Get Updates
Get notified of breaking news, exclusive insights, and must-see stories!

ದೇಶದಲ್ಲೇ ಎರಡನೇ ಅತೀ ಎತ್ತರದ ಶಿವನ ಮೂರ್ತಿ: ವಿಜಯಪುರದ ಶಿವಗಿರಿಗೆ ಒಂದು ಭೇಟಿ..!

ಮಹಾಶಿವರಾತ್ರಿ 2023: ಈ ಮಹಾಶಿವರಾತ್ರಿಗೆ ವಿಜಯಪುರದ ಶಿವಗಿರಿ ದೇವಸ್ಥಾನದಲ್ಲಿ ಭೇಟಿ ನೀಡಿ.

ಮಹಾಶಿವರಾತ್ರಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ವಿಶ್ವದೆಲ್ಲೆಡೆ ಇರುವ ಶಿವನ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿಯಂದು ವಿಶೇಷ ಪೂಜೆ, ಹೋಮ, ಹವನಗಳು ನಡೆಯುತ್ತವೆ. ಜೊತೆಗೆ ಅಧಿಕ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಶಿವರಾತ್ರಿಯಂದು ಶಿವನನ್ನು ಆರಾಧಿಸಿ, ಪೂಜಿಸಿ ಜಪಿಸುತ್ತಾರೆ.

ಇಷ್ಟಾರ್ಥಸಿದ್ಧಿಗಾಗಿ ಉಪವಾಸ ಮಾಡುವ ಮೂಲಕ ಶಿವನ ಆಶೀರ್ವಾದವನ್ನು ಪಡೆಯುತ್ತಾರೆ. ಭಕ್ತಿಯಿಂದ ಶಿವನನ್ನು ಪೂಜಿಸಿದರೆ ಆತ ಒಲಿದು ಬೇಡಿದ ವರವನ್ನು ನೀಡುತ್ತಾನೆ ಎನ್ನುವ ನಂಬಿಕೆ ಇದೆ. ಹೀಗಾಗಿ ಮಹಾಶಿವರಾತ್ರಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.

ಭಾರತ ಆಧ್ಯಾತ್ಮಿಕತೆಯ ತವರೂರು. ಸಹಸ್ರಾರು ವರ್ಷಗಳಿಂದ ಇಲ್ಲಿ ದೇವಾನುದೇವತೆಗಳ ಆರಾಧನೆ ನಡೆಯುತ್ತಾ ಬಂದಿದೆ. ಅವುಗಳಲ್ಲಿ ಶಿವನ ಆರಾಧನೆಯು ಪ್ರಮುಖ ಸ್ಥಾನವನ್ನು ಪಡೆದಿದೆ. ಪುರಾಣಗಳಲ್ಲಿ ಸ್ತುತಿಸಲ್ಪಡುವ ಹಾಗೂ ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ ಶಿವನ ಆರಾಧನೆ ಆರಂಭವಾದದ್ದು ಸಹಸ್ರಾರು ವರ್ಷಗಳ ಹಿಂದೆ.

ವಿಜಯಪುರದ ಶಿವಗಿರಿಗೆ ಒಂದು ಭೇಟಿ

ವಿಜಯಪುರದ ಶಿವಗಿರಿಗೆ ಒಂದು ಭೇಟಿ

ಸಿಂಧೂ ನಾಗರಿಕತೆಯ ಕಾಲದಲ್ಲಿ ಪಶುಪತಿ ಹೆಸರಿನಲ್ಲಿ ಪೂಜಿಸಲ್ಪಡುತ್ತಿದ್ದ ಶಿವನನ್ನು ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೂ ಭಕ್ತರು ಆರಾಧಿಸುತ್ತಾರೆ. ಹೀಗಾಗಿ ಸಹಜವಾಗಿಯೇ ಭಾರತದಲ್ಲಿ ದೇವತೆಗಳ ವಿಶಾಲವಾದ ಮೂರ್ತಿಗಳು ಕಂಡುಬರುತ್ತವೆ.

ಹಾಗೆಯೇ ಶಿವ ಮೂರ್ತಿಗಳನ್ನು ಎಲ್ಲೆಡೆ ಸ್ಥಾಪಿಸಲಾಗಿದೆ. ಅವುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದಲ್ಲಿರುವ ಶಿವನ ವಿಗ್ರಹ ಭಾರತದಲ್ಲಿಯೇ ವಿಶಾಲ ಹಾಗೂ ಎತ್ತರವಾದುದು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಆ ನಂತರದ ಸ್ಥಾನವನ್ನು ವಿಜಯಪುರ ಜಿಲ್ಲೆಯ ಶಿವಗಿರಿಯಲ್ಲಿರುವ ಶಿವನ ಮೂರ್ತಿ ಹೊಂದಿದೆ.

ವಿಶ್ವವಿಖ್ಯಾತ ಗೋಲ್ ಗುಂಬಜ್, ಬಾರಾ ಕಮಾನ್, ಇಬ್ರಾಹಿಂ ರೋಜಾ ಅಂತಹ ಸ್ಮಾರಕಗಳ ಜೊತೆಗೆ ಈ ಶಿವನ ಮೂರ್ತಿಯೂ ವಿಜಯಪುರ ಪ್ರವಾಸೋದ್ಯಮಕ್ಕೆ ಗರಿಸಿಕ್ಕಿಸಿದಂತಿದೆ. ವಿಜಯಪುರ ನಗರದಿಂದ ಮೂರು ಕಿ.ಮೀ ದೂರದಲ್ಲಿ ಸಿಂದಗಿ ರಸ್ತೆಯ ಹತ್ತಿರ ಸುಮಾರು 18 ಎಕರೆ ವಿಸ್ತೀರ್ಣದ ಹಸಿರುವನದ ಮಧ್ಯೆ ಮಂದಸ್ಮಿತವಾಗಿ ಕುಳಿತಿರುವ ಶಿವನ ಮೂರ್ತಿ ನಿಮಗೆ ಕಾಣಸಿಗುತ್ತದೆ.

ಶಿವಗಿರಿ ಶಿವ ಮೂರ್ತಿ ನಿರ್ಮಾಣ

ಶಿವಗಿರಿ ಶಿವ ಮೂರ್ತಿ ನಿರ್ಮಾಣ

ಶಿವಗಿರಿಯಲ್ಲಿರುವ ಶಿವನ ಮೂರ್ತಿ ಆಕರ್ಷಿಣೀಯ ಸ್ಥಳಗಳಲ್ಲಿ ಒಂದು. ದೇಶದಲ್ಲೇ ವಿಸ್ತಾರ ಹಾಗೂ ಎತ್ತರದ ಎರಡನೇ ಶಿವನ ಮೂರ್ತಿ ಇದಾಗಿದೆ. ಒಟ್ಟು 85 ಅಡಿ ಉದ್ದವಿರುವ ಈ ಮೂರ್ತಿಯನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಬಸಂತಕುಮಾರ ಪಾಟೀಲ ಹಾಗೂ ಅವರ ಕುಟುಂಬದವರು ನಿರ್ಮಿಸಿದ್ದಾರೆ. ಶಿವಮೊಗ್ಗದ ಆರು ಜನ ಶಿಲ್ಪಿಗಳು ಒಟ್ಟು 100 ಜನ ಸಹಾಯಕರೊಂದಿಗೆ ಸುಮಾರು ಒಂದು ವರ್ಷದಲ್ಲಿ ಇದನ್ನು ನಿರ್ಮಿಸಿದ್ದಾರೆ.

ಇದನ್ನು ಸಂಪೂರ್ಣವಾಗಿ ಸಿಮೆಂಟ್, ಸ್ಟೀಲ್ ಹಾಗೂ ಕಾಂಕ್ರೀಟ್ ನಿಂದ ನಿರ್ಮಿಸಲಾಗಿದೆ. ಈ ದೈತ್ಯ ಶಿವನ ಮೂರ್ತಿಯು ಅಂದಾಜು 1500 ಟನ್ ತೂಕವನ್ನು ಹೊಂದಿದೆ. ಶಿವನು ಧರಿಸಿದ ಪ್ರತಿಯೊಂದು ರುದ್ರಾಕ್ಷಿಯು 50 ಕೆ.ಜಿ. ತೂಕವನ್ನು ಹೊಂದಿದ್ದು, 1.5 ಅಡಿ ವ್ಯಾಸವುಳ್ಳವಾಗಿದೆ. ಶಿವನ ಕೊರಳಲ್ಲಿ ಆಸೀನವಾದ ಸರ್ಪವು 145 ಅಡಿ ಉದ್ದವಿದೆ. ಈ ಶಿವನ ಮೂರ್ತಿಯು 2006ರಲ್ಲಿ ಪ್ರತಿಷ್ಠಾಪನೆಗೊಂಡಿತು. ಬೆಳಿಗ್ಗೆ 7ರಿಂದ ಸಂಜೆ 8 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.

ಶಿವಗಿರಿ ತಲುಪುವುದು ಹೇಗೆ?

ಶಿವಗಿರಿ ತಲುಪುವುದು ಹೇಗೆ?

ಶಿವಗಿರಿಗೆ ಭೇಟಿ ನೀಡುವವರು ವಿಜಯಪುರ ಬಸ್ ನಿಲ್ದಾಣಕ್ಕೆ ಬಸ್‌ ಮೂಲಕ ಪ್ರಯಾಣ ಮಾಡಬಹುದು. ವಿಜಯಪುರ ಬಸ್ ನಿಲ್ದಾಣದಿಂದ ಶಿವಗಿರಿಗೆ ತುಂಬಾ ಹತ್ತಿರವಾಗುತ್ತದೆ. ಜೊತೆಗೆ ಇಲ್ಲಿನ ರೈಲು ನಿಲ್ದಾಣವು ಬೆಂಗಳೂರು, ಮುಂಬೈ ಮತ್ತು ಇತರ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.

ಬೇರೆ ರಾಜ್ಯಗಳಿಂದ ಭಕ್ತರು ವಿಮಾನದಲ್ಲಿ ಭೇಟಿ ನೀಡಬಹುದು. ಆದರೆ ಶಿವಗಿರಿಗೆ ತುಂಬಾ ಹತ್ತಿರವಾದ ವಿಮಾನ ನಿಲ್ದಾಣಗಳು ಇಲ್ಲ. ಬದಲಿಗೆ ವಿಮಾನದಲ್ಲಿ ಪ್ರಯಾಣ ಮಾಡುವ ದೂರದೂರಿನ ಪ್ರಯಾಣಿಕರಿಗೆ ಗೋವಾ, ಪುಣೆ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳು ವಿಜಯಪುರದ ಶಿವಗಿರಿ ದೇವಸ್ಥಾನಕ್ಕೆ ಸಮೀಪದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ. ಬೆಳಗಾವಿ ಹತ್ತಿರದ ದೇಶೀಯ ವಿಮಾನ ನಿಲ್ದಾಣವೂ ಇದೆ.

ಶಿವರಾತ್ರಿಯಂದು ಶಿವಗಿರಿಯಲ್ಲಿನ ಪೂಜೆ

ಶಿವರಾತ್ರಿಯಂದು ಶಿವಗಿರಿಯಲ್ಲಿನ ಪೂಜೆ

ಮಹಾಶಿವರಾತ್ರಿಯಂದು ಶಿವಗಿರಿಯಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ಈ ವೇಳೆ ಶಿವಗಿರಿ ದೇವಸ್ಥಾನದಲ್ಲಿ ಶಿವನಿಗೆ ಹೂವು, ಹಣ್ಣು, ತಳಿರು ತೋರಣಗಳಿಂದ ಸಿಂಗರಿಸಲಾಗುತ್ತದೆ. ಭಜನಾ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಗಳನ್ನು ಮಹಾಶಿವರಾತ್ರಿಯಂದು ಆಯೋಜಿಸಲಾಗುತ್ತದೆ. ಇಷ್ಟಾರ್ಥಸಿದ್ಧಿಗಾಗಿ ಭಕ್ತರು ಉಪವಾಸ ಮಾಡಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+