Mysore Flight Cancellation: ಮೈಸೂರು ವಿಮಾನ ಪ್ರಯಾಣಿಕರಿಗೆ ಬಿಗ್ ಶಾಕ್ ಕೊಟ್ಟ ಏರ್‌ಲೈನ್ಸ್!
ನೀವೇನಾದರೂ ವಿಮಾನ ಪ್ರಯಾಣಿಕರಾಗಿದ್ದರೆ ಸ್ವಲ್ಪ ನಿಲ್ಲಿ. ಯಾಕೆಂದರೆ ವಿಮಾನ ಪ್ರಯಾಣಿಕರಿಗೆ ಏರ್‌ಲೈನ್ಸ್ ಬಿಗ್ ಶಾಕ್ ಕೊಟ್ಟಿದೆ. ಮಂಡಕಳ್ಳಿಯಲ್ಲಿರುವ ಮೈಸೂರು ವಿಮಾನ ನಿಲ್ದಾಣದಿಂದ ಅನೇಕ ಕಡೆಗಳಿಗೆ ತೆರಳುವ ವಿಮಾನ ಸಂಚಾರ ಸ್ಥಿಗಿತಗೊಳಿಸಲಾಗಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.
ಹೌದು... ಹೈದರಾಬಾದ್-ಮೈಸೂರು- ಹೈದರಾಬಾದ್ ಮತ್ತು ಚೆನ್ನೈ-ಮೈಸೂರು- ಚೆನ್ನೈ ಮಾರ್ಗದಲ್ಲಿ ಇಂಡಿಗೋ ವಿಮಾನಗಳು ಕಾರ್ಯನಿರ್ವಹಿಸುವುದನ್ನು ಹೊರತುಪಡಿಸಿ, ಇತರ ಮಾರ್ಗಗಳಲ್ಲಿನ ವಿಮಾನಗಳ ಕಾರ್ಯವರಣೆಯನ್ನು ಏರ್‌ಲೈನ್ಸ್‌ಗಳು ಸ್ಥಗಿತಗೊಳಿಸಿವೆ. ಈ ಬಗ್ಗೆ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಜೆಆರ್ ಅನೂಪ್ ಮಾಹಿತಿ ಹಂಚಿಕೊಂಡಿದ್ದಾರೆ.

ಹೈದಾರಾಬಾದ್‌ನಿಂದ ಮೈಸೂರಿಗೆ ಮಧ್ಯಾಹ್ನ 12.30ಕ್ಕೆ ಆಗಮಿಸುತ್ತದೆ ಮತ್ತು ಮಧ್ಯಾಹ್ನ 1.15ಕ್ಕೆ ಹೈದರಾಬಾದ್‌ಗೆ ಹೊರಡುತ್ತದೆ. ಚೆನ್ನೈ ವಿಮಾನವು ಇಲ್ಲಿ ಸಂಜೆ 6.30ಕ್ಕೆ ಬಂದಿಳಿಯುತ್ತದೆ ಮತ್ತು ರಾತ್ರಿ 7.40ಕ್ಕೆ ಚೆನ್ನೈಗೆ ಹೊರಡುತ್ತದೆ.
ಯಾವೆಲ್ಲ ಸ್ಥಳಗಳಿಗೆ ವಿಮಾನಗಳ ಹಾರಾಟ ರದ್ದು?
ಈ ಹಿಂದೆಯೇ ಕೊಚ್ಚಿ ಮತ್ತು ಗೋವಾಕ್ಕೆ ವಿಮಾನ ಸೇವೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಹುಬ್ಬಳ್ಳಿ, ಬೆಳಗಾವಿ ಮತ್ತು ಕಲಬುರಗಿಗೆ ಒಂದು ವಾರದ ಹಿಂದೆ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಕೊಚ್ಚಿ ಗೋವಾ ಮತ್ತು ಬೆಳಗಾವಿ ಮಾರ್ಗಗಳಲ್ಲಿ ಸೇವೆ ಒದಗಿಸಲು ಎಟಿಆರ್ ವಿಮಾನಗಳನ್ನು ಹೊಂದಿರುವ ವಿರ್ವಾಹಕರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ.
ಸದ್ಯ ಮೈಸೂರು ನಿಲ್ದಾಣವು ಆರು ಮಾರ್ಗಗಳಿಗೆ ಬದಲಾಗಿ ಕೇವಲ ಹೈದರಾಬಾದ್, ಚೆನ್ನೈ ಮಾರ್ಗಗಳಿಗೆ ಸೇವೆ ನೀಡಲು ಮಾತ್ರ ಬಳಕೆಯಾಗುತ್ತಿದೆ. ಸೋಮವಾರ, ಬುಧವಾರ, ಶುಕ್ರವಾರ, ಭಾನುವಾರ ಸೇರಿದಂತೆ ವಾರಕ್ಕೆ ನಾಲ್ಕು ದಿನ ಮೂರು ಹಾಗೂ ಇನ್ನುಳಿದ ದಿನ ಕೇವಲ ಎರಡು ವಿಮಾನಗಳು ನಿಲ್ದಾಣಕ್ಕೆ ಬಂದು ಹೋಗುತ್ತಿವೆ. ಎರಡು ವಿಮಾನ ಹೈದರಾಬಾದ್ ಹಾಗೂ ಒಮದು ಚೆನ್ನೈ ಸೇವೆ ನೀಡುತ್ತಿವೆ. ಈ ಹಿಂದೆ ಮೈಸೂರು ನಿಲ್ದಾಣದಿಂದ ಹುಬ್ಬಳ್ಳಿ, ಕೊಚ್ಚಿ, ಬೆಂಗಳೂರು, ಗೋವಾ, ಚೆನ್ನೈ ಹಾಗೂ ಹೈದರಬಾದ್‌ಗೆ ಸೇವೆ ನೀಡಲಾಗುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಕ್ರಮೇಣ ಹುಬ್ಬಳ್ಳಿ, ಕೊಚ್ಚಿ, ಬೆಂಗಳೂರು, ಗೋವಾ ಮಾರ್ಗಗಳು ರದ್ದಾಗಿವೆ.

ಮೈಸೂರು ಬೆಂಗಳೂರು ನಡುವೆ ಎಕ್ಸ್‌ಪ್ರೆಸ್ ವೇ ನಿರ್ಮಾಣವಾದ ನಂತರ ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ಬೆಲೆಯಲ್ಲಿ ಸೇವೆ ಪಡೆಯಬಹುದು ಎಂಬ ಕಾರಣಕ್ಕೆ ರಸ್ತೆ ಮಾರ್ಗವನ್ನೇ ಹೆಚ್ಚು ಮಂದಿ ಬಳಕೆ ಮಾಡಲು ಶುರು ಮಾಡಿದ್ದರಿಂದ ಈ ಮಾರ್ಗದಲ್ಲಿ ವಿಮಾನಯಾನ ರದ್ದಾಯಿತು.
2022ರ ಸೆಪ್ಟೆಂಬರ್ ತಿಂಗಳಲ್ಲಿ 16,539 ಪ್ರಯಾಣಿಕರು ಮೈಸೂರು ವಿಮಾನ ನಿಲ್ದಾಣದಿಂದ ಸೇವೆ ಪಡೆದುಕೊಂಡಿದ್ದರೆ, 2023ರ ಸೆಪ್ಟೆಂಬರ್ ತಿಂಗಳಲ್ಲಿ ಈ ಸಂಖ್ಯೆ 8,848ಕ್ಕೆ ಇಳಿಕೆಯಾಗಿದೆ. ಈ ಮೂಲಕ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.46.5ರಷ್ಟು ಇಳಿಮುಖವಾಗಿದೆ. ಮಾತ್ರವಲ್ಲದೇ ಈ ತಿಂಗಳಲ್ಲಿ ಕಳೆದ ವರ್ಷ 422 ಬಾರಿ ವಿಮಾನಗಳು ಹಾರಾಟ ನಡೆಸಿದ್ದರೆ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೇವಲ 116 ಬಾರಿ ನಾನಾ ಮಾರ್ಗಗಳಲ್ಲಿ ವಿಮಾನಗಳು ಹಾರಾಟ ನಡೆಸಿವೆ.
ಕೆಲವೊಂದು ಯೋಜನೆಗಳಂತೆ ಕೇಂದ್ರ ಸರಕಾರ ನೀಡುವ ಸಬ್ಸಿಡಿಯಿಂದ ರಿಯಾಯಿತಿ ದರದಲ್ಲಿ ರೂಟ್‌ಗಳನ್ನು ಆಪರೇಟ್ ಮಾಡಲಾಗುತ್ತಿತ್ತು. ಆ ಸಬ್ಸಿಡಿ ಅವಧಿ ಪೂರ್ಣಗೊಂಡಿದ್ದರಿಂದ ಸೇವೆ ರದ್ದಾಗಿದೆ. ಸರಕಾರ ಆ ಸೌಲಭ್ಯವನ್ನು ಬೇರೊಂದು ಮಾರ್ಗಗಳಿಗೆ ನೀಡಿದೆ ಎಂದು ಮೈಸೂರು ಏಪೋರ್ಟ್ ನಿರ್ದೇಶಕ ಜಿ.ಆರ್. ಅನೂಪ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ,' ಸರ್ಕಾರ ನೀಡುತ್ತಿದ್ದ ಸಬ್ಸಿಡಿ ಸ್ಥಗಿತ, ಏರ್‌ಕ್ರಾಪ್ಸ್‌ಗಳ ಸಂಖ್ಯೆ ಇಳಿಮುಖ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಮೈಸೂರಿನಲ್ಲಿ ಕೆಲ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ. ಮೊದಲೇ ಕಾರ್ಯಚರಣೆ ಮಾಡುತ್ತಿದ್ದ ಮಾರ್ಗಗಳಲ್ಲಿ ಮತ್ತೆ ಕಾರ್ಯಾರಂಭ ಮಾಡಲು ಮತ್ತು ಕಾರ್ಯನಿರ್ವಹಿಸಲು ಅವರಿಗೆ ಅಗತ್ಯವಿರುವ ಸಬ್ಸಿಡಿಯನ್ನು ಒದಗಿಸಬೇಕು' ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದರು.












Click it and Unblock the Notifications