ಇಂಡಿಗೋ ಪ್ರಯಾಣಿಕನ ರಕ್ತ ವಾಂತಿ; ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದ ವಿಮಾನ!
ಟೇಕ್‌ಆಪ್ ಆಗಿದ್ದ ಇಂಡಿಯೋ ವಿಮಾನದಲ್ಲಿ ಪ್ರಯಾಣಿಕನೊಬ್ಬರು ರಕ್ತ ವಾಂತಿ ಮಾಡಿಕೊಂಡ ಘಟನೆ ನಡೆದಿದ್ದು ವಿಮಾನವನ್ನು ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಸೋಮವಾರದಂದು ಮುಂಬೈನಿಂದ ರಾಂಚಿ ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದೆ.
ಪ್ರಯಾಣಿಕರಿಗೆ ವೈದ್ಯಕೀಯ ತುರ್ತು ಚಿಕಿತ್ಸೆ ಅವಶ್ಯಕತೆ ಇದ್ದರಿಂದ ವಿಮಾನವನ್ನು ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಪ್ರಯಾಣಿಕರನ್ನು ಇಳಿಸಿದ ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.

ರಾತ್ರಿ 8 ಗಂಟೆ ಸುಮಾರಿಗೆ ಮುಂಬೈನಿಂದ ರಾಂಚಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ದೇವಾನಂದ್ ತಿವಾರಿ ಎಂಬುವರು ರಕ್ತ ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದರು. ತುರ್ತು ಭೂಸ್ಪರ್ಶದ ನಂತರ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ನಾಗ್ಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
62 ವರ್ಷದ ಪ್ರಯಾಣಿಕ ದೇವಾನಂದ್ ತಿವಾರಿ ಕ್ಷಯರೋಗದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಅಗತ್ಯ ವೈದ್ಯಕೀಯ ವಿಧಾನಗಳು ಮತ್ತು ಕ್ಲಿಯರೆನ್ಸ್ ನಂತರ, ವಿಮಾನವು ನಾಗಪುರ ಮತ್ತು ರಾಂಚಿಗೆ ತನ್ನ ಪ್ರಯಾಣವನ್ನು ಯಶಸ್ವಿಯಾಗಿ ಪುನರಾರಂಭಿಸಿತು.












Click it and Unblock the Notifications