Bda: ಬಿಡಿಎ ಮುಕ್ತ ಸಂವಾದದಿಂದ ಸೈನಿಕರ ಸಮಸ್ಯೆಗೆ ಪರಿಹಾರ: ಬೆಂಗಳೂರು ಆಸ್ತಿದಾರರಿಗೆ ಇಲ್ಲಿದೆ ಗುಡ್‌ನ್ಯೂಸ್
BDA: ಬೆಂಗಳೂರಿನ ಆಸ್ತಿದಾರರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹಲವು ವಿನೂತನ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದೆ. ಇದೀಗ ಬಿಡಿಎ ಮುಕ್ತ ಸಂವಾದ ಎಂಬ ಹೊಸ ಬೆಳಕು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹೇಳಿದೆ. ಬೆಂಗಳೂರಿನಲ್ಲಿ ಬಿಡಿಎ ಆಸ್ತಿದಾರರಿಗೆ ಈ ಮುಕ್ತ ಸಂವಾದವು ವರವಾಗಿ ಬದಲಾಗಿದೆ.
ಬಿಡಿಎ ಮುಕ್ತ ಸಂವಾದ ಎಂಬ ಹೊಸ ಬೆಳಕು. ನೀವು ಹಿಮಚ್ಛಾದಿತ ಈಶಾನ್ಯ ಭಾರತದ ಗಡಿಯಲ್ಲಿದ್ದರೂ, ಜರ್ಮನಿ ಅಥವಾ ಅಮೆರಿಕದಲ್ಲೇ ಇದ್ದರೂ- ನಿಮ್ಮ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುತ್ತಿದೆ. ಕರ್ನಾಟಕದ ಸೈನಿಕರೊಬ್ಬರ ನಿವೇಶನ ಪ್ರಕರಣ ಇದಕ್ಕೊಂದು ಅತ್ಯುತ್ತಮ ನಿದರ್ಶನ. ಕಳೆದ ಮೂರು ವರ್ಷಗಳಿಂದ ಅವರು ಅತಿ ಎತ್ತರದ ಗಡಿಭಾಗಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದು, ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲೂ ನಮ್ಮ ದೇಶವನ್ನು ಕಾಪಾಡುತ್ತಿರುವ ಧೀರ ಯೋಧ.

ಬೆಂಗಳೂರಿನ ಡಾ.ಶಿವರಾಮ ಕಾರಂತ ಲೇಔಟ್ ವ್ಯಾಪ್ತಿಯಲ್ಲಿ ಅವರು ಹೊಂದಿದ್ದ ಒಂದು ಸಣ್ಣ ಮನೆಯನ್ನು, ಬಿಡಿಎ 2018ರಲ್ಲಿ ಲೇಔಟ್ ಅಭಿವೃದ್ಧಿಗಾಗಿ ಸ್ವಾಧೀನಪಡಿಸಿಕೊಂಡಿತ್ತು. ಈಗಾಗಲೇ ನಿರ್ಮಾಣಗೊಂಡಿರುವ ಮನೆಯನ್ನು ನ್ಯಾಯಾಲಯದ ಆದೇಶದ ನಂತರ ಸ್ವಾಧೀನಪಡಿಸಿಕೊಂಡರೆ ಪರ್ಯಾಯ ನಿವೇಶನವನ್ನು ಬಿಡಿಎ ನೀಡುತ್ತದೆ. ಆದರೆ ಅದಕ್ಕಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನ 2024ರ ಸೆಪ್ಟೆಂಬರ್‌ನಲ್ಲೇ ಮುಗಿದು ಹೋಗಿತ್ತು. ನಿರಂತರವಾಗಿ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರಿಂದ ಅಂತಿಮ ಗಡುವು ಯೋಧರ ಗಮನಕ್ಕೆ ಬಾರದೇ ಮಿಸ್ ಮಾಡಿಕೊಳ್ಳಬೇಕಾಯಿತು. ಆದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
BDA ಈ ಸಮಸ್ಯೆ ಪರಿಹಾರವಾಗಿದ್ದು ಹೇಗೆ ?
ಈ ಸಮಸ್ಯೆಗೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಕೇಳಿದಾಗ, ಗಡುವು ಮುಗಿದಿರುವುದರಿಂದ ಈಗ ಏನೂ ಮಾಡಲು ಆಗುವುದಿಲ್ಲ ಎಂದು ಕರ್ತವ್ಯನಿರತ ಸೈನಿಕರಿಗೆ ಹೇಳಿದ್ದರು. ನಂತರ ಅವರು 2026ರ ಫೆಬ್ರವರಿಯಲ್ಲಿ ನಡೆದ 'ಬಿಡಿಎ ಮುಕ್ತ ಸಂವಾದ' ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಯನ್ನು ವಿವರಿಸಿದ್ದು, ವಿಚಾರವನ್ನು ಪರಿಶೀಲಿಸಿ ಮುಂದಿನ ಸಭೆಯಲ್ಲಿ ಸೂಕ್ತ ಕ್ರಮದ ಭರವಸೆಯನ್ನು ನೀಡಲಾಗಿತ್ತು. ಬಿಡಿಎ ಮಾನ್ಯ ಅಧ್ಯಕ್ಷರಾದ ಎನ್.ಎ ಹ್ಯಾರಿಸ್ ಅವರು ಸಮಸ್ಯೆಯ ಸೂಕ್ಷ್ಮತೆಯನ್ನು ಅರಿತು, ಇದು ನಿಜಕ್ಕೂ ನ್ಯಾಯಸಮ್ಮತವಾದ ಪ್ರಕರಣವಾಗಿದ್ದು ಸೂಕ್ತ ಪರಿಹಾರ ಕಂಡುಹಿಡಿಯಲು ಸೂಚಿಸಿದರು. ಅಲ್ಲದೇ, ಬಿಡಿಎ ಆಯುಕ್ತರು ಹೈಕೋರ್ಟ್ ಮೊರೆ ಹೋಗಿ ಗಡುವು ವಿಸ್ತರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.
ತಕ್ಷಣವೇ ಸ್ಪಂದಿಸಿದ ಬಿಡಿಎ, ಸೈನಿಕರ ಸೇವೆ ಮತ್ತು ಅವರಿಗಾದ ತೊಂದರೆಗಳನ್ನು ವಿವರಿಸಿ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿತು. ಪ್ರಕರಣದ ಮಹತ್ವವನ್ನು ಗಮನಿಸಿದ ಹೈಕೋರ್ಟ್, ಬದಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸಿದ್ದು ಮಾತ್ರವಲ್ಲ, ಪ್ರತಿಯೊಂದು ವಿಷಯಕ್ಕೂ ನ್ಯಾಯಾಲಯದ ಆದೇಶದ ಅಗತ್ಯವಿಲ್ಲ ಎಂಬುದಾಗಿ ಮೌಖಿಕವಾಗಿ ಸೂಚಿಸಿತು. ಅದರಂತೆ ಗುರುವಾರದಂದು ಅವರು ಬಹುದೂರದ ಗಡಿಪ್ರದೇಶದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಉತ್ತರ ವಲಯದ ಓಪನ್ ಹೌಸ್ ಮೀಟಿಂಗ್‌ನಲ್ಲಿ ಭಾಗವಹಿಸಿದ್ದರು. ಹೈಕೋರ್ಟ್ ಆದೇಶದಂತೆ ನಿಯಮಾನುಸಾರ ಪರ್ಯಾಯ ನಿವೇಶನ ಹಂಚಿಕೆ ಪ್ರಕ್ರಿಯೆ ಪ್ರಗತಿಯಲ್ಲಿರೋ ವಿಚಾರವನ್ನು ಸಭೆಯಲ್ಲಿ ಯೋಧರೊಂದಿಗೆ ಹಂಚಿಕೊಳ್ಳಲಾಯಿತು ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಬದಲಿ ನಿವೇಶದ ಆಸೆಯನ್ನೇ ಕೈಬಿಟ್ಟಿದ್ದ ಅವರು, ಈ ಖುಷಿಯ ವಿಚಾರವನ್ನು ಸಂಭ್ರಮಿಸಿದ್ದಾರೆ. ಮಸ್ಯೆಗೆ ಪರಿಹಾರ ದೊರೆತಿದ್ದು, ಅವರಿಗೆ ಸಂತೋಷದ ಕ್ಷಣ. ಇದು ಯೋಧರ, ಬಿಡಿಎ ಹಾಗೂ ನ್ಯಾಯಾಲಯದ ಸಹಕಾರದಿಂದ ಸಾಧ್ಯವಾದ ತಂಡದ ನಿಜವಾದ ಯಶಸ್ಸು ಆಗಿದೆ. ಇದೇ ರೀತಿಯಾಗಿ, ಕಳೆದ ವಾರ ಜರ್ಮನಿಯಿಂದ ಸಂಪರ್ಕಿಸಿದ ನಾಗರಿಕರೊಬ್ಬರ ಸಮಸ್ಯೆಗೆ ಓಪನ್ ಹೌಸ್ ಮೀಟಿಂಗ್‌ನಲ್ಲಿ ತ್ವರಿತ ಪರಿಹಾರ ದೊರೆಯಿತು.
ಇದಕ್ಕೂ ಮೊದಲು ಅಮೆರಿಕದಲ್ಲಿದ್ದ ನಾಗರಿಕರ ಸಮಸ್ಯೆಗಳೂ ಇದೇ ರೀತಿಯಲ್ಲಿ ಬಗೆಹರಿಸಲಾಗಿತ್ತು. ನೀವು ಬೆಂಗಳೂರಿನಲ್ಲಿ ಅಥವಾ ಜಗತ್ತಿನ ಯಾವುದೇ ಮೂಲೆಯಲ್ಲಿರಲಿ, ಬಿಡಿಎಯ ಓಪನ್ ಹೌಸ್ ಮೀಟಿಂಗ್‌ಗಳಲ್ಲಿ ಭಾಗವಹಿಸಿ ನೈಜ ಸಮಸ್ಯೆಗಳನ್ನು ಮುಂದಿಟ್ಟರೆ ನ್ಯಾಯಸಮ್ಮತ ಪರಿಹಾರ ಖಚಿತ ಎಂಬುದಕ್ಕೆ ಇದುವೇ ನಿದರ್ಶನಗಳು. "ನಾಗರಿಕರೇ ಮೊದಲು" ಆಡಳಿತದ ಅತ್ಯುತ್ತಮ ನಿದರ್ಶನ ಎಂದು ಬಿಡಿಎ ಪ್ರಕಟಣೆ ತಿಳಿಸಿದೆ.
-
ಬೆಂಗಳೂರು ಬಿಸಿನೆಸ್ ಕಾರಿಡಾರ್ ಆಗಿ ಬದಲಾದ ಪೆರಿಫೆರಲ್ ರಿಂಗ್ ರೋಡ್: 2029ರ ವೇಳೆಗೆ ನಗರದ ಟ್ರಾಫಿಕ್ಗೆ ಸಿಗಲಿದೆ ಮುಕ್ತಿ -
Bengaluru property: ಬೆಂಗಳೂರಿನ 51 ಆಸ್ತಿಗಳ ಸ್ವಾಧೀನಕ್ಕೆ ಮುಂದಾದ ಉತ್ತರ ನಗರ ಪಾಲಿಕೆ -
Bengaluru Waste: ಬೆಂಗಳೂರಲ್ಲಿ ಕಸ ಸಂಗ್ರಹ ವ್ಯವಸ್ಥೆಯಲ್ಲಿ ಹೊಸ ಸುಧಾರಣೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್












Click it and Unblock the Notifications