Get Updates
Get notified of breaking news, exclusive insights, and must-see stories!

ಹರಕೆ ಕುರಿಗಳ ಕತ್ತು ಕಚ್ಚಿ ರಕ್ತ ಹೀರಿ ಕೊಡುವ ಅರ್ಚಕ-ಕಾರಣ ಕೇಳಿದ್ರೆ ಶಾಕ್‌ ಆಗೋದಂತೂ ಗ್ಯಾರಂಟಿ?

ಚಾಮರಾಜನಗರ, ಮಾರ್ಚ್‌, 23: ಗ್ರಾಮೀಣ ಪ್ರದೇಶಗಳಲ್ಲಿ ಈಗ ಮಾರಮ್ಮನ ಹಬ್ಬ, ‌ಕೊಂಡೋತ್ಸವ, ಜಾತ್ರೆಗಳ ಸುಗ್ಗಿಯಾಗಿದ್ದು, ಇಲ್ಲೋರ್ವ ಅರ್ಚಕ ಕುರಿಗಳ ಕತ್ತನ್ನು ಕಚ್ಚಿ ರಕ್ತ ಹೀರಿ ದೇವರಿಗೆ ಬಲಿ ಕೊಟ್ಟ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ದೊಡ್ಡಮ್ಮತಾಯಿ ಹಬ್ಬ ನಡೆದಿದ್ದು, ಸಂಪ್ರದಾಯದಂತೆ ಅರ್ಚಕ ಕುರಿಗಳ ಕತ್ತನ್ನು ಕಚ್ಚಿ ರಕ್ತ ಹೀರಿ ಬಲಿ ಕೊಡಲಾಗಿದೆ. ಈ ಊರಿನ ಹಬ್ಬದಲ್ಲಿ ಕುರಿ, ಮೇಕೆ ರಕ್ತ ಕುಡಿಯುವ ಸಂಪ್ರದಾಯ ಕುಡಿದು ದೇವರನ್ನು ಸಂತೃಪ್ತಿಗೊಳಿಸುವ ಪದ್ಧತಿ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ.

Priest strangled sheep s with his teeth and drink blood in Annur village

ದೇವರ ಮೆರವಣಿಗೆ ಸಮಯದಲ್ಲಿ ಅರ್ಚಕರಿಗೆ ಜನರು ಹರಕೆ ಬಿಟ್ಟಿದ್ದ ಕುರಿಗಳನ್ನು ಕೊಡಲಿದ್ದು, ಅರ್ಚಕ ಅವುಗಳ ಕತ್ತು ಕಚ್ಚಿ ರಕ್ತ ಕುಡಿಯಲಿದ್ದಾರೆ. ಬಳಿಕ, ಬಲಿ ಕೊಟ್ಟ ಪ್ರಾಣಿಯಿಂದ ಊಟ ತಯಾರಿಸಿ ಸಂಬಂಧಿಕರ ಜೊತೆ ಸೇವಿಸುವುದು ವಾಡಿಕೆಯಾಗಿದ್ದು, ಅದರಂತೆಯೇ ಶುಜ್ರವಾರವೂ ಅರ್ಚಕ 50ಕ್ಕೂ ಅಧಿಕ ಕುರಿಗಳ ರಕ್ತವನ್ನು ಹೀರಿದ್ದಾರೆ.

12 ವರ್ಷಗಳಿಗೊಮ್ಕೆ ವಿಶೇಷ ಜಾತ್ರೆ: ಈ ಊರಲ್ಲಿ 12 ವರ್ಷಗಳಿಗೊಮ್ಕೆ ವಿಶೇಷ ಜಾತ್ರೆ ನಡೆಯಲಿದೆ. ಆದರೆ, ಎಲ್ಲಾ ಜಾತ್ರೆಗಳಂತೆ ಸಾಮಾನ್ಯವಾದ ಜಾತ್ರೆ ಇದಲ್ಲ. ಒಂದು ಸಮುದಾಯದ ಜನರು ಎಲ್ಲಾರನ್ನೂ ಬೈದು, ವಿಡಂಬನೆ ಮಾಡಿ ಹಾಸ್ಯದ ಹೊನಲು ಹರಿಸುವುದೇ ಈ ಜಾತ್ರೆಯ ವಿಶೇಷತೆಯಾಗಿದೆ. ಹಾಗಾದರೆ ಇದನ್ನು ಹೇಗೆಲ್ಲಾ ಆಚರಣೆ ಮಾಡುತ್ತಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಚಾಮರಾಜನಗರ ತಾಲೂಕಿನ ಮಂಗಲ ಎಂಬ ಗ್ರಾಮದಲ್ಲಿ ಕಳೆದ ಮಾರ್ಚ್‌ 17ರಿಂದ ಆರಂಭವಾಗಿದ್ದು, ಇಂದಿನ ತನಕ ಮೂರು ದಿನಗಳ ಕಾಲ ಅದ್ಧೂರಿಯಾಗಿ ಹಬ್ಬ ನಡೆಯಲಿದ್ದು, ಇದು ಹಿರಿಯ ಹಬ್ಬ ಅಂತಲೇ ಜನಪ್ರಿಯವಾಗಿದೆ.

ಹತ್ತಾರು ಸಮುದಾಯಗಳು ಈ ಗ್ರಾಮದಲ್ಲಿ ನೆಲೆಸಿದ್ದು, ಎಲ್ಲರೂ ಸೇರಿ ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಾರೆ. ಕುರುಬ ಸಮುದಾಯ ಈ ಜಾತ್ರೆಯ ಆಕರ್ಷಣೆ ಕೇಂದ್ರ ಆಗಿದ್ದು, ಎದುರಿಗೆ ಬಂದ ಪ್ರಮುಖರನ್ನು, ಊರಿನ ಮುಖಂಡರನ್ನು ಅಶ್ಲೀಲವಾಗಿ, ಕೊಂಕು, ವಿಡಂಬನೆಯಿಂದ ಬಾಜಿ ಕಟ್ಟಿದ್ದಂತೆ ಬೈಯ್ಯಲಿದ್ದಾರೆ. ಇನ್ನು ಇವರ ಬೈಗುಳವನ್ನು ಕೇಳಿ ಎಲ್ಲರೂ ನಕ್ಕು ಸುಮ್ಮನಾಗಲಿದ್ದು, ಇವರ ಬೈಗುಳ ಕೇಳಲೆಂದೇ ಅಕ್ಕಪಕ್ಕದ ಊರಿನ ಜನರು ಸೇರಿ ಜಾತ್ರೆಯ ಸಂಭ್ರಮವನ್ನು ಹೆಚ್ಚಿಸುತ್ತಾರೆ.

ಮಂಗಲ ಗ್ರಾಮದ ವಿಪ್ರ ಮುಖಂಡರಾದ ಶ್ರೀಕಂಠಮೂರ್ತಿ ಹಾಗೂ ಉಪ್ಪಾರ ಸಮುದಾಯದ ಯಜಮಾನರಾದ ಕ್ಯಾತಶೆಟ್ಟಿ ಈ ಕುರಿತು ಮಾತನಾಡಿ, ಶತಮಾನಗಳಿಂದಲೂ ಈ ಹಿರಿಯ ಹಬ್ಬ ಆಚರಣೆಯಲ್ಲಿದ್ದು, ಬೀರೇಶ್ವರ ಸ್ವಾಮಿ ಉತ್ಸವ ಹಾಗೂ ಓಕುಳಿ ಆಡಲಿದ್ದಾರೆ. ಎಲ್ಲಾ ಸಮುದಾಯವೂ ಈ ಜಾತ್ರೆಯಲ್ಲಿ ಪಾಲ್ಗೊಂಡು ಸಹಬಾಳ್ವೆಗೆ ಮುನ್ನುಡಿ ಬರೆಯಲಿದ್ದು, ಕುರುಬ ಸಮುದಾಯ ಈ ಹಬ್ಬಕ್ಕೆ ಮತ್ತಷ್ಟು ರಂಗು ತುಂಬಲಿದೆ. ಆ ಸಮುದಾಯ ಮಾತ್ರ ಈ ಬೈಗುಳದಲ್ಲಿ ಪಾಲ್ಗೊಳ್ಳಬೇಕು. ಅವರು ಮಾತ್ರ ಬೈಯ್ಯಲಿದ್ದು, ಒಂದು ರೀತಿ ಮನರಂಜನೆಯಾಗಿಯೂ ಇದು ಕಾಣಲಿದೆ ಎಂದರು.

ಒಟ್ಟಿನಲ್ಲಿ ಜಾತ್ರೆ ಎಂದರೆ ಕೇವಲ ಉತ್ಸವ ಮಾತ್ರ ನಡೆಯುವುದು ಸಾಮಾನ್ಯ. ಆದರೆ, ವಾಚಮಗೋಚರವಾಗಿ ಬೈಯ್ಯುವುದು ಕೂಡ ಇದರ ಭಾಗವಾಗಿರುವುದು ವಿಶೇಷವೇ ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+