Get Updates
Get notified of breaking news, exclusive insights, and must-see stories!

ಮಹಾಶಿವರಾತ್ರಿ 2023: ಬೆಂಗಳೂರಿನ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ ದರ್ಶನ ಮಾಡೋಣ ಬನ್ನಿ...

ಮಹಾಶಿವರಾತ್ರಿ 2023: ಈ ಮಹಾಶಿವರಾತ್ರಿಗೆ ಬೆಂಗಳೂರಿನ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಅತೀ ಪವಿತ್ರವಾದ 12 ಜ್ಯೋತಿರ್ಲಿಂಗಗಳ ದರ್ಶನಪಡೆಯಿರಿ.

ಕರುಣಾಸಾಗರ, ನೀಲಕಂಠ, ಶಂಕರ, ಪರಮಾತ್ಮ, ಭೋಲೆನಾಥನಾಗಿ ಸರ್ವರ ಮನದಲ್ಲೂ ನೆಲೆಸಿರುವ ಶಿವ ಅತಿ ಭಕ್ತಿ ಹಾಗೂ ಶೃದ್ದೆಗಳಿಂದ ಪೂಜಿಸಲ್ಪಡುವ ಮಹಾದೇವ. ಹೀಗಾಗಿ ಶಿವನಿಗೆ ಮುಡಿಪಾದ ಅಸಂಖ್ಯಾತ ದೇವಾಲಯಗಳು ನಮ್ಮ ಭಾರತ ದೇಶದಲ್ಲಿವೆ. ಇದೇ ರೀತಿಯಾಗಿ ಶಿವನ 12 ಜ್ಯೋತಿರ್ಲಿಂಗಗಳು ಹಿಂದುಗಳ ಪಾಲಿಗೆ ಅತ್ಯಂತ ಪವಿತ್ರವಾಗಿದ್ದು ಈ 12 ಜ್ಯೋತಿರ್ಲಿಂಗಗಳನ್ನು ದರ್ಶಿಸಿದರೆ ಪರಮೇಶ್ವರನ ಕೃಪಾಕಟಾಕ್ಷ ದೊರೆತು ಮೋಕ್ಷ ಲಭಿಸುತ್ತೆ ಅನ್ನೋ ನಂಬಿಕೆ ಇದೆ. ದೇಶದಲ್ಲಿ ಮೂಲತ: 64 ಜ್ಯೋತಿರ್ಲಿಂಗಗಳಿವೆ ಎಂದು ನಂಬಲಾಗಿದ್ದು ಅವುಗಳಲ್ಲಿ 12 ಜ್ಯೋತಿರ್ಲಿಂಗಗಳು ಅತೀ ಪವಿತ್ರವಾದವುಗಳೆಂದು ಪರಿಗಣಿಸಲಾಗಿದೆ. ಶಿವರಾತ್ರಿಯ ಸಮಯದಲ್ಲಿ ಇಲ್ಲಿ ವಿಶೇಷ ಪೂಜೆ ಹವನಗಳು ನಡೆಯುತ್ತವೆ. ವಿಶ್ವದಾದ್ಯಂತ ಜನ ಈ ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಈ 12 ಜ್ಯೋತಿರ್ಲಿಂಗಗಳು ದೇಶದ ಒಂದೊಂದು ಭಾಗದಲ್ಲಿದೆ. ಆದರೆ ಈ ಎಲ್ಲಾ 12 ಜ್ಯೋತಿರ್ಲಿಂಗಗಳನ್ನು ಬೆಂಗಳೂರಿನಲ್ಲಿ ಒಂದೇ ದೇವಸ್ಥಾನದಲ್ಲಿ ದರ್ಶಿಸಬಹುದು. ಅದುವೇ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ.

ದ್ವಾದಶ ಜ್ಯೋತಿರ್ಲಿಂಗ ದೇವಾಲಯವು ಬೆಂಗಳೂರಿನ ಓಂಕಾರ್ ಹಿಲ್ಸ್‌ನಲ್ಲಿರುವ ಓಂಕಾರ್ ಆಶ್ರಮದಲ್ಲಿದೆ. ಎತ್ತರಪ್ರದೇಶದಲ್ಲಿ ನಿರ್ಮಿಸಲಾದ ಈ ದೇವಸ್ಥಾನ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಭಕ್ತಿಯ ಭಾವ ಮೂಡಿಸುತ್ತದೆ. ಇಲ್ಲಿ ವಿಶ್ವದ 2ನೇ ಅತಿ ದೊಡ್ಡ ಗಡಿಯಾರವನ್ನು ನೋಡಬಹುದು. ದೇವಸ್ಥಾನದ ಎಡಭಾಗದಲ್ಲಿ ತ್ರಿಶೂಲವೂ ಇದೆ. ಜೊತೆಗೆ ಸ್ಥಂಭ ಕೂಡ ಸ್ಥಾಪಿಸಲಾಗಿದೆ. ದೇವಸ್ಥಾನದ ಹಿಂಬದಿಯಲ್ಲಿರುವ ಆಲದ ಮರ ಆವರಣವನ್ನು ತಂಪಾಗಿರಿಸಿದೆ.

ಪ್ರತಿಯೊಬ್ಬ ಭಕ್ತರಿಗೆ ಜ್ಯೋತಿರ್ಲಿಂಗ ದರ್ಶನಕ್ಕೆ ಅವಕಾಶವನ್ನು ಒದಗಿಸುವ ಉದ್ದೇಶದಿಂದ ಈ ದೇವಾಲಯವನ್ನು ಬ್ರಹ್ಮಲೀನ ಸದ್ಗುರು ಶ್ರೀ ಶಿವಪುರಿ ಮಹಾಸ್ವಾಮೀಜಿಯವರು ಸ್ಥಾಪಿಸಿದ್ದಾರೆ. ಈ ದೇವಾಲಯದ ನಿರ್ಮಾಣವನ್ನು 2002 ರಲ್ಲಿ ಶ್ರೀ ಶಿವಪುರಿ ಮಹಾಸ್ವಾಮೀಜಿಯವರು ಪ್ರಾರಂಭಿಸಿದರು ಮತ್ತು ಇದು ಹಲವು ವರ್ಷಗಳವರೆಗೆ ನಿರ್ಮಾಣಗೊಂಡಿದೆ. ಈ ದೈವಿಕ ಕಾರ್ಯವನ್ನು ಪೂರ್ಣಗೊಳಿಸುವ ಮೊದಲು, ಶಿವಪುರಿ ಮಹಾಸ್ವಾಮೀಜಿ ಅವರು 2007 ರಲ್ಲಿ ಲಿಂಗೈಕ್ಯರಾದರು. ನಂತರ ಅವರ ಸಂನ್ಯಾಸಿನ ಶಿಷ್ಯ, ಶ್ರೀ ಮಧುಸೂದನಾನಂದ ಪುರಿ ಸ್ವಾಮೀಜಿ ಅವರ ಉತ್ತರಾಧಿಕಾರಿಯಾದರು. ದೇವಾಲಯದ ಕೆಲಸವನ್ನು ಮುಂದುವರೆಸಿದರು.

ದೇವಾಲಯದ 12 ಜ್ಯೋತಿರ್ಲಿಂಗಗಳ ಪ್ರಾಣಪ್ರತಿಷ್ಠೆ (ಪ್ರತಿಷ್ಠಾಪನೆ) ಮತ್ತು ಮಹಾಕುಂಭಾಭಿಷೇಕವನ್ನು ಶ್ರೀ ಸ್ವಾಮಿ ಮಧುಸೂದನಾನಂದ ಪುರಿ ಅವರು 16 ಫೆಬ್ರವರಿ 2011 ರ ಬುಧವಾರದ ಶುಭ ದಿನದಂದು ಅನೇಕ ಸಂತರು, ಪುಣ್ಯಪುರುಷರು, ಪುರೋಹಿತರು ಮತ್ತು ಇತರರ ದಿವ್ಯ ಉಪಸ್ಥಿತಿಯಲ್ಲಿ ವಿಸ್ತೃತವಾಗಿ ನೆರವೇರಿಸಿದರು. ಜಪಗಳು, ಹೋಮಗಳು ಮತ್ತು ಪೂಜೆಗಳು ಅಂದಿನಿಂದ ನಡೆಸಿಕೊಂಡು ಬರಲಾಗುತ್ತಿದೆ. ಬೆಳಿಗ್ಗೆ ಏಳರಿಂದ ಸಂಜೆ ಎಂಟರವರೆಗೆ ದೇವಸ್ಥಾನ ತೆರೆದಿರುತ್ತದೆ.

ಇದು ಕರ್ನಾಟಕದ ಅತ್ಯಂತ ಭವ್ಯವಾದ ಮತ್ತು ದೈತ್ಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯ ಎಲ್ಲಾ 12 ಜ್ಯೋತಿರ್ಲಿಂಗಗಳನ್ನು ಹೊಂದಿದೆ ಮತ್ತು ಓಂಕಾರೇಶ್ವರ ಜ್ಯೋತಿರ್ಲಿಂಗವು ದೇವಾಲಯದ ಮುಖ್ಯ ಜ್ಯೋತಿರ್ಲಿಂಗವಾಗಿದೆ. ನಮ್ಮ ದೇಶದ ವಿವಿಧ ಭಾಗಗಳಲ್ಲಿ ಇರುವ ಮೂಲ ಪುರಾಣಿಕ ಹನ್ನೆರಡು ಜ್ಯೋತಿರ್ಲಿಂಗಗಳ 12 ಪ್ರತಿನಿಧಿ ಜ್ಯೋತಿರ್ಲಿಂಗಗಳು ಇವೆ. ಒಂದು ದೇವಾಲಯದಲ್ಲಿ, ಪ್ರತಿಯೊಂದೂ ಪ್ರತ್ಯೇಕ ಗರ್ಭಗುಡಿ ಇದ್ದು ಪ್ರತ್ಯೇಕಗೋಪುರವನ್ನು ಹೊಂದಿದೆ.

1. ಸೋಮನಾಥೇಶ್ವರ, ಗುಜರಾತ್

1. ಸೋಮನಾಥೇಶ್ವರ, ಗುಜರಾತ್

ಭಾರತದ ಪುರಾಣಿಕ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಗುಜರಾತ್‌ನ ಸೋಮನಾಥೇಶ್ವರ ಕೂಡ ಒಂದು. ಗುಜರಾತ್‌ ರಾಜ್ಯದ ಸೌರಾಷ್ಟ್ರ ಭಾಗದ ವೇರಾವಳ್ ಪ್ರದೇಶ ಪ್ರಭಾಸ ಕ್ಷೇತ್ರದಲ್ಲಿ ಸೋಮನಾಥ ಜ್ಯೋತಿರ್ಲಿಂಗವಿದೆ. ಈ ಸ್ಥಳ ತನ್ನದೇ ಆದ ಪೌರಾಣಿಕ ಕಥೆಯನ್ನು ಹೊಂದಿದ್ದು ಅತ್ಯಂತ ಪ್ರಸಿದ್ಧವಾಗಿದೆ. ಈ ಜ್ಯೋತಿರ್ಲಿಂಗವನ್ನು ಹೋಲುವ ಜ್ಯೋತಿರ್ಲಿಂಗವನ್ನು ಬೆಂಗಳೂರಿನ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಸ್ಥಾಪಿಸಲಾಗಿದೆ.

2. ಉಜ್ಜೈನಿ ಮಹಾಕಾಳೇಶ್ವರ, ಮಧ್ಯಪ್ರದೇಶ

2. ಉಜ್ಜೈನಿ ಮಹಾಕಾಳೇಶ್ವರ, ಮಧ್ಯಪ್ರದೇಶ

ಮಧ್ಯಪ್ರದೇಶದ ಪುರಾತನ ಹಾಗೂ ಪವಿತ್ರ ನಗರವಾದ ಉಜ್ಜಯಿನಿಯಲ್ಲಿ ಮಹಾಕಾಲೇಶ್ವರ ಜ್ಯೋತಿರ್ಲಿಂಗವಿದೆ. ಈ ಜ್ಯೋತಿರ್ಲಿಂಗವನ್ನು ಹೋಲುವ ಜ್ಯೋತಿರ್ಲಿಂಗವನ್ನು ಬೆಂಗಳೂರಿನ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಸ್ಥಾಪಿಸಲಾಗಿದೆ. ಜ್ಯೋತಿರ್ಲಿಂಗ ದೇವಲಾಯದ ವಿಶಾಲ ಆವರಣದಲ್ಲಿದೆ. ಅದಕ್ಕೆ ಬಹಳ ಎತ್ತರವಾದ ಗೋಪುರವಿದೆ. ಶಿವರಾತ್ರಿಯಂದು ಭಕ್ತ ಸಾಗರವೇ ದೇವಸ್ಥಾನಕ್ಕೆ ಹರಿದು ಬರುತ್ತದೆ.

3. ಕೇದರನಾಥ, ಉತ್ತರಾಖಂಡ್

3. ಕೇದರನಾಥ, ಉತ್ತರಾಖಂಡ್

ಭಾರತದ ಪುರಾಣಿಕ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಕೇದರನಾಥ ಕೂಡ ಒಂದು. ಉತ್ತರಖಂಡ್ ರಾಜ್ಯದ ಹಿಮಾಯಲ ಶ್ರೇಣಿಯ ಗಡ್ವಾಲ್ ಪ್ರದೇಶದ ಮಂದಾಕಿನಿ ನದಿ ಬಳಿಯಿರುವ ಕೇದರನಾಥ ಒಂದು ಪ್ರಶಿದ್ಧವಾದ ಜ್ಯೋತಿರ್ಲಿಂಗವಾಗಿದೆ. ಈ ಜ್ಯೋತಿರ್ಲಿಂಗವು ವರ್ಷದ ಏಪ್ರಿಲ್ ಕೊನೆಯಿಂದ ನವಂಬರ್ ತಿಂಗಳಿನವರೆಗೆ ಮಾತ್ರ ತೆರೆದಿರುತ್ತದೆ. ಬೆಂಗಳೂರಿನ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಕೇದರನಾಥ ಜ್ಯೋತಿರ್ಲಿಂಗ ಹೋಲುವ ಜ್ಯೋತಿರ್ಲಿಂಗವನ್ನು ಸ್ಥಾಪಿಸಲಾಗಿದೆ.

4. ಭೀಮಾಶಂಕರ, ಮಹಾರಾಷ್ಟ್ರ

4. ಭೀಮಾಶಂಕರ, ಮಹಾರಾಷ್ಟ್ರ

ಜ್ಯೋತಿರ್ಲಿಂಗ ತಾಣವಾದ ಭೀಮಾಶಂಕರ ದೇವಸ್ಥಾನ ಮಹಾರಾಷ್ಟ್ರ ರಾಜ್ಯದ ಪುಣೆ ಬಳಿಯಿರುವ ಖೇದ್ ತಾಲೂಕಿನಲ್ಲಿದೆ. ಪ್ರಕೃತಿ ಸೌಂದರ್ಯದ ನಡುವೆ ಭೀಮಾ ನದಿ ತಟದಲ್ಲಿ ಶಿವನು ಭೀಮಾಶಂಕರನಾಗಿ ನೆಲೆಸಿ ಭಕ್ತರನ್ನು ಆಶಿರ್ವದಿಸುತ್ತಿದ್ದಾನೆ. ಇದೇ ತರನಾದ ಜ್ಯೋತಿರ್ಲಿಂಗ ಬೆಂಗಳೂರಿನ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಸ್ತಾಪಿಸಲಾಗಿದೆ.

5. ಕಾಶಿ ವಿಶ್ವನಾಥ, ಉತ್ತರಪ್ರದೇಶ

5. ಕಾಶಿ ವಿಶ್ವನಾಥ, ಉತ್ತರಪ್ರದೇಶ

ಉತ್ತರಪ್ರದೇಶ ವಾರಣಾಸಿ ಅಥವಾವಾ ಕಾಶಿಯಲ್ಲಿ ಶಿವನು ವಿಶ್ವನಾಥನಾಗಿ ಭಕ್ತರನ್ನು ಹರಸುತ್ತಿದ್ದಾನೆ. ಇದೊಂದು ಬಹು ಪ್ರಖ್ಯಾತ ಹಿಂದು ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ. ಈ ಸ್ಥಳದಲ್ಲಿನ ಜ್ಯೋತಿರ್ಲಿಂಗಕ್ಕೆ ಹೋಲುವ ಜ್ಯೋತಿರ್ಲಿಂಗವನ್ನು ಬೆಂಗಳೂರಿನ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಸ್ಥಾಪಿಸಲಾಗಿದೆ.

6. ತ್ರ್ಯಂಬಕೇಶ್ವರ, ಮಹಾರಾಷ್ಟ್ರ

6. ತ್ರ್ಯಂಬಕೇಶ್ವರ, ಮಹಾರಾಷ್ಟ್ರ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕ ಪಟ್ಟಣದಲ್ಲಿರುವ ತ್ರ್ಯಂಬಕೇಶ್ವರ ದೇವಸ್ಥಾನವು ಪುರಾತನ ಪ್ರಶಿದ್ಧ ಜ್ಯೋತಿರ್ಲಿಂಗ ದೇವಾಲಯವಾಗಿದೆ. ಇದು ಗೋದಾವರಿ ನದಿ ಮೂಲದ ಸಮೀಪದಲ್ಲಿದೆ. ಇದು ತನ್ನದೇ ಆದ ಸ್ಥಳ ಪುರಾಣವನ್ನು ಹೊಂದಿದೆ. ಇದೇ ತರನಾದ ಜ್ಯೋತಿರ್ಲಿಂಗವನ್ನು ನಾವು ಬೆಂಗಳೂರಿನ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲೂ ಕಾಣಬಹುದು. ಮಹಾರಾಷ್ಟ್ರಕ್ಕೆ ಹೋಗಲಾಗದ ಅಸಂಖ್ಯಾತ ಶಿವನ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡಿ ಶಿವನ ಆಶೀರ್ವಾದವನ್ನು ಪಡೆಯುತ್ತಾರೆ.

7. ಶ್ರೀಶೈಲ ಮಲ್ಲಿಕಾರ್ಜುನ, ಆಂಧ್ರಪ್ರದೇಶ

7. ಶ್ರೀಶೈಲ ಮಲ್ಲಿಕಾರ್ಜುನ, ಆಂಧ್ರಪ್ರದೇಶ

ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗವು ಆಂಧ್ರಪ್ರದೇಶ ಶ್ರೀಶೈಲದಲ್ಲಿದೆ. ಇದು ಜ್ಯೋತಿರ್ಲಿಂಗವಲ್ಲದೇ ಮಹಾ ಶಕ್ತಿ ಪೀಠವೆಂದು ಹೆಸರಾಗಿದೆ. ಈ ಜ್ಯೋತಿರ್ಲಿಂಗಕ್ಕೆ ಹೋಲುವಂತ ಜ್ಯೋತಿರ್ಲಿಂಗವನ್ನು ಬೆಂಗಳೂರು ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ (ಓಂಕಾರ್ ಹಿಲ್ಸ್‌) ದಲ್ಲೂ ಸ್ಥಾಪಿಸಲಾಗಿದೆ. ನಾಡಿನ ಶಿವ ಭಕ್ತರು ಶಿವರಾತ್ರಿಯಂದು ಇಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.

8. ವೈದ್ಯನಾಥೇಶ್ವರ, ಜಾರ್ಖಂಡ್

8. ವೈದ್ಯನಾಥೇಶ್ವರ, ಜಾರ್ಖಂಡ್

ಜಾರ್ಖಂಡ್ ರಾಜ್ಯದ ದೇವಗಡ್‌ನಲ್ಲಿರುವ ವೈದ್ಯನಾಥ ಜ್ಯೋತಿರ್ಲಿಂಗವನ್ನು 12 ಜ್ಯೋತಿರ್ಲಿಂಗಗಳ ಪೈಕಿ ಒಂದೆಂದು ಪರಿಗಣಿಸಲಾಗಿದೆ. ಭಗವಾನ್ ವಿಷ್ಣುವು ದೇವತೆಗಳಿಗೆ ಅಮೃತ ಒದಗಿಸಿದುದಕ್ಕೆ ಇದು ತೀರ್ಥಸ್ಥಳವಾಗಿದೆ. ಪರಶಿವನು ಭಕ್ತಿಯಿಂದ ಆರಾಧಿಸುವ ತನ್ನ ಭಕ್ತರಿಗೆ ಅಮೃತ ನೀಡುತ್ತಾನೆ. ಈ ಜ್ಯೋತಿರ್ಲಿಂಗಕ್ಕೆ ಹೋಲುವಂತ ಜ್ಯೋತಿರ್ಲಿಂಗವನ್ನು ಬೆಂಗಳೂರು ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ (ಓಂಕಾರ್ ಹಿಲ್ಸ್‌) ದಲ್ಲೂ ಸ್ಥಾಪಿಸಲಾಗಿದೆ.

9. ನಾಗೇಶ್ವರ, ಉತ್ತರಾಖಂಡ

9. ನಾಗೇಶ್ವರ, ಉತ್ತರಾಖಂಡ

ಉತ್ತರಾಖಂಡ್ ರಾಜ್ಯದ ಜಾಗೇಶ್ವರದಲ್ಲಿರುವ ನಾಗೇಶ್ವರ ಜ್ಯೋತಿರ್ಲಿಂಗ ತಾಣವು ಬಹು ಪ್ರಖ್ಯಾತಿ ಪಡೆದಿದೆ. ಈ ಜ್ಯೋತಿರ್ಲಿಂಗವನ್ನು ಭೂಮಿಯ ಮೊದಲ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ಜ್ಯೋತಿರ್ಲಿಂಗಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಈ ಜ್ಯೋತಿರ್ಲಿಂಗಕ್ಕೆ ಹೋಲುವಂತ ಜ್ಯೋತಿರ್ಲಿಂಗವನ್ನು ಬೆಂಗಳೂರು ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ (ಓಂಕಾರ್ ಹಿಲ್ಸ್‌) ದಲ್ಲೂ ಸ್ಥಾಪಿಸಲಾಗಿದೆ.

10. ರಾಮೇಶ್ವರ, ತಮಿಳುನಾಡು

10. ರಾಮೇಶ್ವರ, ತಮಿಳುನಾಡು

ತಮಿಳುನಾಡಿನ ರಾಮೇಶ್ವರಮ್‌ನಲ್ಲಿರುವ ರಾಮನಾಥಸ್ವಾಮಿ ಮಂದಿರ ಮುಖ್ಯ ದೇವರು. ಇದು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ರಾಮನಾಥೇಶ್ವರನನ್ನು ಶಿವನ ರೂಪದಲ್ಲಿ ಪೂಜಿಸಲಾಗುತ್ತಿದೆ. ರಾಮೇಶ್ವರಮ್‌ನ ರಾಮನಾಥೇಶ್ವರನನ್ನು ಜೀವನದಲ್ಲಿ ಒಮ್ಮೆಯಾದರೂ ದರ್ಶನ ಮಾಡಬೇಕೆಂದು ಹೇಳಲಾಗುತ್ತದೆ. ಈ ಪ್ರವಿತ್ರ ಸ್ಥಳದಲ್ಲಿರುವ ಜ್ಯೋತಿರ್ಲಿಂಗಕ್ಕೆ ಹೋಲುವಂತ ಜ್ಯೋತಿರ್ಲಿಂಗವನ್ನು ಬೆಂಗಳೂರು ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ (ಓಂಕಾರ್ ಹಿಲ್ಸ್‌) ದಲ್ಲೂ ಸ್ಥಾಪಿಸಲಾಗಿದೆ.

11. ಓಂಕಾರೇಶ್ವರ, ಮಧ್ಯಪ್ರದೇಶ

11. ಓಂಕಾರೇಶ್ವರ, ಮಧ್ಯಪ್ರದೇಶ

ಓಂಕಾರೇಶ್ವರ ಶಿವನ ದೇವಸ್ಥಾನವು ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಹರಿದಿರುವ ನರ್ಮದಾ ನದಿಯ ಮೇಲಿನ ಶಿವಪುರಿ ಅಥವಾ ಮಂಡತ ಎಂಬ ದ್ವೀಪದಲ್ಲಿ ಸ್ಥಿತಿವಿದೆ. ಈ ದ್ವೀಪವು ಹಿಂದುಗಳ ಪವಿತ್ರ ಸಂಕೇತವಾದ ಓಂ ಆಕಾರದಲ್ಲಿರುವುದರಿಂದ ಓಂಕಾರೇಶ್ವರ ಎಂಬ ಹೆಸರು ಬಂದಿದೆ. ಈ ಪ್ರವಿತ್ರ ಸ್ಥಳದಲ್ಲಿರುವ ಜ್ಯೋತಿರ್ಲಿಂಗಕ್ಕೆ ಹೋಲುವಂತ ಜ್ಯೋತಿರ್ಲಿಂಗವನ್ನು ಬೆಂಗಳೂರು ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ (ಓಂಕಾರ್ ಹಿಲ್ಸ್‌) ದಲ್ಲೂ ಸ್ಥಾಪಿಸಲಾಗಿದೆ.

12. ಘೃಷ್ಣೇಶ್ವರ, ರಾಜಸ್ಥಾನ

12. ಘೃಷ್ಣೇಶ್ವರ, ರಾಜಸ್ಥಾನ

ರಾಜಸ್ಥಾನ ರಾಜ್ಯದ ರಾಜಧಾನಿ ಜೈಪುರ ನಗರದಿಂದ 100 ಕಿ.ಮೀ ದೂರವಿರುವ ಶಿವಾರ್ ಎಂಬಲ್ಲಿ ಈ ಜ್ಯೋತಿರ್ಲಿಂಗ ದೇವಸ್ಥಾನವಿದೆ. ಇದನ್ನು ಕೊನೆಯ ಅಥವಾ ಹನ್ನೆರಡನೆಯ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ. ಈ ಪ್ರವಿತ್ರ ಸ್ಥಳದಲ್ಲಿರುವ ಜ್ಯೋತಿರ್ಲಿಂಗಕ್ಕೆ ಹೋಲುವಂತ ಜ್ಯೋತಿರ್ಲಿಂಗವನ್ನು ಬೆಂಗಳೂರು ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ (ಓಂಕಾರ್ ಹಿಲ್ಸ್‌) ದಲ್ಲೂ ಸ್ಥಾಪಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+