ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಕುತಿಮ್ಮನ ಕಗ್ಗ ಮತ್ತು ಪಕೋಡಪ್ರಿಯ ಗುಂಡಪ್ಪ

By ಜಯನಗರದ ಹುಡುಗಿ
|
Google Oneindia Kannada News

ಹೋದ ವಾರ ಬೆಳ್ಳಂದೂರಿನ ಅಪಾರ್ಟ್ಮೆಂಟ್ ಅಲ್ಲಿ ಕನ್ನಡ ತರಗತಿ ಮುಗಿಸುತ್ತಿದ್ದಾಗ ಬೆಂಗಳೂರಿನ ಬಗ್ಗೆ ಸುಮಾರು ವಿಷಯಗಳನ್ನ ತಿಳಿದುಕೊಳ್ಳಲು ಪ್ರಯತ್ನ ಪಡುತ್ತಿದ್ದರು ವಿದ್ಯಾರ್ಥಿಗಳು. ವಿದ್ಯಾರ್ಥಿಯೊಬ್ಬರು ಕಹಳೆ ಬಂಡೆ ಉದ್ಯಾನವನಕ್ಕೆ ಹೋಗಿದ್ದರ ಬಗ್ಗೆ ನನಗೆ ತಿಳಿಸಿ ಹೇಳಿದರು. ಅಲ್ಲಿ ನಮ್ಮ 'ಕನ್ನಡ ಗೊತ್ತಿಲ್ಲ' ಸಂಸ್ಥೆಯ ಪಾಠದಲ್ಲೊಮ್ಮೆ ಗೆಳತಿ ನಿವೇದಿತಾ ಆ ಉದ್ಯಾನವನದ ಬಗ್ಗೆ ತಿಳಿಸಿದ್ದಳು. ಆ ಕಾರಣದಿಂದ ಅವರು ಅಲ್ಲಿ ಹೋಗಿ ಡಿ ವಿ ಗುಂಡಪ್ಪನವರ ಪ್ರತಿಮೆಯೊಂದಿಗೆ ಭಾವಚಿತ್ರವನ್ನ ಸಹ ತೆಗೆಸಿಕೊಂಡು ಬಂದಿದ್ದರು. ನನಗೆ ಅದನ್ನ ತೋರಿಸಿ ಅವರ ಕಗ್ಗದ ಆಂಗ್ಲ ಭಾಷಾಂತರ ಓದಿದ್ದರಂತೆ, ಕನ್ನಡ ಕಲಿತ ನಂತರ ಅವುಗಳನ್ನ ಅರ್ಥಮಾಡಿಕೊಳ್ಳುವ ಆಸೆಯಿದೆ ಎಂದು ಹೇಳುತ್ತಲೇ ಹೋದರು.

ದಾರ್ಶನಿಕ ಡಿವಿಜಿ ಹುಟ್ಟುಹಬ್ಬಕ್ಕೆ ಎರಡು ವಿಶಿಷ್ಟ ಕಾರ್ಯಕ್ರಮದಾರ್ಶನಿಕ ಡಿವಿಜಿ ಹುಟ್ಟುಹಬ್ಬಕ್ಕೆ ಎರಡು ವಿಶಿಷ್ಟ ಕಾರ್ಯಕ್ರಮ

ನನಗೆ ಅವತ್ತು ಅದು ಅಷ್ಟು ಮನಸ್ಸಿಗೆ ಬರಲ್ಲಿಲ್ಲ, ಆಫೀಸಿಗೆ ಹೋಗುವ ದಾರಿಯಲ್ಲಿ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಡಿ ವಿ ಜಿ ಯವರ ಹುಟ್ಟುಹಬ್ಬದಂದು ನಡೆಯುವ ಕಾರ್ಯಕ್ರಮದ ವಿವರಗಳನ್ನ ಹಾಕಿದ್ದರು. ತುಂಬಾ ಸ್ವಾಭಾವಿಕವಾಗಿ ನನ್ನ ಸ್ನೇಹಿತೆಗೆ ಹೇಳಿದೆ. ಅವಳು 'ಯಾರು ಹೇಳು, ಅದೇ ಶಾಲೇಲಿ ಓದಿದ್ವಲ್ಲ ಅವರ್ದಾ' ಎಂದು ಒಂದಷ್ಟು ನಿರಾಸಕ್ತಿಯಿಂದಲೇ ನುಡಿದಳು. ಅಯ್ಯೋ ಹಿತ್ತಲ ಗಿಡ ಮದ್ದಲ್ಲ ಅಂದುಕೊಂಡು ಆಟೋದಲ್ಲಿ ಇದರ ಬಗ್ಗೆ ಯೋಚಿಸುತ್ತಲೇ ಇದ್ದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಶಾಲೇಲಿ ನಮ್ಮ ಕನ್ನಡ ಟೀಚರ್ ಲೀಲಾವತಿ ಮಿಸ್ ಪಾಠದಲ್ಲಿದಕ್ಕಿಂತ ಒಂದಷ್ಟು ಹೆಚ್ಚು ವಿಷಯವನ್ನೇ ತಿಳಿಸುತ್ತಿದ್ದರು. ನನಗೆ ಬಹಳ ಪ್ರಿಯವಾದ ಪೀರಿಯಡ್ ಅದು. ನನ್ನ ಕೆಲವು ಸ್ನೇಹಿತರಿಗೆ ಬಹಳ ಕುಯ್ಯೋ ಕ್ಲಾಸ್ ಎಂದು ನಿದ್ದೆ ಮಾಡುತ್ತಿದ್ದರು. ಪ್ರತಿ ವರ್ಷ ಒಂದು ಕಗ್ಗವೋ ಅಥವಾ ಅವರ ಬಗ್ಗೆ ಪಠ್ಯವೋ ಇರುತ್ತಿತ್ತು. ಆಗಾಗ ಮನೆಯಲ್ಲಿ ಅದರ ಬಗ್ಗೆ ಚರ್ಚೆ ಆಗುತ್ತಿತ್ತು.

Mankithimmana Kagga and DV Gundappa

ತಾತ ಆಗಾಗ ಕುರುಕಲು ತಿಂಡಿ ಬಗ್ಗೆ ವಿಪರೀತ ಅಸ್ಥೆ ಇದ್ದ ನನಗೆ, ಬುದ್ಧಿ ಹೇಳಲು ಹೋಗಿ ಜಗತ್ತಿನಲ್ಲಿ ತುಂಬಾ ಸಾಧನೆ ಮಾಡುವವರೆಲ್ಲಾ ಈ ಥರಹದ ಊಟ ತಿಂಡಿ ಅದು ಇದು ಅನ್ನೋ ಚಿಕ್ಕ ಚಿಕ್ಕ ವಿಷಯಗಳ ಬಗ್ಗೆ ಯೋಚಿಸೋಲ್ಲ. ನೀನು ಇನ್ನು ಅಲ್ಲೇ ಇದೀಯ ಎಂದು ಹೇಳುತ್ತಿದ್ದರು.

ನನಗೆ ಡಿ ವಿ ಜಿ ಯವರ ಪ್ರಸಂಗವೊಂದು ನೆನಪಿಗೆ ಬಂತು. ಶಾಲೆಯಲ್ಲಿ ನಮ್ಮ ಮಿಸ್ ಹೇಳಿದ್ದು. ಅವರಿಗೆ ಕುರುಕಲು ತಿಂಡಿಯ ಬಗ್ಗೆ ವಿಶೇಷ ಆಸಕ್ತಿ ಇತ್ತು. ಬೇರೆ ಬೇರೆ ಕಡೆಯಿಂದ ಕುರುಕಲು ತಿಂಡಿ ತರಿಸಿ ಅದನ್ನ ಸಹ ತುಲನೆ ಮಾಡುತ್ತಿದ್ದರಂತೆ. ಕನ್ನಡ ನವೋದಯ ಸಾಹಿತಿಗಳಲ್ಲಿ ಒಬ್ಬರಾದ ವಿ ಸೀತಾರಾಮಯ್ಯ ಅವರಂತೂ ಒಮ್ಮೆ ಪುಸ್ತಕವನ್ನ ಪಕೋಡಪ್ರಿಯ ಗುಂಡಪ್ಪನವರಿಗೆ ಎಂದು ಅರ್ಪಿಸಿದ್ದಾರೆ. ಅಷ್ಟು ಊಟ ಪ್ರಿಯರೆಂದು ತಿಳಿಸಿದ್ದರು.

ಬೆಂಗಳೂರಿನ ಯುವ ಸಾಹಿತ್ಯ ಪ್ರೇಮಿಗಳ ಕನ್ನಡ 'ಕಹಳೆ'!ಬೆಂಗಳೂರಿನ ಯುವ ಸಾಹಿತ್ಯ ಪ್ರೇಮಿಗಳ ಕನ್ನಡ 'ಕಹಳೆ'!

ನಾನು ಅದೇ ಕಥೆಯನ್ನ ಮನೆಯಲ್ಲಿ ಸ್ಟೈಲಾಗಿ ಹೊಡೆದೆ. ತಾತ ಕೂತು "ಅವರ ಹಾಗೆ ಒಮ್ಮೆ ಕನ್ನಡ ಬರಿ ನೋಡೋಣ, ಅವರಷ್ಟು ವಿಷಯ ತಿಳಿಯೋದು ಬಿಟ್ಟು ಅವರು ತಿಂಡಿ ತಿಂದಷ್ಟೂ ನಾನೂ ತಿನ್ನುತ್ತೇನೆ ಎನ್ನುತ್ತೀಯಲ್ಲ" ಎಂದು ಕೋಪಿಸಿಕೊಂಡು ಹೊರಟರು. ಅದೇ ನನಗೆ ಡಿ ವಿ ಜಿಯವರ ಬಗ್ಗೆ ತಿಳಿಯಲು ಓದಲು ಶುರು ಮಾಡಿದೆ.

ಅರ್ಥವೇ ಆಗುತ್ತಿರಲ್ಲಿಲ್ಲ. ಅಲ್ಲೆಲ್ಲೋ ಪದ ಒಟ್ಟುಗೂಡಿಸಬೇಕು, ಬೇರೆ ಮಾಡಬೇಕು ಎಂಬ ವ್ಯಾಕರಣವನ್ನ ಅರ್ಥ ಮಾಡಿಕೊಳ್ಳುವುದರಲ್ಲಿ ಕಗ್ಗ ಕಬ್ಬಿಣದ ಕಡಲೆಯಾಗಿತ್ತು. ಆಗಾಗ ನಮ್ಮ ಮಿಸ್ ಕೆಲವಾರು ಪ್ರಸಂಗಗಳು ಅವರ ಬಗ್ಗೆ ಹೇಳುತ್ತಿದ್ದರು. ಅದರಲ್ಲಿ ಒಂದು ಶಿಕ್ಷೆಯ ವಿಚಾರ ಹೀಗಿದೆ....

ಮಹಿಳಾ ದಿನಾಚರಣೆ ವಿಶೇಷ ಲೇಖನ: ವರ್ಷಕ್ಕೊಮ್ಮೆ ಅವಳ ದಿವಸ!ಮಹಿಳಾ ದಿನಾಚರಣೆ ವಿಶೇಷ ಲೇಖನ: ವರ್ಷಕ್ಕೊಮ್ಮೆ ಅವಳ ದಿವಸ!

ಆಗ ಡಿವಿಜಿಯವರು ಲಾಲ್ ಭಾಗ್ ಹತ್ತಿರದ ಐರಿಷ್ ಪ್ರೆಸ್ನಲ್ಲಿ ಕೆಲಸದಲ್ಲಿದ್ದರು. ಮನೆಯಿಂದ ಅಲ್ಲಿಗೆ ಹೋಗಲು ಸೈಕಲ್ ಬಳಸುತ್ತಿದ್ದರು. ಒಂದು ದಿನ ಅದು ಕಳುವಾಯಿತು. ಹದಿನೈದು ದಿವಸಗಳಲ್ಲಿ ಕಳ್ಳನನ್ನು ಹಿಡಿಯಲಾಗಿತ್ತು. ಸುಮಾರು 20-22 ವರ್ಷದ ಹುಡುಗ ಕಳ್ಳನಾಗಿದ್ದ. ಮನೆಯಲ್ಲಿನ ಬಡತನ ಹೀಗೆ ಮಾಡಿತ್ತು ಎಂದು ಹೇಳಿದ್ದ. ಇವರಿಗೇಕೋ ಮನಕರಗಿ ಇವನ ಭವಿಷ್ಯದ ಚಿಂತೆ ಎದುರಾಗಿ ಅವನಿಗೇ ಇವರೇ ಲಾಯರ್ ಇಟ್ಟು ವಾದಿಸಿ, ಕ್ಷಮಾಪಣೆಯೊಂದಿಗೆ ಅವನ್ನನ್ನ ಬಿಡುಗಡೆಗೊಳಿಸಿದ್ದರು. ಕೋರ್ಟಿಗೆ ಅದು ಹಾಸ್ಯಾಸ್ಪದವಾಗಿ ಕಂಡಿತು.

ಒಂದಷ್ಟು ವರ್ಷದ ನಂತರ ಕಂಟೋನ್ಮೆಂಟ್ ಹತ್ತಿರ ಆ ಹುಡುಗ ಅವರ ಕಾಲಿಗೆ ಬಂದು ಬಿದ್ದು ತನ್ನ ಬಿಡುಗಡೆಗೊಳಿಸಿದ ದಿವಸವೇ ಬದಲಾಗಿ, ಒಂದಷ್ಟು ವರ್ಷಗಳಲ್ಲಿ ತನ್ನದೇ ಪ್ರಿಂಟಿಂಗ್ ಪ್ರೆಸ್ ಇಟ್ಟುಕೊಂಡಿದ್ದನಂತೆ. ಅವರ ತಂದೆ ತಾಯಿಗೆ ಆಧಾರವಾಗಿದ್ದನಂತೆ. ಈ ವಿಷಯವನ್ನ ನಮ್ಮ ಗುರುಗಳು ಆಗಾಗ ಹೇಳುತ್ತಾನೆ ಇರುತ್ತಿದ್ದರು. ತಪ್ಪಿಗೆ ಶಿಕ್ಷೆ ಹೇಗೆ ಕೊಡಬೇಕೆಂದು.

ಮಾಡುವ ಕೆಲಸ ನೂರಾರಿದೆ, ಸಾಗುವ ಹಾದಿ ದೂರವಿದೆ!ಮಾಡುವ ಕೆಲಸ ನೂರಾರಿದೆ, ಸಾಗುವ ಹಾದಿ ದೂರವಿದೆ!

ಇವರ ಆತ್ಮೀಯ ಸ್ನೇಹಿತರಾದ ಪು ತಿ ನರಸಿಂಹಾಚಾರ್ ಅವರು ಕೊನೆ ಮಗಳ ಮದುವೆಯ ಬಗ್ಗೆ ಯೋಚಿಸುತ್ತಿರುವಾಗ ಆಗಿನ ಕಾಲಕ್ಕೆ ಅವರು ಅವರಿಗೊಂದು ಪತ್ರ ಬರೆಯುತ್ತಾರೆ. ಪ್ರಾಯಶಃ ಈಗಿನ ಕಾಲದಲ್ಲಿಯೂ ಅಂತಹ ಯೋಚನೆ ಹೆಣ್ಣು ಮಕ್ಕಳಿರುವ ಮನೆಯವರಿಗೆ ಬರುವುದಿಲ್ಲವೇನೋ. "ನಮ್ಮ ಹೆಣ್ಣು ಮಕ್ಕಳಿಗೆ ತಕ್ಕ ವರ ಸಿಕ್ಕರೆ ಅದು ಭಗವಂತನ ಅನುಗ್ರಹ, ಇಲ್ಲದಿದ್ದರೆ ಅವರು ಸ್ವತಂತ್ರವಾಗಿಯೇ ಇರಲಿ, ಭಾದಕವಿಲ್ಲ. ನಿರ್ಮಲವಾಗಿ ಸಾತ್ವಿಕವಾಗಿ ಇರುವುದಾದರೆ ಸಂತೋಷ, ಅವರಿಗೆ ಅನುಕೂಲ ಕಂಡುಕೊಂಡಂತೆ ಅವರು ಬೆಳೆದುಕೊಳ್ಳಲಿ" ಎಂದು ನುಡಿದಿದ್ದಾರೆ. ಈ ಥರಹದ ಅನೇಕ ಪ್ರಸಂಗಗಳನ್ನ ನಾ ಓದಿದ್ದೇನೆ, ಕೇಳಿದ್ದೇನೆ.

ಅವರ ಕಗ್ಗಗಳನ್ನ ಈಗ ಅಂಡ್ರಾಯ್ಡ್ appನಲ್ಲಿ ಭಾವಾರ್ಥದ ಸಹಿತ ಓದುತ್ತಿದ್ದೇನೆ. ಮುಂದೊಮ್ಮೆ ಅದರ ಬಗ್ಗೆ ಬರೆಯಬೇಕೆಂಬ ಆಸೆಯಿದೆ. ನಮ್ಮ ಜೀವನದ ಸಾರ, ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ಹಾಗೆಯೇ ಇರಲಿ.

English summary
D V Gundappa, who has written Mankuthimmana Kagga, was very fond of junk food. Once Vee Seetharamaiah had dedicated a book to Pakodapriya Gundappa. On the occasion of birth anniversary of DVG, Meghana Sudhindra recalls some anecdotes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X