ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Ellu Bella Recipe : ಕರ್ನಾಟಕ ಖ್ಯಾತಿಯ ಎಳ್ಳು ಬೆಲ್ಲ ಮಾಡುವ ಸುಲಭ ವಿಧಾನ ಇಲ್ಲಿದೆ

|
Google Oneindia Kannada News

ಬೆಂಗಳೂರು, ಜ. 01: ಮಕರ ಸಂಕ್ರಾಂತಿ ಹಬ್ಬವೆಂದರೆ ಹೆಂಗೆಳೆಯರಲ್ಲಿ ಹೊಸ ಸಂಭ್ರಮ ಮನೆ ಮಾಡುತ್ತದೆ. ಹೊಸ ಬಟ್ಟೆ ತೊಟ್ಟು ಕೈಯಲ್ಲಿ ಬುಟ್ಟಿ ಹಿಡಿದು ಮನೆ ಮನೆಗೆ ಹೋಗಿ 'ಎಳ್ಳು ಬೀರುವುದು' ಒಂದು ಖುಷಿಯ ಸಂಗತಿ. ಎಳ್ಳು ಬೀರುವ ಮೂಲಕ ಶುಭಾಶಯ ಕೂರುವುದು ಸಂಕ್ರಾಂತಿಯ ವಾಡಿಕೆ.

ರಾಜ್ಯದ ವಿವಿಧ ಭಾಗಗಳಲ್ಲಿ, ಹುರಿದ ಎಳ್ಳು, ಕತ್ತರಿಸಿದ ಒಣ ತೆಂಗಿನಕಾಯಿ, ಹುರಿದ ಕಡಲೆಕಾಯಿ, ಹುರಿದ ಕಡಲೆ ಬೇಳೆ ಮತ್ತು ಬೆಲ್ಲ, ಜೊತೆಗೆ ಸಕ್ಕರೆ ಅಚ್ಚು ಅಥವಾ ಸಕ್ಕರೆ ಪ್ರತಿಮೆಗಳನ್ನು ಹಾಕಿ ಮಾಡುವ ಎಳ್ಳು ಬೆಲ್ಲ ಎಲ್ಲರ ಅಚ್ಚುಮೆಚ್ಚು. ಬಾಲ್ಯದಲ್ಲಿ ಎಳ್ಳು ಬೆಲ್ಲ ಪ್ರತಿಯೊಬ್ಬರ ನೆಚ್ಚಿನ ತಿಂಡಿ ಕೂಡ.

Makar Sankranti 2023 : ಖಗೋಳ ಶಾಸ್ತ್ರ, ಧಾರ್ಮಿಕ ನಂಬಿಕೆ: ಮಕರ ಸಂಕ್ರಾಂತಿ ಯಾಕೆ ಮಹತ್ವವನ್ನು ಪಡೆದುಕೊಂಡಿದೆ..?Makar Sankranti 2023 : ಖಗೋಳ ಶಾಸ್ತ್ರ, ಧಾರ್ಮಿಕ ನಂಬಿಕೆ: ಮಕರ ಸಂಕ್ರಾಂತಿ ಯಾಕೆ ಮಹತ್ವವನ್ನು ಪಡೆದುಕೊಂಡಿದೆ..?

ಹಾಗಾದರೆ ಈ ಎಳ್ಳು ಬೆಲ್ಲಕ್ಕೆ ಬಹಳ ಮಹತ್ವವಿದೆ ಎಂದು ಅರ್ಥವಲ್ಲವೆ. ಕನ್ನಡಿಗರ ನೆಚ್ಚಿನ ಈ ಎಳ್ಳು ಬೆಲ್ಲ ತಯಾರಿಸಿದ ತಿಂಗಳುಗಟ್ಟಲೆ ಮನೆಯಲ್ಲಿಟ್ಟುಕೊಂಡು ತಿನ್ನಬಹುದು. ನಿಮಗೆ ಎಳ್ಳು ಬೆಲ್ಲ ಸುಲಭವಾಗಿ ಮಾಡುವುದು ಹೇಗೆ ಎಂಬುದು ತಿಳಿದಿದೆಯೇ..? ಇಲ್ಲವೇ...? ಚಿಂತೆ ಬಿಡಿ ಸುಲಭವಾಗಿ ಎಳ್ಳು ಬೆಲ್ಲ ಹೆಗೆ ಮಾಡುವುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

Makar Sankranti 2023 : Here The Karnataka Style Ellu Bella Recipe

"ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ" ಎಂದರೆ "ಎಳ್ಳು ಬೆಲ್ಲದ ಮಿಶ್ರಣವನ್ನು ತಿಂದು ಒಳ್ಳೆಯದನ್ನು ಮಾತ್ರ ಮಾತನಾಡು" ಎಂದು. ಇದು ಕನ್ನಡ ಭಾಷೆಯಲ್ಲಿ ಒಂದು ಗಾದೆಯಾಗಿದೆ.

*ಎಳ್ಳು ಬೆಲ್ಲ ತಯಾರಿಸಲು ಬೇಕಾಗುವ ಪದಾರ್ಥಗಳು*

* 1/4 ಕಪ್ - ಬಿಳಿ ಅಥವಾ ಕಪ್ಪು ಎಳ್ಳು

* 1/4 ಕಪ್ - ಕಡಲೆಕಾಯಿ (ಶೇಂಗಾ)

* 1/4 ಕಪ್ - ಬೆಲ್ಲ

* 1/4 ಕಪ್ - ಒಣ ತೆಂಗಿನಕಾಯಿ

* 1/4 ಕಪ್ - ಹುರಿಗಡಲೆ

*ಎಳ್ಳು ಬೆಲ್ಲ ತಯಾರಿಸುವ ವಿಧಾನ*

* ತೆಗೆದುಕೊಂಡಿರುವ ಎಳ್ಳನ್ನು ಬಾಣಲೆಗೆ ವರ್ಗಾಯಿಸಿ ಮತ್ತು ಮಧ್ಯಮ ಉರಿಯಲ್ಲಿ ಕೆಲಸ ನಿಮಿಷ ಹುರಿಯಿರಿ.

*ಈ ಎಳ್ಳು ಬೀಜಗಳು ಕೆಲವು ನಿಮಿಷಗಳ ಕಾಲ ಹುರಿದ ಬಳಿಕ ತಮ್ಮ ಬಣ್ಣವನ್ನು ಸ್ವಲ್ಪಮಟ್ಟಿಗೆ ಬದಲಾಯಿಸಲು ಪ್ರಾರಂಭಿಸುತ್ತವೆ.

* ಉರಿಯನ್ನು ಆಫ್ ಮಾಡಿ ಮತ್ತು ಬಟ್ಟಲಿಗೆ ವರ್ಗಾಯಿಸಿ.

* ಈಗ ಕಡಲೆಕಾಯಿ ಬೀಜಗಳನ್ನು ಬಾಣಲೆಗೆ ಹಾಕಿ, ಮಧ್ಯಮ ಉರಿಯಲ್ಲಿ ಕೆಲವು ನಿಮಿಷಗಳ ಕಾಲ ಹುರಿಯಿರಿ.

* ಕಡಲೆಕಾಯಿ ಬೀಜದಲ್ಲಿ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ, ಗ್ಯಾಸ್ ಆಫ್ ಮಾಡಿ, ಪ್ಲೇಟ್‌ಗೆ ವರ್ಗಾಯಿಸಿ.

* ಈಗ ಕಡಲೆಕಾಯಿ ಬೀಜವನ್ನು ಕೆಲವು ನಿಮಿಷಗಳ ಕಾಲ ತಣ್ಣಗಾಗಲು ಬಿಟ್ಟು, ಬಳಿಕ ಅದರ ಮೇಲೆ ಕೈಯಿಂದ ಉಜ್ಜಿ ಸಿಪ್ಪೆ ತೆಗೆಯಿರಿ.

Makar Sankranti 2023 : Here The Karnataka Style Ellu Bella Recipe

* ಬೆಲ್ಲವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಇಟ್ಟುಕೊಳ್ಳಿ

* ಒಣ ತೆಂಗಿನಕಾಯಿಯನ್ನು ತೆಗೆದುಕೊಂಡು ಕೊಬ್ಬರಿ ತೆಗೆದುಕೊಳ್ಳಿ. ಅದನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ.

*ಹುರಿಗಡಲೆಯನ್ನು ಬೇಕಿದ್ದರೆ ಒಂದೆರಡು ನಿಮಿಷ ಉರಿದುಕೊಳ್ಳಿ.

* ಎಲ್ಲಾ ಪದಾರ್ಥಗಳನ್ನು ಒಂದು ಬಟ್ಟಲಿಗೆ ವರ್ಗಾಯಿಸಿ ಮತ್ತು ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಬೇಕಿದ್ದರೆ ಅಚ್ಚು ಬೆಲ್ಲ, ಅಥವಾ ಸಕ್ಕರೆ ಅಚ್ಚುಗಳನ್ನು ಸೇರಿಸಿಕೊಳ್ಳಬಹುದ. ಈಗ ಎಳ್ಳು ಬೆಲ್ಲ ಹಂಚಲು ತಯಾರು.

English summary
Makar Sankranti 2023 : Did you tried Karnataka Style Ellu Bella. here the special Recipe for you . know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X