IPL 2024 Schedule: ಮೇ 26ರಂದು ಐಪಿಎಲ್ 2024 ಫೈನಲ್
ಐಪಿಎಲ್ 2024ರ ಉಳಿದ ವೇಳಾಪಟ್ಟಿ ಹೊರಬಿದ್ದಿದೆ. ಬಿಸಿಸಿಐ ಐಪಿಎಲ್ ವೇಳಾಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಲಿದ್ದು, ಲೋಕಸಭಾ ಚುನಾವಣೆ ನಡುವೆಯೀ ಐಪಿಎಲ್ ನಿರಾತಂಕವಾಗಿ ನಡೆಯಲಿದೆ.
ಲೋಕಸಭಾ ಚುನಾವಣೆ ದಿನಾಂಕಗಳು ಐಪಿಎಲ್ ಪಂದ್ಯಾವಳಿ ಜೊತೆ ಘರ್ಷಣೆಯಾದ ಕಾರಣ ಬಿಸಿಸಿಐ ಐಪಿಎಲ್ 2024 ರ ಆರಂಭಿಕ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿತ್ತು. ಐಪಿಎಲ್ 2024 ರ ಫೈನಲ್ ಮೇ 26 ರಂದು ಚೆಪಾಕ್‌ನಲ್ಲಿ ನಡೆಯಲಿದೆ.

ಲೋಕಸಭೆ ಚುನಾವಣೆ ದಿನಾಂಕಗಳು ಬಿಡುಗಡೆಯಾಗಿದ್ದು, ಬಿಸಿಸಿಐ ಉಳಿದ ವೇಳಾಪಟ್ಟಿಯ ದಿನಾಂಕಗಳನ್ನು ಬಿಡುಗಡೆ ಮಾಡಿದೆ. ಹಿಂದಿನ ವೇಳಾಪಟ್ಟಿಯನ್ನು ಏಪ್ರಿಲ್ 7 ರವರೆಗೆ ನೀಡಲಾಗಿತ್ತು. ಈಗ ವೇಳಾಪಟ್ಟಿಯ ಪ್ರಕಾರ, ಸಿಎಸ್‌ಕೆ ಏಪ್ರಿಲ್ 8 ರಂದು ಕೆಕೆಆರ್ ವಿರುದ್ಧ ಆಡಲಿದೆ. ಸಾರ್ವತ್ರಿಕ ಚುನಾವಣೆಗಳಿಗಾಗಿ ಐಪಿಎಲ್ ವೇಳಾಪಟ್ಟಿಯಲ್ಲಿ ಯಾವುದೇ ಬ್ರೇಕ್ ಇಲ್ಲ.
ಮೇ 26ರಂದು ಫೈನಲ್
ಬಿಸಿಸಿಐ ಆರಂಭಿಕ 21 ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಲೋಕಸಭಾ ಚುನಾವಣೆಗಳು ಏಪ್ರಿಲ್ 19 ರಿಂದ ಜೂನ್ 1 ರವರೆಗೆ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ಸ್ಥಳಗಳೊಂದಿಗೆ ಪಂದ್ಯಗಳ ಘರ್ಷಣೆಯನ್ನು ತಪ್ಪಿಸುವ ರೀತಿಯಲ್ಲಿ ಪಂದ್ಯಗಳನ್ನು ಆಯೋಜಿಸಲು ಮಂಡಳಿಯು ನಿರ್ಧರಿಸಿದೆ.
ಮೇ 19 ರಂದು ಕೊನೆಯ ಗುಂಪು ಹಂತದ ಪಂದ್ಯ ನಡೆಯಲಿದ್ದು, ರಾಜಸ್ಥಾನ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಆಡಲಿದೆ. ಒಂದು ದಿನದ ವಿರಾಮದ ನಂತರ, ಐಪಿಎಲ್ 2024 ನಾಕೌಟ್ ಪಂದ್ಯಗಳು ಪ್ರಾರಂಭವಾಗುತ್ತದೆ. ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಕ್ರಮವಾಗಿ ಮೇ 21 ಮತ್ತು 22 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಅಂತಿಮವಾಗಿ ಕ್ವಾಲಿಫೈಯರ್ 2 ಮತ್ತು ಗ್ರ್ಯಾಂಡ್ ಫೈನಲ್ ಕ್ರಮವಾಗಿ ಮೇ 24 ಮತ್ತು 26 ರಂದು ಚೆನ್ನೈನ ಚೆಪಾಕ್‌ನಲ್ಲಿ ನಡೆಯಲಿದೆ.












Click it and Unblock the Notifications