ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಮಹತ್ವದ ಬದಲಾವಣೆ, ಕನ್ನಡಿಗ ಕೆಎಲ್‌ ರಾಹುಲ್‌ಗೆ ಹೊಸ ಜವಾಬ್ದಾರಿ?

IPL 2027 KL Rahul: ಇದೀಗ ಸದ್ಯ ಟಿ20 ವಿಶ್ವಕಪ್‌ ಟೂರ್ನಿ 2026 ಅದ್ಧೂರಿಯಾಗಿ ನಡೆಯುತ್ತಿದೆ. ಈ ನಡುವೆಯೇ ಇನ್ನೂ ತುಂಬಾ ಸಮಯ ಇರುವಾಗಲೇ ಮುಂದಿನ ವರ್ಷದ ಐಪಿಎಲ್‌ ಹಬ್ಬಕ್ಕಾಗಿ ಹಲವು ಫ್ರಾಂಚೈಸಿಗಳಲ್ಲಿ ಮಹತ್ವದ ಬದಲಾಣೆಗಳಾಗುತ್ತಿವೆ. ಹಾಗೆಯೇ ಇದೀಗ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ ಅವರಿಗೆ ಹೊಸ ಜವಾಬ್ದಾರಿ ವಹಿಸಲಾಗಿದೆ ಎನ್ನುವ ಸುದ್ದಿ ದೊಡ್ಡ ಮಟ್ಟದಲ್ಲಿ ಗದ್ದಲ ಸೃಷ್ಟಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಐಪಿಎಲ್ ಮುಂದಿನ ಸೀಸನ್‌ಗೆ ಇನ್ನು ಸಾಕಷ್ಟು ಸಮಯ ಬಾಕಿ ಇರುವಾಗಲೇ ಫ್ರಾಂಚೈಸಿಗಳಲ್ಲಿ ತೆರೆಮರೆಯಲ್ಲಿ ಭಾರಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಜೂನ್ 19ರ ಶುಕ್ರವಾರ ಹೊರಬಿದ್ದಿರುವ ಮೂಲಗಳ ಪ್ರಕಾರ, ಕನ್ನಡಿಗ ಕೆ.ಎಲ್. ರಾಹುಲ್ ಅವರು ಐಪಿಎಲ್ 2027ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ನಾಯಕರಾಗಿ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಪ್ರಸ್ತುತ ನಾಯಕನಾಗಿರುವ ಅಕ್ಷರ್ ಪಟೇಲ್ ಅವರ ಸ್ಥಾನವನ್ನು ರಾಹುಲ್ ತುಂಬಲಿದ್ದಾರೆ ಎಂದು ತಿಳಿದುಬಂದಿದೆ.

KL Rahul Set To Lead Delhi Capitals In IPL 2027 Major Team Changes Revealed Know complete details

ಡೆಲ್ಲಿ ತಂಡದಲ್ಲಿ ಕನ್ನಡಿಗನಿಗೆ ಹೊಸ ಜವಾಬ್ದಾರಿ?

ಕರ್ನಾಟಕದ 34 ವರ್ಷದ ಅನುಭವಿ ಆಟಗಾರ ಕೆ.ಎಲ್.ರಾಹುಲ್ ಅವರಿಗೆ ಐಪಿಎಲ್‌ನಲ್ಲಿ ತಂಡಗಳನ್ನು ಮುನ್ನಡೆಸಿದ ಉತ್ತಮ ಅನುಭವವಿದೆ. ಈ ಹಿಂದೆ ಅವರು ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿಗೆ ಯಶಸ್ವಿಯಾಗಿ ನಾಯಕತ್ವ ವಹಿಸಿದ್ದರು. ಕಳೆದ ಬಾರಿಯ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ನಂತರ ಅವರು ಕೇವಲ ಬ್ಯಾಟಿಂಗ್ ಕಡೆಗೆ ಗಮನ ಹರಿಸಿದ್ದರು. ಆದರೆ ಈಗ ತಂಡದ ಮಾಲೀಕತ್ವ ವಹಿಸಿಕೊಂಡಿರುವ ಜೆಎಸ್‌ಡಬ್ಲ್ಯೂ ಗ್ರೂಪ್, ಮುಂಬರುವ ಸೀಸನ್‌ನಲ್ಲಿ ತಂಡವನ್ನು ಮುನ್ನಡೆಸುವ ಸಂಪೂರ್ಣ ಜವಾಬ್ದಾರಿಯನ್ನು ರಾಹುಲ್ ಹೆಗಲಿಗೆ ಹಾಕಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ನಾಯಕತ್ವ ಬದಲಾವಣೆ ಚಿಂತನೆಗೆ ಕಾರಣ ಏನು?

ಕಳೆದ ಐಪಿಎಲ್ ಆವೃತ್ತಿಗಳಲ್ಲಿ ಆಲ್ ರೌಂಡರ್ ಅಕ್ಷರ್ ಪಟೇಲ್ ನೇತೃತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿತ್ತು. ತಂಡದಲ್ಲಿ ಹಿರಿಯ ಆಟಗಾರರ ದಂಡೇ ಇದ್ದರೂ ಪ್ಲೇಆಫ್ ಹಂತ ತಲುಪುವುದು ಸಾಧ್ಯವಾಗಿರಲಿಲ್ಲ. ಅಕ್ಷರ್ ಪಟೇಲ್ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡಿದರೂ, ಅವರ ನಾಯಕತ್ವದಲ್ಲಿ ತಂಡಕ್ಕೆ ಅಗತ್ಯವಿದ್ದ ಗೆಲುವುಗಳನ್ನು ತಂದುಕೊಡಲು ಸಾಧ್ಯವಾಗಲಿಲ್ಲ.

ಆದ್ದರಿಂದ ತಂಡದಲ್ಲಿ ಹೊಸ ಜೋಶ್ ತುಂಬಲು ಮತ್ತು ಒಬ್ಬ ಪರಿಣತ ನಾಯಕನಿಗೆ ಮಣೆ ಹಾಕಲು ಮ್ಯಾನೇಜ್‌ಮೆಂಟ್ ಮುಂದಾಗಿದೆ. ಕೆಎಲ್‌ ರಾಹುಲ್ ಅವರ ಶಾಂತ ಸ್ವಭಾವ ಮತ್ತು ರಣತಂತ್ರಗಳು ಡೆಲ್ಲಿ ತಂಡಕ್ಕೆ ಹೊಸ ದಿಕ್ಕು ನೀಡಬಲ್ಲವು ಎಂಬುದು ಫ್ರಾಂಚೈಸಿಯ ನಂಬಿಕೆಯಾಗಿದೆ. ಆದ್ದರಿಂದ ಅವರಿಗೆ ಯಜಮಾನನ ಪಟ್ಟ ಕಟ್ಟಲು ಮುಂದಾಗಿದೆ ಎನ್ನಲಾಗಿದೆ.

ಮ್ಯಾನೇಜ್‌ಮೆಂಟ್‌ನಿಂದ ಮಹತ್ವದ ಬದಲಾವಣೆ

2027ರ ಸೀಸನ್‌ನಿಂದ ಡೆಲ್ಲಿ ಫ್ರಾಂಚೈಸಿಯ ಸಂಪೂರ್ಣ ಕಾರ್ಯಾಚರಣೆಯು ಜೆಎಸ್‌ಡಬ್ಲ್ಯೂ ಗ್ರೂಪ್ ನಿಯಂತ್ರಣಕ್ಕೆ ಬರುತ್ತಿದ್ದಂತೆ ದೊಡ್ಡ ಮಟ್ಟದ ಬದಲಾವಣೆ ಆಗುತ್ತಿದೆ. ಸೌರವ್ ಗಂಗೂಲಿ ಅವರನ್ನು ಪ್ರಮುಖ ಸಿಬ್ಬಂದಿಯಾಗಿ ಮರಳಿ ತರಲಾಗುತ್ತಿದ್ದು, ಅವರ ಜೊತೆಗೆ ಯುವರಾಜ್ ಸಿಂಗ್ ಅವರನ್ನೂ ಬ್ಯಾಟಿಂಗ್ ಕೋಚ್ ಆಗಿ ನೇಮಿಸಲು ಮಾತುಕತೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಕೆ.ಎಲ್.ರಾಹುಲ್ ಅವರನ್ನು ನಾಯಕನನ್ನಾಗಿ ಘೋಷಿಸಲು ಸಿದ್ಧತೆ ನಡೆಸಿರುವುದು ಮುಂದಿನ ಬಾರಿ ಡಿಸಿ ಸಂಪೂರ್ಣ ಹೊಸ ರಣತಂತ್ರಗಳೊಂದಿಗೆ ಕಣಕ್ಕಿಳಿಯುತ್ತಿರುವುದನ್ನು ಎತ್ತಿತೋರಿಸುತ್ತದೆ.

ಕಳೆದ ಸೀಸನ್‌ನಲ್ಲಿ ಕೆ.ಎಲ್.ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್‌ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ತಮ್ಮ ಸ್ಟ್ರೈಕ್ ರೇಟ್ ಅನ್ನು ಗಮನಾರ್ಹವಾಗಿ ಹೆಚ್ಚಿಸಿಕೊಂಡಿದ್ದ ಅವರು, ಸ್ಫೋಟಕ ಇನ್ನಿಂಗ್ಸ್‌ಗಳ ಮೂಲಕ ರನ್ ಮಳೆ ಹರಿಸಿದ್ದರು. ಈಗ ನಾಯಕತ್ವದ ಜೊತೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಅವರೇ ನಿಭಾಯಿಸಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಹೇಳುವುದಾದರೆ ಸೌರವ್ ಗಂಗೂಲಿ ಅವರ ಮಾರ್ಗದರ್ಶನ ಹಾಗೂ ಕೆ.ಎಲ್.ರಾಹುಲ್ ಅವರ ನಾಯಕತ್ವದಲ್ಲಿ ತಂಡವು ಐಪಿಎಲ್ 2027ರಲ್ಲಿ ತನ್ನ ಚೊಚ್ಚಲ ಪ್ರಶಸ್ತಿಯ ಬರವನ್ನು ನೀಗಿಸಿಕೊಳ್ಳುವ ಗುರಿಯನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+