ಚಿಂತಾಮಣಿ: ಪತ್ನಿಯೊಂದಿಗೆ ಸಂಬಂಧ ಆರೋಪದಲ್ಲಿ ಸ್ನೇಹಿತನ ಕತ್ತು ಸೀಳಿ, ರಕ್ತ ಕುಡಿದ ಪತಿಯ ಬಂಧನ
ಚಿಂತಾಮಣಿ, ಜೂನ್. 26: ತನ್ನ ಪತ್ನಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಶಂಕಿಸಿ ತನ್ನ ಸ್ನೇಹಿತನ ಕತ್ತು ಸೀಳಿ ರಕ್ತ ಕುಡಿದ ಭಯಾನಕ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ನಡೆದಿದೆ. ಈ ಆರೋಪದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳು ಸ್ನೇಹಿತ ಬದುಕುಳಿದಿದ್ದು, ಆಸ್ಪತ್ರೆಯಲ್ಲಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ವಿಜಯ್ ಎಂದು ಗುರುತಿಸಲಾದ ಬಟ್ಟೆ ವ್ಯಾಪಾರಿ ಆರೋಪಿಯು ತನ್ನ ಸ್ನೇಹಿತ ಬಾಗೇಪಲ್ಲಿ ತಾಲೂಕು ಮಂಡ್ಯಂಪಲ್ಲಿ ಗ್ರಾಮದ ಮಾರೇಶ್‌ನ ಕತ್ತು ಸೀಳಿ ರಕ್ತ ಕುಡಿದ ಘಟನೆಯನ್ನು ಆತನ ಮತ್ತೊಬ್ಬ ಸ್ನೇಹಿತ ಜಾನ್ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಘಟನೆಯ ವಿಡಿಯೋ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ.

ಜೂನ್ 19 ರಂದು ವಿಜಯ್ ತನ್ನ ಸ್ನೇಹಿತ ಜಾನ್ ಜೊತೆಯಲ್ಲಿ ಮಾರೇಶ್ ನನ್ನು ಸಿದ್ದೆಪಲ್ಲಿ ಕ್ರಾಸ್‌ನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಾರೇಶ್ ನ ಕತ್ತು ಸೀಳಿ ರಕ್ತ ಕುಡಿದಿದ್ದಾನೆ. ಈ ಕೃತ್ಯವನ್ನು ಜಾನ್ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ಘಟನೆಯ ಸ್ಥಳಕ್ಕೆ ತೆರಳಿದ್ದ ಗಾಯಾಳುವಿನ ಸಹೋದರ ಆತನನ್ನು ಆಸ್ಪತ್ರೆಗೆ ಸೇರಿಸಿದ್ದರು. ಘಟನೆಯಲ್ಲಿ ಸಂತ್ರಸ್ತ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಇದೀಗ ಮನೆಗೆ ಮರಳಿದ್ದಾರೆ. ಮಾರೇಶ್ ನೀಡಿದ ದೂರಿನ ಮೇರೆಗೆ ಪೊಲೀಸರು ವಿಜಯ್‌ನನ್ನು ಬಂಧಿಸಿದ್ದಾರೆ.
ವಿಜಯ್ ತನ್ನ ಸ್ನೇಹಿತ ಮಾರೇಶ್ ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವೈರಲ್ ವಿಡಿಯೋದಲ್ಲಿ ಗಾಯಗೊಂಡ ವ್ಯಕ್ತಿಗೆ ಗುದ್ದುವುದು ಮತ್ತು ಕಪಾಳಮೋಕ್ಷ ಮಾಡುವುದನ್ನು ಸಹ ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ವಿಜಯ್ ಅವರನ್ನು ಬಂಧಿಸಲಾಗಿದೆ. ವಿಜಯ್ ವಿರುದ್ಧ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.












Click it and Unblock the Notifications