ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂದಗೋಳ: ಕೆಜೆಪಿ-ಬಿಜೆಪಿ ವಿಲೀನ ಕಾಂಗ್ರೆಸ್ ಗೆ ಏಟು ಕೊಟ್ಟೀತಾ!?

|
Google Oneindia Kannada News

ಇತಿಹಾಸ ಪ್ರಸಿದ್ಧ ಕುಂದಗೋಳ ಕ್ಷೇತ್ರ ಕಲೆ ಮತ್ತು ಸಂಗೀತಕ್ಕಾಗಿ ಸಾಕಷ್ಟು ಹೆಸರುವಾಸಿಯಾಗಿತ್ತು. ಗಂಗೂಬಾಯಿ ಹಾನಗಲ್ ಮತ್ತು ಭೀಮಸೇನ ಜೋಶಿಯವರಂಥ ಗಾನಮಾಂತ್ರಿಕರಿಗೆ ಸಂಗೀತ ಕಲಿಸಿದ ಗುರುಗಳಾದ ಹಿಂದುಸ್ತಾನ ಸಂಗೀತ ದಿಗ್ಗಜರಾದ ಪಂ.ಸವಾಯಿ ಗಂಧರ್ವ ಅವರ ಮೂಲ ಊರು ಕುಂದಗೋಳ.

ಇಲ್ಲಿಯ ಶಂಭುಲಿಂಗ ದೇವಾಲಯ ಚಾಲುಕ್ಯ ಶೈಲಿಯಲ್ಲಿ ನಿರ್ಮಿತವಾಗಿದ್ದು, ಸಭಾಮಂಟಪದ ವೃತ್ತಿನಲ್ಲಿ ಅಷ್ಟದಿಕ್ಪಾಲಕರನ್ನು ಕೆತ್ತಲಾಗಿದೆ. ಹೊರಬದಿಯಲ್ಲಿ ಕೀರ್ತಿ ಮುಖಗಳಿವೆ. ಗರ್ಭಗುಡಿಯಲ್ಲಿ ಶಿವಲಿಂಗವೂ ಮುಂಭಾಗದ ಕೋಣೆಯ ಎಡಬಲಗಳಲ್ಲಿ ಪಾರ್ವತಿ ವಿಘ್ನೇಶ್ವರರ ವಿಗ್ರಹಗಳೂ ಇವೆ. ಬ್ರಹ್ಮದೇವರ ಗುಡಿ, ದತ್ತಾತ್ರೇಯಗುಡಿ, ಶಂಕರಾಚಾರ್ಯರ ಗುಡಿ ಹಾಗೂ ಮಲ್ಲಿಕಾರ್ಜುನ ಗುಡಿಸೇರಿದಂತೆ ಹಲವು ದೇವಾಲಯಗಳು ಇಲ್ಲಿವೆ.

ಕಲಘಟಗಿ ಕ್ಷೇತ್ರ: ಸಂತೋಷ್ ಲಾಡ್ ಗೆ ಸಡ್ಡು ಹೊಡೆಯಬಲ್ಲವರ್ಯಾರು? ಕಲಘಟಗಿ ಕ್ಷೇತ್ರ: ಸಂತೋಷ್ ಲಾಡ್ ಗೆ ಸಡ್ಡು ಹೊಡೆಯಬಲ್ಲವರ್ಯಾರು?

ಇಲ್ಲಿಚಾಲುಕ್ಯ, ಕಳಚುರಿ ಮತ್ತು ವಿಜಯನಗರ ಕಾಲಗಳಿಗೆ ಸೇರಿದ ಹನ್ನೊಂದಕ್ಕೂ ಹೆಚ್ಚು ಶಿಲಾಶಾಸನಗಳು ಪತ್ತೆಯಾಗಿವೆ. ಇತಿಹಾಸ ತಾಣಗಳ ಮೂಲಕ ಹಲವು ಪ್ರವಾಸಿಗರನ್ನು ತನ್ನತ್ತ ಸೆಳೆವ ಕುಂದಗೋಳ ಧಾರವಾಡದ ಪ್ರಮುಖ ತಾಣಗಳಲ್ಲೊಂದು.

Karnataka Assembly Election 2018: Kundgol Constituency Profile

ಈ ತಾಣದ ರಾಜಕೀಯ ಚಿತ್ರಣವನ್ನು ಅವಲೋಕಿಸುವುದಾದರೆ, 2013 ರ ಚುನಾವಣೆಯಲ್ಲಿ ಕೆಜೆಪಿ ಮತ್ತು ಬಿಜೆಪಿ ಕಲಹದಿಂದ ಲಾಭ ಪಡೆದ ಕಾಂಗ್ರೆಸ್ ನ ಕುರುಬ ಸಮುದಾಯದ ಸಿ. ಎಸ್.ಶಿವಳ್ಳಿ ಕಳೆದ ಬಾರಿ ಗೆದ್ದಿದ್ದರು. ಈ ಭಾಗದಲ್ಲಿ ಲಿಂಗಾಯತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿರುವುದರಿಂದ ಲಿಂಗಾಯತ ಮತಗಳು ಯಾರನ್ನು ಸೆಳೆಯಲಿವೆ ಎಂಬುದು ಮುಖ್ಯ ಪ್ರಶ್ನೆಯಾಗಿದೆ.

2018 ರ ಚುನಾವಣೆಯಲ್ಲಿ ಕೆಜೆಪಿ ಅಸ್ಥಿತ್ವದಲ್ಲಿಲ್ಲದ ಕಾರಣ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರಗೆ ವರದಾನವಾಬಹುದು.
2013 ರ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ನ ಸಿ.ಎಸ್.ಶಿವಳ್ಳಿ ಅವರು 52690 ಮತ ಪಡೆದಿದ್ದರೆ, ಕೆಜೆಪಿ(ಈಗ ಬಿಜೆಪಿಯಲ್ಲಿರು)ಯ ಚಿಕ್ಕನಗೌಡ್ರ 31618 ಮತ ಗಳಿಸಿದ್ದರು.

English summary
Karnataka Assembly Election 2018: Read all about Kundgol assembly constituency of Dharwad district. Get election news from Kundgol. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X