ರಕ್ತದಲ್ಲಿ ಡಿಕೆ ಶಿವಕುಮಾರ್ ಚಿತ್ರ ಬಿಡಿಸಿ ಹುಟ್ಟುಹಬ್ಬದ ಶುಭಕೋರಿದ ಅಭಿಮಾನಿ
ಅಭಿಮಾನಿಯೊಬ್ಬರು ತಮ್ಮದೇ ರಕ್ತದಲ್ಲಿ ಡಿಕೆ ಶಿವಕುಮಾರ್ ಚಿತ್ರ ಬಿಡಿಸಿ ಹುಟ್ಟುಹಬ್ಬದ ಶುಭಕೋರಿದ್ದು ಕಂಡು ಬಂದಿದೆ. ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹುಟ್ಟುಹಬ್ಬ. ರಾಜ್ಯದೆಲ್ಲೆಡೆ ಅವರ ಅಭಿಮಾನಿಗಳು ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಮೂಲಕ ಶುಭ ಕೋಡಿದ್ದಾರೆ.
ದೇವಸ್ಥಾನದಲ್ಲಿ ಡಿಕೆ ಶಿವಕುಮಾರ್ ಹೆಸರಿನಲ್ಲಿ ಪೂಜೆ, ಹಾಲಿನ ನೈವೇದ್ಯ ಹಾಗೂ ಇತರ ಕೆಲ ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ಅಭಿಮಾನಿಗಳು ಹಾಗೂ ಆಪ್ತರು ಡಿಕೆ ಶಿವಕುಮಾರ್ ಅವರಿಗೆ ಶುಭ ಹಾರೈಸಿದ್ದಾರೆ. ಆದರೆ ಡಿಕೆಶಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಯಾದ ಕಾಂಗ್ರೆಸ್ ಕಾರ್ಯಕರ್ತೆ ಬಿಂದು ಗೌಡ ವಿಚಿತ್ರವಾಗಿ ಡಿಕೆ ಶಿವಕುಮಾರ್‌ಗೆ ಶುಭ ಕೋರಿದ್ದಾರೆ. ಅವರು ತಮ್ಮ ರಕ್ತದಲ್ಲೇ ಡಿಕೆ ಶಿವಕುಮಾರ್ ಚಿತ್ರ ಬಿಡಿಸಿ ಉಡುಗೊರೆಯಾಗಿ ನೀಡಿದ್ದಾರೆ.

ಈ ಭಾವಚಿತ್ರವನ್ನು ಮಾಡುವ ವಿಡಿಯೋ ಕೂಡ ಮಾಡಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವರು ಇದೊಂದು ಹುಚ್ಚುತರದ ಅಭಿಮಾನ ಎಂದು ಹೇಳಿದರೆ ಇನ್ನೂ ಕೆಲವರು ಇಷ್ಟೊಂದು ಅಭಿಮಾನ ತೋರಿದ ಅಭಿಮಾನಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅವರು ಇಂದು 62ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಹೀಗಾಗಿ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಅವರ ನಿವಾಸದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರನ್ನು ಜಮಾಯಿಸಿದ್ದಾರೆ. ಮನೆಯಿಂದ ಹೊರಬರುತಿದ್ದಂತೆ ಅವರಿಗೆ ಸಿಹಿ ತಿನಿಸಿ ಹೂವಿನ ಹಾರ ಹಾಕುವ ಮೂಲಕ ಬೆಂಬಲಿಗರು ಶುಭ ಕೋರಿದ್ದಾರೆ.












Click it and Unblock the Notifications