Helle Lyng: ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್ - ನರೇಂದ್ರ ಮೋದಿಗೆ ಪ್ರಶ್ನೆ ಮಾಡಿದ್ದು ಇದೇ ಕಾರಣಕ್ಕೆ: ಕೃಷ್ಣ ಭಟ್ ಬರಹ

Helle Lyng: ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಚಾರಗಳ ಬಗ್ಗೆ ಹವ್ಯಾಸಿ ಬರಹಗಾರ ಕೃಷ್ಣ ಭಟ್ ಅವರ ಬರಹ ಇಲ್ಲಿದೆ. ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ. ಆ ಪತ್ರಕರ್ತೆ ಅದಷ್ಟನ್ನೂ ಮಾಡಿದ್ದೇ ತನ್ನ ಬಗ್ಗೆ ಚರ್ಚೆ ಆಗಲಿ ಅಂತ. ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್ ಬಗ್ಗೆ ಭಾರಿ ಚರ್ಚೆ ನಡೆದಿದೆ. ಆ ಪತ್ರಕರ್ತೆ ಅದಷ್ಟನ್ನೂ ಮಾಡಿದ್ದೇ ತನ್ನ ಬಗ್ಗೆ ಚರ್ಚೆ ಆಗಲಿ ಅಂತ! ಇತ್ತೀಚೆಗೆ, ಅಂದರೆ ಸೋಶಿಯಲ್ ಮೀಡಿಯಾ ಚಾಲ್ತಿಗೆ ಬಂದ ಮೇಲೆ ವಿದೇಶದ ಮಧ್ಯಮ ಶ್ರೇಣಿಯ ಪತ್ರಕರ್ತರಲ್ಲಿ ಹೊಸದೊಂದು ಚಾಳಿ ಶುರುವಾಗಿದೆ.

ಭಾರತದ ಬಗ್ಗೆ ಸೆನ್ಸೇಶನಲ್ ಆಗಿ ಮಾತನಾಡಿ, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಪ್ರಚಾರ ಗಿಟ್ಟಿಸುವುದು. ಈ ಹಿಂದೆ ಹಲವು ಪತ್ರಕರ್ತರು ಭಾರತದ ಬಗ್ಗೆ ನೆಗೆಟಿವ್ ಮಾತನಾಡಿದರೆ ಸಾಕು ಅದು ದೊಡ್ಡ ಸುದ್ದಿಯಾಗುತ್ತಿತ್ತು. ನಮ್ಮಲ್ಲೂ ಇಲ್ಲವೇ... ನಮ್ಮನ್ನು ಬೈಯುತ್ತಿದ್ದಾರೆ ಎಂದರೆ ನಾವು ಸರಿ ಇದ್ದೇವೆ ಎಂದು ಹೇಳಿಕೊಳ್ಳುವ ಪತ್ರಕರ್ತರು! ಅದೇ ಸಾಲಿಗೆ ಸೇರಿದವರು ಇವರು... ಹಾಗಂತ, ಎಲ್ಲರೂ ಹಾಗಲ್ಲ... ಮಾರ್ಕ್ ಟ್ಯುಲಿಯಂಥ ಭಾರತದ ಕುರಿತು ವಸ್ತುನಿಷ್ಠವಾಗಿ ವರದಿ ಮಾಡಿದ ವಿದೇಶಿ ಪತ್ರಕರ್ತರು ಹಿಂದೆಯೂ ಇದ್ದರು. ಈಗಲೂ ಇದ್ದಾರೆ.

Helle Lyng

ಇನ್ನೂ ಕೆಲವರು ಉದಾಹರಣೆಗೆ ಕೆನಡಾದ ಡೇನಿಯಲ್ ಬೋರ್ಡ್‌ಮನ್‌ ಥರದವರು ಭಾರತದ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿ ಅಭಿಮಾನ ಗಿಟ್ಟಿಸಿದ್ದಾರೆ. ಬೋರ್ಡ್‌ಮನ್‌ ಅಂತೂ ಭಾರತ ಮತ್ತು ಕೆನಡದಾ ಸಂಬಂಧದ ಬಗ್ಗೆ ಭಾರತದ ಬಹುತೇಕ ಎಲ್ಲ ಮಾಧ್ಯಮಗಳಿಗೂ ಇಂಟರ್‌ವ್ಯೂ ಕೊಟ್ಟಿದ್ದಾರೆ.
ಹೆಲ್ಲೆ ಲಿಂಗ್ ಕೂಡ ಇಂಥ ನೆಗೆಟಿವ್ ಪಬ್ಲಿಸಿಟಿಯ ಹಿಂದೆ ಬಿದ್ದವರೇ... ಅದಕ್ಕೆ ದೊಡ್ಡ ದೊಡ್ಡ ಪತ್ರಿಕಾ ಧರ್ಮದ ಲೇಪನಗಳನ್ನು ಯಾವ ಬದಿಯ ಪತ್ರಕರ್ತರು ಮಾಡಿದರೂ ಅದು ಅಸಂಬದ್ಧವೇ.

ನಾರ್ವೆಗೆ ಮೋದಿ ಹೋಗುವವರೆಗೆ ಆಕೆ ಬರಿ ಲೈಫ್‌ಸ್ಟೈಲ್ ಬಗ್ಗೆ ಬರೆದುಕೊಂಡಿದ್ದವಳು, ಸೋಶಿಯಲ್ ಮೀಡಿಯಾಗಳಲ್ಲಿ ಏನೇನೂ ಆ್ಯಕ್ಟಿವ್ ಇಲ್ಲದವಳು, ಏಕಾಏಕಿ ಪ್ರಚಾರಕ್ಕೆ ಬರುವ ಉದ್ದೇಶದಿಂದಲೇ, ಮೊದಲು ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಯವರ ಪತ್ರಿಕಾಗೋಷ್ಠಿಯಲ್ಲಿ ಅಸಂಬದ್ಧ ಪ್ರಶ್ನೆ ಕೇಳಿದಳು. ಆಮೇಲೆ, ಮೋದಿಗೂ ಪ್ರಶ್ನೆ ಕೇಳಿದ ನೆಪ ಮಾಡಿದಳು.

ನಾರ್ವೆಯಲ್ಲಿನ ಜನಸಂಖ್ಯೆಯೇ 56 ಲಕ್ಷ! ಆಕೆ ನಾರ್ವೆ ಬಗ್ಗೆ ಏನೇ ಬರೆದರೂ, ಅಲ್ಲಿನ ಸೆಲೆಬ್ರಿಟಿ ಜರ್ನಲಿಸ್ಟ್ ಆಗಿದದ್ದರೂ ಇಷ್ಟು ಮಟ್ಟದ ಪ್ರಚಾರ ಆಕೆಗೆ ಸಿಗುತ್ತಿರಲಿಲ್ಲ. ಸುಮ್ಮನೆ ಆಕೆ ಬೆಂಗಳೂರಿನ ರಸ್ತೆ ಗುಂಡಿ ಬಗ್ಗೆ ಬರೆದರೂ ನಾರ್ವೆ ಜನಸಂಖ್ಯೆಗಿಂತ ಹೆಚ್ಚನ ಜನರನ್ನು ರೀಚ್ ಆಗುತ್ತಿದ್ದಳು! ಇನ್ನು 100 ಕೋಟಿ ಜನಸಂಖ್ಯೆ ಇರುವ ಭಾರತದ ಪ್ರಧಾನಿ ವಿಚಾರ ಮಾತನಾಡಿದರೆ ಕೇಳಬೇಕೆ?

ಈ ಕಾಲದ ಪತ್ರಕರ್ತರಿಗೆ ಬೇಕಿರುವುದೇ ಅಷ್ಟು... ಏನೇ ಆಗಲಿ ಮೇನ್‌ಸ್ಟ್ರೀಮ್‌ನಲ್ಲಿ ಇರಬೇಕು! ಅದು ನೆಗೆಟಿವ್ ಆದರೂ ಸರಿ, ಪಾಸಿಟಿವ್ ಆದರೂ ಸರಿ! ಆದರೆ ಈ ವಿಷಯದಲ್ಲಿ ಅವಳಿಗೆ ಆದ ಒಂದು ದೊಡ್ಡ ಹಿನ್ನಡೆ ಎಂದರೆ, ಆಕೆಯ ಮೆಟಾ ಖಾತೆಗಳನ್ನು ಸಸ್ಪೆಂಡ್ ಮಾಡಲಾಗಿದೆ. ಅವಳಿಗೆ ಈಗ ಟ್ವಿಟರ್ ಖಾತೆ ಮಾತ್ರ ಇದೆ! ಒಂದು ವೇಳೆ ಅವಳಿಗೆ ಮೆಟಾ ಅಕೌಂಟ್‌ ಇದ್ದರೆ, ಒಂದೊಂದು ಪೋಸ್ಟ್ ಹಾಕಿಯೂ ಆಕೆ ಲಕ್ಷಾಂತರ ರೂ. ಆದಾಯ ಗಳಿಸಿಬಿಡುತ್ತಿದ್ದಳು! ಯಾವುದೋ ಸರ್ಕಾರ (ಭಾರತ ಅಥವಾ ನಾರ್ವೆ) ತಕ್ಷಣ ಕಾರ್ಯಪ್ರವೃತ್ತವಾಗಿ ಆಕೆಯ ಅಕೌಂಟ್‌ಗಳನ್ನು ಸಸ್ಪೆಂಡ್ ಮಾಡಿಸಿದೆ.

ಸದ್ಯಕ್ಕೆ ಅವಳಿಗೆ ತಕ್ಷಣ ಹಣ ಸಿಗದೇ ಇರಬಹುದು. ಆದರೆ, ಇನ್ನು ಆಕೆಯನ್ನು ದೊಡ್ಡ ದೊಡ್ಡ ಸಂಸ್ಥೆಗಳು ಕರೆದು ಕೆಲಸ ಕೊಡುವುದು ಬಾಕಿ ಇದೆ ಅಷ್ಟೇ. ಇನ್ನು ಇದೇ ಹೆಸರಿನಲ್ಲಿ ಭಾರತದ ಪತ್ರಿಕಾ ಸ್ವಾತಂತ್ರ್ಯ, ಮೋದಿ ಪತ್ರಿಕಾಗೋಷ್ಠಿ ಯಾಕೆ ಮಾಡಲಿಲ್ಲ ಎಂದೆಲ್ಲ ವಿಷಯದ ಮೇಲೆ ಘನ ಚರ್ಚೆ ನಡೆಸುವುದು ತೌಡು ಕುಟ್ಟಿದ ಹಾಗೆ ಅನ್ನಿಸುತ್ತದೆ ಅಷ್ಟೇ...

ಬರಹ: ಕೃಷ್ಣ ಭಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+