವುಗಳನ್ನು ಮುನ್ನವೇ ಚೆನ್ನಾಗಿ ತೊಳೆದು ಒಪ್ಪವಾಗಿ ಜೋಡಿಸಿ. ಹಬ್ಬದ ದಿನ ಹೂ ಕುಂಡಗಳಿಗೆ ಸುಗಂಧ ಪೂರಿತ ಹೂವುಗಳನ್ನು ಇಟ್ಟರೆ ಮನೆ ತುಂಬ ಹಬ್ಬದ ಗಂಧ ಸುಳಿಯುತ್ತದೆ ಮತ್ತು ಮನಸ್ಸಿನ ಮೇಲೆ ಧನಾತ್ಮಕ ಪರಿಣಾಮ ಉಂಟುಮಾಡುತ್ತದೆ.

English summary
Festival decorations need not be expensive but can definitely attract and catch the eyes, set moods and motivate to enjoy. For this Navratri festival, decorate your home and bring festive mood by following 5 simple ways. Take a look at how to enhance home decor for festivals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X