ಕಾವೇರಿ ಕಿಚ್ಚು: ರಾಮನಗರದಲ್ಲಿ ಸಿರಿಂಜ್‌ನಲ್ಲಿ ರಕ್ತ ತೆಗೆದು ರಸ್ತೆಗೆ ಚೆಲ್ಲಿದ ಪ್ರತಿಭಟನಾಕಾರರು
ರಾಮನಗರ, ಸೆಪ್ಟೆಂಬರ್, 26: ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರು ನಿಲ್ಲಿಸುವಂತೆ ಒತ್ತಾಯಿಸಿ ಇಂದು ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವಾರು ಸಂಘನೆಗಳು ಬೆಂಗಳೂರು ಬಂದ್ ಮಾಡಿ ಪ್ರತಿಭಟನೆ ನಡೆಸಿವೆ. ಅದೇ ರೀತಿ ರೇಷ್ಮೆನಗರಿ ರಾಮನಗರದಲ್ಲೂ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ರಕ್ತ ಚಳವಳಿ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮನಗರದಲ್ಲಿ ಕಾವೇರಿ ಹೋರಾಟ ತೀವ್ರಗೊಂಡಿದ್ದು, ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಸಿರಿಂಜ್ ಮೂಲಕ ರಕ್ತ ತೆಗದು ರಸ್ತೆಗೆ ರಕ್ತ ಚೆಲ್ಲಿದ್ದಾರೆ. ಅಲ್ಲದೆ ಇದೇ ವೇಳೆ ರಕ್ತ ಕೊಟ್ಟೆವೂ ನೀರು ಕೊಡೆವು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಾಗೂ ತಮಿಳುನಾಡು ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.
ಇದು ಕನ್ನಡಿಗರ ಕಣ್ಣೀರಿನ ವ್ಯಥೆಯಾಗಿದೆ
ಇದೀಗ ತಮಿಳುನಾಡಿಗೆ ಮತ್ತೆ 18 ದಿನಗಳ ಕಾಲ ಪ್ರಾಧಿಕಾರ 3 ಸಾವಿರ ಕ್ಯೂಸೆಕ್ ನೀರನ್ನ ಬಿಡಲು ಹೇಳಿದೆ. ಇದು ಕರ್ನಾಟಕ್ಕೆ ಅನ್ಯಾಯ, ಮೋಸ. ಯಾರು ಹೇಳೋರಿಲ್ಲ ಕೇಳೋರಿಲ್ಲ. ಇದು ಕನ್ನಡಿಗರ ಕಣ್ಣೀರಿನ ವ್ಯಥೆಯಾಗಿದೆ ಎಂದು ವಾಟಾಳ್ ನಾಗರಾಜ್ ಬೆಂಗಳೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮಿಳಿನಾಡಿಗೆ ನ್ಯಾಯ, ಕರ್ನಾಟಕಕ್ಕೆ ಅನ್ಯಾಯ. ಬೆಂಗಳೂರಿಗೆ ಕುಡಿಯಲು ನೀರಿಲ್ಲ, ಮಂಡ್ಯ ರೈತರಿಗೆ ನೀರಿಲ್ಲ. ಸರ್ಕಾದ ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ತಮಿಳುನಾಡಿಗೆ ನೀರನ್ನು ಬಿಡಬಾರದು. ಕರ್ನಾಟಕ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯಬಾರದು. ನಾಳೆ ಬೆಳಗ್ಗೆ 11:30ಕ್ಕೆ ಮುಖ್ಯಮಂತ್ರಿ ಅವರ ಮನೆ ಮುಂದೆ ಕನ್ನಡ ಒಕ್ಕೂಟದಿಂದ ಸತ್ಯಾಗ್ರಹ ಮಾಡಿ ನೀರು ಬೀಡದಂತೆ ಒತ್ತಾಯ ಮಾಡುತ್ತೇವೆ ಎಂದರು. ಹಾಗೆಯೇ ಇದೇ ವಿಚಾರವಾಗಿ ಸೆಪ್ಟೆಂಬರ್ 29ಕ್ಕೆ ಕರ್ನಾಟಕ ಬಂದ್ ಮಾಡುತ್ತೇವೆ ಎಂದರು.












Click it and Unblock the Notifications