Property: ಕರ್ನಾಟಕದ ಆಸ್ತಿದಾರರಿಗೆ ಗುಡ್‌ನ್ಯೂಸ್: ಬಿ ಖಾತಾದಿಂದ ಎ ಖಾತಾ ಬಂಪರ್, ನಿಯಮ ಉಲ್ಲಂಘನೆಗೂ ಡಿಕೆಶಿ ರಿಲೀಫ್
ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ಕರ್ನಾಟಕದ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಬೆಂಗಳೂರಿಗೆ ಸೀಮಿತವಾಗಿದ್ದ ಬಿ ಖಾತಾದಿಂದ ಎ ಖಾತಾ ಆಸ್ತಿ ಪರಿವರ್ತನೆಯನ್ನು ಇದೀಗ ಕರ್ನಾಟಕದಾದ್ಯಂತ ವಿಸ್ತರಿಸಲಾಗಿದೆ. ಇದರಿಂದ ಅಂದಾಜು 30ರಿಂದ 40 ಲಕ್ಷ ಆಸ್ತಿದಾರರಿಗೆ ಲಾಭವಾಗಲಿದೆ ಎಂದು ಅಂದಾಜಿಸಲಾಗಿದೆ. ಕರ್ನಾಟಕದ ಆಸ್ತಿದಾರರಿಗೆ ಡಿ.ಕೆ ಶಿವಕುಮಾರ್ ಅವರು ಕೊಟ್ಟಿರುವ ಗುಡ್‌ನ್ಯೂಸ್ ಏನು ಇದರಿಂದ ಆಸ್ತಿದಾರರಿಗೆ ಹೇಗೆ ಲಾಭವಾಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಡಿ.ಕೆ ಶಿವಕುಮಾರ್ ಅವರು ಕರ್ನಾಟಕದ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಮೊದಲ ಸಚಿವ ಸಂಪುಟದಲ್ಲಿ ಕರ್ನಾಟಕದ ಜನರಿಗೆ ಹಲವು ಗುಡ್‌ನ್ಯೂಸ್‌ಗಳನ್ನು ಕೊಟ್ಟಿದ್ದಾರೆ. ಇದು ಯುವ ಯುಗ. ಹೀಗಾಗಿ ಹೊಸ ಆಲೋಚನೆ ಮಾಡಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಮೂಲಕ ಯುವಕರು ಹಾಗೂ ಕರ್ನಾಟಕದ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಮನೆ ಕಟ್ಟುವವರಿಗೆ ಒಸಿ ಹಾಗೂ ಸಿಸಿ ನೀಡುವ ಕೊಡುವ ವಿಚಾರವು ಕಗ್ಗಂಟಾಗಿ ಉಳಿದಿದೆ. ಈ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗಿದೆ. ಮನೆಗಳ ಒಸಿ ಮತ್ತು ಸಿಸಿ 2500 ಅಡಿವರೆಗೂ ಶೇ 20% ಹೆಚ್ಚುಕಮ್ಮಿ ಇದ್ದರೂ ಒನ್ ಟೈಮ್ ಕಳೆದ ತಿಂಗಳು 31ರವರೆಗೂ ಅರ್ಜಿ ಹಾಕಿ ಮನೆ ಕಟ್ಟಿರುವವರಿಗೆ ಅವಕಾಶ ಕೊಡುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದರೆ. ಮನೆಕಟ್ಟುವವರಿಗೆ ನೀರು ಕೊಡುವುದು ನಮ್ಮ ಕರ್ತವ್ಯ ಎಂದು ಡಿಕೆಶಿ ಹೇಳಿದ್ದಾರೆ.

ಬಿ ಖಾತಾದಿಂದ ಎ ಖಾತಾ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್
ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಬಿ ಖಾತಾದಿಂದ ಎ ಖಾತಾ ಪರಿವರ್ತನೆಯನ್ನು ಕರ್ನಾಟಕದಾದ್ಯಂತ ವಿಸ್ತರಿಸಲಾಗಿದೆ. ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಅವಕಾಶ ಹಾಗೂ ಗೈಡ್‌ಲೈನ್ಸ್ ವ್ಯಾಲ್ಯೂ ಶುಲ್ಕವನ್ನು ಸಹ ಕಡಿಮೆ ಮಾಡಲಾಗಿದೆ. ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಬೆಂಗಳೂರಿನಲ್ಲಿ ಅವಕಾಶ ನೀಡಲಾಗಿತ್ತು. ಇದರಿಂದ ಬೆಂಗಳೂರಿನ ಅಂದಾಜು 7 ಲಕ್ಷಕ್ಕೂ ಹೆಚ್ಚು ಬಿ ಖಾತಾ ಆಸ್ತಿದಾರರಿಗೆ ಅನುಕೂಲವಾಗಿತ್ತು. ಇದೀಗ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಅವಕಾಶ ನೀಡಲಾಗಿದ್ದು, ಇದರಿಂದ ಕರ್ನಾಟಕದಲ್ಲಿ ಬಿ ಖಾತಾ ಆಸ್ತಿ ಹೊಂದಿರುವ ಆಸ್ತಿದಾರರಿಗೆ ಲಾಭವಾಗಲಿದೆ. ಕರ್ನಾಟಕದಾದ್ಯಂತ ಅಂದಾಜು 30ರಿಂದ 40 ಲಕ್ಷ ಆಸ್ತಿದಾರರಿಗೆ ಲಾಭವಾಗಲಿದೆ. ಐದನೆಯದಾಗಿ ಬಿ ಖಾತಾಯಿಂದ ಎ ಖಾತಾ ಪರಿವರ್ತನೆಗೆಯನ್ನು ಬೆಂಗಳೂರು ಮಾತ್ರವಲ್ಲದೇ, ಇಡೀ ರಾಜ್ಯಕ್ಕೆ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಸರ್ಕಾರ ಹೇಳಿದೆ. ನಮ್ಮ ಸರ್ಕಾರದ ಆರನೇ ಗ್ಯಾರಂಟಿ ಭೂ ಗ್ಯಾರಂಟಿ ಆಗಿದೆ. ಜನರ ಆಸ್ತಿಗೆ ಸರಿಯಾದ ದಾಖಲೆ ಮಾಡಿಕೊಡಲು ಮುಂದಾಗಿದ್ದೇವೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.












Click it and Unblock the Notifications