Vande Bharat Special Trains: ಚೆನ್ನೈ-ಕೊಯಮತ್ತೂರು ವಿಶೇಷ ವಂದೇ ಭಾರತ್ ರೈಲುಗಳಿವು-ಸಮಯ, ಮಾರ್ಗಗಳ ವಿವರ
ಈಗಾಗಲೇ ದೇಶದ ಬಹುತೇಕ ಭಾಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರಸ್ ರೈಲುಗಳು ಸಂಚರಿಸುತ್ತಿವೆ. ಇತ್ತೀಚೆಗಷ್ಟೇ ಬೆಂಗಳೂರಿನಿಂದ ಕೊಯಮತ್ತೂರಿಗೆ ಈ ರೈಲು ಸೇವೆಯನ್ನು ವಿಸ್ತರಿಸಲಾಗಿದ್ದು, ಇದೀಗ ಎರ್ನಾಕುಲಂವರೆಗೂ ವಿಸ್ತರಣೆ ಮಾಡಲಾಗುತ್ತದೆ ಅಂತಲೂ ಇಲಾಖೆ ತಿಳಿಸಿದೆ. ಅಷ್ಟೇ ಅಲ್ಲದೆ ಸೇಲಂ ರೈಲ್ವೆ ವಿಭಾಗವು ಚೆನ್ನೈ ಸೆಂಟ್ರಲ್-ಕೊಯಮತ್ತೂರು ಜಂಕ್ಷನ್‌ಗೆ ವಿಶೇಷ ವಂದೇ ಭಾರತ್ ರೈಲುಗಳ ಸಂಪರ್ಕ ಕಲ್ಪಿಸಲು ಮುಂದಾಗಿದೆ. ಹಾಗಾದರೆ ರೈಲು ಸೇವೆಯ ಸಮಯ, ದಿನಾಂಕಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ದಕ್ಷಿಣ ರೈಲ್ವೆಯು ಚೆನ್ನೈನಿಂದ ಕೊಯಮತ್ತೂರಿಗೆ ವಿಶೇಷ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸುತ್ತಿರುವುದರಿಂದ ಪ್ರಯಾಣ ಉತ್ಸಾಹಿಗಳಿಗೆ ಉತ್ತಮ ಸುದ್ದಿ ಸಿಕ್ಕಂತಾಗಿದೆ. ವಂದೇ ಭಾರತ್ ರೈಲುಗಳು ರಾಷ್ಟ್ರವ್ಯಾಪಿಯಾಗಿ ಕಾರ್ಯನಿರ್ವಹಿಸುತ್ತಿವೆ. ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 2019ರಲ್ಲಿ ಪ್ರಾರಂಭವಾಗಿದ್ದು, ಅಂದಿನಿಂದ ಅವುಗಳ ಅಂಖ್ಯೆ 82ಕ್ಕೆ ಏರಿದೆ. ಈಗ ಭಾರತೀಯ ರೈಲ್ವೆಯು ಸೀಮಿತ ವಾಯು ಸಂಪರ್ಕದೊಂದಿಗೆ ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸೇವೆಗಳನ್ನು ಪರಿಚಯಿಸಲು ಯೋಜಿಸುತ್ತಿದೆ.

ಚೆನ್ನೈ-ಕೊಯಮತ್ತೂರು ವಿಶೇಷ ವಂದೇ ಭಾರತ್ ರೈಲುಗಳು
ವರದಿಗಳ ಪ್ರಕಾರ, ಸೇಲಂ ರೈಲ್ವೆ ವಿಭಾಗವು ಚೆನ್ನೈ ಸೆಂಟ್ರಲ್-ಕೊಯಮತ್ತೂರು ಜಂಕ್ಷನ್ ರೈಲು ನಂಬರ್ 06035 ಬೆಳಗ್ಗೆ 7:10ಕ್ಕೆ ಹೊರಡಲಿದ್ದು, ಅದೇ ದಿನ ಮಧ್ಯಾಹ್ನ 2:15ಕ್ಕೆ ಕೊಯಮತ್ತೂರು ಜಂಕ್ಷನ್‌ಗೆ ಆಗಮಿಸುತ್ತದೆ. ಬಳಿಕ ಕೊಯಮತ್ತೂರಿನಿಂದ ಅದೇ ದಿನ ಮಧ್ಯಾಹ್ನ 3:03ಕ್ಕೆ ಹೊರಟು ರಾತ್ರಿ 9:50ಕ್ಕೆ ಚೆನ್ನೈ ತಲುಪಲಿದೆ. ಈ ರೈಲು ಮಾರ್ಚ್ 5 ಮತ್ತು 12ರಂದು ಕಾರ್ಯನಿರ್ವಹಿಸಲಿದೆ. ಈ ರೈಲು ಕಟ್ಟಾಡಿ, ಜೋಕಾರ್‌ಪೆಟ್ಟೈ, ಸೇಲಂ, ಈರೋಡ್ ಮತ್ತು ತಿರುಪುರದಲ್ಲಿ ನಿಲುಗಡೆಯಾಗಲಿದೆ.
ಯಾವ್ಯಾವ ಮಾರ್ಗಗಳಲ್ಲಿ ವಿಶೇಷ ವಂದೇ ಭಾರತ್ ಸಂಚಾರ?
* ನಾಗರ್‌ಕೋಯಿಲ್-ಚೆನ್ನೈ: ನಾಗರ್‌ಕೋಯಿಲ್-ಚೆನ್ನೈ ವಂದೇ ಭಾರತ್ ವಿಶೇಷ ರೈಲು ಜನವರಿ 4, 2024ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೂ, ಮಾರ್ಚ್ 29, 2024ರವರೆಗೆ ಚಲಿಸುತ್ತದೆ. ಇದು 8 ಗಂಟೆ 55 ನಿಮಿಷಗಳಲ್ಲಿ 724 ಕಿಲೋ ಮೀಟರ್ ದೂರವನ್ನು ಕ್ರಮಿಸುತ್ತದೆ.
* ಅಮೃತಸರ-ನವದೆಹಲಿ: ಅಮೃತಸರ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಜನವರಿ 6, 2024ರಂದು ಅಮೃತಸರ ಜಂಕ್ಷನ್‌ನಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು ಅಮೃತಸರವನ್ನು ದೆಹಲಿ ಜಂಕ್ಷನೊಂದಿಗೆ ಸಂಪರ್ಕಿಸುತ್ತದೆ. ಇದು 447 ಕಿಲೋ ಮೀಟರ್ ದೂರವನ್ನು ಕ್ರಮಿಸುತ್ತದೆ.
* ಕತ್ರಾ-ನವದೆಹಲಿ: ಕತ್ರಾ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಜನವರಿ 4, 2024ರಂದು ಕಾರ್ಯಾಚರಣೆ ಪ್ರಾರಂಭಿಸಿತು. ಇದು 655 ಕಿಲೋ ಮೀಟರ್ ದೂರವನ್ನು ಕ್ರಮಿಸುತ್ತದೆ. ನಿಲ್ದಾಣಗಳಲ್ಲಿ ಜಮ್ಮು, ಲುಧಿಯಾನ ಮತ್ತು ಅಂಬಾಲಾ ಕ್ಯಾಂಟ್ ಸೇರಿವೆ.
* ಕೊಯಮತ್ತೂರು-ಬೆಂಗಳೂರು: ಕೊಯಮತ್ತೂರು-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಜನವರಿ 1, 2024ರಂದು ಕೊಯಮತ್ತೂರು ಜಂಕ್ಷನ್‌ನಿಂದ ಕಾರ್ಯಾಚರಣೆ ಪ್ರಾರಂಭಿಸಿತು. ಇದು 374 ಕಿ.ಮೀ. ದೂರವನ್ನು ಕ್ರಮಿಸುತ್ತದೆ. ಇದು ಹೊಸೂರು, ಸೇಲಂ, ಜಂಕ್ಷನ್, ಈರೋಡ್ ಜಂಕ್ಷನ್ ಮತ್ತು ತಿರುಪ್ಪೂರ್ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.
* ಜಲ್ನಾ-ಮುಂಬೈ CSMT: ಜಲ್ನಾ-ಮುಂಬೈ CSMT ವಂದೇ ಭಾರತ್ ಎಕ್ಸ್‌ಪ್ರೆಸ್ ಜನವರಿ 2, 2024ರಂದು ಜಲ್ನಾದಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು ಜಲ್ನಾವನ್ನು ಮುಂಬೈನೊಂದಿಗೆ ಸಂಪರ್ಕಿಸಲಿದ್ದು, 433 ಕಿಲೋ ಮೀಟರ್ ದೂರವನ್ನು ಒಳಗೊಂಡಿದೆ. ಔರಂಗಬಾದ್, ನಾಸಿಕ್ ರಸ್ತೆ, ಕಲ್ಯಾಣ್ ಜಂಕ್ಷನ್ ಮತ್ತು ಥಾಣೆ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆ ಆಗಲಿದೆ ಎನ್ನುವ ಮಾಹಿತಿ ಇದೆ.












Click it and Unblock the Notifications