Rashmika Mandanna: ಕನ್ನಡದ ರಶ್ಮಿಕಾ ಮಂದಣ್ಣಗೆ ಬಾಲಿವುಡ್ ಸೆಟ್ ಆಗಲ್ವಾ? ಖ್ಯಾತ ಲೇಖಕಿಯ ಹೇಳಿಕೆಗೆ ಗರಂ ಆದ ಫ್ಯಾನ್ಸ್

ಬಾಲಿವುಡ್‌ನಲ್ಲಿ ಸದ್ಯ ಭರ್ಜರಿ ಕಮಾಯಿ ಮಾಡುತ್ತಿರುವ ಕಾಕ್‌ಟೇಲ್‌-2 (Cocktail 2) ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಧೂಳೆಬ್ಬಿಸುತ್ತಿದ್ದರೂ, ವಿಮರ್ಶಕರು ಮಾತ್ರ ಚಿತ್ರದ ಕಥೆಯ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಇದರ ನಡುವೆ, ಭಾರತದ ಪ್ರಸಿದ್ಧ ಲೇಖಕಿ ಶೋಭಾ ದೇ (Shobhaa De) ಅವರು ಚಿತ್ರದ ಕುರಿತು ನೀಡಿರುವ ವಿಮರ್ಶೆ ಈಗ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಅದರಲ್ಲೂ ವಿಶೇಷವಾಗಿ ಚಿತ್ರದ ನಾಯಕಿ, ನಮ್ಮ ಹೆಮ್ಮೆಯ ಕನ್ನಡತಿ ರಶ್ಮಿಕಾ ಮಂದಣ್ಣ ಅವರ ನಟನೆಯನ್ನು ಗುರಿಯಾಗಿಸಿಕೊಂಡು ಶೋಭಾ ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

"ಹಿಂದಿ ಸಿನಿಮಾಗಳು ನಿಮಗಾಗಿ ಅಲ್ಲ"

ಚಿತ್ರ ವೀಕ್ಷಿಸಿದ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ರಿವ್ಯೂ ಹಂಚಿಕೊಂಡಿರುವ ಶೋಭಾ ಡೇ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ ನೇರವಾಗಿಯೇ ಟಾಂಗ್ ಕೊಟ್ಟಿದ್ದಾರೆ. "ರಶ್ಮಿಕಾ, ನನ್ನನ್ನು ಕ್ಷಮಿಸು.. ಆದರೆ ಹಿಂದಿ ಸಿನಿಮಾಗಳು ಖಂಡಿತವಾಗಿಯೂ ನಿಮಗಾಗಿ ಅಲ್ಲ" ಎಂದು ಕಟುವಾಗಿ ಹೇಳಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿ, ಬಾಲಿವುಡ್‌ನಲ್ಲೂ ಸ್ಟಾರ್ ನಟರ ಜೊತೆ ಬ್ಯಾಕ್ ಟು ಬ್ಯಾಕ್ ನಟಿಸುತ್ತಿರುವ ಕನ್ನಡದ ನಟಿಗೆ ಶೋಭಾ ದೇ ಈ ರೀತಿ ಹೇಳಿರುವುದು ರಶ್ಮಿಕಾ ಅಭಿಮಾನಿಗಳನ್ನು ಕೆರಳಿಸಿದೆ.

Rashmika Mandanna

ಚಿತ್ರದ ಕಥೆಗೆ ಭಾರಿ ಕ್ಲಾಸ್

2012ರಲ್ಲಿ ಬಿಡುಗಡೆಯಾಗಿದ್ದ ಸೈಫ್ ಅಲಿ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಸೂಪರ್ ಹಿಟ್ ಕಾಕ್‌ಟೇಲ್‌ ಚಿತ್ರಕ್ಕೆ ಹೋಲಿಸಿದರೆ ಈ ಸೀಕ್ವೆಲ್ ತೀರಾ ಕಳಪೆಯಾಗಿದೆ ಎಂದು ಶೋಭಾ ಅಭಿಪ್ರಾಯಪಟ್ಟಿದ್ದಾರೆ. "ಈ ಚಿತ್ರಕ್ಕೆ ಯಾವುದೇ ತಲೆ ಮತ್ತು ಬಾಲ ಇಲ್ಲ, ಕಥೆ ತೀರಾ ಕೆಟ್ಟಾಗಿದೆ. ಇಬ್ಬರು ಮಹಿಳೆಯರು ಒಬ್ಬ ನಾಯಕನಿಗಾಗಿ ಜಗಳವಾಡುವುದು, ನಂತರ ಆತನೇ ಅವರಿಗೆ ದೊಡ್ಡ ಉಪದೇಶ ನೀಡುವುದು. ಇದೆಲ್ಲಾ ತೀರಾ ಹಳೆಯ ಕಾಲದ ಡ್ರಾಮಾ ಅನಿಸುತ್ತದೆ. ಪ್ರೀತಿಯ ಬಗ್ಗೆ ಚಿತ್ರದಲ್ಲಿ ನೀಡಿರುವ ಜ್ಞಾನವೆಲ್ಲ ನಕಲಿ ಎನಿಸುತ್ತದೆ. ಈ ಚಿತ್ರ ನೋಡಿದ ಆಘಾತದಿಂದ ಹೊರಬರಲು ನನಗೆ 5 ಗ್ಲಾಸ್ ಸ್ಟ್ರಾಂಗ್ ಡ್ರಿಂಕ್ ಬೇಕು" ಎಂದು ಚಿತ್ರದ ಸ್ಕ್ರಿಪ್ಟ್ ಅನ್ನು ಟೀಕಿಸಿದ್ದಾರೆ.

Rashmika Mandanna: 'ರಾಕಾ'ಗೆ ಆಯ್ಕೆಯಾದ ಬೆನ್ನಲ್ಲೇ ರಶ್ಮಿಕಾ ವರ್ಕೌಟ್ ವೈರಲ್; ಫಿಟ್ನೆಸ್ ನೋಡಿ ಫ್ಯಾನ್ಸ್ ಫಿದಾ
Rashmika Mandanna: 'ರಾಕಾ'ಗೆ ಆಯ್ಕೆಯಾದ ಬೆನ್ನಲ್ಲೇ ರಶ್ಮಿಕಾ ವರ್ಕೌಟ್ ವೈರಲ್; ಫಿಟ್ನೆಸ್ ನೋಡಿ ಫ್ಯಾನ್ಸ್ ಫಿದಾ

ಶಾಹಿದ್‌ ಹೇರ್‌ಕಟ್‌ ಬದಲಾಗಬೇಕು

ಚಿತ್ರದ ಉಳಿದ ನಟರ ಬಗ್ಗೆ ಮಾತನಾಡುತ್ತಾ, "ನಟಿ ಕೃತಿ ಸನೋನ್ ಅದ್ಭುತವಾಗಿ ನಟಿಸಿದ್ದಾರೆ ಮತ್ತು ಆಕೆಯ ಲುಕ್ ಚೆನ್ನಾಗಿದೆ. ಇನ್ನು ಹೀರೊ ಶಾಹಿದ್ ಕಪೂರ್ ಚಿತ್ರದ ಪ್ಲಸ್ ಪಾಯಿಂಟ್ ಆಗಿದ್ದರೂ, ಆತನಿಗೊಂದು ಹೊಸ ಹೇರ್‌ಕಟ್ ಬೇಕಾಗಿದೆ" ಎಂದು ಅವರು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಗಳಿಕೆಯಲ್ಲಿ ಮುನ್ನುಗ್ಗುತ್ತಿರುವ ಸಿನಿಮಾ

ವಿಮರ್ಶಕರು ನೆಗೆಟಿವ್ ಆಗಿ ಮಾತನಾಡುತ್ತಿದ್ದರೂ ಕಾಕ್‌ಟೇಲ್-‌2 ಬಾಕ್ಸ್ ಆಫೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಚಿತ್ರ ಬಿಡುಗಡೆಯಾದ ಕೇವಲ ಆರು ದಿನಗಳಲ್ಲೇ ವಿಶ್ವಾದ್ಯಂತ ಬರೋಬ್ಬರಿ 102.76 ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆಯುವ ಮೂಲಕ ನೂರು ಕೋಟಿಯ ಕ್ಲಬ್ ಸೇರಿಕೊಂಡಿದೆ. ಭಾರತದ ಮಾರುಕಟ್ಟೆಯೊಂದರಲ್ಲೇ ಈ ಸಿನಿಮಾ 66 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮುಂಬರುವ ದಿನಗಳಲ್ಲಿ 'ವೆಲ್ಕಮ್ ಟು ದಿ ಜಂಗಲ್' ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಚಿತ್ರದ ಗಳಿಕೆಗೆ ಸ್ವಲ್ಪ ಪೈಪೋಟಿ ಎದುರಾಗಬಹುದು ಎನ್ನಲಾಗಿದೆ. ಪ್ರಸ್ತುತ ಶೋಭಾ ಡೇ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, "ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿರುವ ನಮ್ಮ ಕನ್ನಡದ ಹುಡುಗಿಯ ಪ್ರತಿಭೆಯನ್ನು ಬಾಲಿವುಡ್‌ನವರು ಸರಿಯಾಗಿ ಗುರುತಿಸುತ್ತಿಲ್ಲ" ಎಂದು ರಶ್ಮಿಕಾ ಪರವಾಗಿ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+