ಕಾಕ್ರೋಚ್ ಜನತಾ ಪಾರ್ಟಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್: ಫಾಲೋವರ್ಸ್ ಸಂಖ್ಯೆ ದಾಖಲೆ ಬೆನ್ನಲ್ಲೇ ಬ್ಯಾನ್
Cockroach Janata Party: ಭಾರತದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿರುವ ಹಾಗೂ ಭಾರೀ ವೈರಲ್ ಆಗುತ್ತಿರುವ ವಿಡಂಬನಾತ್ಮಕ ರಾಜಕೀಯ ಕಾಕ್ರೋಚ್ ಜನತಾ ಪಕ್ಷದ X ಖಾತೆಯನ್ನು ಮೇ 21ರ ಗುರುವಾರ ಭಾರತದಲ್ಲಿ ತಡೆಹಿಡಿಯಲಾಗಿದೆ ಅಥವಾ ಬ್ಯಾನ್ ಮಾಡಲಾಗಿದೆ. ದೇಶದಾದ್ಯಂತ ಈ ಅಭಿಯಾನವು ವೇಗವಾಗಿ ಕಾವು ಪಡೆದುಕೊಳ್ಳುತ್ತಿತ್ತು. ಈ ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಈ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು, "ನಿರೀಕ್ಷೆಯಂತೆ ಕಾಕ್ರೋಚ್ ಜನತಾ ಪಕ್ಷದ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ" ಎಂದು ಬರೆದುಕೊಂಡಿದ್ದಾರೆ.
ಕಾಕ್ರೋಚ್ ಜನತಾ ಪಕ್ಷದ X ಖಾತೆಯನ್ನು ಕಾನೂನು ಕ್ರಮದ ಮೂಲಕ ಮೇ 21 ರಂದು ಭಾರತದಲ್ಲಿ ತಡೆಹಿಡಿಯಲಾಗಿದೆ. ಆದರೆ ಅಭಿಜೀತ್ ದಿಪ್ಕೆ ಸ್ಥಾಪಿಸಿದ ಅವರ ಇನ್‌ಸ್ಟಾಗ್ರಾಮ್ ಪೇಜ್ ಕೇವಲ ಐದು ದಿನಗಳ ಅವಧಿಯಲ್ಲಿ ವೇಗವಾಗಿ 13 ಮಿಲಿಯನ್ ಫಾಲೋವರ್ಸ್‌ಗಳನ್ನು ಪಡೆದುಕೊಂಡಿತ್ತು. ಇದು ಬಿಜೆಪಿ ಪಕ್ಷದ ಫಾಲೋವರ್ಸ್‌ಗಳ ಸಂಖ್ಯೆಗಿಂತಲೂ ಹೆಚ್ಚಾಗಿತ್ತು. ಕಾಕ್ರೋಚ್ ಜನತಾ ಪಕ್ಷದ X ಖಾತೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವ ಬಳಕೆದಾರರು ಈಗ ಕಾನೂನು ಸುವ್ಯವಸ್ಥೆ ಅಥವಾ ಕಾನೂನು ಪ್ರತಿಕ್ರಿಯೆಯ ಭಾಗವಾಗಿ ಈ ಹ್ಯಾಂಡಲ್ ಅನ್ನು ತಡೆಹಿಡಿಯಲಾಗಿದೆ ಎಂಬ ಸಂದೇಶ ಬರುತ್ತಿದೆ ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಹಾಸ್ಯದ ಕಾರಣಕ್ಕಾಗಿಯೇ ಈ ಪಕ್ಷದ ಪುಟ ಸ್ಥಾಪನೆಯಾದರೂ ಬೇರೆ ಬೇರೆ ಕಾರಣಗಳಿಗೆ ಭಾರತದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದೀಗ ಪಕ್ಷದ ಇನ್‌ಸ್ಟಾಗ್ರಾಮ್ ಖಾತೆಯು ಆನ್‌ಲೈನ್ ಬ್ಯಾನ್ ಮಾಡಲಾಗಿದೆ. ಕಾಕ್ರೋಚ್ ಜನತಾ ಪಕ್ಷದ ಇನ್‌ಸ್ಟಾಗ್ರಾಮ್ ಪುಟವು ಈಗಾಗಲೇ 13 ಮಿಲಿಯನ್ ಫಾಲೋವರ್ಸ್‌ಗಳನ್ನು ದಾಟಿದೆ. ಇದು ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಅನ್ನು ಸಹ ಮೀರಿತ್ತು.
ಈ ವಿಡಂಬನಾತ್ಮಕ ರಾಜಕೀಯ ವೇದಿಕೆ ಕೆಲವೇ ದಿನಗಳಲ್ಲಿ ಭಾರತದ ಅತಿದೊಡ್ಡ ಆನ್‌ಲೈನ್ ಚರ್ಚೆಯ ಕೇಂದ್ರ ಬಿಂದುವಾಗಿ ಬದಲಾಯಿತು. ವಿಶೇಷವಾಗಿ ಯುವಕರು ಈ ಅಭಿಯಾನಕ್ಕೆ ಹೆಚ್ಚೆಚ್ಚು ಪ್ರತಿಕ್ರಿಯೆ ನೀಡುತ್ತಿದ್ದಾರೆ. ರಾಜಕೀಯ ಮೀಮ್ಸ್, ನಿರುದ್ಯೋಗದ ಬಗ್ಗೆ ಟೀಕೆ, ಭಾರತ ಸರ್ಕಾರದ ಸ್ವಾತಂತ್ರ್ಯ ಸಂಸ್ಥೆಗಳು ಮತ್ತು ಮಾಧ್ಯಮ ಸ್ವಾತಂತ್ರ್ಯ ಮತ್ತು ಬಲವಾದ ಸಾಮಾಜಿಕ ಮಾಧ್ಯಮ ಬಳಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ.
Cockroach Janata Party ಅಭಿಯಾನದಲ್ಲಿ ಯುವ ಸಮೂಹ
ಮಹಾರಾಷ್ಟ್ರದ ಅಭಿಜೀತ್ ದೀಪ್ಕೆ ಅವರು ವಿಡಂಬನಾತ್ಮಕ ಯುವ-ಕೇಂದ್ರಿತ ಆನ್‌ಲೈನ್ ಚಳವಳಿಯನ್ನು ಕಾಕ್ರೋಚ್ ಜನತಾ ಪಕ್ಷವನ್ನು ಪ್ರಾರಂಭಿಸಿದರು. ಸಿಜೆಐ ಸೂರ್ಯ ಕಾಂತ್ ಅವರ "ಜಿರಳೆಗಳು" ಮತ್ತು "ಪರಾವಲಂಬಿಗಳು" ಎಂಬ ಪದಗಳನ್ನು ಒಳಗೊಂಡ ಹೇಳಿಕೆಯ ಬೆನ್ನಲ್ಲೇ ನಾನೂ ಕಾಕ್ರೋಚ್ ಎನ್ನುವ ಅಭಿಯಾನ ಶುರುವಾಗಿತ್ತು. ಭಾರತದಲ್ಲಿ ಎಕ್ಸ್ ಖಾತೆಯನ್ನು ಈಗ ನಿರ್ಬಂಧಿಸಲಾಗಿದ್ದರೂ, ಇನ್‌ಸ್ಟಾಗ್ರಾಮ್ ಖಾತೆ ಸಕ್ರಿಯವಾಗಿದೆ ಇದರಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಅಲ್ಲದೆ ವಿಡಿಯೋಗಳು ಇನ್ನಷ್ಟು ವೈರಲ್ ಆಗುತ್ತಿವೆ.
As expected Cockroach Janta Party’s account has been withheld in India. pic.twitter.com/44ymllnSMJ
— Abhijeet Dipke (@abhijeet_dipke) May 21, 2026
Cockroach Janata Party: ಪ್ರಾರಂಭವಾಗಿದ್ದು ಹೇಗೆ
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರು ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ "ಜಿರಳೆಗಳು" ಮತ್ತು "ಪರಾವಲಂಬಿಗಳು" ಎಂಬ ಪದಗಳನ್ನು ಬಳಕೆ ಮಾಡಿದ್ದರು. ಮೇ 16 ರಂದು ವಿಡಂಬನಾತ್ಮಕ ರಾಜಕೀಯ ಚಳವಳಿಯು ಭಾರತದಲ್ಲಿ ಪ್ರಾರಂಭವಾಯಿತು. ಈ ಹೇಳಿಕೆಗಳು ಆನ್‌ಲೈನ್‌ನಲ್ಲಿ, ವಿಶೇಷವಾಗಿ ಯುವಕರು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು. ಅಂದಿನಿಂದ, ಸಿಜೆಪಿ ಒಂದು ಮೀಮ್ ಆಧಾರಿತ ವಿಡಂಬನಾತ್ಮಕ ಪುಟದಿಂದ ನಿರುದ್ಯೋಗ, ಸಾಂಸ್ಥಿಕ ಸ್ವಾತಂತ್ರ್ಯ ಮತ್ತು ಮಾಧ್ಯಮ ಟೀಕೆಗಳನ್ನು ಚರ್ಚಿಸುವ ವಿಶಾಲ ಆನ್‌ಲೈನ್ ರಾಜಕೀಯ ಚಳವಳಿಯು ವೇಗ ಪಡೆದುಕೊಂಡಿತು.













Click it and Unblock the Notifications