ಯುಪಿಎಸ್‌ಸಿ 2025 ಫಲಿತಾಂಶ ಪ್ರಕಟ: ಪಾಸಾದವರು 958 ಆಕಾಂಕ್ಷಿಗಳು, ಅರ್ಜಿ ಹಾಕಿದ್ದವರು 10 ಲಕ್ಷ ಮಂದಿ
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (UPSC) ಇಂದು (ಮಾರ್ಚ್ 6) ನಾಗರಿಕ ಸೇವಾ ಪರೀಕ್ಷೆ-2025ರ ಅಂತಿಮ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ದೇಶದ ಅತ್ಯುನ್ನತ ಸೇವೆಗಳಾದ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಒಟ್ಟು 958 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಈ ಬಾರಿಯ ಫಲಿತಾಂಶದಲ್ಲಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಬ್ಬರೂ ಸಮಾನ ಸಾಧನೆ ಮಾಡಿರುವುದು ಗಮನ ಸೆಳೆದಿದೆ.
ಅನುಜ್ ಅಗ್ನಿಹೋತ್ರಿ (Anuj Agnihotri) ಪ್ರಥಮ ರ‍್ಯಾಂಕ್, ರಾಜೇಶ್ವರಿ ಸುಬೆ ಎಂ (Rajeshwari Suve M) ದ್ವಿತೀಯ ರ‍್ಯಾಂಕ್, ಆಕಾಂಶ್ ಧುಲ್ (Akansh Dhull) - ತೃತೀಯ ರ‍್ಯಾಂಕ್ ಪಡೆದು ತೇರ್ಗಡೆಯಾಗಿದ್ದಾರೆ. ವಿವಿಧ ಕೇಂದ್ರ ಸೇವೆಗಳಿಗಾಗಿ ಒಟ್ಟು 958 ಅಭ್ಯರ್ಥಿಗಳನ್ನು ಶಿಫಾರಸು ಮಾಡಲಾಗಿದೆ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣವಾಗುವ ಮೂಲಕ ಒಟ್ಟು 958 ಅಭ್ಯರ್ಥಿಗಳು ಐಎಎಸ್, ಐಎಫ್‌ಎಸ್, ಐಪಿಎಸ್ ಹಾಗೂ ಇನ್ನಿತರ ಇತರ ಹುದ್ದೆಗಳಿಗೆ ಅರ್ಹತೆ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ upsc.gov.in ಅಥವಾ upsconline.gov.in ಗೆ ಭೇಟಿ ನೀಡಿ, ನೋಂದಣಿ ಸಂಖ್ಯೆವಾರು ಹುಡುಕಿಕೊಂಡು ಫಲಿತಾಂಶದ ವಿವರ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಕೇಂದ್ರ ಲೋಕಸೇವಾ ಆಯೋಗದ ಅಧಿಕಾರಿಗಳ ಪ್ರಕಾರ, ಅಧಿಕೃತ ಫಲಿತಾಂಶ ಬಿಡುಗಡೆಯಾದ 15 ದಿನಗಳಲ್ಲಿ ಅಂಕಗಳು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ. ಲಿಖಿತ ಸಿಎಸ್‌ಇ ಪರೀಕ್ಷೆಯನ್ನು ಆಗಸ್ಟ್ 2025 ರಲ್ಲಿ ನಡೆಸಲಾಗಿತ್ತು. ವ್ಯಕ್ತಿತ್ವ ಪರೀಕ್ಷೆಯು ಡಿಸೆಂಬರ್ 2025 ಮತ್ತು ಫೆಬ್ರವರಿ 2026 ರ ನಡುವೆ ನಡೆಯಿತು. ಒಟ್ಟಾರೆ ಪರೀಕ್ಷೆ ಬರೆದ ಅಭ್ಯರ್ಥಿಗಳಲ್ಲಿ ಅಧಿಕೃತ ಸೂಚನೆಯ ಪ್ರಕಾರ, ಆಯೋಗವು ಇಬ್ಬರು ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿದಿದೆ. ಶಿಫಾರಸು ಮಾಡಲಾದ 348 ಅಭ್ಯರ್ಥಿಗಳ ಫಲಿತಾಂಶವನ್ನು ತಾತ್ಕಾಲಿಕ ಎಂದು ಘೋಷಿಸಲಾಗಿದೆ ಎಂದು ಯುಪಿಎಸ್‌ಸಿ ತಿಳಿಸಿದೆ.
ಯುಪಿಎಸ್‌ಸಿ ಫಲಿತಾಂಶ ಡೌನ್‌ಲೋಡ್ ಹೇಗೆ?
ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://upsconline.gov.in/ ಗೆ ಭೇಟಿ ನೀಡಬೇಕು. ನಂತರ ಅಲ್ಲಿರುವ ಯುಪಿಎಸ್‌ಸಿ "ಅಂತಿಮ ಫಲಿತಾಂಶ-ನಾಗರಿಕ ಸೇವೆಗಳ ಪರೀಕ್ಷೆ 2025" ಆಯ್ಕೆ ಆಯ್ದುಕೊಳ್ಳಬೇಕು. ನೀವು ನಿಮ್ಮ ರೋಲ್ ಸಂಖ್ಯೆಯನ್ವಯ ಹುಡುಕಿ ಫಲಿತಾಶವನ್ನು ಪರಿಶೀಲಿಸಬೇಕು. ಭವಿಷ್ಯದ ಉಪಯೋಗಕ್ಕಾಗಿ ಡೌನ್‌ಲೋಡ್ ಮಾಡಿಟ್ಟುಕೊಳ್ಳಬೇಕು.
ಜನವರಿಯಲ್ಲಿ ನಡೆದಿದ್ದ 275 ಅಂಕಗಳ ಸಂದರ್ಶನ
ಇದೇ 2026ರ ಜನವರಿಯಲ್ಲಿ ಯುಪಿಎಸ್‌ಸಿ ಅಭ್ಯರ್ಥಿಗಳ ಸಂದರ್ಶನ ನಡೆಸಲಾಯಿತು. ನವದೆಹಲಿಯ ಶಹಜಹಾನ್ ರಸ್ತೆಯ ಧೋಲ್ಪುರ್ ಹೌಸ್‌ನಲ್ಲಿರುವ ಯುಪಿಎಸ್‌ಸಿ ಪ್ರಧಾನ ಕಚೇರಿಯಲ್ಲಿ ನಡೆದಿತ್ತು. ಈ ಸಂದರ್ಶನ ಮತ್ತು ವ್ಯಕ್ತಿತ್ವ ಪರೀಕ್ಷೆಯು ಒಟ್ಟು 275 ಅಂಕಗಳನ್ನು ಹೊಂದಿತ್ತು.
ಬಿಡುಗಡೆಗೊಂಡ ಯುಪಿಎಸ್‌ಸಿ 'ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ, ಕೇಂದ್ರ ಸೇವೆಗಳು, ಗುಂಪು 'ಎ' ಮತ್ತು ಗುಂಪು 'ಬಿ' ಹುದ್ದೆಗಳಿಗೆ ಅನ್ವಯಿಸಲಿದೆ ಎಂದು ಯುಪಿಎಸ್‌ಸಿ ತಿಳಿಸಿದೆ.












Click it and Unblock the Notifications