ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಮ್ 2010: ಕನ್ನಡಿಗರಿಗೆ ಕೆಲ್ಸ ಸಿಗುವುದೇ?

By * ನಾ.ಕು. ಗಣೇಶ್, ಬೆಂಗಳೂರು
|
Google Oneindia Kannada News

Murugesh Nirani
ಜೂನ್ 3 ಮತ್ತು 4ರಂದು ಬೆಂಗಳೂರಿನಲ್ಲಿ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ ಅಂದಾಜು 4 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆ ಆದೀತೆಂಬ ಸದಾಶಯದ ನಿರೀಕ್ಷೆ ರಾಜ್ಯ ಕೈಗಾರಿಕಾ ಸಚಿವ ಮುರುಗೇಶ ನಿರಾಣಿಯವರದಾಗಿದೆ. ಈಗಾಗಲೇ ಅನುಮೋದನೆ ಪಡೆದಿರುವ ಯೋಜನೆಗಳಿಂದ ಕನಿಷ್ಠ 8 ಲಕ್ಷ ಅರ್ಹ ಆಕಾಂಕ್ಷಿಗಳಿಗೆ ಉದ್ಯೋಗ ಲಭಿಸುವುದು ಖಚಿತವೆಂಬ ಅಂಶವೂ ಅಭಿವ್ಯಕ್ತವಾಗಿದೆ.

ಭಾರತದ ಇತರ ಎಲ್ಲ ರಾಜ್ಯಗಳಲ್ಲಿನ ರಾಜ್ಯ, ಕೇಂದ್ರ ಸರ್ಕಾರಗಳ ಹಾಗೂ ಖಾಸಗಿ, ವಿದೇಶಿ ಸ್ವಾಮ್ಯದ ಕಚೇರಿ, ಕಾರ್ಖಾನೆ, ಉದ್ಯಮಗಳಲ್ಲಿನ ಉದ್ಯೋಗಾವಕಾಶಗಳ ಸಿಂಹಪಾಲು ಆಯಾ ಪ್ರಾದೇಶಿಕ ಅಧಿಕೃತ ಭಾಷಾ ಜನತೆಗೇ ಲಭಿಸಿವೆ. ಈಗಲೂ ಲಭಿಸುತ್ತಿವೆ.

ಆದರೆ, ಕರ್ನಾಟಕದಲ್ಲಿ ಸ್ವಾತಂತ್ರೋತ್ತರ ಕಾಲದ ಆರಂಭಿಕ ಹಂತದಿಂದಲೂ ಇಲ್ಲಿನ ರಾಜಧಾನಿಯಲ್ಲಿ ಸ್ಥಾಪನೆಗೊಂಡ ಅನೇಕ ಪ್ರತಿಷ್ಠಿತ ಕೇಂದ್ರೋದ್ಯಮ ಮೂಲ ನಿವಾಸಿಗಳಾದ ಕನ್ನಡಿಗರಿಗಿಂತ ಅದ್ದೂರಿಯಿಂದ, ನಿಶ್ಚಿಂತೆಯಿಂದ ಜೀವಿಸುತ್ತಿದ್ದಾರೆ.

ಯಾವುದೇ ಹುದ್ದೆಯಾದರೂ ಶ್ರದ್ಧೆ ಹಾಗೂ ಪರಿಶ್ರಮಗಳಿಂದ ನಿರ್ವಹಿಸಬೇಕೆಂಬ ದೃಢ ಇಚ್ಛಾಶಕ್ತಿಯ ಕೊರತೆ ಹಾಗೂ ಅಥವಾ ಕೀಳರಿಮೆ, ಸಂಕೋಚ ಪ್ರವೃತ್ತಿಗಳೂ ಒಣ ಪ್ರತಿಷ್ಠೆಗಳು ಕನ್ನಡಿಗರಾದ್ದರಿಂದ ಕನ್ನಡಿಗರ ನ್ಯಾಯಬದ್ಧ ಹಕ್ಕು, ಸೌಲಭ್ಯಗಳನ್ನು ವಿವಿಧ ಪರಭಾಷೆಗಳ ಅಸಂಖ್ಯ ಜನರು ಕಬಳಿಸಲು ಮೂಲ ಕಾರಣವಾಗಿರುವುದು ಅತಿ ವಿಷಾದನೀಯ ವಾಸ್ತವ ಸಂಗತಿಯಾಗಿದೆ.

ಅಂದಾಜು ಮೂರು ದಶಕಗಳ ಮುನ್ನವೇ ನೇಮಕಗೊಂಡಿದ್ದ ಡಾ. ಸರೋಜಿನಿ ಮಹಿಷಿ ವರದಿಯಂತೆ ನಮ್ಮ ರಾಜ್ಯದಲ್ಲಿನ ಎಲ್ಲ ವಲಯಗಳಲ್ಲಿನ ಹುದ್ದೆಗಳ ಶೇ. 80 ಭಾಗ ಕನ್ನಡಿಗರಿಗೆ ಲಭಿಸುವಂಥ ಕಟ್ಟು ನಿಟ್ಟಿನ ವ್ಯವಸ್ಥಾ ಕ್ರಮಗಳು ಇನ್ನೂ ಅನುಷ್ಠಾನಗೊಂಡಿಲ್ಲ.

ಈಗ ಸ್ಥಾಪನೆಗೊಳ್ಳಲಿರುವ ಎಲ್ಲ ಉದ್ದಿಮೆಗಳಲ್ಲೂ ಶೇ.80 ರಷ್ಟು ಕನ್ನಡ ಮಾತೃ ಭಾಷೆಯವರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕೆಂಬ ಪೂರ್ವಭಾವಿ ನಿಬಂಧನೆಯನ್ನು ರಾಜ್ಯ ಸರ್ಕಾರ ಆಯಾ ಉದ್ದಿಮೆದಾರರಿಗೆ ತಪ್ಪದೆ ವಿಧಿಸಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X