ಸ್ಟೇಷನ್‌ನಲ್ಲಿ ಆಹಾರ, ಪುಸ್ತಕ ಎಲ್ಲವೂ ಸಿಗುತ್ತವೆ... ಆದ್ರೆ ಮೆಡಿಕಲ್‌ ಮಾತ್ರ ಯಾಕಿಲ್ಲ?

ಭಾರತೀಯ ರೈಲ್ವೆ ದೇಶದ ಅತಿದೊಡ್ಡ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿದೆ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ರೈಲ್ವೆಗಳಲ್ಲಿ ಸಂಚರಿಸುತ್ತಾರೆ. ರೈಲು ನಿಲ್ದಾಣಗಳಲ್ಲಿ ಆಹಾರ, ಪಾನೀಯ, ಪುಸ್ತಕ ಸೇರಿದಂತೆ ಅನೇಕ ಅಗತ್ಯ ವಸ್ತುಗಳು ಸಿಗುತ್ತವೆ. ಆದರೆ ಒಂದು ವಿಷಯವನ್ನು ನೀವು ಇಲ್ಲಿ ನೀವು ಗಮನಿಸಲೆಬೇಕು... ಹೆಚ್ಚಿನ ರೈಲು ನಿಲ್ದಾಣಗಳಲ್ಲಿ ಪ್ರತ್ಯೇಕ ಮೆಡಿಕಲ್ ಸ್ಟೋರ್್ಗಳು ಕಾಣಿಸುವುದಿಲ್ಲ. ಮೆಡಿಕಲ್ ಸ್ಟೋರ್‌ಗಳು ಏಕೆ ಕಾಣಿಸುವುದಿಲ್ಲ? ಇದರ ಹಿಂದಿನ ಕಾರಣ ಏನು ಎಂಬ ಕುತುಹಲ ಹಲವರಿಗೆ ಇದ್ದೇ ಇರುತ್ತದೆ.

ವಾಸ್ತವವಾಗಿ, ಹಿಂದಿನ ರೈಲ್ವೆ ನಿಯಮಗಳ ಪ್ರಕಾರ ನಿಲ್ದಾಣಗಳಲ್ಲಿ ಔಷಧಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುತ್ತಿತ್ತು. 2001ರಲ್ಲಿ ರೈಲ್ವೆ ಮಂಡಳಿಯು ವೈದ್ಯಕೀಯ ಸೌಲಭ್ಯವಿರುವ ನಿಲ್ದಾಣಗಳಲ್ಲಿ ಸುಮಾರು 108 ಚದರ ಅಡಿ ಜಾಗವನ್ನು ಮೆಡಿಕಲ್ ಸ್ಟೋರ್‌ಗಳಿಗೆ ಮೀಸಲಿಡಬಹುದೆಂದು ಸೂಚಿಸಿತ್ತು.

Indian Railway

ಹಳೆಯ ನೀತಿಯಲ್ಲಿ ಮೆಡಿಕಲ್ ಸ್ಟೋರ್‌ಗಳಿಗೆ ಅವಕಾಶ ಇತ್ತು

ವಾಸ್ತವಿಕವಾಗಿ, ಹಿಂದಿನ ಭಾರತೀಯ ರೈಲ್ವೆ ನಿಯಮಗಳ ಪ್ರಕಾರ ನಿಲ್ದಾಣಗಳಲ್ಲಿ ಔಷಧಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುತ್ತಿತ್ತು. 2001ರಲ್ಲಿ ರೈಲ್ವೆ ಮಂಡಳಿಯು ವೈದ್ಯಕೀಯ ಸೌಲಭ್ಯವಿರುವ ನಿಲ್ದಾಣಗಳಲ್ಲಿ ಸುಮಾರು 108 ಚದರ ಅಡಿ ಜಾಗವನ್ನು ಮೆಡಿಕಲ್ ಸ್ಟೋರ್‌ಗಳಿಗೆ ಮೀಸಲಿಡಬಹುದೆಂದು ಸೂಚಿಸಿತ್ತು. ಇದಲ್ಲದೆ, ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದ ಪುಸ್ತಕ ಮಳಿಗೆಗಳಲ್ಲಿ ಸಣ್ಣ ಪ್ರಮಾಣದ ಔಷಧಿ ವಿಭಾಗವನ್ನು ಆರಂಭಿಸಲು ಅವಕಾಶವೂ ಇತ್ತು. ಅಂದರೆ, ಒಂದು ಕಾಲದಲ್ಲಿ ರೈಲು ನಿಲ್ದಾಣಗಳಲ್ಲಿ ಮೆಡಿಕಲ್ ಸ್ಟೋರ್‌ಗಳನ್ನು ತೆರೆಯುವ ವ್ಯವಸ್ಥೆ ಕೊಡ ಜಾರಿಯಲ್ಲಿತ್ತು.

ಗೋಲ್ಡನ್ ಚಾರಿಯಟ್‌ನಲ್ಲಿ ಪ್ರವಾಸ ಈಗ ಮತ್ತಷ್ಟು ಅಗ್ಗ: ಐಆರ್‌ಸಿಟಿಸಿಯಿಂದ 20% ದರ ರಿಯಾಯಿತಿ
ಗೋಲ್ಡನ್ ಚಾರಿಯಟ್‌ನಲ್ಲಿ ಪ್ರವಾಸ ಈಗ ಮತ್ತಷ್ಟು ಅಗ್ಗ: ಐಆರ್‌ಸಿಟಿಸಿಯಿಂದ 20% ದರ ರಿಯಾಯಿತಿ

ಕಾಲಕ್ರಮೇಣ ಬದಲಾದ ರೈಲ್ವೆ ನೀತಿ

ಕಾಲಾನಂತರದಲ್ಲಿ ರೈಲ್ವೆ ಇಲಾಖೆಯು ತನ್ನ ನೀತಿಯನ್ನು ಬದಲಾಯಿಸಿತು. ಪ್ರತ್ಯೇಕ ಅಂಗಡಿಗಳಿಗೆ ಜಾಗ ನೀಡುವ ಬದಲು "ಮಲ್ಟಿ ಪರ್ಪಸ್ ಸ್ಟಾಲ್" (MPS) ಪರಿಕಲ್ಪನೆಯನ್ನು ಜಾರಿಗೆ ತಂದಿತು. ಹಿಂದೆ ಪುಸ್ತಕ ಮಳಿಗೆ, ಔಷಧಿ ಅಂಗಡಿ ಹಾಗೂ ಸಾಮಾನ್ಯ ವಸ್ತುಗಳ ಅಂಗಡಿಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದವು. ಇದರಿಂದ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಜಾಗ ಬಳಕೆಯಾಗುತ್ತಿತ್ತು ಮತ್ತು ಪ್ರಯಾಣಿಕರ ಮುಕ್ತ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿತ್ತು.

ಈ ಸಮಸ್ಯೆಯನ್ನು ನಿವಾರಿಸಲು ವಿವಿಧ ಸೇವೆಗಳನ್ನು ಒಂದೇ ಸ್ಥಳದಲ್ಲಿ ಒದಗಿಸುವ ಮಲ್ಟಿ ಪರ್ಪಸ್ ಸ್ಟಾಲ್‌ಗಳನ್ನು ರೈಲ್ವೆ ಪರಿಚಯಿಸಿತು. ಇದರಿಂದ ಪ್ರಯಾಣಿಕರಿಗೆ ಅಗತ್ಯ ವಸ್ತುಗಳು ಒಂದೇ ಸ್ಥಳದಲ್ಲಿ ಲಭ್ಯವಾಗುವಂತಾಯಿತು.

ಮಲ್ಟಿ ಪರ್ಪಸ್ ಸ್ಟಾಲ್‌ಗಳಲ್ಲಿ ಔಷಧಿಗಳು ಸಿಗುತ್ತವೆಯೇ?

ಹೌದು. ಮಲ್ಟಿ ಪರ್ಪಸ್ ಸ್ಟಾಲ್‌ಗಳಲ್ಲಿ ವೈದ್ಯರ ಚೀಟಿ ಅಗತ್ಯವಿಲ್ಲದ ಸಾಮಾನ್ಯ ಔಷಧಿಗಳನ್ನು ಮಾರಾಟ ಮಾಡಲು ಅನುಮತಿ ಇದೆ. ಆದರೆ ಪ್ರತ್ಯೇಕ ಮೆಡಿಕಲ್ ಸ್ಟೋರ್ ತೆರೆಯಲು ಈಗ ರೈಲ್ವೆ ವಿಶೇಷ ಜಾಗ ಮೀಸಲಿಡುವುದಿಲ್ಲ. ಇದರ ಜೊತೆಗೆ ಹಲವು ಪ್ರಮುಖ ರೈಲು ನಿಲ್ದಾಣಗಳಲ್ಲಿ ಜನ ಔಷಧಿ ಕೇಂದ್ರಗಳನ್ನು (Jan Aushadhi Kendra) ಸ್ಥಾಪಿಸುವ ಕಾರ್ಯವೂ ಹಂತ ಹಂತವಾಗಿ ನಡೆಯುತ್ತಿದೆ.

ಪ್ರವಾಸೋದ್ಯಮಕ್ಕೆ ವಂದೇ ಭಾರತ್ ಮೆರುಗು: ನೀವು ಸುಲಭವಾಗಿ ತಲುಪಬಹುದಾದ 5 ಪ್ರಮುಖ ನಗರಗಳು
ಪ್ರವಾಸೋದ್ಯಮಕ್ಕೆ ವಂದೇ ಭಾರತ್ ಮೆರುಗು: ನೀವು ಸುಲಭವಾಗಿ ತಲುಪಬಹುದಾದ 5 ಪ್ರಮುಖ ನಗರಗಳು

ದೇಶದಲ್ಲಿ ಎಷ್ಟು ರೈಲು ನಿಲ್ದಾಣಗಳಲ್ಲಿ ಮೆಡಿಕಲ್ ಸ್ಟೋರ್‌ಗಳಿವೆ?

ರೈಲ್ವೆಯ ಮಾಹಿತಿಯ ಪ್ರಕಾರ, ಪ್ರಸ್ತುತ ದೇಶದ ಕೇವಲ 21 ರೈಲು ನಿಲ್ದಾಣಗಳಲ್ಲಿ ಮಾತ್ರ ಪ್ರತ್ಯೇಕ ಮೆಡಿಕಲ್ ಸ್ಟೋರ್‌ಗಳು ಕಾರ್ಯನಿರ್ವಹಿಸುತ್ತಿವೆ.

ಪ್ರಯಾಣದ ವೇಳೆ ತುರ್ತು ಆರೋಗ್ಯ ಸಮಸ್ಯೆ ಎದುರಾದರೆ?

ರೈಲು ಪ್ರಯಾಣದ ವೇಳೆ ಪ್ರಯಾಣಿಕರು ಅಸ್ವಸ್ಥರಾದರೆ ರೈಲ್ವೆ ಇಲಾಖೆಯು ತುರ್ತು ನೆರವಿಗಾಗಿ ಹಲವು ವ್ಯವಸ್ಥೆಗಳನ್ನು ಕಲ್ಪಿಸಿದೆ. ಟಿಟಿಇ, ರೈಲು ಗಾರ್ಡ್, ಟ್ರೈನ್ ಸೂಪರಿಂಟೆಂಡೆಂಟ್ ಹಾಗೂ ಸ್ಟೇಷನ್ ಮಾಸ್ಟರ್‌ಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುವ ತರಬೇತಿ ನೀಡಲಾಗುತ್ತದೆ. ಅಲ್ಲದೆ ಸಮೀಪದ ಆಸ್ಪತ್ರೆಗಳು ಹಾಗೂ ವೈದ್ಯರ ಸಂಪರ್ಕ ವಿವರಗಳು ಎಲ್ಲಾ ಪ್ರಮುಖ ನಿಲ್ದಾಣಗಳಲ್ಲಿ ಲಭ್ಯವಿರುತ್ತವೆ. ಇದಲ್ಲದೆ, ರೈಲುಗಳಲ್ಲೂ ಹಾಗೂ ನಿಲ್ದಾಣಗಳಲ್ಲೂ ಪ್ರಾಥಮಿಕ ಚಿಕಿತ್ಸಾ ಕಿಟ್‌ಗಳನ್ನು ಇರಿಸಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ತಕ್ಷಣದ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.

ಏಕೆ ಮೆಡಿಕಲ್ ಸ್ಟೋರ್‌ಗಳು ಕಡಿಮೆಯಾದವು?

ರೈಲು ನಿಲ್ದಾಣಗಳಲ್ಲಿ ಮೆಡಿಕಲ್ ಸ್ಟೋರ್‌ಗಳು ಕಾಣಿಸದಿರುವ ಪ್ರಮುಖ ಕಾರಣ ರೈಲ್ವೆಯ ಮಲ್ಟಿ ಪರ್ಪಸ್ ಸ್ಟಾಲ್ ನೀತಿಯಾಗಿದೆ. ಜಾಗದ ಸಮರ್ಪಕ ಬಳಕೆ ಮತ್ತು ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಪ್ರತ್ಯೇಕ ಮೆಡಿಕಲ್ ಸ್ಟೋರ್‌ಗಳ ಬದಲು ಬಹುಉದ್ದೇಶದ ಮಳಿಗೆಗಳಿಗೆ ಆದ್ಯತೆ ನೀಡಲಾಗಿದೆ. ಆದರೆ ತುರ್ತು ಆರೋಗ್ಯ ಸೇವೆಗಳು ಮತ್ತು ಸಾಮಾನ್ಯ ಔಷಧಿಗಳ ಲಭ್ಯತೆಗೆ ರೈಲ್ವೆ ಇನ್ನೂ ಅಗತ್ಯ ವ್ಯವಸ್ಥೆಗಳನ್ನು ಮುಂದುವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+