Get Updates
Get notified of breaking news, exclusive insights, and must-see stories!

ದಾರ್ಶನಿಕ ಡಿವಿಜಿ ಅವರ 125ನೇ ಹುಟ್ಟುಹಬ್ಬಕ್ಕೆ ಬನ್ನಿ

DV Gundappa's 125th Birthday Celebration
ಬೆಂಗಳೂರು, ಮಾ.15: ಬಸವನಗುಡಿಯ ಸಮಾಜ ಸೇವಕರ ಸಮಿತಿಯು 17 ಮಾರ್ಚ್ 2012 ರಂದು ಡಿವಿಜಿಯವರ 125ನೆಯ ಜನ್ಮದಿನ ಮಾ.17ರಂದು ಆಚರಿಸುತ್ತಿದೆ. ಈ ಕಾರ್ಯಕ್ರಮದ ಅಂಗವಾಗಿ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಎಲ್ಲಾ ಕಾರ್ಯಕ್ರಮಗಳಿಗೆ ಅಂತರಾಷ್ಟ್ರೀಯ ಖ್ಯಾತಿಯ ಎನ್.ಎ.ಎಲ್ ನ ಮಾಜಿ ನಿರ್ದೇಶಕರಾಗಿದ್ದ ಪ್ರೊ. ರೊದ್ದಂ ನರಸಿಂಹ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುತ್ತಾರೆ.

* ಚಿನ್ಮಯ ಮಿಷನ್‌ನ ಪೂಜ್ಯ ಶ್ರೀ ಬ್ರಹ್ಮಾನಂದ ಸ್ವಾಮಿಗಳು ಮಂಕುತಿಮ್ಮನ ಕಗ್ಗದ ಆಯ್ದ ಕಗ್ಗಗಳ ಪ್ರವಚನ ಮಾಡಲಿದ್ದಾರೆ.

* ಸಾಹಿತ್ಯ ಪರಿಚಾರಕ ಹೆಚ್.ಎಸ್. ಲಕ್ಷ್ಮೀನಾರಾಯಣಭಟ್ಟರಿಂದ ಡಿವಿಜಿಯವರ ಸಾಹಿತ್ಯ-ಒಂದು ನೋಟ.
* ಹಿರಿಯ ಐ.ಎ.ಎಸ್ ಅಧಿಕಾರಿ ಕೆ.ಎಚ್. ಗೋಪಾಲಕೃಷ್ಣೇಗೌಡರು ಡಿ.ಆರ್. ವೆಂಕಟರಮಣನ್ ವಿರಚಿತ ವಿರಕ್ತರಾಷ್ಟ್ರಕ ಪುಸ್ತಕ ಕುರಿತು ಮಾತನಾಡಲಿದ್ದಾರೆ.

* ಕಾವ್ಯಾಲಯ ಪ್ರಕಾಶಕರು (ಮೈಸೂರು)ರವರ ಡಿವಿಜಿ ವಿರಚಿತ A compendium of
writings on political issues" by Dr. D.V. Gundappa ಪುಸ್ತಕದ ಬಿಡುಗಡೆ ಸಮಾರಂಭ.

* ವಿದ್ವಾನ್ ಎಸ್. ಶಂಕರ್ ಮತ್ತು ತಂಡದಿಂದ ಡಿವಿಜಿಯವರ ಗೀತೆಗಳ ಗೇಯಗಾಯನವಿರುತ್ತದೆ.

ಡಿವಿಜಿಯವರ ಸಾಹಿತ್ಯ ಪ್ರಚಾರ ಮಾಡುತ್ತಿರುವ ಹಲವು ಮಹನೀಯರಿಗೆ ಗೌರವಾರ್ಪಣೆ ಮಾಡುವ ಪುಟ್ಟ ಕಾರ್ಯಕ್ರಮವಿರುತ್ತದೆ.

ಸಂಜೆ ಕಾರ್ಯಕ್ರಮ: 5 ಗಂಟೆಯ ನಂತರ ಖ್ಯಾತ ವಿಮರ್ಶಕ ಡಾ|| ಜಿ.ಬಿ. ಹರೀಶ್‌ರಿಂದ ಡಿವಿಜಿಯವರ ಇಂಗ್ಲೀಷ್ ಬರವಣಿಗೆಗಳ ಒಂದು ನೋಟ.
* ನರಸಿಂಹ ಭಟ್, ಕಾಸರಗೋಡು ಇವರಿಂದ ಮರುಳಮುನಿಯನ ಕಗ್ಗದ ವ್ಯಾಖ್ಯಾನವಿರುತ್ತದೆ.

* ಡಿವಿಜಿಯವರ ಶ್ರೀ ಕೃಷ್ಣ ಪರೀಕ್ಷಣಂ ಕೃತಿಯಾಧಾರಿತ ಶ್ರೀಮತಿ ವೇದಪುಷ್ಪ ಅವರ ತಂಡದವರಿಂದ ನೃತ್ಯರೂಪಕವಿರುತ್ತದೆ.

* ಖ್ಯಾತ ಗಾಯಕಿ ಶ್ರೀಮತಿ ಎಂ.ಡಿ. ಪಲ್ಲವಿಯವರಿಂದ ಡಿವಿಜಿಯವರ ಕೃತಿಗಳ
ಗಾಯನವಿರುತ್ತದೆ.
* ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್. ಡಿ. ರಾವ್ ಪಕ್ಕವಾದ್ಯದ ನಿರ್ವಹಣೆ
ವಹಿಸಲಿದ್ದಾರೆ.

* ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಅಪರ್ಣಾ ವಸ್ತಾರೆ ನಡೆಸಿಕೊಡಲಿದ್ದಾರೆ.

ಸ್ಥಳ: ಗಾಯನ ಸಮಾಜ, ಕೆ.ಆರ್.ರಸ್ತೆ. ಬೆಂಗಳೂರು
ದಿನಾಂಕ: 17 ಮಾರ್ಚ್ 2012, ಶನಿವಾರ
ಸಮಯ: ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ರಾಜ್‌ಕುಮಾರ್ : 94481 71069 / ರಾಘವೇಂದ್ರ: 98866 83008

ಡಿವಿಜಿ ಬಗ್ಗೆ : 17 ಮಾರ್ಚ್ 1887 ರಂದು ಜನಿಸಿದ ಡಾ| ಡಿ.ವಿ. ಗುಂಡಪ್ಪನವರು ಸುಮಾರು 7 ದಶಕಗಳಷ್ಟು ಕಾಲ ಸಾರ್ವಜನಿಕ ಸೇವೆ, ಸಾಹಿತ್ಯ, ಪತ್ರಿಕಾರಂಗ, ರಾಜಕೀಯ ರಂಗಗಳಲ್ಲಿ ಸೇವೆ ಸಲ್ಲಿಸಿದ ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಇಂತಹ ವ್ಯಕ್ತಿ ತಮ್ಮ ಕಡೆಗಾಲದವರೆಗೂ ಸರ್ಕಾರದ ಅಥವಾ ಯಾವುದೇ ಪ್ರಭಾವಿ ವ್ಯಕ್ತಿಗಳ ಹಂಗಿಗೆ ಒಳಗಾಗದೇ ಸ್ವಾಭಿಮಾನಿ ಬದುಕು ನಡೆಸಿದರು.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಹುಟ್ಟು ಹಾಕಿದರು. ಇಂದಿಗೂ ಈ ಸಂಸ್ಥೆ ಸಾರ್ವಜನಿಕರಲ್ಲಿ ಸಾಹಿತ್ಯ ಪ್ರೀತಿಯನ್ನು, ರಾಜಕೀಯ ಚಿಂತನೆಗಳನ್ನು ಚುರುಕುಗೊಳಿಸುವತ್ತ ಡಿವಿಜಿ ಹಾಕಿಕೊಟ್ಟ ಮೇಲ್ಪಂಕ್ತಿಯನ್ನೇ ಅನುಸರಿಸುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+