Vande Bharat Express: ಬೆಂಗಳೂರು-ಚೆನ್ನೈ ವಂದೇ ಭಾರತ್ ಸೇವೆ ನಾಳೆಯಿಂದ ಆರಂಭ
ಬೆಂಗಳೂರು ಮಾರ್ಚ್ 13: ಮೈಸೂರು-ಚೆನ್ನೈ ನೂತನ ವಂದೇ ಭಾರತ್ ರೈಲು ಮಾರ್ಚ್ 14ರಿಂದ ಎಸ್‌ಎಂವಿಟಿ ಬೆಂಗಳೂರು-ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣದ ನಡುವೆ ವಾಣಿಜ್ಯ ಸಂಚಾರ ಆರಂಭಿಸಲಿದೆ. ಇದರ ದರವನ್ನು ನೈಋತ್ಯ ರೈಲ್ವೆ ನಿಗಧಿಪಡಿಸಿದೆ.
ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್-ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣದ ನಡುವೆ (353 ಕಿ.ಮೀ) ಚೇರ್‌ಕಾರ್ 985, ಎಕ್ಸಿಕ್ಯೂಟಿವ್ ಕ್ಸಾನ್‌ಗೆ 1855 ರೂ. ನಿಗದಿಸಲಾಗಿದೆ. ಎಸ್‌ಎಂವಿಟಿ-ಕಟ್ಪಾಡಿ ರೈಲ್ವೆ ಸ್ಟೇಷನ್ (223 ಕಿಮೀ) ನಡುವೆ ಚೇರ್‌ಕಾರ್ 765 ರೂ, ಎಕ್ಸಿಕ್ಯೂಟಿವ್ ಕ್ಲಾಸ್ 1420 ರೂಪಾಯಿ ದರವಿದೆ. ಎಸ್‌ಎಂವಿಟಿ-ಕೃಷ್ಣರಾಜಪುರಂ (5 ಕಿ.ಮೀ) ಚೇರ್‌ಕಾರ್‌ಗೆ 365 ರೂಪಾಯಿ, ಎಕ್ಸಿಕ್ಯೂಟಿವ್ ಕ್ಲಾಸ್‌ಗೆ 690 ನಿಗದಿಸಲಾಗಿದೆ.

ಮೈಸೂರಿನಲ್ಲಿ ನಡೆಯುತ್ತಿರುವ ರೈಲ್ವೆ ನಿರ್ವಹಣಾ ಕಾಮಗಾರಿ ಪೂರ್ಣಗೊಳ್ಳುವವರೆಗೆ ಹೊಸ ವಂದೇ ಭಾರತ್ ರೈಲು ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣದ ನಡುವೆ ಮಾತ್ರ ಸಂಚರಿಸಲಿದೆ. ಬಳಿಕ ಏಪ್ರಿಲ್ ಐದರಿಂದ ಈ ರೈಲು ಮೈಸೂರಿನವರೆಗೆ ವಿಸ್ತರಣೆಯಾಗಲಿದೆ.
ಸದ್ಯ ಓಡುತ್ತಿರುವ ಮೈಸೂರು-ಚೆನ್ನೈ ವಂದೇ ಭಾರತ್ ಶೇ.85-90ರಷ್ಟು ಪ್ರಯಾಣಿಕರಿಂದ ಭರ್ತಿ ಆಗುತ್ತಿದೆ. ಇದೇ ಮಾರ್ಗದಲ್ಲಿ ಎರಡನೇ ವಂದೇ ಭಾರತ್ ರೈಲಿಗೆ ಚಾಲನೆ ದೊರೆತಿದೆ. ಇನ್ನೂ ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್ ರೈಲಿನ ಸಂಚಾರಕ್ಕೂ ಅವರು ಚಾಲನೆ ನೀಡಿದರು.

ನಾಗವಾರ ಬಳಿಯ ಥಣಿಸಂದ್ರದಲ್ಲಿ 270 ಕೋಟಿ ವೆಚ್ಚದಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳ ನಿರ್ವಹಣೆ ಮತ್ತು ದುರಸ್ತಿ ಕೇಂದ್ರ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿತು. ಜೊತೆಗೆ ಸರ್ ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣ ಹಾಗೂ ಬಂಗಾರಪೇಟೆ ನಿಲ್ದಾಣದಲ್ಲಿ ತಲಾ ಒಂದು ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಅನಾವರಣಗೊಂಡವು. ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯಡಿ ಬೆಂಗಳೂರು ವಿಭಾಗ ವ್ಯಾಪ್ತಿಯಲ್ಲಿ 40 ಮಳಿಗೆಗಳಿಗೆ ಮೋದಿ ಮೋದಿ ವರ್ಚುವಲ್ ಮೂಲಕ ಚಾಲನೆ ಕೊಟ್ಟರು.
ರಾಜ್ಯದ ಮೂರು ಹೊಸ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ರಾಜ್ಯದ ಮೂರು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಿದರು.
ಬೆಂಗಳೂರು-ಕಲಬುರಗಿ ಹಾಗೂ ಮೈಸೂರು-ಚೆನ್ನೈ ಮಾರ್ಗಗಳ ನಡುವೆ ಸಂಚರಿಸಲಿರುವ ಎರಡು ಹೊಸ ವಂದೇ ಭಾರತ್ ರೈಲುಗಳಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿಸಿದರು. ಅಲ್ಲದೇ, ಮಂಗಳೂರು ಸೆಂಟ್ರಲ್‌ಗೆ ವಿಸ್ತರಣೆಗೊಂಡ ತಿರುವನಂತಪುರಂ-ಕಾಸರಗೋಡು ವಂದೇ ಭಾರತ್‌ಗೂ ಚಾಲನೆ ನೀಡಿದರು. ಇದರಿಂದಾಗಿ ಕರ್ನಾಟಕದಲ್ಲಿ ಒಟ್ಟು ವಂದೇ ಭಾರತ್ ರೈಲುಗಳ ಸಂಖ್ಯೆ ಎಂಟಕ್ಕೆ ಏರಿದಂತಾಗಿದೆ.
ಗುಜರಾತ್‌ನ ಅಹಮದಾಬಾದ್‌ನಿಂದ ಬೆಳಿಗ್ಗೆ 9.40ಕ್ಕೆ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿಸುತ್ತಿದ್ದಂತೆ, ನಿಲ್ದಾಣಗಳಲ್ಲಿದ್ದ ಸಾರ್ವಜನಿಕರು, ಕಾರ್ಯಕರ್ತರು 'ವಂದೇ ಭಾರತ್, ವಂದೇ ಮಾತಾಕೀ ಜೂ'ಎಂದು ಘೋಷಣೆ ಕೂಗಿದರು. ಕಲಬುರಗಿ ರೈಲು ನಿಲ್ದಾಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಇತರ ನಾಯಕರು ಹಾಜರಿದ್ದರು. ಇದೇ ವೇಳೆ, ನೈಋತ್ಯ ರೈಲ್ವೆ ವ್ಯಾಪ್ತಿಯ 5,142 ಕೋಟಿ ಯೋಜನೆಗಳಿಗೂ ಮೋದಿ ಚಾಲನೆ ನೀಡಿದರು.












Click it and Unblock the Notifications