• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನೆಕ್ಟಿಕಟ್ನಲ್ಲಿ ವೀರಶೈವ ಸಮಾಜದಿಂದ ಶಿವರಾತ್ರಿ

By ನಾಗರಾಜ್ ಎಂ., ಕನೆಕ್ಟಿಕಟ್
|

ಎಲ್ಲೆಡೆ ನೋಡಿದರು, ಕೇಳಿದರು "ಓಪ್.. ಓಪ್.. ಗಂಗುಮ್ ಸ್ಟೈಲ್" ಅಂತ ಹೇಳುತ್ತಾ.. ಮೈ ಬಿಚ್ಚಿ, ನಮಗೆ ಯಾರ ಭಯವಿಲ್ಲ ಅನ್ನೋ ರೀತಿ ಕುಣಿಯೋ ಈ ಅಮೆರಿಕಾದಲ್ಲಿ, ಒಮ್ಮೆಲೇ "ಶಿವ ಶಿವ ಅಂದರೆ ಭಯವಿಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ!" ಅನ್ನೋ ಹಾಡು ಕೇಳಿದೊಡನೆಯೇ ಹೇಗಾಗಿರಬೇಡ? ಹಾ! ಹಾ! ಅದ ಕೇಳಿ.. ಎರಡು ಕರ್ಣಗಳಿಗೆ ಇಂಪಾದರೆ, ಆ ಭಕ್ತ ಸಿರಿಯಾಳ ಸಿನೆಮಾದ ಸನ್ನಿವೇಶ ತಟ್ಟನೆ ಎರಡು ಕಣ್ಣುಗಳ ಮುಂದೆ ಬಂದು ತಂಪಾಗಿದ್ದರಲ್ಲಿ ಯಾವುದೇ ಸಂಶಯವಿಲ್ಲ.

ಆದರೆ ಇದು ನಡೆದದ್ದು ಸಾವಿರಾರು ಮೈಲಿ ದೂರದ ಅಮೆರಿಕಾದ ಕನೆಕ್ಟಿಕಟ್ನಲ್ಲಿ VSNE ನಡೆಸಿಕೊಟ್ಟ ಶಿವರಾತ್ರಿ 2013 ಆಚರಣೆಯಲ್ಲಿ. ಚಿಕ್ಕ ಚಿಕ್ಕ ಪುಟಾಣಿಗಳು ಮುಗ್ಧವಾಗಿ ಶಿವನ ಹಾಡು ಹೇಳುತ್ತಾ, ಅದಕ್ಕೆ ಸರಿಯಾಗಿ ಹೆಜ್ಜೆ ಹಾಕಿದಾಗ, ಎಲ್ಲರ ಮನದಲ್ಲೂ ಭಕ್ತಿ-ಭಾವ ಮೂಡಿ, ಆ ಜಗದೊಡೆಯ ಶಿವ ಶಂಕರನ ಸ್ತೋತ್ರವನ್ನು ಎಲ್ಲರೂ ಪಟಿಸುವಂತೆ ಮಾಡಿತ್ತು.

ಮಾರ್ಚ್ 16ರಂದು ಕನೆಕ್ಟಿಕಟ್ನಲ್ಲಿರುವ ಶ್ರೀ ಸ್ವಾಮಿ ಸತ್ಯನಾರಾಯಣ ದೇಗುಲದ ಆಡಿಟೋರಿಯಂನಲ್ಲಿ ನೂತನ VSNE ಕಮಿಟಿ ಸದಸ್ಯರ ನೇತೃತ್ವದಲ್ಲಿ - ಸರಿತಾ, ವಾಣಿ ಹಾಗು ಯಶವಂತ್ ಗಡ್ಡಿರವರ ಸುಂದರ ನಿರೂಪಣೆಯೊಂದಿಗೆ ಯಶಸ್ವಿಯಾಗಿ ನಡೆಯಿತು.

ಸರಿಯಾಗಿ ಮಧ್ಯಾಹ್ನ 3.30ಕ್ಕೆ ಗಣೇಶ, ಬಸವ ಪೂಜೆಯೊಂದಿಗೆ ಪ್ರಾರಂಭವಾಗಿ, ವಾಣಿ, ಸುಮಾ ಹಾಗು ಪುಟಾಣಿ ಮಕ್ಕಳು ಪ್ರಾರ್ಥನೆ ಗೀತೆ ಹಾಡಿದಮೇಲೆ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನೆರವೇರಿತು. ಈ ಬಾರಿ ಎಲ್ಲ ಹಿರಿಯರ ಜೊತೆ ಇಲ್ಲೇ ಹುಟ್ಟಿ ಬೆಳೆದ ಪುಟಾಣಿಗಳು ಸಹಾ ಉತ್ಸಾಹ-ಕುತೂಹಲದಿಂದ ಭಾಗವಹಿಸಿ ಪೂಜೆ ಮಾಡಿದ್ದು ತುಂಬಾ ವಿಶೇಷವಾಗಿತ್ತು.

ಇತರ ಕಾರ್ಯಕ್ರಮಗಳು

1) ಇಷ್ಟ ಲಿಂಗ ಪೂಜೆ - ನಡೆಸಿ ಕೊಟ್ಟವರು ವಾಣಿ ಹುಲಿಕೆರೆ

2) ಮಕ್ಕಳಿಂದ ಪ್ರಾರ್ಥನೆ

3) ಶಿವನು ಭಿಕ್ಷೆಗೆ ಬಂದ - ಲಿಂಗಷ್ಟಕಂ ಹಾಡಿದವರು ಕು.ಇಂಚರ ಗಡ್ಡಿ

4) ಬ್ರಹ್ಮ ಮುರಾರಿ - ಲಿಂಗಷ್ಟಕಂ ..ಹಾಡಿದವರು ಕು.ಇಷಾ ಮತ್ತು ಕು.ಅನಿಷಾ ಅರಭಾವಿ

5) ಅಷ್ಟಾವರಣ, ಪಂಚಾಚಾರ ಮತ್ತು ಷಟ್ ಸ್ಥಲಗಳ ಒಂದು ಸಂಕ್ಷಿಪ್ತ ವಿವರಣೆ - ರಾರವಿ ವಿರೂಪಾಕ್ಷ ಗೌಡರಿಂದ

6) ಮಕ್ಕಳಿಂದ ವಚನ ಹಾಡುಗಾರಿಕೆ

7) ದೊಡ್ಡವರಿಂದ ವಚನ ಹಾಡುಗಾರಿಕೆ

8) ವಚನ ಮತ್ತು ಅದರ ಅರ್ಥ - ಒಂದು ವಿವರಣೆ ...ಕು.ಶ್ರೇಯ ಗೌಡರಿಂದ

9) ಶಿವರಾತ್ರಿ ಹಬ್ಬದ ಬಗ್ಗೆ ಒಂದು ವಿವರಣೆ - ನೀಡಿದವರು ಆಕಾಶ್ ಗುಂದಗತ್ತಿ

10) ವಿಶೇಷ ಹಾಡುಗಾರಿಕೆ - ವೃಂದ ಮತ್ತು ಲತಾರಿಂದ

11) ಶಿವನು ಭಿಕ್ಷೆಗೆ ಬಂದ ಹಾಡಿಗೆ ನೃತ್ಯ ಮಾಡಿದವರು ದಿಶಾ ಮುದೆನುರ್

12) ಶಿವ ಶಿವ ಎಂದರೆ ಭಯವಿಲ್ಲ - ಎಂದು ಯಾವುದೇ ಭಯವಿಲ್ಲದೆ ಸೊಗಸಾಗಿ ಸ್ಟೇಜ್ ಮೇಲೆ ಹೆಜ್ಜೆ ಹಾಕಿದ್ದು 3ರಿಂದ 5 ವರ್ಷದ ಪುಟಾಣಿಗಳಾದ ಸಚಿತ್, ಮೇಘ, ತನಿಷ್ಕ ಮತ್ತು ಮಾನಸಿ

13) ಎಲ್ಲ ಬಲ್ಲಿದನಯ್ಯ ಕಲ್ಯಾಣ ಬಸವಯ್ಯ - ಚಿಕ್ಕ ಮಕ್ಕಳಿಂದ ಒಂದು ಕೋಲಾಟ ನೃತ್ಯ ..ಸಾತ್ವಿಕ್, ಸಮರ್ಥ್, ಋತು, ಸಮನ್ಯು, ಸಂಜನಾ, ಸಾತ್ವಿಕ್ ಶಿವಪ್ರಸಾದ್, ಮಾನವ್, ಓಂ ಬಸವಯ್ಯ. ನೃತ್ಯ ನಿರ್ದೇಶನ ಸುಮಾ ಬಸಂತ್ ಹಾಗು ವಾಣಿ ಹುಲಿಕೆರೆ

14) ಭೋ ಶಂಭೋ ಶಿವ ಶಂಭೋ ಹಾಡಿಗೆ ಇಂಚರ ಗಡ್ಡಿ, ಕೃತಿ ಗೌಡ್, ಶೃಷ್ಟಿ ಸೋಸಲೆ, ಮೇಘನ, ಅನಿಷಾ ಮತ್ತು ಮಯೀ - ಒಂದು ಸಮೂಹ ನೃತ್ಯ

15) ಶ್ರೀ ವ್ಯಾಸರಾಜ ವಿರಚಿತ "ಮದನಪಿತಾನೆಂದು ಕುಣಿ ಕುಣಿದಾಡಲು, ಕೆದರಿದ ಕೆಂಜದೆಗಳ ಪುಂಜದೀ' - ಹಾಡು ರಘು ಸೋಸಲೆಯವರಿಂದ

16) ವಿಶ್ವ ಗುರು ಬಸವಣ್ಣನವರ ಬಗ್ಗೆ ಚಿಕ್ಕ ಮಕ್ಕಳಿಂದ ಒಂದು ನಾಟಕ - ಶರಣರಂತೆ ಕಪಟತನದಿಂದ ಬಸವಣ್ಣನವರ ಮನೆಗೆ ಭೋಜನ ಮಾಡಲು ಬಂದು, ಕೊನೆಗೆ ವಿಶ್ವ ಗುರು ಬಸವಣ್ಣನವರ ಮಹಿಮೆಗೆ ಸೋತು ನಿಜವಾಗಿ ಶರಣರಾದದ್ದು. ಸುಳ್ಳು ಹೇಳಿ ಭೋಜನ ಮಾಡಲು ಬಂದಂತೆ ಸೊಗಸಾಗಿ ಅಭಿನಯಿಸಿದ ಚಿಕ್ಕ ಮಕ್ಕಳಾದ ಸಮರ್ಥ್, ಸಾತ್ವಿಕ್ ಹುಲಿಕೆರೆ ಮತ್ತು ಸಾತ್ವಿಕ್ ಶಿವಪ್ರಸಾದ್.

ಈ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಮೇಲೆ...

- ಬಾಸ್ಟನ್ ನಲ್ಲಿ ನಡೆಯಲಿರುವ ನಾವಿಕ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಮಾಹಿತಿ ಪ್ರಚಾರ - ನಾಗರಾಜ್ ಮತ್ತು ತಂಡ.

- ಇಂಟರ್ನ್ಯಾಷನಲ್ ಬಸವ ಸೆಂಟರ್ ಬಗ್ಗೆ ಮಾಹಿತಿ ನೀಡಿದವರು - ಶೈಲೆಂದ್ರ ಕುಮಾರ್

- ಉತ್ತರ ಅಮೆರಿಕಾ ವೀರಶೈವ ಸಮಾಜದ ಬಗ್ಗೆ ಒಂದು ವಿವರಣೆ ನೀಡಿದವರು - ಇರಪ್ಪ ಅರಭಾವಿ

ಈ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಮೇಲೆ ಮನೆಯಲ್ಲೇ ಮಾಡಿ ತಂದ ಪ್ರಸಾದ ಸ್ವೀಕರಿಸಿದ ಹೊರನಾಡಿನಲ್ಲಿರುವ ಈ ಎಲ್ಲ ಶರಣ- ಶರಣೆಯರಲ್ಲಿ ಏನೋ ಒಂದು ಧನ್ಯತಾ ಭಾವ ಮೂಡಿತ್ತು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಶರಣ-ಶರಣೆಯರು ಪಕ್ಕದ ಬೋಸ್ಟನ್, ನ್ಯೂ ಹ್ಯಾಂಪ್ ಶೈರ್ ಕಡೆಯಿಂದ ಆಗಮಿಸಿ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದು ಎಲ್ಲರಿಗು ಹೆಚ್ಚಿನ ಸಂತೋಷ-ಸಡಗರವನ್ನುಂಟು ಮಾಡಿತ್ತು.

ಪಾತಕ ಶತಕೋಟಿಯನೊರಸಲು ಸಾಲದೆ ಒಂದು ಶಿವನ ನಾಮ?

ಸಾಲದೆ ಒಂದು ಹರನ ನಾಮ?

ಕೂಡಲ ಸಂಗಮದೇವಾ, ನಿಮ್ಮ ಉಂಡಿಗೆಯ ಪಶುವ ಮಾಡಿಧೆಯಾಗಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shivaratri 2013 was celebrated by Kannadigas in Connecticut, USA on 16th March. Various programs were organized by VSNE association to entertain the people. Report by Nagarana Maheswarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more