ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Gowri Habba 2022: ಗೌರಿ ಹಬ್ಬ ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಹಬ್ಬದ ಮಹತ್ವ!

|
Google Oneindia Kannada News

ಗಣೇಶನ ಹಬ್ಬ ಬಂತೆಂದ್ರೆ ಗೌರಿ ಹಬ್ಬ ಬಂತು ಎಂತಲೇ ಅರ್ಥ. ಯಾಕೆಂದ್ರ ಗಣೇಶನ ಹಬ್ಬಕ್ಕೂ ಮೊದಲು ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಭಾದ್ರಪದ ಮಾಸದ ಶುಕ್ಲಪಕ್ಷದಂದು ಮೂರನೇ ದಿನದಂದು ಆಚರಿಸಲಾಗುವ ಪವಿತ್ರ ಹಬ್ಬವಾಗಿದೆ.

ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಗಣೇಶ ಚತುರ್ಥಿಯ ಒಂದು ದಿನ ಮುಂಚಿತವಾಗಿ ಗೌರಿ ಹಬ್ಬವನ್ನು ವ್ಯಾಪಕವಾಗಿ ಆಚರಿಸಲಾಗುತ್ತದೆ. ಗೌರಿ ಹಬ್ಬವನ್ನು ಸ್ವರ್ಣ ಗೌರಿ ವ್ರತ ಎಂದೂ ಕರೆಯುತ್ತಾರೆ. ಈ ದಿನ ಪಾರ್ವತಿ ದೇವಿ, ದೇವಿ ಗೌರಿ ಅಥವಾ ಗೌರಿಯ ಸುಂದರ ಅವತಾರವನ್ನು ಮನೆಯಲ್ಲಿ ಪೂಜಿಸಲಾಗುತ್ತದೆ. ದೇವಿಯು ಗಣೇಶನ ತಾಯಿ ಮತ್ತು ಶಿವನ ಪತ್ನಿಯಾಗಿ ಪೂಜಿಸಲ್ಪಡುತ್ತಾಳೆ. ತನ್ನ ಭಕ್ತರಿಗೆ ಧೈರ್ಯ ಮತ್ತು ಶಕ್ತಿಯನ್ನು ದಯಪಾಲಿಸುವ ದೈವಿಕ ಸಾಮರ್ಥ್ಯಕ್ಕಾಗಿ ಅವಳನ್ನು ದೇಶಾದ್ಯಂತ ಪೂಜಿಸಲಾಗುತ್ತದೆ.

ಹಿಂದೂ ನಂಬಿಕೆಗಳ ಪ್ರಕಾರ, ಮಾತಾ ಗೌರಿಯು ಪಾರ್ವತಿ ದೇವಿಯ ಅತ್ಯಂತ ಸುಂದರವಾದ ಅವತಾರ ಮತ್ತು ಶಿವನ ಶಕ್ತಿಯಾಗಿದ್ದಾರೆ. ಈ ಬಾರಿ ಆಗಸ್ಟ್ 30, 2022 ಮಂಗಳವಾರದಂದು ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವೇಳೆ ಸ್ವರ್ಣ ಗೌರಿ ವ್ರತ, ಆಚರಣೆಗಳು ಮತ್ತು ಧಾರ್ಮಿಕ ಕಾರ್ಯಕ್ರಮದ ಮಹತ್ವವನ್ನು ತಿಳಿದುಕೊಳ್ಳೋಣ.

ಪಂಚಾಂಗದ ಪ್ರಕಾರ, ಬೆಳಗಿನ ಗೌರಿ ಪೂಜೆ ಮುಹೂರ್ತವು ಆಗಸ್ಟ್ 30 ರಂದು ಬೆಳಿಗ್ಗೆ 06.23 ರಿಂದ 08.53 ರವರೆಗೆ ಇರಲಿದೆ. ತದಿಗೆ ತಿಥಿಯು ಆಗಸ್ಟ್ 29 ರಂದು ಮಧ್ಯಾಹ್ನ 03:20 ಕ್ಕೆ ಪ್ರಾರಂಭವಾಗಿ ಮರುದಿನ 3:33 ಕ್ಕೆ ಮುಕ್ತಾಯಗೊಳ್ಳಲಿದೆ.

ಗಣೇಶ ಚತುರ್ಥಿ 2022: ಗಣಪತಿಯ ಆ ಒಂದು ಮಂತ್ರದ ಪ್ರಭಾವದಿಂದ ಇಂದ್ರನಿಗೆ ಸಾವಿರ ಕಣ್ಣುಗಳುಗಣೇಶ ಚತುರ್ಥಿ 2022: ಗಣಪತಿಯ ಆ ಒಂದು ಮಂತ್ರದ ಪ್ರಭಾವದಿಂದ ಇಂದ್ರನಿಗೆ ಸಾವಿರ ಕಣ್ಣುಗಳು

ಹಬ್ಬದ ಮಹತ್ವ

ಗೌರಿ ಹಬ್ಬ ದಿನದಂದು ಮಾತಾ ಗೌರಿ ತನ್ನ ಹೆತ್ತವರ ಮನೆಗೆ ಬರುತ್ತಾಳೆ ಮರುದಿನ ಗಣೇಶ ಚತುರ್ಥಿಯಂದು ಅವರ ಮಗ ಗಣಪತಿಯಿಂದ ಕೈಲಾಸ ಪರ್ವತಕ್ಕೆ ಕರೆದೊಯ್ಯುತ್ತಾರೆ ಎಂದು ನಂಬಲಾಗುತ್ತದೆ. ಈ ದಿನ ವಿವಾಹಿತ ಮಹಿಳೆಯರು ತಮ್ಮ ಮನೆಗೆ ಭೇಟಿ ನೀಡುತ್ತಾರೆ. ಗೌರಿಯನ್ನೂ ಮಗಳಂತೆ ಮನೆಗೆ ಬರಮಾಡಿಕೊಂಡು ಪೂಜಿಸಲಾಗುತ್ತದೆ. ವಿವಾಹಿತ ಮಹಿಳೆಯರು ಗಂಡನ ದೀರ್ಘಾಯುಷ್ಯಕ್ಕಾಗಿ ಪೂಜಿಸುತ್ತದೆ. ಈ ದಿನ, ಮಹಿಳೆಯರು ಪಾರ್ವತಿ ದೇವಿಗೆ ಸುಮಂಗಲಿಯರು ಬಳಸುವ ವಸ್ತುಗಳನ್ನು ಅರ್ಪಿಸುತ್ತಾರೆ. ಅದರಲ್ಲಿ ಕುಂಕುಮ, ಮೆಹಂದಿ, ಬಿಂದಿ, ಸಿಂಧೂರ, ಕಾಲುಂಗುರ, ಕಾಜಲ್, ಬಳೆ ಮತ್ತು ಬಾಚಣಿಗೆ ಸೇರಿದಂತೆ ಹದಿನಾರು ವಸ್ತುಗಳನ್ನು ಅರ್ಪಿಸುತ್ತಾರೆ.

Gowri Habba 2022: Date, Shubh muhurta, Puja Vidhi, Rituals, Significance of Swarna Gowri Vratha in Kannada

ಪೂಜಾ ವಿಧಾನ

ದೇವಿಯನ್ನು ಒಲಿಸಿಕೊಳ್ಳಲು ಸ್ವರ್ಣಗೌರಿ ವ್ರತವನ್ನು ಆಚರಿಸಲಾಗುತ್ತದೆ. ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ಗೌರಿ ಹಬ್ಬ ಪೂಜೆಯನ್ನು ಮಾಡುತ್ತಾರೆ. ವಿವಾಹಿತ ಹೆಣ್ಣು ಮುಂಜಾನೆ ಹೊಸ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಅರಿಶಿನದಿಂದ ಮಾಡಿದ ಮಾತಾ ಗೌರಿಯ ಸಾಂಕೇತಿಕ ವಿಗ್ರಹವನ್ನು ಪ್ರತಿಷ್ಠಾಪಿಸುವ ಮೂಲಕ ಪೂಜೆ ಮಾಡುತ್ತಾರೆ. ಈ ವಿಗ್ರಹಗಳನ್ನು ಜಲಗೌರಿ ಅಥವಾ ಅರಿಶಿಣದಗೌರಿ ಎಂದು ಕರೆಯಲಾಗುತ್ತದೆ. ಕೆಲವು ಮನೆಗಳಲ್ಲಿ ದೇವಿಯರ ಮೂರ್ತಿ ಅಥವಾ ಚಿನ್ನದ ಚಿತ್ರವನ್ನೂ ಸಹ ಪೂಜಿಸಲಾಗುತ್ತದೆ.

Gowri Habba 2022: Date, Shubh muhurta, Puja Vidhi, Rituals, Significance of Swarna Gowri Vratha in Kannada

ಈ ದಿನ ಶುಚಿತ್ವ ಮತ್ತು ಶುದ್ಧ ಸಮರ್ಪಣೆಯೊಂದಿಗೆ ಪೂಜಾ ವಿಧಿಯನ್ನು ನಿರ್ವಹಿಸುವುದು ಅವಶ್ಯಕ. ಕರ್ನಾಟಕ ಮತ್ತು ದಕ್ಷಿಣ ಭಾರತದ ಬಹುತೇಕ ಭಾಗಗಳಲ್ಲಿ, ಕುಟುಂಬದಿಂದ ತಮ್ಮ ಹೆಣ್ಣುಮಕ್ಕಳಿಗೆ ಮಂಗಳ ಗೌರಿ ಪೂಜೆ ಸಂಕೇತವಾಗಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಕುಟುಂಬಗಳು ಈ ಧಾರ್ಮಿಕ ಸಂದರ್ಭವನ್ನು ಆಚರಿಸುತ್ತಾರೆ.

English summary
Gowri Habba 2022: know the Date, Shubh muhurta, Puja Vidhi, Rituals, Significance of Swarna Gowri Vratha in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X