ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೆವೆಲ್ಲೆ ಯಾರು? ಅವರಿಗೂ ಕೆಜಿಎಫ್ಗೂ ಎಲ್ಲಿಂದೆಲ್ಲಿಯ ಸಂಬಂಧ?

By ಜಯನಗರದ ಹುಡುಗಿ
|
Google Oneindia Kannada News

ಬೆಂಗಳೂರಿನ ಒಂದು ಪ್ರತಿಷ್ಠಿತ ರಸ್ತೆ ಲ್ಯಾವೆಲ್ಲೆ ರಸ್ತೆ. ಅಲ್ಲಿಗೆ ಹೋಗೋದಕ್ಕೆ ಆಟೋದವರಿಗೆ ಕೇಳಿದರೆ ಒಂದಕ್ಕೆ ಡಬ್ಬಲ್ ರೇಟ್ ಹೇಳುತ್ತಾರೆ. ಮೊನ್ನೆ ಅಚಾನಕ್ಕಾಗಿ ಯಾವುದಕ್ಕೋ ಬ್ಯಾಂಕ್ ಸ್ಟೇಂಟ್ಮೆಂಟ್ ತೆಗೆದು ನೋಡಿದರೆ ನಾನು ಗೂಗಲ್ ಪೇನಲ್ಲಿ ಕೊಟ್ಟಿರೋ ಲಾವೆಲ್ಲೆ ರೋಡಿನ ಪಯಣಕ್ಕೆ ಒಂದು ಒಡವೆ ಮಾಡಿಸಿಕೊಳ್ಳಬಹುದಾ ಎಂದು ಅಂದಾಜು ಮಾಡುತ್ತಿದ್ದೆ.

ಇಲ್ಲಿರೋ ಜನ ಎಲ್ಲಾ ಪಾಷ್ ಎಂದು ಅಂದುಕೊಂಡು ಆಫೀಸಿನ ಮೆಟ್ಟಿಲು ಹತ್ತುತ್ತಿರುವಾಗಲೇ ಯಾರು ಈ ಲ್ಯಾವೆಲ್ಲೆ, ಅವರೇನು ಬ್ರಿಟೀಷ್ ಅಧಿಕಾರಿಯಾ ಅಥವಾ ಗವರ್ನರಾ ಎಂದು ಯೋಚಿಸುತ್ತಿದ್ದೆ. ಅಕಸ್ಮಾತ್ ದೊಡ್ಡ ಮನುಷ್ಯನೇ ಆಗಿದ್ದರೆ ಅವರ ಪ್ರತಿಮೆ, ಚರಿತ್ರೆ ಏನಾದರೂ ಇರಬೇಕಲ್ಲಾ ಅಂದುಕೊಳ್ಳುವಾಗಲೇ ನಮ್ಮ ಆಫೀಸಿನ ಹುಡುಗನ ಫೋನಿನಲ್ಲಿ ಕೆ ಜಿ ಎಫ್ ಹಾಡುಗಳು ಜೋರಾಗಿ ಬರುತ್ತಿದ್ದವು.

ಅಲ್ಲಾ, ಸಹಾಯಕಿ ಇಲ್ಲದೆ ಮನೆ ಹೇಗೆ ಮ್ಯಾನೇಜ್ ಮಾಡೋದು? ಅಲ್ಲಾ, ಸಹಾಯಕಿ ಇಲ್ಲದೆ ಮನೆ ಹೇಗೆ ಮ್ಯಾನೇಜ್ ಮಾಡೋದು?

ಹಿಂದಿ ಮಾತಾಡುವ ಅವನು ಅವತ್ತು ಅಚ್ಚಕನ್ನಡದ ಹಾಡುಗಳನ್ನ ಕೇಳುತ್ತಿದ್ದದ್ದನ್ನು ನೋಡಿ ಸಂತೋಷ ಪಟ್ಟೆ. "ಸುನಾ ಥಾ ಆಪ್ಕೇ ಪಾಸ್ ಬಹುತ್ ಸೋನಾ ಥಾ" ಎಂದು ನಗುತ್ತ ಹೇಳಿದ. ಏನು ಎಂದು ಅರ್ಥ ಮಾಡಿಕೊಳ್ಳಲು ಯತ್ನಿಸಿದಾಗ, ಸಿನೆಮಾದ ಬಗ್ಗೆ ಮಾತಾಡಲು ಶುರುಮಾಡಿದ. ಅವನಿಗೆ ಕೆ ಜಿ ಎಫ್ ಪೂರ್ತಿ ಕಥೆ ಗೊತ್ತಾಗಿತ್ತು. ಆದರೆ ಅಲ್ಲಿ ಮೊದಮೊದಲು ಚಿನ್ನ ಕಂಡಿದ್ದು ಯಾರಿಗೆ ಎಂದು ಪ್ರಶ್ನೆ ಮಾಡಿಕೊಂಡಾಗ ಸಿಕ್ಕ ಆಶ್ಚರ್ಯಕರವಾದ ವ್ಯಕ್ತಿಯ ಹೆಸರು ಮೈಕಲ್ ಎಫ್ ಲ್ಯಾವೆಲ್ಲೆ.

Who is Michael Lavelle? What is his connection with KGF?

ಒಂದು ಕ್ಷಣ ಅವಕ್ಕಾದೆ. ಅಲ್ಲಿನ ಕೆಜಿಎಫ್ ಹೀರೋಗೂ ಇಲ್ಲಿನ ಪಾಶ್ ಲ್ಯಾವೆಲ್ಲೆ ರಸ್ತೆಗೂ ಏನು ಸಂಬಂಧ ಎಂದು ಅಂದುಕೊಳ್ಳುತ್ತಿರುವಾಗಲೇ ಸಿಕ್ಕಿದ್ದು ತಾತನ ನಿಧಿ. ಹೌದು ಅದು ಕೆ ಜಿ ಎಫ್ ನ ಚಿನ್ನದಷ್ಟೆ ಅಮೂಲ್ಯವಾದ್ದದ್ದು. ಈ ಲ್ಯಾವೆಲ್ಲೆ ಎಂಬ ಮಹಾಶಯ, ನ್ಯೂಜಿಲೆಂಡಿನ ಮೂಲ ನಿವಾಸಿಗಳು ಮತ್ತು ಅಕ್ರಮ ಯೂರೋಪಿನ ನಿವಾಸಿಗಳ ನಡುವೆ ನಡೆದ ಯುದ್ಧದಲ್ಲೂ ಪಾಲ್ಗೊಂಡಿದ್ದರು. ಅಲ್ಲಿನ ಅಸಹನೀಯ ಪರಿಸ್ಥಿತಿ ನೋಡಿ ಅವರ ಮನಸ್ಸೆಲ್ಲಾ ಹೇಗೇಗೋ ಆಗಿ, ನಂತರ ಭಾರತಕ್ಕೆ ವರ್ಗಾಯಿಸಿಕೊಂಡು ಬಂದರಂತೆ.

1864ರಲ್ಲಿ ಭಾರತಕ್ಕೆ, ಮೈಸೂರು ರಾಜ್ಯಕ್ಕೆ ಬಂದು ಇಳಿದಾಗಲೇ ಅವರಿಗೆ ಈ ಚಿನ್ನದ ಐಡಿಯಾ ಹೊಳೆದಿದ್ದು. ಕಂಟೋನ್ಮೆಂಟಿಗೆ ಬಂದ ಅವರು ಆ ಊರಿನಲ್ಲಿ ಇದ್ದಾಗ ಕೇಳಿದ ಗಾಳಿಸುದ್ದಿಯ ಜಾಡನ್ನೇ ಹಿಡಿದು ಒಂದಷ್ಟು ಸಂಶೋಧನೆ ಮಾಡಲು ಶುರುವಿಟ್ಟುಕೊಂಡರು. ಅದೇ ಸಮಯದಲ್ಲಿ ಚಿನ್ನದ ಮಾಪನವಾಗಿಟ್ಟುಕೊಳ್ಳುವ "ಗೋಲ್ಡ್ ಸ್ಟಾಂಡರ್ಡ್" ಎಂಬುದನ್ನು ಬ್ರಿಟನ್ನಿನ ರಾಣಿ ಜಗತ್ತಿಗೆ ಪರಿಚಯಿಸಿದರು. ಇವೆಲ್ಲವೂ ಸರಿಯಾಗಿ ಸಮಯೋಚಿತವಾಗಿ ನಡೆದ ಕಾರಣ ಗೋಲ್ಡ್ ಸ್ಟಾಂಡರ್ಡ್ ಹೇಳಿರುವಂತೆ ಮಣ್ಣಿನಲ್ಲಿ, ಕಲ್ಲಿನಲ್ಲಿ, ಹರಳಿನಲ್ಲಿ ಇರುವ ಚಿನ್ನವನ್ನ, ಅದಿರಲ್ಲಿ ಅಡಗಿರುವ ಚಿನ್ನವನ್ನ ಬೇರ್ಪಡಿಸುವ ತಂತ್ರಗಳು, ಅದಕ್ಕೆ ಬೇಕಾದ ಯಂತ್ರಗಳು ಎಲ್ಲವೂ ಅಭಿವೃದ್ಧಿಯಾಗಲು ಶುರುವಾಯಿತು. ನಮ್ಮ ಚಿನ್ನಕ್ಕೆ ಕೆನಡಾ ಮತ್ತು ಜರ್ಮನಿಯಲ್ಲಿ ವಿಪರೀತ ಬೇಡಿಕೆ ಇರುತ್ತದೆ ಎಂದೂ ಲ್ಯಾವೆಲ್ಲೆ ಅರಿತರು.

ಎಲ್ಲಿಯವರೆಗೆ ಹೆಣ್ಣುಮಕ್ಕಳು ತಮ್ಮನ್ನು ತಾವು ಅಯ್ಯೋ ಪಾಪ ಅಂದುಕೊಳ್ಳುತ್ತಾರೋ... ಎಲ್ಲಿಯವರೆಗೆ ಹೆಣ್ಣುಮಕ್ಕಳು ತಮ್ಮನ್ನು ತಾವು ಅಯ್ಯೋ ಪಾಪ ಅಂದುಕೊಳ್ಳುತ್ತಾರೋ...

1871ರಲ್ಲಿ ಬೆಂಗಳೂರಿನಿಂದ ಕೋಲಾರಕ್ಕೆ ಎತ್ತಿನಗಾಡಿಯ ಮೂಲಕ ಹೋಗಿ, ಅಲ್ಲಿನ ಸರ್ವೇ ಮಾಡಿಕೊಂಡು ಬಂದರು. ಅಲ್ಲಿನ ಕಲ್ಲು ಮಣ್ಣುಗಳಲ್ಲಿ ಚಿನ್ನವಿತ್ತು ಎಂಬುದು ಗೊತ್ತಾಯಿತು. 2 ವರ್ಷ ಸುದೀರ್ಘ ಅಧ್ಯಯನ ಮಾಡಿ 1873ರಲ್ಲಿ ಮೈಸೂರು ಮಹಾರಾಜರ ಬಳಿ ಅರ್ಜಿ ಹಾಕಿದರು. ಕೋಲಾರದಲ್ಲಿ ಚಿನ್ನ ಸಿಗುವುದಿಲ್ಲ ಎಂಬ ಅಭಿಪ್ರಾಯದಲ್ಲಿದ್ದ ಮೈಸೂರಿನ ಚಿನ್ನದ ನಿಕ್ಷೇಪ ಅಧಿಕಾರಿಗಳು ಇವರಿಗೆ ಕಲ್ಲಿದ್ದಲು ಮತ್ತು ಇತರ ಖನಿಜಗಳ ಉತ್ಖನನದ ಅನ್ವೇಷಣೆಯ ಲೈಸೆನ್ಸ್ ನೀಡಿತ್ತು. ಆದರೂ ಲ್ಯಾವೆಲ್ಲೆ "ಅಕಸ್ಮಾತ್ ಚಿನ್ನ ಸಿಕ್ಕರೆ ನಿಮ್ಮ ಸರ್ಕಾರಕ್ಕೆ ಲಾಭ, ಇಲ್ಲದಿದ್ದರೇ ಏನೂ ಇಲ್ಲ" ಎಂದು ಬರೆದು ಚಿನ್ನದ ಅನ್ವೇಷಣೆಗೇ ಅರ್ಜಿ ಹಾಕಿದ್ದರು. ಸರ್ಕಾರ ಸಹ ಒಪ್ಪಿತ್ತು. 3 ವರ್ಷಗಳ ಕಾಲ ಸರ್ಕಾರಕ್ಕೆ ಯಾವುದೇ ರಾಯಧನವನ್ನು ಕೊಡದೇ ತನ್ನ ಕೆಲಸವನ್ನು ಮುಂದುವರಿಸುವ ಅನುಮತಿ ಸಹ ಸಿಕ್ಕಿತ್ತು.

Who is Michael Lavelle? What is his connection with KGF?

ಅಕಸ್ಮಾತ್ ಚಿನ್ನ ಸಿಕ್ಕರೆ ಚಿನ್ನದ ಮಾರುಕಟ್ಟೆಯ ಬೆಲೆಯ ಪ್ರತಿಶತ ಹತ್ತರಷ್ಟು ಮಾತ್ರ ರಾಯಧನ ನೀಡಬೇಕಿತ್ತು. ಅಕಸ್ಮಾತ್ ಬೆಲೆಬಾಳುವ ಹರಳುಗಳು ಸಿಕ್ಕರೂ ಶೇಕಡಾ 20ರಷ್ಟು ಮಾತ್ರ ರಾಯಧನ ನೀಡಬೇಕಿತ್ತು. ಮೂರು ವರ್ಷಗಳಲ್ಲಿ ಕೋಟ್ಯಧಿಪತಿ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿತ್ತು. ಆದರೆ ಇದಕ್ಕೆ ಬೇಕಾಗಿರುವ ಮೂಲ ಬಂಡವಾಳ ಅವರಿಗೆ ಇರಲ್ಲಿಲ್ಲ. ಮಾರಿಕುಪ್ಪಂ ಸಮೀಪದ ಲಕ್ಷ್ಮೀ ಸಾಗರ ಗ್ರಾಮದಲ್ಲಿ ದೊಡ್ಡ ಕೊಳವೆ ರೂಪದ ಗುಳಿ ತೋಡಿಸಿದರು. ಆಳದ ಕೊಳಗಳಲ್ಲಿ ಕಾರ್ಮಿಕರನ್ನು ಕಳುಹಿಸಿ ಚಿನ್ನದ ಅದಿರನ್ನು ತರಿಸುವ ಪ್ರಯತ್ನ ಮಾಡಿದ್ದರು. ಇದು ಬಹಳ ಅಪಾಯಕಾರಿಯಾಗಿತ್ತು.

ಸ್ಮಶಾನದಲ್ಲೇ ನಿರ್ಮಾಣವಾದ ಕನ್ನಡ ಶಾಲೆಯಲ್ಲಿ ಅಕ್ಷರ ದಾಸೋಹ ಸ್ಮಶಾನದಲ್ಲೇ ನಿರ್ಮಾಣವಾದ ಕನ್ನಡ ಶಾಲೆಯಲ್ಲಿ ಅಕ್ಷರ ದಾಸೋಹ

ಹಾಗಾಗಿಯೂ ಅವರಿಗೆ ಹಣ ಸಾಕಾಗದ್ದಿದ್ದಾಗ ಕೆಲವು ಶ್ರೀಮಂತರನ್ನು ಓಲೈಸಿದರು. ಮದ್ರಾಸಿನ "ಅರ್ಬಥ್ನಾಟ್ ಆಂಡ್ ಕಂಪೆನಿ"ಗೆ ತಮ್ಮ ಹಕ್ಕುಗಳನ್ನು ಮಾರಿದ್ದರು. ಆಸ್ಟ್ರೇಲಿಯಾದ ಗಣಿ ನಿಪುಣ ಜಾನ್ ಮುಂಡೆ ಅವರ ಮಾರ್ಗದರ್ಶನದಲ್ಲಿ ಕೆಲವು ಯಂತ್ರಗಳನ್ನ ಬಳಸಿದ್ದರಿಂದ ಕ್ವಾರ್ಟ್ಸ್ ಹರಳುಗಳು ಸಿಕ್ಕವು. ಆದರೆ ಅದು ಲಾಭದಾಯಕವಾಗಿರಲ್ಲಿಲ್ಲ. ಇದನ್ನರಿತ ಮದ್ರಾಸಿನ ಪ್ರಾಂತ್ಯದಲ್ಲಿದ್ದ ಮೇಜರ್ ಜನರಲ್ ಡ ಲಾ ಪೋಯರ್ ಬೆರೆಸ್ಫರ್ಡ್ ಲೈಸನ್ಸಿನ ಜೊತೆಗೆ ಈ ಚಿನ್ನದ ಕಂಪೆನಿಯನ್ನ ತಮ್ಮ ಸಹೋದ್ಯೋಗಿಗಳ ಜೊತೆ ಸೇರಿ ಕೊಂಡುಕೊಂಡರು. ಅದಕ್ಕೆ "ಕೋಲಾರ ಕನ್ಸೀಷನರೀಸ್ ಪ್ರೈವೇಟ್ ಲಿಮಿಟೆಡ್" ಎಂದು ನಾಮಕರಣವನ್ನೂ ಮಾಡಿದ್ದರು. ಅಲ್ಲೂ ಲಾಸ್ ಆಯಿತು. ಮತ್ತಿನ್ಯಾವುದೋ ಕಂಪೆನಿಗೆ ಗುತ್ತಿಗೆ ನೀಡಿ ಮತ್ತಷ್ಟು ಲಾಸ್ ಮಾಡಿಕೊಂಡಿತು. ಹೀಗೆ ಲಾಸಿನಲ್ಲೇ ನಡೆಯುತ್ತಿದ್ದ ಕೋಲಾರ ಚಿನ್ನದ ಗಣಿಗಾರಿಕೆ ಲಂಡನ್ನಿನ ಷೇರು ಮಾರುಕಟ್ಟೆಯನ್ನೇ ತಲ್ಲಣಗೊಳಿಸಿದ ಜಗದ್ವಿಖ್ಯಾತ "ವಯನಾಡ್ ಹಗರಣ" ಆಗುವವರೆಗೂ ಚಿನ್ನದ ಗಣಿಗಾರಿಕೆಗೆ ಹೆಚ್ಚು ಪ್ರಚಾರ ಸಿಕ್ಕಿರಲ್ಲಿಲ್ಲ....

ಏನಿದು ವಯನಾಡ್ ಹಗರಣ.. ಓದಿ ಮುಂದಿನ ವಾರ...

English summary
There is a road named after Levelle in Bengaluru posh locality. But, who is Michael Lavelle? What is his connection with KGF? Writes Jayanagarada Hudugi Meghana Sudhindra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X