ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಗಾತಿ ಸಿಕ್ರೆ ಲೈಫ್ ಜಿಂಗಾಲಾಲಾ; ಮದುವೆಯಾದ್ರೆ ಕಂಪನಿಯೇ ಹೆಚ್ಚಿಸುತ್ತೆ ಸಂಬಳ!

|
Google Oneindia Kannada News

ಮೊದಲೇ ಇದು ಜಂಪಿಂಗ್ ಜಮಾನಾ. 5 ಸಾವಿರ ಕೊಡುವಲ್ಲಿ 8 ಸಾವಿರ ಕೊಡುತ್ತೀವಿ ಎಂದರೆ ಒಂದು ಕಂಪನಿಗಳಿಂದ ಮತ್ತೊಂದು ಕಂಪನಿಗಳಿಗೆ ಜಿಗಿಯುವ ಉದ್ಯೋಗಿಗಳ ಸಂಖ್ಯೆಯೇ ಹೆಚ್ಚಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಉದ್ಯೋಗಿಗಳನ್ನು ಉಳಿಸಿಕೊಳ್ಳುವುದೇ ಐಟಿ ಸಂಸ್ಥೆಗಳಿಗೆ ಸವಾಲು ಆಗಿದೆ.

ಸಾಮಾನ್ಯವಾಗಿ ಐಟಿ ಕಂಪನಿಗಳಲ್ಲಿ ಉದ್ಯೋಗಿಗಳನ್ನು ಉಳಿಸಿಕೊಳ್ಳುವುದಕ್ಕೆ ಆಫರ್ ಮೇಲೆ ಆಫರ್ ಕೊಡುವ ಸಂಸ್ಥೆಗಳನ್ನು ನೋಡಿರುತ್ತೀರಿ. ಆದರೆ ತಮಿಳುನಾಡಿನ ಮಧುರೈನಲ್ಲಿ ಐಟಿ ಸಂಸ್ಥೆಯೊಂದು ತಮ್ಮ ಉದ್ಯೋಗಿಗಳಿಗೆ ವಿಶೇಷ ಆಫರ್ ಕೊಟ್ಟಿದೆ.

 ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಕೆಲಸ ಕಳೆದುಕೊಂಡರೆ ಸಿಗುವ ಹಣ ಎಷ್ಟು? ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಕೆಲಸ ಕಳೆದುಕೊಂಡರೆ ಸಿಗುವ ಹಣ ಎಷ್ಟು?

ತಮ್ಮ ಉದ್ಯೋಗಿಗಳು ಮದುವೆ ಆಗುವುದಕ್ಕಾಗಿ ಅಗತ್ಯವಾದ ಆರ್ಥಿಕ ನೆರವು ನೀಡುವುದಕ್ಕೆ ಐಟಿ ಕಂಪನಿಯು ಮುಂದಾಗಿದೆ. ಈ ಆಫರ್ ಇಷ್ಟಕ್ಕೆ ಮುಗಿಯೋದಿಲ್ಲ. ಮದುವೆಯಾದ ಉದ್ಯೋಗಿಯ ವೇತನವನ್ನೂ ಹೆಚ್ಚಳ ಮಾಡಲಾಗುತ್ತಿದೆ. ಅಸಲಿಗೆ ಇಂಥ ಆಫರ್ ಕೊಟ್ಟಿರುವ ಆ ಐಟಿ ಕಂಪನಿ ಯಾವುದು?, ಐಟಿ ಕಂಪನಿಯು ನೀಡಿರುವ ಆಫರ್ ಕುರಿತು ಒಂದು ಡಿಫರೆಂಟ್ ವರದಿ ಇಲ್ಲಿದೆ ನೋಡಿ.

 ಶ್ರೀ ಮೂಕಾಂಬಿಕಾ ಇನ್ಫೋಸೆಲ್ಯೂಷನ್ ಕೊಟ್ಟ ಆಫರ್

ಶ್ರೀ ಮೂಕಾಂಬಿಕಾ ಇನ್ಫೋಸೆಲ್ಯೂಷನ್ ಕೊಟ್ಟ ಆಫರ್

ತಮಿಳುನಾಡಿನ ಮಧುರೈ ಮೂಲದ ಶ್ರೀ ಮೂಕಾಂಬಿಕಾ ಇನ್ಫೋಸೆಲ್ಯೂಷನ್ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಡಿಫರೆಂಟ್ ಆಫರ್ ಕೊಟ್ಟಿದೆ. ತನ್ನ ಉದ್ಯೋಗಿಗಳಿಗಾಗಿಯೇ ಐಟಿ ಸಂಸ್ಥೆಯು ತನ್ನದೇ ಆದ ಅಸಾಮಾನ್ಯ ಧಾರಣ ಯೋಜನೆಯನ್ನು ರೂಪಿಸಿದೆ. ಇದು ಕೇವಲ ನಿಗದಿತ ಪ್ರಮಾಣಿತ ಮೌಲ್ಯಮಾಪನಗಳನ್ನು ನೀಡುವುದಿಲ್ಲ. ಇದರ ಜೊತೆಗೆ ಉದ್ಯೋಗಿಗಳಿಗೆ ಹೊಂದಾಣಿಕೆಯ ಸೇವೆಗಳು ಮತ್ತು ಉದ್ಯೋಗಿಗಳ ಮದುವೆಯ ನಂತರದ ವೇತನದಲ್ಲಿ ವಿಶೇಷ ಏರಿಕೆಗಳನ್ನು ನೀಡುವುದಾಗಿ ಹೇಳಿದೆ.

 ಮದುವೆಯಾದ್ರೆ ಸಂಬಳ ಜಾಸ್ತಿ ಆಗೋದು ಪಕ್ಕಾ!

ಮದುವೆಯಾದ್ರೆ ಸಂಬಳ ಜಾಸ್ತಿ ಆಗೋದು ಪಕ್ಕಾ!

ಕಳೆದ 2006ರಲ್ಲಿ ಶಿವಕಾಶಿಯಲ್ಲಿ ಈ ಐಟಿ ಸಂಸ್ಥೆಯು ಸ್ಥಾಪನೆಯಾಗಿದೆ. 2010 ರಿಂದ ಮಧುರೈನಲ್ಲಿ ನೆಲೆಗೊಂಡಿರುವ ಶ್ರೀ ಮೂಕಾಂಬಿಕಾ ಇನ್ಫೋಸೆಲ್ಯೂಷನ್ ಸಂಸ್ಥೆಯು ಮೊದಲ ದಿನದಿಂದ ತನ್ನ ಉದ್ಯೋಗ ನೀತಿಯಲ್ಲಿ ವಿಶೇಷ ವಿವಾಹ ಹೆಚ್ಚಳವನ್ನು ಹೊಂದಿದೆ ಎಂದು ಸಂಸ್ಥಾಪಕ ಮತ್ತು ಇಸಿಓ MP ಸೆಲ್ವಗಣೇಶ್ ತಿಳಿಸಿದ್ದಾರೆ. ಅಲ್ಲದೇ ಉದ್ಯೋಗಿಗಳನ್ನು ಮದುವೆಯಾಗಲು ಸಹಾಯ ಮಾಡುವ ಉಚಿತ ಮ್ಯಾಚ್ ಮೇಕಿಂಗ್ ಸೇವೆಯನ್ನು ನಂತರ ತರಲಾಯಿತು.

 100 ಕೋಟಿ ಆದಾಯವನ್ನು ಹೊಂದಿರುವ ಐಟಿ ಸಂಸ್ಥೆ

100 ಕೋಟಿ ಆದಾಯವನ್ನು ಹೊಂದಿರುವ ಐಟಿ ಸಂಸ್ಥೆ

ಇಂದು ಸುಮಾರು 100 ಕೋಟಿ ರೂಪಾಯಿಗಳ ಆದಾಯವನ್ನು ಹೊಂದಿರುವ ಐಟಿ ಕಂಪನಿಯಲ್ಲಿ ಸುಮಾರು 750ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಚೆನ್ನೈ ಅನ್ನು ಆಯ್ಕೆ ಮಾಡುವ ರಾಜ್ಯದ ಇತರ ಟೆಕ್ ಸಂಸ್ಥೆಗಳಿಗೆ ಹೋಲಿಸಿದರೆ ಟೈರ್ -2 ನಗರದಲ್ಲಿದ್ದರೂ ಪ್ರತಿಭೆಯನ್ನು ಆಕರ್ಷಿಸುವಲ್ಲಿ ಮತ್ತು ತನ್ನ ಉದ್ಯೋಗಿಗಳನ್ನು ಉಳಿಸಿಕೊಳ್ಳುವಲ್ಲಿ ಈ ಸಂಸ್ಥೆಯು ಯಶಸ್ವಿಯಾಗಿದೆ.

 ಪ್ರತಿವರ್ಷ ಎರಡು ಬಾರಿ ಸಂಬಳ ಹೆಚ್ಚಾಗುತ್ತೆ!

ಪ್ರತಿವರ್ಷ ಎರಡು ಬಾರಿ ಸಂಬಳ ಹೆಚ್ಚಾಗುತ್ತೆ!

ಶ್ರೀ ಮೂಕಾಂಬಿಕಾ ಇನ್ಫೋಸೆಲ್ಯೂಷನ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಪ್ರತಿ ವರ್ಷ ಶೇ 6 ರಿಂದ 8ರಷ್ಟು ವೇತನವನ್ನು ಎರಡು ಬಾರಿ ಹೆಚ್ಚಳ ಮಾಡುತ್ತದೆ ಎಂದು ವರದಿಯಾಗಿದೆ. ಇದರ ಮೇಲೆ, ಹಳ್ಳಿಗಳಿಂದ ಬರುವ ಅನೇಕ ಉದ್ಯೋಗಿಗಳೊಂದಿಗೆ ಮ್ಯಾಚ್‌ಮೇಕಿಂಗ್ ಸೇವೆಯನ್ನು ನೀಡಲಾಗುತ್ತದೆ. ಮದುವೆಗೆ ಸರಿಯಾದ ಜೋಡಿಯನ್ನು ಹುಡುಕಲು ಸಾಧ್ಯವಾಗುತ್ತಿಲ್ಲ ಎನ್ನುವ ಉದ್ಯೋಗಿಗಳಿಗೆ ಸಂಸ್ಥೆಯೇ ಡಿಫರೆಂಟ್ ಆಫರ್ ಅನ್ನೂ ನೀಡುವ ಮೂಲಕ ಸೈ ಎನಿಸಿಕೊಂಡಿದೆ.

Recommended Video

Shubmam Gill ಔಟ್ ಆದ ನಂತರ ಹೀಗೆ ಮಾಡಿದ್ದೇಕೆ | Oneindia Kannada

English summary
Tamil nadu information technology firm offers free matchmaking to employees; salary will hike when they marry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X