ಗಣೇಶ ಚತುರ್ಥಿ 2022: ಗಣಪತಿಗೆ ಗರಿಕೆಯನ್ನು ಅರ್ಪಿಸುವುದರ ಮಹತ್ವ ತಿಳಿಯಿರಿ
ಗಣೇಶನ ಆರಾಧನೆ ಗರಿಕೆ ಇಲ್ಲದೆ ಅಪೂರ್ಣ. ಗರಿಕೆ ಒಂದು ಬಗೆಯ ಹುಲ್ಲು. ಇದು ಗಣೇಶನಿಗೆ ತುಂಬಾ ಪ್ರಿಯವಾಗಿದ್ದು, ಆತನಿಗೆ ಗರಿಕೆಯನ್ನು ಅರ್ಪಿಸಿ ತಕ್ಷಣವೇ ಸಂತುಷ್ಟನಾಗಿ ಬಯಸಿದ ವರವನ್ನು ನೀಡುತ್ತಾನೆ. ಗಣೇಶ ಪುರಾಣದ ಉಪಾಸನಾ ವಿಭಾಗದಲ್ಲಿ ದುರ್ವೋಪಾಖ್ಯಾನ ಎಂಬ ಅಧ್ಯಾಯದಲ್ಲಿ ಗರಿಕೆ ಪ್ರಾಮುಖ್ಯತೆಯನ್ನು ವಿವರವಾಗಿ ವಿವರಿಸಲಾಗಿದೆ.
ಅದರ ಪ್ರಕಾರ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣಪತಿಗೆ ಒಂದೊಂದು ಗರಿಕೆಯನ್ನು ಅರ್ಪಿಸಿದರೆ ಸುಖ: ಸಂತೋಷ ಪ್ರಾಪ್ತಿಯಾಗುತ್ತದೆ. ಗರಿಕೆಯನ್ನು ಪೂರೈಸಿದ ನಂತರ ಯಾವ ಬಯಕೆಯನ್ನು ಗಣೇಶ ಈಡೇರಿಸುತ್ತಾನೆ ಎಂದು ನಂಬಲಾಗುತ್ತದೆ. ಈ ವೇಳೆ ಅಂದುಕೊಂಡಿದ್ದೆಲ್ಲವೂ ಈಡೇರುತ್ತದೆ.
ಈ ಬಾರಿ ಗಣೇಶನ ಹಬ್ಬವನ್ನು ಆಗಸ್ಟ್ 31 ರಂದು ಆಚರಿಸಲಾಗುತ್ತದೆ. ಈ ದಿನ ಗಣಪತಿ ಪ್ರತ್ಯಕ್ಷನಾದ. ಆದುದರಿಂದ ಗಣೇಶನಿಗೆ ಗರಿಕೆಯನ್ನು ಅರ್ಪಿಸಿದರೆ ಬಯಸಿದ ವರವನ್ನು ಪಡೆಯಬಹುದು ಎಂಬ ನಂಬಿಕೆ ಇದೆ. ಹಾಗಾದರೆ ಗಣೇಶನಿಗೆ ಗರಿಕೆಯನ್ನು ಅರ್ಪಿಸುವುದರ ಪ್ರಯೋಜನಗಳು ಏನು ಎನ್ನುವುದನ್ನು ತಿಳಿಯೋಣ.
ಇದಲ್ಲದೇ, ಗಜಾನನನಿಗೆ ಮಲ್ಲಿಗೆ, ಸೇವಂತಿಗೆ, ಡೇರೆ, ಸಂಪಿಗೆ, ಗುಲಾಬಿ, ಕೇದಗೆ, ಕಮಲ, ಸೌಗಂಧಿಕಾ ಮುಂತಾದ ಹೂವುಗಳೆಂದರೆ ಬಲು ಪ್ರೀತಿ. ಜೊತೆಗೆ ಪವಿತ್ರ ತುಳಸಿ ಮತ್ತು ಬಿಲ್ವ ಪತ್ರೆ ಸೇರಿದಂತೆ 21 ಬಗೆಯ ಪತ್ರೆಗಳು ಪೂಜೆಗೆ ಬಳಸುವುದು ರೂಢಿ.

ಪುಣ್ಯ ಫಲ, ಪಾಪಗಳು ನಾಶ
ಗಣೇಶ ಪುರಾಣದಲ್ಲಿ ಭಾದ್ರಪದ ಶುಕ್ಲ ಚತುರ್ಥಿಯಂದು ನಿಜವಾದ ಭಕ್ತಿಯಿಂದ ಒಂದು ಗರಿಕೆಯನ್ನು ಅರ್ಪಿಸುವವನು ನನಗೆ ಪ್ರಿಯನಾಗುತ್ತಾನೆ ಎಂದು ದೇವರೇ ಹೇಳಿದ್ದಾನೆ. ಭಾದ್ರಪದ ಶುಕ್ಲ ಚತುರ್ಥಿಯಂದು ಗಣೇಶನಿಗೆ 21 ಗರಿಕೆಯನ್ನು ಅರ್ಪಿಸುವುದರಿಂದ ಉತ್ತಮವಾದ ಪುಣ್ಯ ಫಲ ಪಡೆಯುತ್ತಾರೆ. ಇದು ತೊಂದರೆಗಳಿಂದ ರಕ್ಷಿಸುತ್ತದೆ. ಪಾಪಗಳು ನಾಶವಾಗುತ್ತವೆ.
ಭಾದ್ರಪದ ಶುಕ್ಲ ಚತುರ್ಥಿಯಿಂದ ಚತುರ್ದಶಿಯವರೆಗೆ ಹತ್ತು ದಿನಗಳ ಕಾಲ ಪ್ರತಿದಿನ 108 ಗರಿಕೆಯನ್ನು ಅರ್ಪಿಸುವುದರಿಂದ ಎಲ್ಲಾ ರೀತಿಯ ಆರ್ಥಿಕ ತೊಂದರೆಗಳು ದೂರವಾಗುತ್ತವೆ. ಸಂಪತ್ತು, ಆಸ್ತಿ ಪ್ರಾಪ್ತಿಯಾಗುತ್ತದೆ ಮತ್ತು ಸಂತೋಷ ಹೆಚ್ಚಾಗುತ್ತದೆ.

ಜೀವನದ ತೊಂದರೆಗಳು ನಾಶ
ಚತುರ್ಥಿಯ ದಿನ 108 ಗರಿಕೆಯನ್ನು ಕಟ್ಟಿ ಹಾರ ಮಾಡಿ. ಗಣೇಶನ ಹನ್ನೆರಡನೇ ನಾಮಗಳನ್ನು ಉಚ್ಚರಿಸುವಾಗ ಅದರ ಮೇಲೆ ಸ್ವಲ್ಪ ಸಿಂಧೂರವನ್ನು ಲೇಪಿಸಿ ಅದನ್ನು ಅರ್ಪಿಸುವುದರಿಂದ ಕೌಟುಂಬಿಕ ಜೀವನದ ತೊಂದರೆಗಳು ದೂರವಾಗುತ್ತವೆ. ಪರಸ್ಪರ ಪ್ರೀತಿ ಹೆಚ್ಚುತ್ತದೆ.
ಸಂಪತ್ತಿನ ಆಗಮನ ಮತ್ತು ವ್ಯಾಪಾರ ವೃದ್ಧಿಯಾಗಲು ಭಾದ್ರಪದ ಶುಕ್ಲ ಚತುರ್ಥಿಯ ದಿನ ಶಾಸ್ತ್ರೋಕ್ತ ಪೂಜೆಯೊಂದಿಗೆ ಗಣಪತಿಯನ್ನು ಪೂಜಿಸಿ 1008 ಗರಿಕೆಯನ್ನು ಅರ್ಪಿಸಿ. ಗಣಪತಿ ಅಥರ್ವಶೀರ್ಷದ 11 ಪಾರಾಯಣಗಳನ್ನು ಮಾಡಿ. ಮರುದಿನ, ಗಣೇಶನಿಗೆ ಅರ್ಪಿಸಿದ ಗರಿಕೆಯನ್ನು ಸಿಂಧೂರದೊಂದಿಗೆ ಬಟ್ಟೆಯಲ್ಲಿ ಕಟ್ಟಬೇಕು ಮತ್ತು ಕಮಾನಿನಲ್ಲಿ ಇಡಬೇಕು. ಇದರೊಂದಿಗೆ, ಆರ್ಥಿಕ ಬಿಕ್ಕಟ್ಟು ಶೀಘ್ರದಲ್ಲೇ ಕೊನೆಗೊಳ್ಳಲು ಪ್ರಾರಂಭವಾಗುತ್ತದೆ.

ಬಯಸಿದ ಸಂಗಾತಿ
ಉತ್ತಮ ಜೀವನ ಸಂಗಾತಿಯ ಆಶಯದೊಂದಿಗೆ, ಯುವಕ-ಯುವತಿಯರು ಗಣೇಶನಿಗೆ ವಿಧಿವತ್ತಾಗಿ ಪೂಜೆ ಸಲ್ಲಿಸಿದ ನಂತರ 108 ಗರಿಕೆಯನ್ನು ಅರ್ಪಿಸಬೇಕು ಮತ್ತು ಅದನ್ನು ಹಳದಿ ಬಟ್ಟೆಯಲ್ಲಿ ಸಿಂಧೂರದಿಂದ ಕಟ್ಟಿ ತಮ್ಮ ಬಲಗೈಗೆ ಕಟ್ಟಿಕೊಳ್ಳಬೇಕು. ಇದರಿಂದ ಶೀಘ್ರದಲ್ಲೇ ಬಯಸಿದ ಸಂಗಾತಿಯನ್ನು ಪಡೆಯುತ್ತಾರೆ.

ಆರ್ಥಿಕ ಸಮಸ್ಯೆಗಳು ದೂರು
ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಮುಂದುವರಿದಿದ್ದರೆ ಅಥವಾ ಸಾಲದಿಂದ ತೊಂದರೆಯಾಗಿದ್ದರೆ, ಬುಧವಾರ ಅಥವಾ ಗಣೇಶ ಚತುರ್ಥಿಯಂದು, ಗಣಪತಿ ಮತ್ತು ಮಾತಾ ಲಕ್ಷ್ಮಿಯನ್ನು ವಿಧಿವತ್ತಾಗಿ ಪೂಜಿಸಿ ಮತ್ತು 11 ಗರಿಕೆ ಮಾಲೆಯನ್ನು ಅರ್ಪಿಸಿ. ಹಾಗೆಯೇ ಪ್ರತಿನಿತ್ಯ ಋಣ ಮುಕ್ತ ಗಣೇಶ ಸ್ತೋತ್ರವನ್ನು ಪಠಿಸಿ. ಹೀಗೆ ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆ ಕೊನೆಗೊಳ್ಳುತ್ತದೆ ಮತ್ತು ಸಾಲ ಕಡಿಮೆಯಾಗುತ್ತದೆ.












Click it and Unblock the Notifications