ಹೋಟೆಲ್ ಬಂದ್ ಭೀತಿ, ಬೆಂಗಳೂರು ಸೇರಿ ಹಲವು ನಗರಗಳಲ್ಲಿ ಗ್ಯಾಸ್ ಇಲ್ಲದೆ ಪರದಾಟ... LPG Shortage

ಹೋಟೆಲ್ ನಂಬಿ ಪ್ರತಿದಿನ ಕೋಟ್ಯಂತರ ಜನರು ಊಟ ಮಾಡುತ್ತಾರೆ, ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಮಾತ್ರ ಅಲ್ಲ ಆರೋಗ್ಯ ಸರಿ ಇಲ್ಲದೇ ಇರುವವರ ಪಾಲಿಗೆ ಕೂಡ ಹೋಟೆಲ್ ಆಧಾರ. ಹೀಗಿದ್ದಾಗ ಕೋಟಿ ಕೋಟಿ ಜನರು ಆಹಾರಕ್ಕಾಗಿ ನಂಬಿರುವ ಇದೇ ಹೋಟೆಲ್‌ಗಳು ಬೀಗ ಹಾಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಅಂದಹಾಗೆ ವಾಣಿಜ್ಯ ಎಲ್‌ಪಿಜಿ ಕೊರತೆ ಕಾರಣಕ್ಕೆ ನಮ್ಮ ಭಾರತದ ಹಲವು ನಗರಗಳಲ್ಲಿ ಹೋಟೆಲ್‌ಗಳು ಬಾಗಿಲು ಹಾಕುವ ಪರಿಸ್ಥಿತಿ ನಿರ್ಮಾಣ ಆಗಿದ್ದು, ತಲ್ಲಣ ಸೃಷ್ಟಿಯಾಗಿದೆ.

ಕೇಂದ್ರ ಸರ್ಕಾರ ಈಗಾಗಲೇ ಹೊಸ ಆದೇಶ ಹೊರಡಿಸಿದ್ದು, ಗೃಹ ಬಳಕೆಗೆ ಮಾತ್ರ ಎಲ್‌ಪಿಜಿ ನೀಡಿ ಹಾಗೂ ನಂತರ ಸ್ಥಾನ ವಾಹನಗಳಿಗೆ ಇರಲಿ ಎಂದು ತಿಳಿಸಿದೆ. ಹೀಗಾಗಿ ವಾಣಿಜ್ಯ ಬಳಕೆಗೆ ಎಂದರೆ, ಹೋಟೆಲ್ ಸೇರಿದಂತೆ ಕೈಗಾರಿಕೆಗಳಿಗೆ ನೀಡುವ ಗ್ಯಾಸ್ ಅನ್ನ ನಿಲ್ಲಿಸಲು ಸೂಚಿಸಲಾಗಿದೆ. ಈ ಹಿನ್ನೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಸಂಚಲನ ಸೃಷ್ಟಿಯಾಗಿದೆ. ದೇಶದಲ್ಲಿ ಇರುವ ಲಕ್ಷ ಲಕ್ಷ ಹೋಟೆಲ್‌ಗಳ ಪಾಲಿಗೆ ಆಧಾರವಾಗಿದ್ದ ಇದೇ ಎಲ್‌ಪಿಜಿ ಈಗ ಆಘಾತ ನೀಡಿದ್ದು, ಗ್ಯಾಸ್ ಇಲ್ಲದೆ ಹೋಟೆಲ್ ಬಂದ್ ಮಾಡುವ ಪರಿಸ್ಥಿತಿ ಬಂದಿದೆ.

LPG Shortage

ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿದಂತೆ ಮುಂಬೈ & ಚೆನ್ನೈ, ಹೈದರಾಬಾದ್ ಹಾಗೂ ನವದೆಹಲಿ ನಗರದಲ್ಲಿ ಕೂಡ ಇದೇ ವಾತಾವರಣ ಇದೆ. ಅಲ್ಲದೇ ದೇಶದಲ್ಲಿ ಬಹುತೇಕ ಎಲ್ಲಾ ಮಹಾನಗರಗಳ ಪರಿಸ್ಥಿತಿ ಹೀಗೆ ಇದ್ದು, ಊಟಕ್ಕಾಗಿ ಜನರು ಪದಾಡುವ ಆತಂಕ ಎದುರಾಗಿದೆ. ಮಧ್ಯಪ್ರಾಚ್ಯ ಯುದ್ಧ ಇನ್ನಷ್ಟು ಕಠಿಣವಾಗುತ್ತಿದ್ದು, ಮತ್ತಷ್ಟು ದಿನಗಳ ಕಾಲ ಇದೇ ರೀತಿ ತಿಕ್ಕಾಟ ನಡೆಯುವ ಆತಂಕ ಈಗ ಆವರಿಸಿದೆ. ಹೀಗಾಗಿ ಎಲ್‌ಪಿಜಿ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತಾ? ಎಂಬ ಪ್ರಶ್ನೆ ಕೂಡ ಮೂಡಿದೆ.

ವಡೆ & ಗೋಬಿ ಮಂಚೂರಿ ಸಿಗುತ್ತಿಲ್ಲ!

ಬಹುತೇಕರು ಹೋಟೆಲ್‌ಗೆ ಹೋಗುವುದು ವಡೆ, ಗೋಬಿ ಮಂಚೂರಿ, ನೂಡಲ್ಸ್... ಹೀಗೆ ಬಗೆಬಗೆಯ ಖಾದ್ಯ ಸೇವನೆ ಮಾಡಲು. ಆದರೆ ಈಗ ಗ್ಯಾಸ್ ಸಿಲಿಂಡರ್ ಸಿಗದೇ ಇರುವ ಕಾರಣಕ್ಕೆ ದಿಢೀರ್ ಅಂತಾ ಪರದಾಟ ಶುರುವಾಗಿ, ವಡೆ, ಗೋಬಿ ಮಂಚೂರಿ, ನೂಡಲ್ಸ್ ಸೇರಿದಂತೆ ಅತಿಹೆಚ್ಚು ಗ್ಯಾಸ್ ಬಳಸುವ ಖಾದ್ಯ ಅಥವಾ ತಿಂಡಿಗಳನ್ನ ಮೆನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಅತ್ತ ಗ್ಯಾಸ್ ಖರೀದಿ ಮಾಡಲು ಹೋಟೆಲ್ ಮಾಲೀಕರು ನರಳುತ್ತಿದ್ದರೆ, ಇನ್ನೊಂದು ಕಡೆ ಕದ್ದುಮುಚ್ಚಿ ಈ ವಾಣಿಜ್ಯ ಸಿಲಿಂಡರ್ ಮಾರಾಟ ಮಾಡುತ್ತಿರುವ ಆರೋಪ ಇದೀಗ ಕೇಳಿಬಂದಿದೆ. ಹೀಗಾಗಿಯೇ ಸದ್ಯ ದೊಡ್ಡ ಚರ್ಚೆ ಶುರುವಾಗಿದ್ದು, ಭಾರಿ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಹೋಟೆಲ್ ಮಾಲೀಕರು ಈ ಸಮಸ್ಯೆ ಸರಿ ಮಾಡಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+