• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಲ್ಲಾ, ಸಹಾಯಕಿ ಇಲ್ಲದೆ ಮನೆ ಹೇಗೆ ಮ್ಯಾನೇಜ್ ಮಾಡೋದು?

By ಜಯನಗರದ ಹುಡುಗಿ
|

ಒಂದು ವಾರದ ಹಿಂದೆ ಒಂದು ಸೀರಿಯಲ್ ನಮ್ಮ ಮನೆಯಲ್ಲಿ ನೋಡುತ್ತಿದ್ದರು. ನಾನು ನಮ್ಮ ಅತ್ತೆಗೆ ಆಫೀಸಿನಿಂದ ಬಂದ ಮೇಲೆ ತಮಾಷೆ ಮಾಡುತ್ತಿದ್ದೆ. "ಹೀಗೆಲ್ಲಾ ಆಗೋದಕ್ಕೆ ಸಾಧ್ಯಾನೇ ಇಲ್ಲ ನಿಜ ಜೀವನದಲ್ಲಿ, ಇಲ್ಲದ್ದಿದ್ದನ್ನ ಇದೆ ಅಂತ ಹೇಗೆ ನಂಬಿಸುತ್ತಾರೆ" ಎಂದು ನಗುತ್ತಾ ಮತ್ತೆ ನನ್ನ ಕೆಲಸದಲ್ಲಿ ಮಗ್ನಳಾದೆ.

ಕೆಲಸಕ್ಕೆ ಹೋಗುವ ಹೆಣ್ಣುಮಕ್ಕಳಿಗೆ ಅಥವಾ ಸುಮಾರು ವರ್ಷ ಮನೆಯ ಎಲ್ಲಾ ಕೆಲಸ ಮಾಡಿದ ಹೆಣ್ಣುಮಕ್ಕಳಿಗೆ ಮನೆಗೆ ಬರುವ ಸಹಾಯಕಿಯರು ಆಮ್ಲಜನಕ ಇದ್ದಂತೆ. ಅವರಿಲ್ಲದಿದ್ದರೆ ನಮ್ಮ ಕೆಲಸಗಳೆಲ್ಲಾ ಏರುಪೇರಾಗಿರುತ್ತದೆ. 8ರಿಂದ 10 ಘಂಟೆ ಗಣಕಯಂತ್ರದ ಮುಂದೆ ಕುಟ್ಟುವ ನಮ್ಮ ಕೈಗಳಿಗೆ ಮನೆಗೆ ಬಂದ ನಂತರ ವಿಶ್ರಾಂತಿ ಕೊಡುವವರು ಅವರೇ.

ಎಲ್ಲಿಯವರೆಗೆ ಹೆಣ್ಣುಮಕ್ಕಳು ತಮ್ಮನ್ನು ತಾವು ಅಯ್ಯೋ ಪಾಪ ಅಂದುಕೊಳ್ಳುತ್ತಾರೋ...

ಎಲ್ಲರ ಮನೆಯಲ್ಲೂ ಬೆಳಗ್ಗೆ 7 ಘಂಟೆಯಿಂದ 9 ಘಂಟೆಯವರೆಗೆ ಥಕ ಥಕ ಎಂದು ಎಲ್ಲರೂ ಕಥಕ್ಕಳಿ ಆಡುತ್ತಿರುತ್ತಾರೆ. ಅಂದರೆ ಅಷ್ಟೂ ಮನೆಯ ಕೆಲಸಗಳನ್ನ ಸಹಾಯಕಿಗೆ ಒಪ್ಪಿಸಿ, ಅಡುಗೆಯೇನೋ ಮಾಡಿ 9 ಘಂಟೆಗೆ ಸರಿಯಾಗಿ ಮನೆ ಬಿಡಬೇಕಾದ ಅನಿವಾರ್ಯ ಪರಿಸ್ಥಿತಿ ಹೆಣ್ಣುಮಕ್ಕಳಿಗಿರುವಾಗ ಸಹಾಯಕಿಯರಿಗೆ ಒಂದಷ್ಟು ಆಸ್ಪದ ಕೊಡಲೇಬೇಕು.

ನಮ್ಮ ಮನೆಗೊಂದು ಇಪ್ಪತ್ತು ವರ್ಷದಿಂದ ಬಂದು ನಮಗಾಗಿ ಸಹಾಯ ಒಬ್ಬರು ಮಾಡಿಕೊಡುತ್ತಿದ್ದರು. ನನ್ನ ಗಂಡ, ನಾನು ಅವನ ಮನೆಗೆ ಬಂದ ಮರುಘಳಿಗೆ ಪರಿಚಯ ಮೊದಲು ಮಾಡಿಕೊಟ್ಟಿದ್ದು ಅವರಿಗೇ. ಅವನ್ನನ್ನ ಚಿಕ್ಕ ವಯಸ್ಸಿನಿಂದ ಅದಷ್ಟು ಸಹಾಯ ಮಾಡಿದ್ದರಂತೆ. ಇವರೂ ನಮ್ಮ ಮನೆಯ ಸದಸ್ಯರು ಎಂದು ಹೇಳಿದ್ದ. ಅವರೂ ಹಾಗೇ ಇದ್ದರು. ಹುಟ್ಟಿದ ಹಬ್ಬಕ್ಕೆ, ಹಬ್ಬಕ್ಕೆ ಮನೆಯವರ ಹಾಗೆ ಉಡುಗೊರೆ ತರೋದು, ಅಕಸ್ಮಾತ್ ನನ್ನ ಲೇಖನವನ್ನ ನಮ್ಮತ್ತೆ ತೋರಿಸಿದ್ದರೆ ಖುಷಿಪಡೋದು, ಹಳೆ ಕಾಲದ ಯಾವುದೋ ಕಥೆ ಹೇಳೋದು... ಹೀಗೆ ಹೇಗೋ ಮನೆ ನಡೀತಿತ್ತು. ಸಹಾಯಕಿಯರ ಮೇಲಿರುವ ಅನುಮಾನ ಅವು ಇವು ಯಾವುದೂ ಇರದೇ ನೆಮ್ಮದಿಯಾಗಿ ಜೀವನ ಸಾಗುತ್ತಿತ್ತು.

'ಅಮ್ಮ' ಹೀಗೇ ಇರಬೇಕೆಂದು ಯಾರು ಹೇಳಿದ್ದು ನಿಮಗೆ?

ಹೀಗೆ ಎಲ್ಲಾ ಸೀರಿಯಲ್ ಮತ್ತು ಸಿನೆಮಾದಲ್ಲಿ ಸುಖವೇ ತೋರಿಸುತ್ತಿದ್ದರೆ ಬೇಜಾರಾಗತ್ತಲ್ಲ ಹಾಗೇ, ಇಲ್ಲೂ ಹಾಗಾಗಬಾರದೆಂದು ಥೇಟ್ ನಾನು ಅವತ್ತು ಸೀರಿಯಲ್ ನೋಡಿ ನಕ್ಕಿದ್ದ ಹಾಗೆಯೇ ಒಂದು ದೃಶ್ಯವಾಯಿತು. ಇಲ್ಲಿ ನಗುವ ಹಾಗಿರಲ್ಲಿಲ್ಲ. ನಾಳೆ ಹೇಗಪ್ಪ ಎಂಬ ಚಿಂತೆ ಕಾಡಲು ಶುರುವಾಯಿತು. ನಮ್ಮ ಮನೆಯ ಸಹಾಯಕಿ ಪೂರ್ತಿ ಸೀರಿಯಲ್ ಡೈಲಾಗ್ ಹೊಡೆದು ಮತ್ತೆ ಬರಲ್ಲ ಎಂದು ಹೇಳಿಹೋದರು. ಅದೇ ಸಮಯದಲ್ಲಿ ವಿರಹದ ಟಾಸ್ಕ್ ಎಂದು ಕಥೆ ಬರೆಯುವ ಗುಂಪಿನಲ್ಲಿ ಚರ್ಚೆಯಾಗುತ್ತಿತ್ತು. ಈ ವಿರಹ ಅನ್ನೋದು ಏನು ಎಂದು ಯೋಚನೆ ಮಾಡುತ್ತಿದ್ದೆ. ಯಾರಾದರೂ ನಮ್ಮ ಜೊತೆಗಿದ್ದಾಗ ಸಂತೋಷ, ಇಲ್ಲದಿದ್ದಾಗ ಪದೇ ಪದೇ ನೆನಪಿಗೆ ಬರೋರು ಮತ್ತು ಅವರ ಅನಿವಾರ್ಯತೆ ನಮ್ಮ ಜೀವನದಲ್ಲಿ ಇದ್ದೇ ಇದೆ ಅನ್ನೋದು ವಿರಹ ಎಂಬ ವ್ಯಾಖ್ಯಾನ ಸಿಕ್ಕಾಗ ನಾನು ಈಗ ವಿರಹಕ್ಕೆ ಇದೇ ಕಥೆ ಬರೆಯಲಾ ಎಂದೂ ಅನ್ನಿಸತೊಡಗಿತು.

ಮಧ್ಯ ವಯಸ್ಕ ಮಹಿಳೆಯರಲ್ಲಿ ಮತ್ತೆ ಚೈತ್ರದ ಚಿಗುರು

ಸರಿ ಆಗಿದ್ದಾಯಿತು ಎಂದು ಬೇರೆಯವರನ್ನ ಹುಡುಕಲು ಹೋದಾಗಲೇ ಎಲ್ಲಾ ತಮಾಷೆಗಳು ಆಗಿದ್ದು. ನಮ್ಮಂತಹ ಸಾಫ್ಟ್ವೇರಿನವರಿಗೆ ಎಲ್ಲಾದಿಕ್ಕೂ ಗೂಗಲ್ ದೇವರಾಗಿರುವಾಗ ಅಲ್ಲಿ ಹುಡುಕೋದಕ್ಕೆ ಶುರು ಮಾಡಿದ್ದೆ. ಅವರು ಯಾವ ಯಾವ ಕೆಲಸ ಮಾಡುತ್ತಾರೆ, ಎಷ್ಟು ಅದು ಇದು ಎಂದೆಲ್ಲಾ ವಿಚಾರಿಸಬೇಕಿತ್ತು. 6 ವರ್ಷದ ಕೆಲಸದಲ್ಲಿ ಸುಮಾರು ಜನರನ್ನ ಸಂದರ್ಶನ ಮಾಡಿದ್ದರಿಂದ ಆ ಸ್ಕಿಲ್ಗಳನ್ನೆಲ್ಲಾ ಉಪಯೋಗಿಸೋಣವೆಂದು ಅಂದುಕೊಂಡೆ. ನೋಡಿದರೆ ಅವೆಲ್ಲಾ ದಂಡಕ್ಕಾಯಿತು ಎಂದು ಗೊತ್ತಾಯಿತು.

ಎಲ್ಲ ಹೆಣ್ಮಕ್ಕಳು ಕೆಲಸಕ್ಕೆ ಹೋಗುವವರೇ, ಕೆಲವರಿಗೆ ಮಾತ್ರ ಸಂಬಳ!

ಮನೆಯಲ್ಲಿ ಯಾವ ಬ್ರಾಂಡ್ ಸಾಬೂನು ಉಪಯೋಗಿಸೋದು, ಎಷ್ಟು ಜನ ಕೆಲಸಕ್ಕೆ ಹೋಗೋದು, ಎಷ್ಟು ಬಾರಿ ಅಡುಗೆ ಮಾಡುತ್ತೇವೆ, ಎಷ್ಟು ಬಟ್ಟೆ ಹಾಕುತ್ತಾರೆ ಎಂದೆಲ್ಲಾ ತಲೆಕೆಡುವ ಪ್ರಶ್ನೆ ಕೇಳಿ ನನ್ನನ್ನೇ ಅರ್ಧ ಸಂದರ್ಶನ ಮಾಡಿದ್ದರು ಒಂದು ಸಹಾಯಕಿ. ಮುಂದಿನವರಿಗೆ ಈ ಉತ್ತರವನ್ನೆಲ್ಲಾ ನಾನು ರೆಡಿ ಮಾಡಿಕೊಂಡು ಉತ್ತರ ಹೇಳಲು ಅಂದುಕೊಂಡಾಗ ಬೇರೆ ಪ್ರಶ್ನೆಗಳನ್ನ ನನಗೇ ಕೇಳಿ ಮತ್ತೆ ತಲೆ ಕೆಡಿಸಿದರು. ಕಡೆಗೆ ನನ್ನ ಗೂಗಲ್ ಸರ್ಚ್, ಆಪ್ ಕಥೆಗಳು ಮುಗಿದು ಅಕ್ಕ ಪಕ್ಕದವರೇ ಗತಿ ಎಂದು ಅಂದುಕೊಂಡು ಅತ್ತೆಗೆ ಹೇಳಿದೆ.

ಅವರು ಅದನ್ನೆಲ್ಲಾ ವಿಚಾರಿಸಿ ಹೇಳಿದ್ದು, "ನಮ್ಮ ಮನೆಯ ಕೆಲಸವನ್ನ ಅರ್ಧ ಅರ್ಧ ಮಾಡಲು ಬರುತ್ತಾರೆ" ಎಂದು ಬೇಜಾರು ಮಾಡಿಕೊಂಡರು. 5 ಜನರಿರುವ ಮನೆಯಲ್ಲಿ ಬೆಳಗ್ಗೆ 5 ಘಂಟೆಯಿಂದ ಹುಚ್ಚರಾಗಿ ಕೆಲಸ ಮಾಡಲು ಶುರುಮಾಡಿದ್ದೆವು. ಮೊದಲ ದಿವಸ ಪರವಾಗಿಲ್ಲ, ಎರಡನೆಯ ದಿನಕ್ಕೆ ಎಲ್ಲರ ಧ್ವನಿ ತಾರಕ್ಕೇರಿತ್ತು. ಇವತ್ತೇನಾದರೂ ಆಗಲಿ ಭಗೀರಥನ ಹಾಗೆ ಗಂಗೆಯನ್ನ ತರಲೇಬೇಕಾಗಿತ್ತು. ಮನೆಗೆ ಬಂದ ಮೇಲೆ ಏನಾದರೂ ಮಾಡೋಣ ಅಂದುಕೊಂಡಾಗಲೇ ಸೀರಿಯಲ್ಲಿನ ಹಾಗೆ ಬಿಟ್ಟು ಹೋಗಿದ್ದ ಸಹಾಯಕಿ ಸಿನೆಮಾದ ಕ್ಲೈಮಾಕ್ಸಿನಂತೆ ಮತ್ತೆ ವಾಪಸ್ಸು ಬಂದರು. ಅಲ್ಲಿಗೆ ನಮ್ಮ ಸಹಾಯಕಿ ಕಥೆ ಮುಗಿಯಿತು.

ಒಂದು ಮನೆಯ ಸಮತೋಲನವನ್ನ ಕಾಪಾಡುವಲ್ಲಿ ಎಷ್ಟು ಜನರ ಪಾತ್ರವಿರುತ್ತದೆ ಎಂಬುದು ಅರಿವಾಯಿತು. ನಿಮ್ಮ ಮನೆಗಳಲ್ಲಿ ಇವೆಲ್ಲಾ ಕಥೆ ಹೇಗಿದೆ ನನಗೆ ಬರೆದು ತಿಳಿಸಿ...

English summary
How to manage home work without domestic worker? Jayanagarada Hudugi Meghana Sudhindra throws light on this topic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X