Dengue Fever: ರಾಜ್ಯದಲ್ಲಿ ಹೆಚ್ಚಾಯ್ತು ಡೆಂಗ್ಯೂ ಭೀತಿ; ಬಿಳಿರಕ್ತ ಕಣಗಳಿಗೆ ಹೆಚ್ಚಿದ ಬೇಡಿಕೆ!
ಬೆಂಗಳೂರು, ಸೆಪ್ಟೆಂಬರ್ 19: ಕೊರೋನಾದಿಂದ ಚೇರಿಸಿಕೊಳೊಳುತ್ತಿರುವ ರಾಜ್ಯದ ಜನತೆಗೆ ಇದೀಗ ಡೆಂಗ್ಯೂ ಭೀತಿ ಎದುರಾಗಿದೆ. ರಾಜ್ಯಾದ್ಯಂತ ಕಳೆದ ಕೆಲವು ದಿನಗಳ ಅವಧಿಯಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ಡೆಂಘಿ ಪ್ರಕರಣಗಳು ವರದಿಯಾಗಿವೆ, ಇದರಲ್ಲಿ 4 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಂಗಳೂರು ನಗರವೊಂದರಲ್ಲೇ ಕಂಡುಬಂದಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆತಂಕ ಹುಟ್ಟಿಸಿದೆ. ಕೊರೋನಾ ಆತಂಕದಲ್ಲೇ ಸಾಕಷ್ಟು ಶ್ರಮಿಸಿದ್ದ ಆಸ್ಪತ್ರೆಗಳಿಗೆ ಇದೀಗ ಮತ್ತೊಂದು ರೀತಿಯ ಟೆನ್ಷನ್ ಶುರುವಾಗಿದೆ.

ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಅನ್ನೋ ಹಾಗೇ ರಾಜ್ಯದಲ್ಲಿ ಮಳೆ ಇಲ್ಲದಿದ್ರೂ ರಾಜಧಾನಿ ಬೆಂಗಳೂರಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗ್ತಾಲೇ ಇದೆ. ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಜನರು ಸಹ ಆತಂಕಕ್ಕಿಡಾಗಿದ್ದಾರೆ. ಇನ್ನೂ ಡೆಂಗ್ಯೂ ಹೊಡೆತದಿಂದ ನಲುಗಿದ ರೋಗಿಗಳಲ್ಲಿ ಬಿಳಿರಕ್ತ ಕಣಗಳ ಕೊರತೆ ಉಂಟಾಗ್ತಿದ್ದು, ಇತ್ತ ಬ್ಲಡ್ ಬ್ಯಾಂಕ್‍ಗಳಿಗೂ ಸಂಕಷ್ಟ ಎದುರಾಗಿದೆ.
ಈಗಾಗಲೇ ಬೆಂಗಳೂರಿನಲ್ಲಿ 4979 ಪ್ರಕರಣಗಳು ಕಂಡು ಬಂದಿದ್ದು, ಡೆಂಗ್ಯೂ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ರೂ ಕೂಡ, ಕೆಲವು ರೋಗಿಗಳಲ್ಲಿ ಬಿಳಿರಕ್ತಕಣಗಳ ಕೊರತೆ ಇರುವುದರಿಂದ ಸಮಸ್ಯೆ ಎದುರಾಗುತ್ತಿದೆ. ಇನ್ನೂ ಡೆಂಗ್ಯೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರೂ ಚಿಕಿತ್ಸೆ ವೇಳೆ ವೈಟ್ ಬ್ಲಡ್ ಸೆಲ್ಸ್ ಕಡಿಮೆ ಇರೋ ರೋಗಿಗಳಿಗೆ ಚಿಕಿತ್ಸೆ ನೀಡಲಾಗದೇ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಹೈರಾಣಾಗ್ತಿದ್ದಾರೆ ಎಂದು ತಿಳಿದು ಬಂದಿದೆ.
ವರ್ಷದಿಂದ ವರ್ಷಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, 2020 ರಲ್ಲಿ 1127 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, 2021 ರಲ್ಲಿ 1629 ಪ್ರಕರಣಗಳು, 2022 ರಲ್ಲಿ 2335 ಹಾಗೂ 2023 ರಲ್ಲಿ 4979 ಪ್ರಕರಣಗಳು ಕಂಡು ಬಂದಿದ್ದು, ಹೆಚ್ಚು ಪ್ರಕರಣಗಳು ದಿನದಿಂದ ದಿನಕ್ಕೆ ಕಂಡು ಬರುತ್ತಿರುವ ಹಿನ್ನೆಲೆ ಸಿಲಿಕಾನ್ ಸಿಟಿ ಮಂದಿ ಆತಂಕಕ್ಕಿಡಾಗಿದ್ದಾರೆ.
ಇನ್ನೂ ಡೆಂಗ್ಯೂ ಕಾಣಿಸಿಕೊಂಡ ಕೆಲ ರೋಗಿಗಳಲ್ಲಿ ಮೂಗಿನಿಂದ ರಕ್ತ ಸೋರುವುದು, ಹಲ್ಲಿನ ವಸಡುಗಳಲ್ಲಿ ರಕ್ತ ಕಾಣಿಸುವುದು, ವಾಂತಿಯಲ್ಲಿ ರಕ್ತ ಬರುವುದು ಈ ರೀತಿ ಹಲವು ಲಕ್ಷಣ ಕಂಡುಬರ್ತಿದ್ದು, ಇದರಿಂದ ವೈಟ್ ಪ್ಲೇಟ್‍ಲೇಟ್ಸ್ ಕಡಿಮೆ ಇರೋ ರೋಗಿಗಳಿಗೆ ಚಿಕಿತ್ಸೆ ನೀಡುವ ಅವಶ್ಯಕತೆ ಎದುರಾಗ್ತಿದೆ.
ಹಿಂದಿನ ವರ್ಷಕ್ಕಿಂತ ಈ ಈ ಬಾರೀ ಬೆಂಗಳೂರಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗಿರೋದು ಆತಂಕ ಸೃಷ್ಟಿಸಿದೆ. ಇತ್ತ ಡೆಂಗ್ಯೂ ರೋಗಿಗಳಿಗೆ ಪ್ಲೇಟ್ ಲೇಟ್ಸ್ ಕೊರತೆ ಕೂಡ ಎದುರಾಗ್ತಿರೋದು ಆಸ್ಪತ್ರೆಗಳ ಸಿಬ್ಬಂದಿಗೆ ತಲೆನೋವು ತಂದಿಟ್ಟಿದೆ. ಈ ಹಿಂದೆ ದಿನಕ್ಕೆ 10-12ರಷ್ಟು ರ್‍ಯಾಂಡಮ್ ಡೋನರ್ ಪ್ಲೇಟ್ಲೆಟ್ಸ್ ಅವಶ್ಯಕತೆ ಇತ್ತು, ಇದೀಗ ದಿನಕ್ಕೆ 150 ಯುನಿಟ್ ನಷ್ಟು ರ್‍ಯಾಂಡಮ್ ಡೋನರ್ ಪ್ಲೇಟ್ಲೆಟ್ಸ್ ಗಳ ಅವಶ್ಯಕತೆ ಎದುರಾಗಿದ್ದು, ಇದರಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಸಹ ಸಮಸ್ಯೆ ಉದ್ಭವಿಸಿದೆ.











Click it and Unblock the Notifications