ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ರಕ್ತದಾನಿಗಳ ದಿನ 2022: ರಕ್ತದಾನ ಯಾರು ಮಾಡಬಹುದು? ರಕ್ತದಾನ ಬಗ್ಗೆ ತಿಳಿಯಿರಿ

|
Google Oneindia Kannada News

ಪ್ರಪಂಚದಾದ್ಯಂತ ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು (WBDD) ಆಚರಿಸುತ್ತವೆ. ಇದನ್ನು ಸುರಕ್ಷಿತ ರಕ್ತ ಮತ್ತು ರಕ್ತದ ಉತ್ಪನ್ನಗಳ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸ್ವಯಂಪ್ರೇರಿತವಾಗಿದ ರಕ್ತದಾನಿಗಳ ಜೀವನಕ್ಕಾಗಿ ಧನ್ಯವಾದಗಳನ್ನು ಅರ್ಪಿಸಲು ಹಾಗೂ ರಕ್ತದ ಉಡುಗೊರೆಗಳನ್ನು ಉಳಿಸುವ ಉದ್ದೇಶವನ್ನು ಹೊಂದಿದೆ. ವಿಶ್ವ ರಕ್ತದಾನಿಗಳ ದಿನದ ಜಾಗತಿಕ ವಿಷಯವು ಪ್ರತಿ ವರ್ಷ ತಮ್ಮ ರಕ್ತವನ್ನು ತಮಗೆ ತಿಳಿದಿಲ್ಲದ ಜನರಿಗೆ ದಾನ ಮಾಡುವ ನಿಸ್ವಾರ್ಥ ವ್ಯಕ್ತಿಗಳನ್ನು ಗುರುತಿಸಲು ಆಚರಿಸಲಾಗುತ್ತದೆ.

"ನಿಯಮಿತ ದಾನವು ಸಾಮಾನ್ಯವಾಗಿ ಸುಮಾರು 450 ಮಿಲಿ ರಕ್ತವನ್ನು ಹೊಂದಿರುತ್ತದೆ. ಇದು ಸರಾಸರಿ ವಯಸ್ಕರ ರಕ್ತದ ಪರಿಮಾಣದ ಸರಿಸುಮಾರು ಎಂಟು ಶೇಕಡಾದಷ್ಟಾಗಿದೆ. ದೇಹ ಈ ಪ್ರಮಾಣದ ರಕ್ತವನ್ನು 24 ರಿಂದ 48 ಗಂಟೆಗಳ ಒಳಗೆ ಬದಲಾಯಿಸುತ್ತದೆ. ಆದರೆ ಕೆಂಪು ರಕ್ತ ಕಣಗಳು 10 ರಿಂದ 12 ವಾರಗಳಲ್ಲಿ ಮರುಪೂರಣಗೊಳ್ಳುತ್ತವೆ. ವ್ಯಕ್ತಿಯ ಲಿಂಗ ಮತ್ತು ದೇಹದ ಪ್ರಕಾರವನ್ನು ಅವಲಂಬಿಸಿ ಸಾಮಾನ್ಯ ಮಾನವ ದೇಹವು 4 ರಿಂದ 6 ಲೀಟರ್ ರಕ್ತವನ್ನು ಹೊಂದಿರುತ್ತದೆ, "ಎಂದು ಮುಂಬೈನ ಗ್ಲೋಬಲ್ ಹಾಸ್ಪಿಟಲ್ ಪ್ಯಾರೆಲ್‌ನಲ್ಲಿ ಟ್ರಾನ್ಸ್‌ಫ್ಯೂಷನ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ ರಾಜೀವ್ ನಿಕ್ಟೆ ಹೇಳಿದರು.

ವಿಶ್ವ ರಕ್ತದಾನಿಗಳ ದಿನ; ಸ್ವಯಂ ಪ್ರೇರಿತ ರಕ್ತದಾನಕ್ಕೆ ಕೈ ಜೋಡಿಸೋಣವಿಶ್ವ ರಕ್ತದಾನಿಗಳ ದಿನ; ಸ್ವಯಂ ಪ್ರೇರಿತ ರಕ್ತದಾನಕ್ಕೆ ಕೈ ಜೋಡಿಸೋಣ

ಈ ವರ್ಷದ ಧ್ಯೇಯವಾಕ್ಯ ಹೀಗಿದೆ: "ರಕ್ತದಾನವು ಒಗ್ಗಟ್ಟಿನ ಕ್ರಿಯೆಯಾಗಿದೆ ಈ ಪ್ರಯತ್ನಗಳಿಗೆ ಸೇರಿ ಮತ್ತು ಜೀವ ಉಳಿಸಿ". ಹಾಗಾದರೆ ರಕ್ತದಾನ ಎಲ್ಲರೂ ಮಾಡಬಹುದೇ? ರಕ್ತದಾನ ಮಾಡುವ ಮುನ್ನ ಮಾಡಬೇಕಾದ ಕಾರ್ಯಗಳೇನು? ರಕ್ತದಾನದ ಬಗ್ಗೆ ತೆಗೆದುಕೊಳ್ಳಬಹುದಾದ ಸಾಮಾನ್ಯ ಮುನ್ನೆಚ್ಚರಿಕೆಗಳೇನು? ರಕ್ತದಾನದ ಬಗ್ಗೆ ನಿಮಗಿರುವ ಗೊಂದಲಗಳಿಗೆ ಇಲ್ಲಿದೆ ಪರಿಹಾರ.

ಯಾರು ರಕ್ತದಾನ ಮಾಡಬಹುದು?

ಯಾರು ರಕ್ತದಾನ ಮಾಡಬಹುದು?

#ರಕ್ತದಾನ ಮಾಡುವ ಮೊದಲು ಆರೋಗ್ಯವಂತರಾಗಿದ್ದವರು ಮಾತ್ರ ರಕ್ತದಾನ ಮಾಡುವುದು ಒಳ್ಳೆಯದು. ದಾನ ಮಾಡಿದ ನಂತರ ಜನರು ಒಂದು ದಿನ ವಿಶ್ರಾಂತಿ ಮತ್ತು ದ್ರವ ಪದಾರ್ಥಗಳನ್ನು ಕುಡಿಯಲು ವೈದ್ಯರು ಶಿಫಾರಸು ಮಾಡಿದರೂ, ಈ ವ್ಯಕ್ತಿಗಳ ಆರೋಗ್ಯಕ್ಕೆ ಯಾವುದೇ ಅಪಾಯವಿಲ್ಲ. ವ್ಯಕ್ತಿಯ ರಕ್ತದಾನದ ಅಂದಾಜು 48 ಗಂಟೆಗಳ ಒಳಗೆ, ರಕ್ತದ ಪ್ರಮಾಣವು 4-8 ವಾರಗಳಲ್ಲಿ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಮತ್ತು ದೇಹವು ಕಳೆದುಹೋದ ಎಲ್ಲಾ ಕೆಂಪು ರಕ್ತ ಕಣಗಳನ್ನು ಬದಲಾಯಿಸುತ್ತದೆ.

*ವಯಸ್ಸಾದವರಿಗೆ ರಕ್ತದಾನ ಸೂಕ್ತವಲ್ಲ ಎಂಬುದು ನಿಜವಲ್ಲ. ಏಕೆಂದರೆ ಭಾರತೀಯರಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರು ರಕ್ತವನ್ನು ಮಾಡಬಹುದು. ಗರಿಷ್ಠ ವಯಸ್ಸಿನ ಮಿತಿ 65 ವರ್ಷಗಳು ಎನ್ನಲಾಗುತ್ತದೆ.

*ರಕ್ತದಾನ ಸಮಯ ತೆಗೆದುಕೊಳ್ಳುತ್ತದೆ. ನೋಂದಣಿ ಮತ್ತು ಪ್ರಕ್ರಿಯೆಯು ವಿಭಿನ್ನ ಸಮಯವನ್ನು ತೆಗೆದುಕೊಳ್ಳಬಹುದು, ಆದರೆ ರಕ್ತದಾನದ ಕಾರ್ಯವಿಧಾನ ಕೇವಲ 8-10 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

 ಡೆಂಗ್ಯೂ, ವೈರಲ್ ಜ್ವರವೇ? ರಕ್ತ ಬೇಕೆ? ಡೆಂಗ್ಯೂ, ವೈರಲ್ ಜ್ವರವೇ? ರಕ್ತ ಬೇಕೆ?

ರಕ್ತದಾನ ನೋವಿನಿಂದ ಕೂಡಿದಿಯೇ?

ರಕ್ತದಾನ ನೋವಿನಿಂದ ಕೂಡಿದಿಯೇ?

*ಬಹುತೇಕ ಜನರಿಗೆ ರಕ್ತದಾನ ಮಾಡಿದರೆ ಸೋಂಕಿಗೆ ಒಳಗಾಗಬಹುದು ಎನ್ನುವ ಭಯವಿರುತ್ತದೆ. ಆದರೆ ರಕ್ತದಾನ ಮಾಡುವುದರಿಂದ ಯಾವುದೇ ಸೋಂಕು ತಗಲುವ ಅಪಾಯವಿಲ್ಲ.

* ರಕ್ತದಾನ ನೋವಿನಿಂದ ಕೂಡಿದೆ ಎಂಬುದು ಸುಳ್ಳು. ಏಕೆಂದರೆ ಸೂಜಿ ಒಳಗೆ ಹೋಗುವಾಗ ಸ್ವಲ್ಪ ನೋವಾಗಬಹುದು. ಅದಾದ ಬಳಿಕ ಯಾವುದೇ ನೋವು ಆಗುವುದಿಲ್ಲ. ಒಮ್ಮೆ ಸೂಜಿ ಸ್ಥಾನದಲ್ಲಿದ್ದರೆ, ದಾನಿಯು ಆರಾಮವಾಗಿರುತ್ತಾರೆ.

*ನೀವು ಪ್ರತಿ ವರ್ಷ ಒಮ್ಮೆ ಮಾತ್ರ ರಕ್ತ ನೀಡಬೇಕು ಎಂಬುದು ಹಲವರ ಯೋಚನೆ. ಆದರೆ ಒಬ್ಬ ಆರೋಗ್ಯವಂತ ವ್ಯಕ್ತಿ ಒಮ್ಮೆ ರಕ್ತ ಕಣಗಳು ಮರುಪೂರಣಗೊಂಡ ನಂತರ, 3 ತಿಂಗಳ ನಂತರ ಮತ್ತೆ ರಕ್ತದಾನ ಮಾಡುವುದು ಸುರಕ್ಷಿತವಾಗಿದೆ. ಇದರಿಂದ ಯಾವುದೇ ದುಷ್ಪರಿಣಾಮಗಳಿರುವುದಿಲ್ಲ.

ಅಧಿಕ ಕೊಲೆಸ್ಟ್ರಾಲ್ ರಕ್ತದಾನ ಮಾಡಬಹುದೇ?

ಅಧಿಕ ಕೊಲೆಸ್ಟ್ರಾಲ್ ರಕ್ತದಾನ ಮಾಡಬಹುದೇ?

*ನೀವು ಅಧಿಕ ರಕ್ತದೊತ್ತಡ ಹೊಂದಿದ್ದರೆ ನೀವು ರಕ್ತದಾನ ಮಾಡಲು ಸಾಧ್ಯವಿಲ್ಲ ಎಂಬುದು ಹಲವರ ನಂಬಿಕೆ. ಆದರೆ ಇದು ನಿಜವಲ್ಲ. ಯಾರಾದರೂ ಸಂಕೋಚನದ ರಕ್ತದೊತ್ತಡವನ್ನು 160mmHg ಗಿಂತ ಕಡಿಮೆ ಮತ್ತು ಡಯಾಸ್ಟೊಲಿಕ್ 100mmHg ಗಿಂತ ಕಡಿಮೆ ಇರುವವರೆಗೆ ಅವರು ರಕ್ತದಾನ ಮಾಡಬಹುದು.

*ನೀವು ಅಧಿಕ ಕೊಲೆಸ್ಟ್ರಾಲ್ ಹೊಂದಿದ್ದರೂ ನೀವು ರಕ್ತದಾನ ಮಾಡಬಹುದು. ಅಧಿಕ ರಕ್ತದ ಕೊಲೆಸ್ಟರಾಲ್ ಮಟ್ಟಗಳು ಅಥವಾ ಕೊಲೆಸ್ಟರಾಲ್-ಕಡಿಮೆಗೊಳಿಸುವ ಔಷಧಿಗಳು ರಕ್ತದಾನದಿಂದ ಯಾರನ್ನಾದರೂ ಅನರ್ಹಗೊಳಿಸುವುದಿಲ್ಲ.

 ಬ್ಲಡ್ ಬ್ಯಾಂಕ್ ಗಳಿಂದ ತ್ಯಾಜ್ಯವಾಗೋ ರಕ್ತ 60 ಸಾವಿರ ಲೀ.! ಬ್ಲಡ್ ಬ್ಯಾಂಕ್ ಗಳಿಂದ ತ್ಯಾಜ್ಯವಾಗೋ ರಕ್ತ 60 ಸಾವಿರ ಲೀ.!

ದಾನಿಗಳಿಗಾಗಿ ಹುಡುಕಾಟ

ದಾನಿಗಳಿಗಾಗಿ ಹುಡುಕಾಟ

*ಈಗಾಗಲೇ ಸಾಕಷ್ಟು ಜನರು ರಕ್ತದಾನ ಮಾಡುತ್ತಾರೆ. ದುಃಖಕರವೆಂದರೆ, ಇದು ನಿಜವಲ್ಲ. ರಕ್ತವು ಸೀಮಿತ ಸ್ವ-ಜೀವನವನ್ನು ಹೊಂದಿರುವುದರಿಂದ, ಸಾಕಷ್ಟು ಸರಬರಾಜುಗಳನ್ನು ನಿರ್ವಹಿಸುವುದು ನಿರಂತರ ಸವಾಲಾಗಿದೆ. ರಕ್ತ ಕಣಗಳನ್ನು 42 ದಿನಗಳಲ್ಲಿ ಬಳಸಬೇಕು ಮತ್ತು ದಾನ ಮಾಡಿದ ಪ್ಲೇಟ್‌ಲೆಟ್‌ಗಳನ್ನು 5 ದಿನಗಳಲ್ಲಿ ಬಳಸಬೇಕು, ಇದರಿಂದಾಗಿ ದಾನ ಮಾಡಿದ ರಕ್ತವನ್ನು ನಿರಂತರವಾಗಿ ಮರುಪೂರಣಗೊಳಿಸಬೇಕು ಮತ್ತು ನಾವು ಯಾವಾಗಲೂ ರಕ್ತದಾನ ಮಾಡಲು ಹೆಚ್ಚಿನ ಸ್ವಯಂಸೇವಕರನ್ನು ಹುಡುಕುತ್ತಿದ್ದೇವೆ.

Recommended Video

ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಪಾತ್ರ ಏನು? | Oneindia Kannada

English summary
World Blood Donor Day 2022: Know who can donate blood and common myths around blood donation in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X