• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾರ್ಶನಿಕ ಡಿವಿಜಿ ಹುಟ್ಟುಹಬ್ಬಕ್ಕೆ ಎರಡು ವಿಶಿಷ್ಟ ಕಾರ್ಯಕ್ರಮ

By Mahesh
|

ಬೆಂಗಳೂರು, ಮಾರ್ಚ್ 16: ದಾರ್ಶನಿಕ ಡಿ.ವಿ ಗುಂಡಪ್ಪ ಅವರ 131ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ಬೆಂಗಳೂರಲ್ಲಿ ಎರಡು ಪ್ರಮುಖ ಕಾರ್ಯಕ್ರಮಗಳು ನಿಗದಿಯಾಗಿವೆ.

ಸಮನ್ವಿತ ಸಂಸ್ಥೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಡಿವಿಜಿ ಅವರ ಹುಟ್ಟುಹಬ್ಬದ ಸಂಭ್ರಮದ ಜತೆಗೆ, ಮೇರುಕೃತಿ ಮಂಕುತಿಮ್ಮನ ಕಗ್ಗವನ್ನು ರಚಿಸಿ 75 ವರ್ಷಗಳು ಸಂದಿರುವ ಹಿನ್ನಲೆಯಲ್ಲಿ 'ಕಗ್ಗ ಅಮೃತ ಯಾತ್ರೆ' ಯನ್ನು ಮಾರ್ಚ್ 17ರಂದು ಶನಿವಾರ ಸಂಜೆ 6.30ರಿಂದ ನುಡಿ ನಮನ, ಗೀತನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸ್ಥಳ: ಬನಶಂಕರಿ 3ನೇ ಹಂತದ ವಾಟರ್ ಬ್ಯಾಂಕ್ ರಸ್ತೆ ಬಳಿ ಇರುವ ಕೆ.ಎಸ್ ನರಸಿಂಹ ಸ್ವಾಮಿ ಉದ್ಯಾನವನದಲ್ಲಿ ಆಯೋಜಿಸಲಾಗಿದೆ.

ಉಪಸ್ಥಿತಿ : ನಗರ ಜಿಲ್ಲಾಧಿಕಾರಿ ಕೆ.ಎ ದಯಾನಂದ, ಶಾಸಕ ಎಲ್ ವಿ ರವಿಸುಬ್ರಹ್ಮಣ್ಯ.

ಹಿರಿಯ ಗಾಯಕ ಪುತ್ತೂರು ನರಸಿಂಹ ನಾಯಕ್ ಹಾಗೂ ತಂಡದಿಂದ ಗೀತ ಗಮನ ಸಲ್ಲಿಸಲಿದ್ದಾರೆ. ನಾಗಚಂದ್ರಿಕಾ ಭಟ್, ಅಂಜಲಿ ಹಳಿಯಾಳ, ಹರೀಶ್ ನರಸಿಂಹ, ದಿವಾಕರ್ ಕಶ್ಯಪ್, ರಾಘವೇಂದ್ರ ಜೋಶಿ-ತಬಲಾ, ಹಾರ್ಮೊನಿಯಂನಲ್ಲಿ ವೆಂಕಟೇಶ್ ಜೋಶಿ ಅವರು ಗೀತ ಗಾಯನಕ್ಕೆ ಸಾಥ್ ನೀಡಲಿದ್ದಾರೆ.ಕಗ್ಗರಸಧಾರೆ ಕರ್ತೃ ರವಿ ತಿರುಮಲೈ ಅವರು ಕಗ್ಗ ವಾಚನ ಮಾಡಲಿದ್ದಾರೆ.

****

ಸಮಾಜ ಸೇವಕರ ಸಮಿತಿ: ಕನ್ನಡದ ದಾರ್ಶನಿಕ ಕವಿ, ಕಾವ್ಯರ್ಷಿ ಡಿ.ವಿ.ಜಿಯವರ 131 ನೇ ಜನ್ಮದಿನ. ನಮ್ಮ ಸಮಾಜ ಸೇವಕರ ಸಮಿತಿ‌ಯು ಕಳೆದ 13 ವರ್ಷಗಳಿಂದ ಪ್ರತಿವರ್ಷ ಮಾರ್ಚ್ 17 ರಂದೇ ಡಿವಿಜಿಯವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬಂದಿದೆ.

ಪ್ರತಿವರ್ಷದಂತೆ ಈ ವರ್ಷವೂ ವೈವಿಧ್ಯಮಯವಾಗಿ ಡಿವಿಜಿ ಯವರ ಜನ್ಮದಿನ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ವರ್ಷ ಡಿವಿಜಿಯವರ ಪುತ್ರ, ಅಂತಾರಾಷ್ಟ್ರೀಯ ಖ್ಯಾತಿಯ ಸಸ್ಯವಿಜ್ಞಾನಿ ಡಾ. ಬಿಜಿಎಲ್ ಸ್ವಾಮಿ ಯವರ ಜನ್ಮಶತಮಾನೋತ್ಸವ ವರ್ಷವೂ ಆಗಿರುವುದರಿಂದ ಈ ಬಾರಿ ಡಿವಿಜಿ ಜನ್ಮದಿನ ಕಾರ್ಯಕ್ರಮದಲ್ಲಿ ಬಿಜಿಎಲ್ ಸ್ವಾಮಿಯವರ ಜನ್ಮದಿನಾಚರಣೆ, ಅವರ ಬದುಕು-ಬರಹದ ಕುರಿತ ಚಿಂತನೆ-ಸ್ಮರಣೆಯನ್ನೂ ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಡಿವಿಜಿ ಯವರ 131 ನೇ ಜನ್ಮದಿನಾಚರಣೆಯ ಅಂಗವಾಗಿ 'ಡಿವಿಜಿಯವರ ಚಿಂತನೆಗಳು' ವಿಷಯದ ಕುರಿತು ವಿಶ್ವ ಖ್ಯಾತಿಯ ವೈಮಾನಿಕ ವಿಜ್ಞಾನಿ ಪದ್ಮಭೂಷಣ ಪ್ರೊ. ರೊದ್ದಂ ನರಸಿಂಹ ಅವರು ವಿಷಯ ಮಂಡಿಸಲಿದ್ದಾರೆ.

'ಡಾ. ಬಿಜಿಎಲ್ ಸ್ವಾಮಿ ಅವರ ಬರಹಗಳ ಕುರಿತು' ಖ್ಯಾತ ಕಾದಂಬರಿಕಾರ ಹಾಗೂ ಕೃಷಿ ವಿಜ್ಞಾನಿ ಡಾ. ಕೆ. ಎನ್. ಗಣೇಶಯ್ಯ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಬಿಜಿಎಲ್ ಸ್ವಾಮಿಯವರ ಪುಸ್ತಕ ಹಾಗೂ ವಸ್ತು ಪ್ರದರ್ಶನ ಮತ್ತು ಅವರ ಕೃತಿಯನ್ನು ಆಧರಿಸಿದ ಕಿರುನಾಟಕ ಪ್ರದರ್ಶನ ಕೂಡಾ ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದೆ. ಡಾ. ರೋಹಿಣಿ ಮೋಹನ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ಕೂಡಾ ಇರಲಿದೆ.

ಡಿವಿಜಿ ಹಾಗೂ ಬಿಜಿಎಲ್ ಸ್ವಾಮಿ ಅವರ ತಂದೆ-ಮಗನ ಜೋಡಿ ತಮ್ಮ ಅಪಾರ ಪ್ರತಿಭೆ ಹಾಗೂ ವೈವಿಧ್ಯಮಯ ಬರಹಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅಪರೂಪದ ಜೋಡಿ.

ಕನ್ನಡದಲ್ಲಿ ವಿಜ್ಞಾನ ಬರಹಗಳಿಗೆ ಅಡಿಪಾಯ ಹಾಕಿಕೊಟ್ಟವರೇ ಬಿಜಿಎಲ್ ಸ್ವಾಮಿ. ವಿಶ್ವವಿಖ್ಯಾತ ಸಸ್ಯವಿಜ್ಞಾನಿಯಾಗಿಯೂ ಅವರ ಕೊಡುಗೆ ಅಪಾರ. ಕನ್ನಡದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಮತ್ತು ಅವರ ಬದುಕಿಗೆ ಸಂಬಂಧಿಸಿದಂತೆ ವೈಜ್ಞಾನಿಕ ವಿಷಯಗಳನ್ನು ತಿಳಿಸಿಕೊಟ್ಟವರಲ್ಲಿ ಸ್ವಾಮಿ ಮೊದಲಿಗರು.

ಹೀಗೆ ಸದ್ವಿಚಾರಗಳನ್ನು ಕನ್ನಡಕ್ಕೆ ತಂದು ತಮ್ಮ ಸಾಹಿತ್ಯದ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿದ ಈ ಧೀಮಂತ ತಂದೆ-ಮಗನ ಜೋಡಿಗೆ ಅವರ ಜನ್ಮದಿನದಂದು ನಮಿಸುವ ಅವರ ವಿಚಾರಗಳನ್ನು ಅರಿಯುವ, ಪಸರಿಸುವ ಪ್ರಯತ್ನ ಸಮಾಜ ಸೇವಕರ ಸಮಿತಿಯದ್ದು.‌ ಈ ಕಾರ್ಯಕ್ರಮಕ್ಕೆ ಸಮಾಜ ಸೇವಕರ ಸಮಿತಿಯ ಪರವಾಗಿ ಎಲ್ಲರಿಗೂ ಮುಕ್ತ ಹೃದಯದ ಸ್ವಾಗತ.

ದಿನಾಂಕ: 17 ಮಾರ್ಚ್ 2018 , ಸಂಜೆ 5.30 ರಿಂದ

ಸ್ಥಳ: ಉದಯಭಾನು ಕಲಾಸಂಘ, ಗವಿಪುರಂ, ಬೆಂಗಳೂರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
DV Gundappa's 131th Birth Anniversary celebration organised by Samanvita group at Banashankari 3rd stage, Bengaluru. Basavanagudi' Samaja Sevakara Samiti is celebrating DVG birth anniversary at Udayabanu Kala Sangha.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more