ಮಿಡ್ಲ್ ಈಸ್ಟ್ ನಲ್ಲಿ ಮನೆ ಹುಡುಕಿ ನೋಡು!

Posted By: ಆರತಿ ಘಟಿಕಾರ್
Subscribe to Oneindia Kannada

ಮನೆ ಹುಡುಕಿ ನೋಡು
ಮನೆ ಖಾಲಿ ಮಾಡಿ ನೋಡು
ಹಾಕಿ ಕೊಂಡಿರುವೆವು ನಾವು ಸವಾಲು
ತಿಂಗಳಾನುಗಟ್ಟಲೆಯಾದರೂ
ಮುಗಿಯುತ್ತಲೆ ಇಲ್ಲ ಬವಾಲು!

Hallಉ bedroomಉ ಅಷ್ಟೆ ನೋಡಿ
ಸೈ ಎನ್ನುತ್ತಾರೆ ಯಜಮಾನರು
ನಮ್ಮ ಭಾರಿ ಸಾಮಾನು ಹಿಡಿಸಲು ;
ಅಡುಗೆ ಕೋಣೆಯ ಕಟ್ಟೆಯಂಗುಲವನ್ನೂ
ಅಳೆಯುತ್ತಾ ಸಜ್ಜಾಗುತ್ತೇನೆ ನಾನು
ಸರಿಯಿಲ್ಲ ಮನೆಯಂಬ ವಾದದಲ್ಲಿ
ಈ ಬಾರಿಯೂ ನಾನೆ ಗೆಲ್ಲಲು...

Searching for a home in Middle East

ಲಕ್ಕಿಯಾದರು ಇರಲಿ
ಮನೆಯ ಅಂಕಿ ಸಂಖ್ಯೆ
ಆಸೆಪಡುತ್ತದೆ ಇವರ ಮನಸು
ಮಂಬಾಗಿಲ ದಿಕ್ಕು ಉತ್ತರ, ಪೂರ್ವಕ್ಕೆ
ಇಲ್ಲದಿರೆ ಮಾಡುವುದೆ ಇಲ್ಲ ನನ್ನ
compassಉ ಮನೆಯನ್ನು ಪಾಸು
ಅಯ್ಯೊ! ಒಪ್ಪಿಕೊ ಮಾರಾಯತಿ
ದೇಶವೆ middle "Eastಉ"
ಇವರ ಜೊಕಿಗೆ
ನಗದಿರುವುದೆ ಲೇಸು!

ದಿನಕ್ಕೆ ಇಪ್ಪತ್ತು flatಉ
ನೋಡಿದರೂ ಕೊಡಬೇಕಿಲ್ಲ
ಏಜೆಂಟಿಗೆ ಈಗ ಸದ್ಯಕ್ಕೆ ಹಣ
ಇದು ಸರಿಯಿಲ್ಲ ಅದು ಬೇಕಿಲ್ಲ
ನಮ್ಮ ತಕರಾರಿಗೆಲ್ಲಾ ಅವ
ನಗುನಗುತ್ತಲೆ ಆಡಿಸಬೇಕು ಗೋಣ!

ಬಹು ಮಹಡಿ ಕಟ್ಟಡಗಳೆ ರಾಶಿ
ಮತ್ತೆ ನೋಡಿದ್ದ flatನ್ನೆ
ಕಣ್ಣರಳಿಸಿ ನೋಡುವ ನಮಗೆ
ಸಿಕ್ಕೀತು ಮರೆಗುಳಿ ಪ್ರಶಸ್ತಿ!
ತಿರುಗಾಟದ ಸುಸ್ತಿಗೆ ಒಮ್ಮೊಮ್ಮೆ
ನನ್ನಡುಗೆ ಊಟಕ್ಕೂ ನಾಸ್ತಿ
ಹೋಟಲ್ ಮಾವನ ಮನೆಯಲ್ಲು
ಮುಂದುವರೆಯುವುದು ನಮ್ಮ ಕುಸ್ತಿ!

Searching for a home in Middle East

ಕೊನೆಗೂ ಇಷ್ಟ ಪಟ್ಟೆವೊಂದು
ಸುಂದರ flatಉ
ಇಬ್ಬರಿಗೂ ಬೇಕಾದ ರೀತಿಯಲ್ಲೆ
ಇತ್ತದು ಥೇಟು
Agentಉ ಹಲ್ಕಿರಿಯುತಾ
ನುಡಿದ, ಇದಾಗಲೆ ಹೋಯ್ತು
ನೀವು ತುಂಬಾ lateಉ!

ಉಸ್ಸಪ್ಪ! ಮತ್ತೆ ಶುರು
ಮನೆಯ ಬೇಟೆ
ಸಿಕ್ಕಾಗ ಹೊಸ flatಉ
ಇನ್ನು ಮಾಡೆವು fightಉ
ಎನ್ನುತಾ ಆದೆವು adjustಉ
ಅದರೆ ಗಾಬರಿ ಚಿಂತೆ ನನಗೆ
ಕಟ್ಟಲಿ ಹೇಗೆ ನಾನು
ನಮ್ಮನೆಯ ರಾಶಿ ಸಾಮಾನು
ಮೊದಲಿನಂತಿಲ್ಲ ನಾ fitಉ!

ಹಳೆಯದೆಲ್ಲವನೂ ಎಸಿ
ಎನ್ನುವ ವಿಷಯಕ್ಕಿವರು
ನಿರ್ದಯಿ maleಉ
ಅವೆ ನನ್ನನ್ನು ಮಾಡುತ್ತವೆ
ಎಮೋಶನಲ್ ಬ್ಲ್ಯಾಕ್ mailಉ
ಸಣ್ಣವಾದ ನಂತರ ಧರಿಸುವಾಸೆಯಲಿಟ್ಟ
ಅರಿವೆಯೆನ್ನೆಲ್ಲಾ
ಮಾಡಿದರು ಕಸದ ಪಾಲು
ಇದೆ ಗಡಿಬಿಡಿಯಲಿ
ತಮ್ಮ ಹೊಸ ಬಟ್ಟೆಗಳನೂ
ಎಸೆದು ಆದರು foolಉ!

ಮುಗಿಯುತ್ತಿಲ್ಲ ಪ್ಯಾಕಿಂಗು
ನೋಯುತ್ತಿವೆ ರಟ್ಟೆ
ಕಾಯಕವೆ ಕೈಲಾಸವೆಂದು
ದಿನಪೂರ್ತಿ Fb whatsapp
ನೋಡುವುದೂ ಬಿಟ್ಟೆ
ನಗಬೇಡಿ ಮಹನೀಯರೆ
ಮನೆ ಖಾಲಿ ಮಾಡುವ
ನನ್ನ ಗೋಳನ್ಮು ನಿಮ್ಮುಂದಿಟ್ಟೆ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Finding a shelter, rent or own, is never an easy task. You have to find the place of your choice, get shifted and get adjusted! Only those people know the hardship who have gone through it. A poet on it by Arathi Ghatikar, Dubai.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ