ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾದ ಟಾಲಿವುಡ್‌ ಸ್ಟಾರ್‌ ನಟನ ಪತ್ನಿ; ಯಾವ ಪಕ್ಷದಿಂದ, ಇಲ್ಲಿದೆ ಲೆಕ್ಕಾಚಾರ

ಇತ್ತೀಚೆಗಷ್ಟೇ ತಮಿಳು ಸ್ಟಾರ್‌ ನಟ ದಳಪತಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಲ್ಲದೆ, ತಮಿಳುನಾಡಿನ ಸಿಎಂ ಕುರ್ಚಿಯಲ್ಲಿ ಕೂತಿದ್ದಾರೆ. ಇನ್ನು ಪಕ್ಕದ ತೆಲುಗು ರಾಜ್ಯಗಳಲ್ಲಿಯೂ ಸಿನಿಮಾಗೂ ರಾಜಕೀಯಕ್ಕೂ ದೊಡ್ಡ ನಂಟು ಮೊದಲಿನಿಂದಲೂ ಇದೆ. ನಟ ಎನ್‌ಟಿಆರ್‌, ಪವನ್‌ ಕಲ್ಯಾಣ್‌ ಕೂಡ ಸಕ್ರಿಯ ರಾಜಕಾರಣದಲ್ಲಿ ಯಶಸ್ಸು ಕಂಡಿದ್ದಾರೆ. ಇದೀಗ ಮತ್ತೊಬ್ಬ ಸ್ಟಾರ್‌ ನಟನ ಪತ್ನಿ ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಟಾಲಿವುಡ್ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾದ ಮಂಚು ಮನೋಜ್ (Manchu Manoj) ಅವರ ಪತ್ನಿ ಭೂಮಾ ಮೌನಿಕಾ ರೆಡ್ಡಿ ಶೀಘ್ರದಲ್ಲೇ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಈಗ ಆಂಧ್ರಪ್ರದೇಶದ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಸ್ವತಃ ನಟ ಮಂಚು ಮನೋಜ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ.

Manchu Manoj

ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಫಿಕ್ಸ್

ನಟ ಮಂಚು ಮನೋಜ್ ತಮ್ಮ ವೈವಾಹಿಕ ಜೀವನದಲ್ಲಿ ಅತ್ಯಂತ ಸಂತೋಷವಾಗಿದ್ದು, ಪತ್ನಿ ಮೌನಿಕಾ ಅವರೊಂದಿಗೆ ಸಾರ್ವಜನಿಕವಾಗಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚಿನ ಸಂಭಾಷಣೆಯೊಂದರಲ್ಲಿ ಮಾತನಾಡಿದ ಅವರು, "ನನ್ನ ಪತ್ನಿ ಮೌನಿಕಾ ಮುಂದಿನ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ" ಎಂದು ಸ್ಪಷ್ಟಪಡಿಸಿದ್ದಾರೆ. ಕರ್ನೂಲು ಭಾಗದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿರುವ ಭೂಮಾ ಕುಟುಂಬಕ್ಕೆ ರಾಜಕೀಯವೇನೂ ಹೊಸದಲ್ಲದಿದ್ದರೂ, ಮೌನಿಕಾ ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.

ದರ್ಶನ್-ಸುದೀಪ್‌ ದೋಸ್ತಿ ಬ್ರೇಕ್ ಆಗಿದ್ದು ಜಗಳದಿಂದ ಅಲ್ಲ: ಅಸಲಿ ಕಾರಣ ಬಿಚ್ಚಿಟ್ಟ 'ನವಗ್ರಹ' ನಟ ಧರ್ಮ ಕೀರ್ತಿರಾಜ್‌
ದರ್ಶನ್-ಸುದೀಪ್‌ ದೋಸ್ತಿ ಬ್ರೇಕ್ ಆಗಿದ್ದು ಜಗಳದಿಂದ ಅಲ್ಲ: ಅಸಲಿ ಕಾರಣ ಬಿಚ್ಚಿಟ್ಟ 'ನವಗ್ರಹ' ನಟ ಧರ್ಮ ಕೀರ್ತಿರಾಜ್‌

ಯಾವ ಪಕ್ಷ ಸೇರಲಿದ್ದಾರೆ ಮೌನಿಕಾ ರೆಡ್ಡಿ?

ಮೌನಿಕಾ ಅವರ ರಾಜಕೀಯ ಪ್ರವೇಶದ ಹಾದಿಯಲ್ಲಿ ಹಲವು ರಾಜಕೀಯ ಪಕ್ಷಗಳ ಲೆಕ್ಕಾಚಾರವಿದೆ. ಭೂಮಾ ಕುಟುಂಬವು ಸಾಂಪ್ರದಾಯಿಕವಾಗಿ ಟಿಡಿಪಿ ಪಕ್ಷದೊಂದಿಗೆ ಗುರುತಿಸಿಕೊಂಡಿದೆ. ಆದರೆ, ಟಿಡಿಪಿ ಪಕ್ಷವು "ಒಂದು ಕುಟುಂಬಕ್ಕೆ ಒಂದೇ ಎಂಎಲ್‌ಎ ಟಿಕೆಟ್" ಎಂಬ ಕಠಿಣ ನಿಯಮವನ್ನು ಪಾಲಿಸುತ್ತಿದೆ. ಮೌನಿಕಾ ಅವರ ಸಹೋದರಿ ಭೂಮಾ ಅಖಿಲ ಪ್ರಿಯಾ ಈಗಾಗಲೇ ನಂದ್ಯಾಲ ಕ್ಷೇತ್ರದಿಂದ ಟಿಡಿಪಿ ಪ್ರತಿನಿಧಿಯಾಗಿ ಸಕ್ರಿಯರಾಗಿದ್ದಾರೆ ಮತ್ತು ಕಳೆದ ಒಂದು ದಶಕದಿಂದ ಪಕ್ಷದಲ್ಲಿ ಗಟ್ಟಿಯಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ಸಹೋದರಿಯ ಉಪಸ್ಥಿತಿಯಿಂದಾಗಿ ಮೌನಿಕಾ ಅವರಿಗೆ ಟಿಡಿಪಿಯಿಂದ ಟಿಕೆಟ್ ಸಿಗುವುದು ಕಷ್ಟ ಎನ್ನಲಾಗುತ್ತಿದೆ.

ಇನ್ನು ಟಿಡಿಪಿಯಲ್ಲಿ ಟಿಕೆಟ್ ಕೈತಪ್ಪಿದರೆ ಮೌನಿಕಾ ಅವರಿಗೆ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಾರ್ಟಿ ಪ್ರಮುಖ ಆಯ್ಕೆಯಾಗಬಹುದು. ರಾಯಲಸೀಮಾ ಭಾಗದಲ್ಲಿ ಬಲಿಷ್ಠ ನಾಯಕರ ಹುಡುಕಾಟದಲ್ಲಿರುವ ಜನಸೇನೆಗೆ ಭೂಮಾ ಕುಟುಂಬದ ಹಿನ್ನೆಲೆ ಪ್ಲಸ್ ಪಾಯಿಂಟ್ ಆಗಬಹುದು. ಆದರೆ, ಸೀಟು ಹಂಚಿಕೆ ಮತ್ತು ಆಂತರಿಕ ಚರ್ಚೆಗಳು ಕೊನೆಯ ಕ್ಷಣದವರೆಗೂ ಬದಲಾಗುತ್ತಿರುವುದರಿಂದ ಜನಸೇನಾದಲ್ಲೂ ಟಿಕೆಟ್ ಖಾತರಿ ಎಂದು ಹೇಳಲು ಬರುವುದಿಲ್ಲ.

ಸದ್ಯ ಚರ್ಚೆಯಲ್ಲಿರುವ ಮತ್ತೊಂದು ಪ್ರಮುಖ ಪಕ್ಷವಾದ ಬಿಜೆಪಿಯನ್ನು ಕೂಡ ಮೌನಿಕಾ ರೆಡ್ಡಿ ಅವರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಪರಿಗಣಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಈ ಹಿಂದೆ ಭೂಮಾ ಕುಟುಂಬವು ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿತ್ತು. ಮೌನಿಕಾ ಅವರ ತಾಯಿ ಶೋಭಾ ಅವರು ಜಗನ್ ಅವರಿಗೆ ಸಹೋದರಿಯಂತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಉಭಯ ಕುಟುಂಬಗಳ ನಡುವೆ ರಾಜಕೀಯ ಅಂತರ ಹೆಚ್ಚಾಗಿರುವುದರಿಂದ ಮೌನಿಕಾ ಅವರು ವೈಸಿಪಿ ಸೇರುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಲಾಗುತ್ತಿದೆ. ಆಂಧ್ರ ರಾಜಕೀಯದ ಪ್ರಭಾವಿ ಕುಟುಂಬದ ಕುಡಿ ಮೌನಿಕಾ ರೆಡ್ಡಿ ಅವರ ಸ್ಪರ್ಧೆ ಖಚಿತವಾಗಿದ್ದು, ಕೊನೆಗೆ ಅವರು ಯಾವ ಪಕ್ಷದ 'ಬಿ-ಫಾರ್ಮ್' ಪಡೆದು ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+