ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿ -ಧಾರವಾಡ ಮಧ್ಯ ಕ್ಷೇತ್ರ: ಮತ್ತೆ ಶೆಟ್ಟರ್ ಮ್ಯಾಜಿಕ್ ಗೆಲ್ಲುತ್ತಾ?

|
Google Oneindia Kannada News

ಹುಬ್ಬಳ್ಳಿ-ಧಾರವಾಡ ಮಧ್ಯಕ್ಷೇತ್ತರ ಹಲವು ಹೆಗ್ಗಳಿಕೆಗಳಿಗೆ ಪಾತ್ರವಾಗಿದೆ. ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪಡೆದ ಹಿಂದು ಸ್ಥಾನಿ ಗಾಯಕ ಭೀಮಸೇನ ಜೋಶಿ ಇಲ್ಲಿಯವರೇ.

ಕೈಮಗ್ಗದ ಕಾರ್ಖಾನೆಗಳಿಂದಾಗಿ ಹಲವು ಜನರ ನಿರುದ್ಯೋಗ ಸಮಸ್ಯೆ ಈಡೇರಿಸಿದ ಕ್ಷೇತ್ರ ಇದು.

ಸಜ್ಜನ ರಾಜಕಾರಣಿ, ಸೋಲಿಲ್ಲದ ಸರದಾರ ಎಂದೇ ಪ್ರಸಿದ್ಧರಾಗಿರುವ ಬಿಜೆಪಿಯ ಜಗದೀಶ್ ಶೆಟ್ಟರ್ ಪ್ರತಿನಿಧಿಸುವ ಕ್ಷೇತ್ರ ಇದು. ಆರ್ ಎಸ್ ಎಸ್ ನ ಗರಡಿ ಮನೆಯಾಗಿರುವ ಹುಬ್ಬಳ್ಳಿಯಲ್ಲಿ ಅವರ ಗೆಲುವಿನ ನಾಗಾಲೋಟ ನಿರಾಯಾಸವಾಗಿ ನಡೆದುಕೊಂಡು ಬಂದಿದೆ. ಚುನಾವಣಾ ತಂತ್ರಗಾರಿಕೆ ಮತ್ತು ಗೆಲುವಿನ ಪಟ್ಟುಗಳನ್ನು ಕರತಲಾಮಲಕ ಮಾಡಿಕೊಂದಡಿರುವ ಅವರ ಗೆಲುವಿಗೆ ಕಾಂಗ್ರೆಸ್ ಸಹ ಪರೋಕ್ಷವಾಗಿ ಕಾರಣವಾಗಿದೆ.

Karnataka Assembly Election 2018: Hubballi Dharwad central Constituency Profile

ಕಳೆದ ಹಲವು ಚುನಾವಣೆಗಳಲ್ಲಿ ಇಲ್ಲಿ ಕಾಂಗ್ರೆಸ್ ಒಬ್ಬ ಪ್ರಬಲ ಮತ್ತು ನಿಶ್ಚಿತ ಅಭ್ಯರ್ಥಿಯನ್ನು ನಿಲ್ಲಿಸುವಲ್ಲಿ ಎಡವಿದೆ. ಚುನಾವಣೆ ಕೊನೆ ಗಳಿಗೆಯಲ್ಲಿ ಜನರಿಗೆ ಪರಿಚಯವೇ ಇಲ್ಲದ ಅಭ್ಯರ್ಥಿಯೊಬ್ಬರನ್ನು ತಂದು ನಿಲ್ಲಿಸಿದರೆ ಬಿಜೆಪಿ ಗೆಲ್ಲುವುದು ಕಷ್ಟದ ವಿಷಯವೇ ಅಲ್ಲ. ಇಲ್ಲಿ ಮುಸ್ಲಿಂ ಸಂಖ್ಯೆಯಿದ್ದರೂ, ಹಿಂದು ಮತಗಳೇ ನಿರ್ಣಾಯಕ.

ಅಭಿವೃದ್ಧಿಯ ದೃಷ್ಟಿಯಿಂದಲೂ ಈ ಕ್ಷೇತ್ರದ ಶ್ರೀಮಂತವಾಗಿದ್ದು, ರಸ್ತೆ, ಚರಂಡಿ, ನೀರು ಮುಂತಾದ ಮೂಲಭೂತ ಸೌಲಭ್ಯಗಳ ಕೊರತೆ ಇಲ್ಲಿಲ್ಲ. ಯಾವುದೇ ಹಗರಣ, ಗದ್ದಲ, ವಿವಾದಗಳಲ್ಲಿ ನಗರಹಾಕಿಕೊಳ್ಳದ ಮುತ್ಸದ್ಧಿ ಶೆಟ್ಟರ್ ತಮ್ಮ ಕ್ಷೇತ್ರದ ಜನರ ಪ್ರೀತಿ ಗಳಿಸಿದ್ದಾರೆ.

ಕಾಂಗ್ರೆಸ್ ನ ಕಳೆದ ಸಲ ಪರಾಜಿತ ಅಭ್ಯರ್ಥಿ ಡಾ.ಮಹೇಶ್ ನಾಲ್ವಾಡ ಮತ್ತು ನಾಗರಾಜ ಚಬ್ಬಿ ಈ ಸಲ ಟಿಕೇಟ್ ನ ಪ್ರಬಲ ಆಕಾಂಕ್ಷಿಗಳು. 2013 ರಲ್ಲಿ ಗೆದ್ದ ಜಗದೀಶ್ ಶೆಟ್ಟರ್ 58201 ಮತಗಳಿಸಿದ್ದರೆ, ಕಾಂಗ್ರೆಸ್ ನ ಡಾ.ಮಹೇಶ್ ನಾಲ್ವಾಡ 40447 ಮತ ಗಳಿಸಿದ್ದರು.

English summary
Karnataka Assembly Election 2018: Read all about Hubballi Dharwad central assembly constituency of Dharwad district. Get election news from -----. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X