Monsoon: 126 ವರ್ಷಗಳ ದಾಖಲೆ ಮುರಿದ ಮುಂಗಾರು: ಜೂನ್ ತಿಂಗಳಲ್ಲಿ ಶೇ.42 ಮಳೆ ಕೊರತೆ, ಹೆಚ್ಚಿದ ಬಿಸಿಲ ಭೀತಿ
ನವದೆಹಲಿ: ಭಾರತ ಪ್ರವೇಶಿದ ಮುಂಗಾರು ಮಳೆ ಅರಂಭದಲ್ಲೇ ದುರ್ಬಲವಾಗಿತ್ತು. ತಿಂಗಳು ಮುಗಿದರೂ ನಿರೀಕ್ಷೆಯಂತೆ ಮಳೆ ಸುರಿದಿಲ್ಲ. ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಮುಂಗಾರು ಋತುವಿನ 2026 ಜೂನ್‌ನಲ್ಲೇ ಶೇ. 42ರಷ್ಟು ಮಳೆ ಕೊರತೆ ಉಂಟಾಗಿದೆ. ಈ ಮೂಲಕ ರಾಜ್ಯ ಹಾಗೂ ದೇಶದಲ್ಲಿ ಬೇಸಿಗೆ ಸ್ಥಿತಿ ನಿರ್ಮಾಣವಾಗಿದೆ. ಬರಗಾಲದ ಭೀತಿ ಹೆಚ್ಚಾಗಿದೆ. ಕಳೆದ 126 ವರ್ಷದಲ್ಲಿ 2026 ಜೂನ್ ತಿಂಗಳಲ್ಲಿ ದಾಖಲಾದ ಅತ್ಯಂತ ಕನಿಷ್ಠ ಮಳೆ ಇದಾಗಿದೆ. ಕಳಪೆ ಮಳೆ ದಾಖಲಾತಿ ಸಾಲಿಗೆ 2026 ಜೂನ್ ಸೇರಿದ್ದು, ನಾಡಿನ ಜನರು ಮಳೆಗಾಲ ಆರಂಭವಾದರೂ ಬಿಸಿನ ತಾಪಕ್ಕೆ ಬಳಲುವಂತಾಗಿದೆ.
ಕರ್ನಾಟಕದ ಬೆಂಗಳೂರು ನಗರ ಸೇರಿದಂತೆ ಒಳನಾಡು ಜಿಲ್ಲೆಗಳಲ್ಲಿ ಮಳೆಗಾಲದಲ್ಲೂ ಬೇಸಿಗೆಯ ಬಿಸಿ ಅನುಭವವಾಗುತ್ತಿದೆ. ಈಗಿನ ಬಿಸಿಲು ಮುಂಗಾರು ಮಳೆಗಾಗಿ ಕಾಯುತ್ತಿರುವ ರೈತರ ಮೈ ಸುಡುತ್ತಿದೆ. ರಾಜ್ಯದಲ್ಲಿ ಮುಂಗಾರು ಕೊರತೆಯು ಕೃಷಿ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಈವರೆಗೆ ಶೇ. 30ರಷ್ಟು ಮಾತ್ರವೇ ಬಿತ್ತನೆ ಆಗಿದೆ.

1901ರಿಂದ ಈವರೆಗಿನ 126 ವರ್ಷಗಳಲ್ಲಿ ಜೂನ್‌ನಲ್ಲಿ ಅತೀ ಕನಿಷ್ಠ ಮಳೆ ಆಗಿದ್ದು ಇದೇ ಮೂರನೇ ಸಲ. ಭಾರತವು ಈ ವರ್ಷ ತೀವ್ರ ಬರಗಾಲಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಜೂನ್ 30ರವರೆಗೆ ಕೇವಲ 92 ಮಿಲಿ ಮೀಟರ್ ಮಾನ್ಸೂನ್ ಮಳೆಯನ್ನು ದಾಖಲಾಗಿದ್ದು, ಇದು ವಾಡಿಕೆಗಿಂತ ಶೇಕಡಾ 42 ರಷ್ಟು ಕಡಿಮೆ/ಕೊರತೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
1901ರಿಂದ ಈವರೆಗೆ ಪ್ರತಿ ವರ್ಷದ ಜೂನ್ ತಿಂಗಳಲ್ಲಿ 100 ಮಿಲಿ ಮೀಟರ್‍ಗಿಂತ ಕಡಿಮೆ ಮಳೆ ದಾಖಲಾಗದ ವರ್ಷಗಳ ನಾಲ್ಕು. 2009 ರಲ್ಲಿ ಭಾರತ ಕೇವಲ 87.5 ಮಿಲಿ ಮಿಟರ್ ಮಳೆ ಕಂಡಿತ್ತು. ನಂತರ 1905 ರ ಜೂನ್‌ನಲ್ಲಿ ಸಹಿತ 92 ಮಿಲಿ ಮೀಟರ್ ಮಳೆ ಆಗಿತ್ತು. ಇನ್ನೂ 2026ರಲ್ಲಿ ದಾಖಲಾದ 92 ಮಿಲಿ ಮೀಟರ್ ಸೇರಿ ಒಟ್ಟು ನಾಲ್ಕು ವರ್ಷಗಳಲ್ಲಿ ಕಡಿಮೆ ದಾಖಲಾದಂತಾಗಿದೆ. ಮುಂದಿನ ಜುಲೈ ತಿಂಗಳಲ್ಲಿ ಉತ್ತಮ ಮಳೆ ನಿರೀಕ್ಷೆ ಇದೆ.
ಜೂನ್ ನಿರೀಕ್ಷಿತ ಮಳೆ ಪ್ರಮಾಣ 165 ಮಿಲಿ ಮೀಟರ್
ಭಾರತ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಜೂನ್‌ನಲ್ಲಿ ಅತ್ಯಂತ ಕಡಿಮೆ ಮಳೆಯಾದ ಇತ್ತೀಚಿನ ವರ್ಷ ನೋಡುವುದಾದರೆ 2014ರ ಜೂನ್‌ನಲ್ಲಿ 93 ಮಿಲಿ ಮೀಟರ್ ಮಾತ್ರವೇ ಮಳೆ ದಾಖಲಾಗಿತ್ತು. ಮಳೆ ಇತರ ಕಡಿಮೆ ಮಳೆ ವರ್ಷಗಳನ್ನು ನೋಡುವುದಾದರೆ, 1902ರಲ್ಲಿ 109 ಮಿಲಿ ಮೀಟರ್, 1912 ರಲ್ಲಿ 106.8 ಮಿಲಿ ಮೀಟರ್ ಹಾಗೂ 1923ರಲ್ಲಿ 101.7 ಮಿಮೀ ಮಳೆ ದಾಖಲಾಗಿತ್ತು ಎಂದು ತಿಳಿಸಲಾಗಿದೆ.
ಮಳೆಗಾದಲ್ಲೂ ಬೇಸಿಗೆಯ ಬಿಸಿಲ ಶಾಖ
ದುರ್ಬಲ ಸ್ವರೂಪದಲ್ಲಿ ಆರಂಭವಾದ ಮುಂಗಾರು ಮಳೆ ಭಾರತದಲ್ಲಿ ಸುಮಾರು 11 ದಿನ ಮಳೆಯೇ ಆಗಿಲ್ಲ. ರಾಜಸ್ಥಾನವನ್ನು ಜೂನ್ 15ರಂದು ಪ್ರವೇಶಿಸಲಿದೆ ಎಂದು ಹೇಳಲಾಗುತ್ತಿದೆ. ಮುಂಗಾರು ಆರಂಭಕ್ಕೆ ಕಾಯುತ್ತಿದ್ದ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್ ಸೇರಿ ಇನ್ನಿತರ ರಾಜ್ಯಗಳಲ್ಲಿ ಮುಂಗಾರಿನ ಪ್ರವೇಶವೇ ಆಗಿಲ್ಲ. ಹೀಗಾಗಿ ಬಿತ್ತನೆಗಳು ಈ ವರ್ಷ ಆಗಿಲ್ಲ. ಕರ್ನಾಟಕದಲ್ಲೂ ಶೇ. 70ರಷ್ಟು ಬಿತ್ತನೆಗೆ ಹಿನ್ನಡೆ ಆಗಿದೆ. ಉತ್ತರ ಮತ್ತು ಪಶ್ಚಿಮ ಭಾರತದ ರಾಜ್ಯಗಳಲ್ಲಿ ಇಂದಿಗೂ ಶಾಖದ ಅಲೆಯ ವಾತಾವರಣವೇ ಇದೆ.
ಸಮುದ್ರಮಟ್ಟದಲ್ಲೂ ಯಾವುದೇ ಬದಲಾವಣೆಗಳು ಆಗಿಲ್ಲ. ಎಲ್‌ನಿನೋ ಪ್ರಭಾವದಿಂದಾಗಿ ಈ ಬಾರಿ ತೀವ್ರ ಮಳೆ ಕೊರತೆ ಆಗಲಿದೆ ಎಂದು ಈಗಾಗಲೇ ಐಎಂಡಿ ತಿಳಿಸಿದೆ. ಅತೀವ ಮಳೆ ಆಗದಿದ್ದರೂ ಕೊನೆಪಕ್ಷ ಆಗಾಗ ತಕ್ಕಮಟ್ಟಿನ ಮಳೆ ಸುರಿಯುತ್ತದೆ ಅಂತಲೇ ರೈತರು ಭಾವಿಸಿದ್ದರು. ಆದರೆ ಅವರ ಆಸೆ ನಿರಾಶೆಯಾಗಿದೆ. ಐಎಂಡಿ ಮುನ್ಸೂಚನೆಯಂತೆ ಜುಲೈ ತಿಂಗಳಲ್ಲಾದರೂ ಉತ್ತಮ ಮಳೆ ಬರುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ದೆಹಲಿಯಲ್ಲಿ ಜೂನ್ 27 ರಂದು ಭಾರೀ ಮಳೆ ಆಗಬೇಕಿತ್ತು, ಆದರೆ ಆಗಿಲ್ಲ.
ಜೂನ್-ಸೆಪ್ಟಂಬರ್ ವರೆಗಿನ ನಾಲ್ಕು ತಿಂಗಳ ಋತುವಿನಲ್ಲಿ ಭಾರತ ಶೇ. 70ಮಳೆಗೆ ಸಾಕ್ಷಿಯಾಗುತ್ತದೆ. ಉಳಿದ ಶೇ. 30ರಷ್ಟು ಮಳೆ ಪೂರ್ವ ಮುಂಗಾರು, ಹಿಂಗಾರು ಮಳೆಯಿಂದ ಸಿಗುತ್ತದೆ. ಅಷ್ಟರಮಟ್ಟಿಗೆ ಮುಂಗಾರು ಭಾರತಕ್ಕೆ ಅನಿವಾರ್ಯವಾಗಿದೆ. ಹೀಗಿದ್ದ ಸಂದರ್ಭದಲ್ಲಿ ಮಳೆ ದಿನೇ ದಿನೇ ಕಣ್ಮರೆಯಾಗುತ್ತಿದ್ದು, ದೇಶದ ಇಡೀ ಕೃಷಿ ಉತ್ಪಾದನೆಗೆ ಗಂಭೀರ ಪೆಟ್ಟು ನೀಡುವ ಸಾಧ್ಯತೆ ಇದೆ. ಐಎಂಡಿ ಪ್ರಕಾರ, ಈ ಮುಂಗಾರು ಋತುವಿನಲ್ಲಿ ಈ ವರ್ಷ ಶೇ.90ರಷ್ಟು ಮಾತ್ರವೇ ಮಳೆ ಆಗಲಿದೆ ಎಂದು ತಿಳಿಸಿದೆ. ಇದು ಜಲಾಶಯಗಳ ನೀರಿನ ಸಂಗ್ರಹ, ಅಂತರ್ಜಲ ಕುಸಿತ, ನೀರಾವರಿ ಹಾಗೂ ಸಂಪೂರ್ಣ ಕೃಷಿ ವಲಯದ ಪರಿಣಾಮ ಉಂಟು ಮಾಡಲಿದೆ.














Click it and Unblock the Notifications