Abhijeet Dipke: ಕಾಕ್ರೋಚ್ ಜನತಾ ಪಾರ್ಟಿಯ ಅಭಿಯಾನದ ಹಿಂದಿರುವ ಅಭಿಜೀತ್ ದಿಪ್ಕೆ ಯಾರು, ಇದೆ ಎಎಪಿ ಹಿನ್ನೆಲೆ!
Abhijeet Dipke: ಭಾರತದಲ್ಲಿ ಕಳೆದ ಐದು ದಿನಗಳಿಂದಲೂ ಕಾಕ್ರೋಚ್ ಜನತಾ ಪಾರ್ಟಿ ವಿಚಾರವು ಬಹಳಷ್ಟು ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೇವಲ ನಾಲ್ಕು ದಿನಗಳ ಅವಧಿಯಲ್ಲಿ ಭಾರತೀಯ ಜನತಾ ಪಾರ್ಟಿಯ ದಾಖಲೆಗಳನ್ನೇ ಭಾರತದ ಯುವ ಅಭಿಯಾನವು ಮುರಿದಿದೆ. ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿರುವ ಕಾಕ್ರೋಚ್ ಜನತಾ ಪಾರ್ಟಿಯ ಹಿಂದೆ ಇರುವುದು ಯುವ ಶಕ್ತಿ. ಯುವ ಸಮೂಹದ ಈ ಅಭಿಯಾನವು ನಿಧಾನವಾಗಿ ರಾಜಕೀಯ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಈ ಅಭಿಯಾನದ ಹಿಂದೆ ಇರುವವರು ಯಾರು, ಈ ಅಭಿಯಾನ ಪ್ರಾರಂಭವಾಗಿದ್ದು ಹೇಗೆ ಹಾಗೂ ಈ ಅಭಿಯಾನವನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸುತ್ತಿರುವುದು ಯಾಕೆ ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿ ನೋಡೋಣ. ಸೋಶಿಯಲ್ ಮೀಡಿಯಾ ಜನಪ್ರಿಯತೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಮೀರಿಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಒಂದು ಮೀಮ್ ಆಧಾರಿತ ವಿಡಂಬನಾತ್ಮಕ ಚಳವಳಿಯಾಗಿದೆ. ಇದು ಆನ್‌ಲೈನ್‌ನಲ್ಲಿ ಸದ್ದು ಮಾಡುತ್ತಿದೆ. ಪ್ರಾರಂಭವಾದ ಕೇವಲ ಐದು ದಿನಗಳಲ್ಲಿ, ಸಿಜೆಪಿಯ ಇನ್‌ಸ್ಟಾಗ್ರಾಮ್ ಖಾತೆಯು 11.9 ಮಿಲಿಯನ್ ಅನುಯಾಯಿಗಳನ್ನು ದಾಟಿದೆ, ಇದು 8.7 ಮಿಲಿಯನ್‌ನಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅನುಯಾಯಿಗಳನ್ನು ಮೀರಿಸಿದೆ. ಈ ಅಭಿಯಾನದ ಹಿಂದೆ ಇರುವ ಹೆಸರು ಅಭಿಜೀತ್ ದಿಪ್ಕೆ. ಅಚ್ಚರಿ ಎಂದರೆ ಇವರು ಈ ಹಿಂದೆ ಆಮ್ ಆದ್ಮಿ ಪಾರ್ಟಿಯಲ್ಲಿದ್ದರು.
ಅಭಿಜೀತ್ ದಿಪ್ಕೆ ದೇಶದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಹೆಸರು
ಅಭಿಜೀತ್ ದಿಪ್ಕೆ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಸರು ಮಾಡುತ್ತಿರುವ ಹೆಸರು. ಈ ಚಳವಳಿಯನ್ನು ಪ್ರಾರಂಭಿಸಿದ್ದು ಅಭಿಜೀತ್ ದಿಪ್ಕೆ. ಇದು ಅವರ ಕನಸಿನ ಕೂಸು. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಕೆಲವು ನಿರುದ್ಯೋಗಿ ಯುವಕರನ್ನು "ಜಿರಳೆಗಳು" ಮತ್ತು "ಪರಾವಲಂಬಿಗಳು" ಗೆ ಹೋಲಿಸಿದ್ದಾರೆ ಎನ್ನುವ ಹೇಳಿಕೆಯು ವೈರಲ್ ಆಗಿತ್ತು. ಈ ವಿವಾದಾತ್ಮಕ ಹೇಳಿಕೆಗಳು ಆನ್‌ಲೈನ್‌ನಲ್ಲಿ ವ್ಯಾಪಕ ಪ್ರತಿಕ್ರಿಯೆಗೆ ಕಾರಣವಾದ ಮೇಲೆ ಈ ಅಭಿಯಾನ ಶುರುವಾಗಿಯಿತು.

Abhijeet Dipke: ಅಭಿಜೀತ್ ದಿಪ್ಕೆ ಯಾರು, ಹಿನ್ನೆಲೆ ಏನು ?
ಅಭಿಜೀತ್ ದಿಪ್ಕೆ 30 ವರ್ಷದ ಭಾರತೀಯ ರಾಜಕೀಯ ಸಂವಹನ ತಜ್ಞ ಮತ್ತು ಸಿಜೆಪಿಯ ಸಂಸ್ಥಾಪಕ. ಡಿಜಿಟಲ್ ರಾಜಕೀಯ ಸಂದೇಶ ಕಳುಹಿಸುವಿಕೆ, ನಿರೂಪಣೆ ಮತ್ತು ಆನ್‌ಲೈನ್ ಪ್ರಚಾರ ತಂತ್ರದಲ್ಲಿ ಇವರು ಪ್ರಸಿದ್ಧಿ ಗಳಿಸಿದ್ದಾರೆ. ಉನ್ನತ ಶಿಕ್ಷಣವನ್ನು ಅಭಿಜೀತ್ ದಿಪ್ಕೆ ಅವರು ಅಮೆರಿಕಕ್ಕೆ ಹೋಗಿದ್ದರು. ಇದಕ್ಕೂ ಮೊದಲು ಅಭಿಜೀತ್ ದಿಪ್ಕೆ ಅವರು ಮಹಾರಾಷ್ಟ್ರದ ಪುಣೆಯಲ್ಲಿ ಪತ್ರಿಕೋದ್ಯಮ ವಿದ್ಯಾಭ್ಯಾಸ ಮಾಡಿದ್ದಾರೆ. ಇತ್ತೀಚೆಗೆ ಬೋಸ್ಟನ್ ವಿಶ್ವವಿದ್ಯಾಲಯದಿಂದ ಪಬ್ಲಿಕ್ ರಿಲೇಷನ್ ಶಿಪ್ ವಿಷಯದಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2020 ಮತ್ತು 2023ರ ನಡುವೆ ಅವರು ಆಮ್ ಆದ್ಮಿ ಪಕ್ಷದಲ್ಲಿ ಕೆಲಸ ಮಾಡಿದ್ದರು ಮತ್ತು ಪಕ್ಷದ ಸಾಮಾಜಿಕ ಮಾಧ್ಯಮ ಮತ್ತು ಚುನಾವಣಾ ಪ್ರಚಾರ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದರು.
2020ರ ದೆಹಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಭಾರೀ ಗೆಲುವು ಸಾಧಿಸಿದಾಗ ಅವರಿಗೆ ಕೇವಲ 24 ವರ್ಷವಾಗಿತ್ತು. ಎಎಪಿಗಾಗಿ ಮೀಮ್-ಚಾಲಿತ ಡಿಜಿಟಲ್ ಅಭಿಯಾನಗಳಿಗೆ ಕೊಡುಗೆ ನೀಡಿದ್ದರು. ದೀಪಿಕೆ ಅವರು ಪ್ರಸ್ತುತ ಯುಎಸ್‌ನಲ್ಲಿದ್ದಾರೆ ಮತ್ತು ಕಾಕ್ರೋಚ್ ಜನತಾ ಪಕ್ಷದ ಆರಂಭವನ್ನು ಯೋಜಿಸಿರಲಿಲ್ಲ ಎಂದೂ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.












Click it and Unblock the Notifications