ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ಟೋಬರ್ 1 ರಿಂದ ಬೆಂಗಳೂರಿನ ಹೆಬ್ಬಾಳದಲ್ಲಿ ದುರ್ಗಾಪೂಜೆ ಮಹೋತ್ಸವ ಸಂಭ್ರಮ

|
Google Oneindia Kannada News

ಬೆಂಗಳೂರಿನ ಹೆಬ್ಬಾಳದ ದುರ್ಗಾಪೂಜೆ ಮಹೋತ್ಸವ ಅಕ್ಟೋಬರ್ 1, 2002ರಿಂದ ಆರಂಭವಾಗಲಿದೆ. ಬೆಂಗಳೂರಿನಲ್ಲಿ ವಾಸಿಸುವ ಬೆಂಗಾಲಿ ಸಮುದಾಯಕ್ಕೆ ಹೆಬ್ಬಾಳ ದುರ್ಗಾ ಪೂಜೆ ಆಚರಣೆಗಳು ಪ್ರಮುಖ ಆಕರ್ಷಣೆಯಾಗಿದೆ. ಸಾಂಪ್ರದಾಯಿಕ ಹೆಬ್ಬಾಳ ದುರ್ಗಾ ಪೂಜೆ ಆಚರಣೆಗಳು ಈ ವರ್ಷ ಅಕ್ಟೋಬರ್ 1 ರಂದು ಪ್ರಾರಂಭವಾಗಲಿದೆ.

'ಕೋಲ್ಕತ್ತಾವನ್ನು ನೆನಪಿಸಿಕೊಳ್ಳಿ' ಎನ್ನುವ ಥೀಮ್‌ ನೊಂದಿಗೆ ಆಚರಿಸಲಾಗುತ್ತಿದೆ. ಕೋಲ್ಕತ್ತಾದಲ್ಲಿ ದುರ್ಗಾಪೂಜೆಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಕಳೆದ ಎರಡು ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಕೊರೊನಾ ಕಾರಣದಿಂದಾಗಿ ಆಚರಣೆ ನಡೆದಿಲ್ಲ. ಈ ಬಾರಿ ಅದ್ದೂರಿಯಾಗಿ ದುರ್ಗಾ ಪೂಜೆ ಮಾಡಲು ನಿರ್ಧರಸಿಲಾಗಿದೆ. ಈ ವರ್ಷ ಬೆಂಗಳೂರಿನ ಬೆಂಗಾಲಿ ಸಮುದಾಯ ದುರ್ಗಾ ಪೂಜೆ ಮಾಡುವ ಮೂಲಕ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ನೆನಪಿಸುತ್ತದೆ.

ಮೈಸೂರು ದಸರಾ: ಮನೆ, ಮನೆಗಳಲ್ಲಿ ಬೊಂಬೆಗಳ ದರ್ಬಾರ್!ಮೈಸೂರು ದಸರಾ: ಮನೆ, ಮನೆಗಳಲ್ಲಿ ಬೊಂಬೆಗಳ ದರ್ಬಾರ್!

ಸಂಘಟಕರ ಪ್ರಕಾರ, ಓಯಿಕೋಟಾನ್ ಹೆಬ್ಬಾಳ ದುರ್ಗೋತ್ಸವ-2022 ಕೋಲ್ಕತ್ತಾದ ಸಾಂಪ್ರದಾಯಿಕ ಶ್ರೀಮಂತ ಕುಟುಂಬಗಳಾದ 'ಬೋನೆಡಿ ಬ್ಯಾರಿಸ್'ಗೆ ಗೌರವ ಸಲ್ಲಿಸುತ್ತದೆ. ಈ ವರ್ಷದ ಥೀಮ್‌ಗೆ 'ಕೋಲ್ಕತ್ತಾವನ್ನು ನೆನಪಿಸಿಕೊಳ್ಳಿ' ಎಂದು ಶೀರ್ಷಿಕೆ ನೀಡಲಾಗಿದೆ. ಇದು ಈ ವರ್ಷ ಕೋಲ್ಕತ್ತಾ ದುರ್ಗಾ ಪೂಜೆ ಆಚರಣೆಗಳಂತೆ ದುರ್ಗಾ ಮಾತೆಗೆ ಪೂಜಿಸಲಾಗುತ್ತದೆ. ಈ ಸಮಾರಂಭದಲ್ಲಿ 18 ನೇ ಶತಮಾನದ ದುರ್ಗಾ ಪೂಜೆ ಆಚರಣೆಗಳ ಸಾಂಪ್ರದಾಯಿಕ ಚಿತ್ರಗಳನ್ನು ಸಹ ಪ್ರಸ್ತುತಪಡಿಸಲಾಗುವುದು. ಇದು ಆಚರಣೆಯ ಪ್ರಮುಖ ಹೈಲೈಟ್ ಆಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

Navratri 2022: Hebbal Durga Puja celebrations to begin on October 1

ಓಯಿಕೋಟಾನ್ ಹೆಬ್ಬಾಳ್ ದುರ್ಗೋತ್ಸವ - 2022ರ ಸಂಘಟಕರ ಪ್ರಕಾರ, " ಓಯಿಕೋಟಾನ್ ಹೆಬ್ಬಾಳ ದುರ್ಗೋತ್ಸವ 10 ನೇ ವರ್ಷದ ಸಂಭ್ರಮಾಚರಣೆಯಾಗಿದೆ. ಕೋಲ್ಕತ್ತಾದ ಈ ಗಮನಾರ್ಹ ಸಾಧನೆಗೆ ಗೌರವ ಸಲ್ಲಿಸುತ್ತದೆ. ಪ್ರವಾಸಿಗರಿಗೆ ಅಸಾಧಾರಣ ದೃಶ್ಯ ಅನುಭವ ನೀಡಲಿದೆ. ಬೆಂಗಳೂರಿನಲ್ಲಿ ಶತಮಾನದ ದುರ್ಗಾ ಪೂಜೆಯ ಆಚರಣೆಗಳು ನಡೆಯುತ್ತವೆ. ಆದರೆ ಓಯಿಕೋಟಾನ್ ಹೆಬ್ಬಾಳ ದುರ್ಗೋತ್ಸವ ತುಂಬಾ ವಿಶೇಷವಾಗಿದೆ. ಕೋಲ್ಕತ್ತಾದ ದುರ್ಗಾಪೂಜೆ ಮಾದರಿಯಲ್ಲಿ ಆಚರಣೆ ಮಾಡಲಾಗುತ್ತದೆ'' ಎಂದಿದ್ದಾರೆ.

ಓಯಿಕೋಟಾನ್ ಹೆಬ್ಬಾಳ ದುರ್ಗೋತ್ಸವವು ಅದರ ವಿಶಿಷ್ಟವಾದ ಥೀಮ್ ಪ್ಯಾಂಡಲ್‌ಗಳಿಗಾಗಿ ಬೆಂಗಳೂರಿನಲ್ಲಿ ಜನಪ್ರಿಯವಾಗಿದೆ. ಈ ಬಾರಿಯ ಅಲಂಕಾರಗಳು ಕೋಲ್ಕತ್ತಾದ ಪಂಡಲ್ ಕಲಾವಿದರಿಂದ ರೂಪುಗೊಂಡಿರುವ ಅಪ್ರತಿಮ ಜೊರಾಸಂಕೊ ಠಾಕೂರ್ ಬ್ಯಾರಿಯಿಂದ ಮಾಡಲ್ಪಡುತ್ತವೆ ಎಂದು ಸಂಘಟಕರು ಹೇಳಿದ್ದಾರೆ. ಉತ್ತರ ಕೋಲ್ಕತ್ತಾದ ರವೀಂದ್ರ ಭಾರತಿ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಪ್ರಸ್ತುತ ಇರುವ ಜೊರಾಸಂಕೊ ಠಾಕೂರ್ ಬ್ಯಾರಿ, ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ಪೂರ್ವಜರ ಮನೆಯವರಾಗಿದ್ದಾರೆ. ಓಯಿಕೋಟನ್‌ನ ಥೀಮ್ ಪಾರ್ಕ್‌ಗಳು 'ಮಯೂರ್ಪಂಖಿ' ದೋಣಿ (ನವಿಲು ಗರಿ ದೋಣಿ), ಕರ್ನಾಟಕದ ಚನ್ನಪಟ್ಟಣದ ಆಟಿಕೆಗಳು, ಬಂಗಾಳದ ಬಿಷ್ಣುಪುರ ಟೆರಾಕೋಟಾ ದೇವಾಲಯ ಮತ್ತು ಸೋನಾರ್ ಕೆಲ್ಲಾ, ಚಿನ್ನದ ಕೋಟೆಯಂತಹ ವಿಷಯಗಳನ್ನು ಆಧರಿಸಿವೆ.

English summary
Navratri 2022: The Durga Puja Mahotsav of Hebbal, Bengaluru will begin from October 1. ನವರಾತ್ರಿ 2022:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X