ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ
ಬೆಂಗಳೂರು: ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು ಎನ್ನುವ ವಾಯುಪಡೆಯ ಸೂಚನಾ ಫಲಕವು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.
ಜಾಲಹಳ್ಳಿ ವಾಯುಪಡೆ ನಿಲ್ದಾಣದ ಸುತ್ತಮುತ್ತಲಿರುವ ಸಾರ್ವಜನಿಕ ರಸ್ತೆಗಳ ಪಕ್ಕದ ಗೋಡೆಗಳ ಮೇಲೆ ಅನಧಿಕೃತವಾಗಿ ಪ್ರವೇಶಿಸುವವರಿಗೆ ಗುಂಡು ಹಾರಿಸಲಾಗುವುದು (Trespassers will be shot) ಎಂಬ ಎಚ್ಚರಿಕೆಯನ್ನು ಕೆಂಪು ಅಕ್ಷರಗಳಲ್ಲಿ ಬರೆಯಲಾಗಿದೆ. ಈ ಬರಹವನ್ನು ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ, ಬಿಜೆಪಿ ಯುವ ಮುಖಂಡ ಭೀಮಾಶಂಕರ ಪಾಟೀಲ ಎನ್ನುವವರು ಈ ಬರಹವನ್ನು ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಎಚ್ಚರಿಕೆ ನೀಡುವುದು ಅಗತ್ಯವಾದರೂ "Trespassers will be prosecuted" (ಅತಿಕ್ರಮಣ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು) ಅಥವಾ "Strict Action will be taken" ಎಂಬಂತಹ ಶಬ್ದಗಳನ್ನು ಬಳಸುವುದು ಹೆಚ್ಚು ಸೂಕ್ತವೆನಿಸುತ್ತದೆ.

"Trespassers will be prosecuted" (ಅತಿಕ್ರಮಣ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು) ಎಂಬ ಮೃದುವಾದ ಪದಗಳ ಬದಲಿಗೆ ನೇರವಾಗಿ ಗುಂಡು ಹಾರಿಸುವ ಬೆದರಿಕೆ ಎಷ್ಟು ಸರಿ. ವಿಚಾರಣೆ ಇಲ್ಲದೆ ಪ್ರಾಣ ತೆಗೆಯುವ ಎಚ್ಚರಿಕೆ ಸಂವಿಧಾನದ 21ನೇ ವಿಧಿಯ (ಬದುಕುವ ಹಕ್ಕು) ಉಲ್ಲಂಘನೆಯಲ್ಲವೇ ಎಂದು ಪ್ರಶ್ನಿಸಲಾಗಿದೆ.
ಈ ಪೋಸ್ಟ್‌ಗೆ ನೆಟ್ಟಿಗರು ಹೇಳಿದ್ದೇನು
ಈ ಬರಹವು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸಚಿನ್ ಎನ್ನುವವರು ದಯವಿಟ್ಟು ಸೇನಾ ಕಾಯ್ದೆ 1950 ಮತ್ತು ಭಾರತೀಯ ನ್ಯಾಯ ಸಂಹಿತಾ -2023 ರ ಸೆಕ್ಷನ್ 101ರ ಕೊನೆಯ ಪ್ಯಾರಾಗ್ರಾಫ್ ಓದಿ, ಆಗ ನಿಮಗೆ ತಿಳಿಯುತ್ತದೆ ಎಂದಿದ್ದಾರೆ. ಕಾನೂನು ಅದು ಇದು ಅಂದರೆ ಒಳಗೆ ನುಗ್ಗಿತ್ತಾರೆ . ಗುಂಡು ಅಂದರೆ ನಾಶೆ ಇರುವರು ಕೂಡ ನುಗ್ಗುವುದು ಇಲ್ಲ. ಭಾರತಕ್ಕೆ ಚೀನಾ ಮಾದರಿ ಮಿಲಿಟರಿ ರೂಲ್ ತಂದರೆ ಒಳ್ಳೆಯದೇ. ಜನರಲ್ಲಿ ಶಿಸ್ತು ಬೀಳುತ್ತದೆ ಎಂದೂ ನೆಟ್ಟಿಗರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ರಮೇಶ್ ಶರ್ಮಾ ಎನ್ನುವವರು, ತಪ್ಪೇನೂ ಇಲ್ಲ, ರಾಷ್ಟ್ರೀಯ ಭದ್ರತೆ ಮುಖ್ಯ. ಇಷ್ಟಕ್ಕೂ ಯಾಕೆ ನುಸಳಬೇಕು, ಉತ್ತರಿಸಿ. ಇದೆ ರೀತಿ ಕಾನೂನು. ಯಾವುದೇ ಸ್ಥಳದಲ್ಲಿ ಹಳಿ ದಾಟುವುದು, ರೈಲು ಹಳಿಗಳಿಂದ 2 ಅಡಿಗಳ ಒಳಗೆ ಮನೆ ಮಾಡಿಕೊಳ್ಳುವುದು (ರೈಲ್ವೆಯವರ ಅನುಮತಿ ಇಲ್ಲದೆ) ಸಹ ಅಪರಾಧ ಎಂದಿದ್ದಾರೆ.
ಸುರೇಶ್ ಗೌಡ ಎನ್ನುವವರು ಅದು ಮಿಲಿಟರಿ ಏರಿಯಾ ಅಂದರೆ, ಅದು ಯಾರಿಗೂ ಅತಿಕ್ರಮ ಪ್ರವೇಶ ಇಲ್ಲ ಅಂತ ಅತಿಕ್ರಮ ಪ್ರವೇಶ ಮಾಡಿದರೆ ಗುಂಡು ಹೊಡೆಯದೆ ಕರ್ಕೊಂಡ್ ಹೋಗಿ ಬಿರಿಯಾನಿ ತಿನ್ನಲು ಕೊಡಬೇಕಾ ಒಂದು ಗೌರವಯುತವಾದ ಸ್ಥಾನದಲ್ಲಿ ಇರುವ ನೀವೆ ಹೀಗೆ ಮಾತಾಡಿದರೆ ನಮ್ಮ ದೇಶದ ಭದ್ರತೆ ಹೇಗೆ ಸಾಧ್ಯ ಎಂದು ಕೇಳಿದ್ದಾರೆ.












Click it and Unblock the Notifications