IPL 2024 RCB Matches: ಮೊದಲ ಪಂದ್ಯದಲ್ಲೇ ಸಿಎಸ್‌ಕೆ ಎದುರಾಳಿ; ಆರ್‌ಸಿಬಿ ಪಂದ್ಯಗಳ ವೇಳಾಪಟ್ಟಿ
ಐಪಿಎಲ್ 2024 ರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪಂದ್ಯದ ವೇಳಾಪಟ್ಟಿ ಹೊರಬಿದ್ದಿದೆ. ಐಪಿಎಲ್ ಪೂರ್ತಿ ವೇಳಾಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಉಳಿದ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಮಾರ್ಚ್ 22ರಂದು ಆರ್‌ಸಿಬಿ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಚೆನ್ನೈ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. 2024ರ ಐಪಿಎಲ್ 12 ಮೈದಾನಗಳಲ್ಲಿ ನಡೆಯಲಿದ್ದು, ಒಟ್ಟು 74 ಪಂದ್ಯಗಳು ಇರಲಿವೆ. ಮಾರ್ಚ್ 22 ರಂದು ಐಪಿಎಲ್ ಪ್ರಾರಂಭವಾಗಲಿದ್ದು, ಮೇ 26 ರಂದು ಫೈನಲ್ ನಡೆಯಲಿದೆ.

ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿಯ ಹುಡುಕಾಟದಲ್ಲಿದೆ. ನಾಯಕ ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಈ ಬಾರಿ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. 2024 ರ ಟಿ 20 ವಿಶ್ವಕಪ್‌ಗೆ ಮುನ್ನ ತಮ್ಮ ಫಾರ್ಮ್ ಉಳಿಸಿಕೊಳ್ಳಲು ಐಪಿಎಲ್ ಪಂದ್ಯಾವಳಿಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿರುವ ವಿರಾಟ್ ಕೊಹ್ಲಿಯ ಮೇಲೆ ಎಲ್ಲರ ಗಮನ ಇರಲಿದೆ.
2024ರ ಐಪಿಎಲ್‌ನ ಆರ್ ಸಿಬಿ ಪಂದ್ಯಗಳು
1. ಸಿಎಸ್‌ಕೆ vs ಆರ್‌ಸಿಬಿ - ಮಾರ್ಚ್ 22 , ರಾತ್ರಿ 8 ಗಂಟೆಗೆ ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ.
2. ಆರ್‌ಸಿಬಿ vs ಪಂಜಾಬ್ ಸೂಪರ್ ಕಿಂಗ್ಸ್ - ಮಾರ್ಚ್ 25, ರಾತ್ರಿ 7.30ಕ್ಕೆ, ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
3. ಆರ್‌ಸಿಬಿ vs ಕೆಕೆಆರ್ - ಮಾರ್ಚ್ 29, ರಾತ್ರಿ 7.30ಕ್ಕೆ, ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
4. ಆರ್‌ಸಿಬಿ vs ಎಲ್‌ಎಸ್‌ಜಿ - ಏಪ್ರಿಲ್ 2, ರಾತ್ರಿ 7.30ಕ್ಕೆ, ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
5. ರಾಜಸ್ಥಾನ ರಾಯಲ್ಸ್ vs ಆರ್‌ಸಿಬಿ, ಏಪ್ರಿಲ್ 6, ಸವಾಯ್ ಮಾನ್‌ಸಿಂಗ್ ಸ್ಟೇಡಿಯಂ, ಜೈಪುರ.
ಆರ್‌ಸಿಬಿ ಪೂರ್ಣ ತಂಡ
ಕ್ಯಾಮರೂನ್ ಗ್ರೀನ್, ವಿರಾಟ್ ಕೊಹ್ಲಿ, ಅಲ್ಜಾರಿ ಜೋಸೆಫ್, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್ (ನಾಯಕ), ಮೊಹಮ್ಮದ್ ಸಿರಾಜ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಯಶ್ ದಯಾಳ್, ಅನುಜ್ ರಾವತ್, ವಿಲ್ ಜಾಕ್ಸ್, ಲಾಕಿ ಫರ್ಗುಸನ್, ರೀಸ್ ಟಾಪ್ಲೆ, ಮಯಾಂಕ್ ದಾಗರ್, ಟಾಮ್ ಕರ್ರಾನ್, ಮಹಿಪಾಲ್ ಲೊಮ್ರೋರ್, ರಾಜನ್ ಕುಮಾರ್, ಕರಣ್ ಶರ್ಮಾ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಆಕಾಶ್ ದೀಪ್, ಸೌರವ್ ಚೌಹಾಣ್, ಹಿಮಾಂಶು ಶರ್ಮಾ, ಸ್ವಪ್ನಿಲ್ ಸಿಂಗ್, ವೈಶಾಕ್ ವಿಜಯ್ ಕುಮಾರ್, ರಜತ್ ಪಾಟಿದಾರ್.
ಕಳೆದ ಆವೃತ್ತಿಯಲ್ಲಿ ಆರ್ ಸಿಬಿ ಪ್ರದರ್ಶನ
ಆರ್‌ಸಿಬಿ ಹಿಂದಿನ 2023ರ ಐಪಿಎಲ್ ಆವೃತ್ತಿಯಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿತ್ತು. ಅವರು 14 ಪಂದ್ಯಗಳಲ್ಲಿ ಕೇವಲ 7 ಪಂದ್ಯಗಳನ್ನು ಮಾತ್ರ ಗೆದ್ದಿದ್ದರು. ವಿರಾಟ್ ಕೊಹ್ಲಿ ಉತ್ತಮವಾಗಿ ರನ್ ಗಳಿಸಿದೇ ಇದ್ದದ್ದು ತಂಡಕ್ಕೆ ಹಿನ್ನಡೆಯಾಗಿತ್ತು. ಆದರೆ ಈ ಬಾರಿ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಆರ್ ಸಿಬಿ ಬ್ಯಾಟಿಂಗ್ ಬಲ ಹೆಚ್ಚಾಗಿದೆ.












Click it and Unblock the Notifications