ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಕೆಲಸ ಕಳೆದುಕೊಂಡರೆ ಸಿಗುವ ಹಣ ಎಷ್ಟು?

ಕ್ಯಾಲಿಫೋರ್ನಿಯಾ, ಏ. 27: ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸಿದ ಬಳಿಕ ಈಗ ಅನೇಕ ಜನರು ಅಲ್ಲಿನ ಸಿಇಒ ಸ್ಥಾನದ ಬಗ್ಗೆ ಕುತೂಹಲದ ಕಣ್ಣಿಟ್ಟಿದ್ದಾರೆ. ಎಲಾನ್ ಮಸ್ಕ್ ತಮಗೆ ಬೇಕಾದವರನ್ನ ಟ್ವಿಟ್ಟರ್‌ನ ಆಯಕಟ್ಟಿನ ಜಾಗದಲ್ಲಿ ಕೂರಿಸುವ ಸಾಧ್ಯತೆ ಇದೆ. ಹೀಗಾಗಿ, ಸಿಇಒ ಸ್ಥಾನ ಬದಲಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಈಗಿನ ಸಿಇಒ ಪರಾಗ್ ಅಗರ್ವಾಲ್ ಅವರು ಎಲಾನ್ ಮಸ್ಕ್‌ಗೆ ಟ್ವಿಟ್ಟರ್ ಮಾರಾಟವಾಗುವುದಕ್ಕೆ ಯಾವತ್ತೂ ಸ್ವಾಗತ ಮಾಡಿದವರಲ್ಲ. ಮಸ್ಕ್ ಅವರ ಪ್ರವೇಶದಿಂದ ಟ್ವಿಟ್ಟರ್ ಭವಿಷ್ಯ ಏನಾಗುತ್ತೋ ಎಂದು ಆತಂಕಗೊಂಡವರಲ್ಲಿ ಅವರೂ ಒಬ್ಬರು. ಹೀಗಾಗಿ, ತಮ್ಮ ಮೇಲೆ ಸಂಪೂರ್ಣ ವಿಶ್ವಾಸ, ನಂಬುಗೆ ಇಲ್ಲದ ಸಿಇಒವನ್ನು ಎಲಾನ್ ಮಸ್ಕ್ ಉಳಿಸಿಕೊಳ್ಳುವುದು ಅನುಮಾನ ಎಂಬ ಅಭಿಪ್ರಾಯ ದಟ್ಟವಾಗಿದೆ. ಇದಕ್ಕೆ ಇಂಬು ಕೊಡುವಂತೆ ಎಲಾನ್ ಮಸ್ಕ್ ಈ ಹಿಂದೆ ಅಮೆರಿಕದ ಪ್ರಾಧಿಕಾರಕ್ಕೆ ದಾಖಲೆಗಳನ್ನ ಸಲ್ಲಿಸುವ ವೇಳೆ, ತನಗೆ ಟ್ವಿಟ್ಟರ್‌ನ ಆಡಳಿತವರ್ಗದ ಮೇಲೆ ವಿಶ್ವಾಸ ಇಲ್ಲ ಎಂದು ತಿಳಿಸಿದ್ದರು. ಇದು ಪರೋಕ್ಷವಾಗಿ ಸಿಇಒ ಪರಾಗ್ ಅಗರ್ವಾಲ್ ಅವರನ್ನ ಉದ್ದೇಶಿಸಿ ಹೇಳಿದಂತಿತ್ತು.

ಹಾಗೆಯೇ, ಪರಾಗ್ ಅಗರ್ವಾಲ್ ಅವರು ತಮ್ಮೊಂದು ಟ್ವೀಟ್‌ನಲ್ಲಿ ತಮ್ಮ ನಿರ್ಗಮನದ ಸುಳಿವು ನೀಡಿದಂತಿತ್ತು. "ಇಡೀ ವಿಶ್ವದ ಮೇಲೆ ಪರಿಣಾಮ ಬೀರಬಲ್ಲಂತಹ ಪ್ರಸ್ತುತತೆ ಮತ್ತು ಉದ್ದೇಶ ಟ್ವಿಟ್ಟರ್‌ಗೆ ಇದೆ. ನಮ್ಮ ತಂಡಗಳ ಬಗ್ಗೆ ಬಹಳ ಹೆಮ್ಮೆ ಇದೆ. ಹಿಂದೆಂದಿಗಿಂತಲೂ ಹೆಚ್ಚು ಮುಖ್ಯವೆನಿಸುವ ಅವರ ಕೆಲಸಗಳಿಂದ ಪ್ರೇರಿತನಾಗಿದ್ದೇನೆ" ಎಂದು ತಮ್ಮ ಸಿಬ್ಬಂದಿವರ್ಗವನ್ನು ಪರಾಗ್ ಶ್ಲಾಘಿಸಿದ್ದರು. ಇದು ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿ ಮಾಡಿದ ಬೆಳವಣಿಗೆ ಆದಾಗ ಮಾಡಿದ ಟ್ವೀಟ್ ಆಗಿತ್ತು.

How much compensation Twitter CEO Parag Agrawal get if terminated

ಪರಾಗ್ ಅಗರ್ವಾಲ್ ಅವರನ್ನ ಸಿಇಒ ಸ್ಥಾನದಿಂದ ತೆಗೆದರೆ, ಮುಂದೇನು?
2021ರ ನವೆಂಬರ್‌ನಲ್ಲಿ ಪರಾಗ್ ಅಗರ್ವಾಲ್ ಅವರು ಟ್ವಿಟ್ಟರ್‌ನ ಸಿಇಒ ಹುದ್ದೆ ಪಡೆದರು. ಈ ಸ್ಥಾನ ಪಡೆದು ಒಂದು ವರ್ಷದೊಳಗೆ ಅವರನ್ನ ಕೆಲಸದಿಂದ ತೆಗೆದುಹಾಕಿದರೆ ಸಾಕಷ್ಟು ಪರಿಹಾರಗಳನ್ನ ಸಂಸ್ಥೆ ಒದಗಿಸಿ ಕಳುಹಿಸಬೇಕಾಗುತ್ತದೆ. ಅವರ ಒಂದು ವರ್ಷದ ಬೇಸಿಕ್ ಸಂಬಳ, ಕಂಪನಿಯ ಷೇರುಗಳು ಇದರಲ್ಲಿ ಒಳಗೊಂಡಿವೆ.

ಈಕ್ವಿಲಾರ್ ಎಂಬ ಕಾರ್ಪೊರೇಟ್ ಲೀಡರ್‌ಶಿಪ್ ಸಲ್ಯೂಷನ್ಸ್ ಸಂಸ್ಥೆ ಮಾಡಿರುವ ಅಂದಾಜು ಪ್ರಕಾರ ಪರಾಗ್ ಅಗರ್ವಾಲ್ ಅವರನ್ನ ಸೇವೆಯಿಂದ ಅಮಾನತುಗೊಳಿಸಿದರೆ ಅವರಿಗೆ 42 ಮಿಲಿಯನ್ ಡಾಲರ್ ಹಣ, ಅಂದರೆ ಸುಮಾರು 322 ಕೋಟಿ ರೂಪಾಯಿ ಹಣವನ್ನ ಪರಿಹಾರವಾಗಿ ಪಡೆಯಬಹುದು ಎನ್ನಲಾಗಿದೆ.

ಪರಾಗ್ ಅಗರ್ವಾಲ್ ಅವರ ಒಂದು ವರ್ಷದ ಸಂಬಳ 10 ಲಕ್ಷ ಡಾಲರ್, ಅಂದರೆ 7.6 ಕೋಟಿ ರೂ ಇದೆ. ಬೋನಸ್ ಇತ್ಯಾದಿ ಸೇರಿದರೆ ಸಂಬಳ ಮೊತ್ತ ಇನ್ನೂ ಹೆಚ್ಚಾಗುತ್ತದೆ. ಹಾಗೆಯೇ, 12.5 ಮಿಲಿಯನ್ (92 ಕೋಟಿ ರೂ) ಮೌಲ್ಯದ ಷೇರುಗಳನ್ನೂ ಕೊಡಲಾಗಿದೆ.

ಪರಾಗ್ ಅಗರ್ವಾಲ್ ಹಿನ್ನೆಲೆ:
37 ವರ್ಷದ ಪರಾಗ್ ಅಗರವಾಲ್ ಅವರು ರಾಜಸ್ಥಾನದ ಅಜ್ಮೇರ್‌ನವರಾಗಿದ್ದಾರೆ. ತಂದೆ ವಿಜ್ಞಾನಿಯಾದರೆ ತಾಯಿ ಪ್ರೊಫೆಸರ್. ಐಐಟಿಯಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆದು ಅಮೆರಿಕದ ಸ್ಟಾನ್‌ಫೋರ್ಡ್ ವಿವಿಯಲ್ಲಿ ಎಂಎಸ್ ಮತ್ತು ಪಿಎಚ್‌ಡಿ ಮಾಡಿದ್ದಾರೆ.

How much compensation Twitter CEO Parag Agrawal get if terminated

ಮೈಕ್ರೋಸಾಫ್ಟ್, ಯಾಹೂ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡಿ 2011ರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಅಗಿ ಟ್ವಿಟ್ಟರ್ ಸೇರಿದರು. ಕ್ಷಿಪ್ರಗತಿಯಲ್ಲಿ ವೃತ್ತಿಯಲ್ಲಿ ಬೆಳೆದ ಅವರು 2017ರಲ್ಲಿ ಸಿಟಿಒ ಆದರು. ಅದಾಗಿ ಎರಡೇ ವರ್ಷದಲ್ಲಿ ಅವರನ್ನ ಪ್ರಾಜೆಕ್ಟ್ ಬ್ಲೂಸ್ಕೈ (Project Blue Sky) ಎಂಬ ಬಹಳ ಮುಖ್ಯ ಯೋಜನೆಯ ನೇತೃತ್ವ ಕೊಡಲಾಯಿತು. 2021ರಲ್ಲಿ ಟ್ವಿಟ್ಟರ್ ಸಂಸ್ಥಾಪಕ ಜ್ಯಾಕ್ ಡೋರ್ಸೇ ಅವರು ಸಿಇಒ ಸ್ಥಾನದಿಂದ ನಿರ್ಗಮಿಸಿದಾಗ ಪರಾಗ್ ಅಗರವಾಲ್ ಅವರಿಗೆ ಆ ಹುದ್ದೆ ಸಿಕ್ಕಿತು. ಪರಾಗ್ ಅಗರ್ವಾಲ್ ಅವರು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ಜ್ಯಾಕ್ ಡೋರ್ಸೀ ನಂತರ ಟ್ವಿಟ್ಟರ್‌ನ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಪರಾಗ್ ಅಗರ್ವಾಲ್ ಅವರೆಯೇ. ಟ್ವಿಟ್ಟರ್ ಜನಬಳಗ ಹೆಚ್ಚಾಗಲು ಮತ್ತು ಆ್ಯಡ್‌ಗಳನ್ನ ತರಲು ಪರಾಗ್ ಬಹಳ ಶ್ರಮಿಸಿದ್ದಾರೆ. ಇದೀಗ ಟ್ವಿಟ್ಟರ್‌ನಲ್ಲಿ 21 ಕೋಟಿ ಬಳಕೆದಾರರಿದ್ದಾರೆಂಬ ಮಾಹಿತಿ ಇದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+