ಫೆ.13 ರಂದು ಪಂಚಮಸಾಲಿ ನೂತನ ಜಗದ್ಗುರುಗಳ ಪೀಠಾರೋಹಣ
ಬೆಂಗಳೂರು/ಬಾಗಲಕೋಟೆ, ಫೆಬ್ರವರಿ 10: ''ಕರ್ನಾಟಕದ ಪಂಚಮಸಾಲಿ ಸಮುದಾಯದ ಸಂಘಟನೆಯ ನೊಗಕ್ಕೆ ಹೆಗಲಾಗಲು ಜಮಖಂಡಿಯ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಫೆಬ್ರವರಿ 13 ರಂದು ಉದಯವಾಗಲಿದೆ. ಪಂಚಮಸಾಲಿಗಳ ಮೂಲ ಪೀಠದ ಪೀಠಾಧ್ಯಕ್ಷರಾದ ನಾವು ಹಾಗೂ ನಾಡಿನ ಶ್ರೇಷ್ಠ ಸಂತ-ಮಹಾಂತರ ದಿವ್ಯ ಸಾನಿಧ್ಯದಲ್ಲಿ ಐತಿಹಾಸಿಕ ಮೈಲುಗಲ್ಲು ಸ್ಥಾಪಿತವಾಗಲಿದೆ,'' ಎಂದು ಹರಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹರಿಹರದ ಯೋಗ ಸಿಂಹಾಸನಾಧೀಶ್ವರ ಜಗದ್ಗುರುಗಳಾದ ವಚನಾನಂದ ಮಹಾಸ್ವಾಮೀಜಿಗಳು ಹೇಳಿದರು.
ಇಂದು ಬೆಂಗಳೂರಿನ ಶ್ವಾಸ ಕೇಂದ್ರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಪಂಚಮಸಾಲಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ.
ಈ ಸಮುದಾಯವನ್ನು ಸಂಘಟಿಸಬೇಕು ಹಾಗೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸಮುದಾಯಕ್ಕೆ ಸಿಗಬೇಕಾದ ನ್ಯಾಯವನ್ನು ಒದಗಿಸಬೇಕು ಎನ್ನುವ ಏಕೈಕ ಉದ್ದೇಶದಿಂದ ಹರಿಹರದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠವನ್ನು 2008 ಫೆಬ್ರವರಿ 18 ರಂದು ಸ್ಥಾಪಿಸಲಾಯಿತು. ಅಂದು ನಾಡಿನ ಪ್ರಮುಖ ಮಠಾಧೀಶರುಗಳು ಒಗ್ಗೂಡಿ ಈ ಸಮುದಾಯಕ್ಕೆ ಪೀಠದ ಅವಶ್ಯಕತೆಯನ್ನು ಸಾರಿ ಹೇಳಿದ್ದರು.

ಜಮಖಂಡಿಯಲ್ಲಿ ಇನ್ನೊಂದು ಪೀಠ ಉದಯ
ಸುಮಾರು ಒಂದೂವರೆ ದಶಕಗಳ ನಂತರ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಪ್ರಸಿದ್ದಿಯಾಗಿರುವ ಬಾಗಲಕೋಟೆಯ ಜಮಖಂಡಿಯಲ್ಲಿ ಇನ್ನೊಂದು ಪೀಠದ ಉದಯವಾಗುತ್ತಿದೆ. ಅನ್ನ, ಅಕ್ಷರ, ಆರೋಗ್ಯದಂತಹ ತ್ರಿವಿಧ ದಾಸೋಹದ ಕಲ್ಪನೆಯಿಂಧ ಕೃಷ್ಣೆಯ ತಟದಲ್ಲಿ ನೂರಾರು ಮಠಾಧೀಶರುಗಳ ನೇತೃತ್ವದಲ್ಲಿ, ವೀರಶೈವ ಲಿಂಗಾಯತ ಪಂಚಮಸಾಲಿ ಮಠಾಧೀಶರ ಒಕ್ಕೂಟ ಚಾರಿಟೇಬಲ್ ಟ್ರಸ್ಟ್‌ನ ಅಡಿಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಸ್ಥಾಪನೆಯಾಗಿದೆ. ಫೆಬ್ರವರಿ 13 ರಂದು ನೂತನ ಜಗದ್ಗುರು ಪೀಠಾರೋಹಣ ಧರ್ಮಸಭೆ ಕಾರ್ಯಕ್ರಮ ನಡೆಯಲಿದ್ದು ವಿರಾಟ್ ರೈತ ಸಮಾವೇಶವನ್ನೂ ಆಯೋಜಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು

ಸಮಾಜದ ಸಂಘಟನೆಯ ನೊಗಕ್ಕೆ ಮತ್ತೊಂದು ಹೆಗಲು
ವೀರಶೈವ ಲಿಂಗಾಯತ ಸಮುದಾಯದ ಪಂಚಮಸಾಲಿ ಹಾಗೂ ಎಲ್ಲಾ ಒಳಪಂಗಡಗಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ 2ಎ ಮೀಸಲಾತಿ ಹಾಗೂ ಕೇಂದ್ರದ ಓ.ಬಿ.ಸಿ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವುದು. ಸಮುದಾಯದ ಮೂಲ ಉದ್ಯೋಗವಾದ ಕೃಷಿಯಲ್ಲಿ ಆದಾಯ ಕೇಂದ್ರಿತ ಕೃಷಿ ವ್ಯವಸ್ಥೆಗೆ ರೈತರನ್ನು ಸಿದ್ದಗೊಳಿಸುವ ನಿಟ್ಟಿನಲ್ಲಿ ಶ್ರೀಪೀಠವು ಪ್ರಧಾನ್ಯತೆ ನೀಡಲಿದೆ ಎಂದು ಹೇಳಿದರು.
ಪಂಚಮಸಾಲಿ ಸಮುದಾಯ ರಾಜ್ಯದ ವಿವಿಧ ಭಾಗಗಳಲ್ಲಿ ಹಂಚಿಕೊಂಡಿದೆ. ಈ ಸಮುದಾಯದ ಸಂಘಟನೆಗೆ ಕೇವಲ ಒಂದು ಪೀಠದ ವ್ಯಾಪ್ತಿ ಸಾಕಾಗುವುದಿಲ್ಲ. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದ ಸಮುದಾಯದ ಸಂಘಟನೆಗೆ ಈ ಜಮಖಂಡಿ ಪೀಠ ಸ್ಥಾಪನೆಯಾಗಿದೆ. ನಮ್ಮ ಸಂಘಟನೆಯ ನೊಗಕ್ಕೆ ಮತ್ತೊಂದು ಜೋಡೆತ್ತು ಸಿಕ್ಕಂತಾಗಿದೆ ಎಂದು ಹೇಳಿದರು.
ಚರ್ಚೆ: ವೀರಶೈವ ಒಂದು ವ್ರತ-ಲಿಂಗಾಯತ ಸ್ವತಂತ್ರ ಧರ್ಮ
ನಾಡಿನ ಶ್ರೇಷ್ಠ ಸಂತ-ಮಹಾಂತರ ದಿವ್ಯ ಸಾನಿಧ್ಯ
ನಾಡಿನ ಶ್ರೇಷ್ಠ ಸಂತ-ಮಹಾಂತರ ದಿವ್ಯ ಸಾನಿಧ್ಯ, ಸರ್ವ ಸಮಾಜದ ಭಾಂಧವರ ಉಪಸ್ಥಿತಿ ಹಾಗೂ ನಾಡಿನ ಪ್ರಮುಖ ನಾಯಕರುಗಳು ಭಾಗಿಯಾಗಲಿದ್ದಾರೆ.
ಫೆಬ್ರವರಿ 13 ರಂದು ಜಮಖಂಡಿಯ ಅಲಗೂರಿನಲ್ಲಿ ನಡೆಯಲಿರುವ ನೂತನ ಜಗದ್ಗುರು ಪೀಠಾರೋಹಣ ಧರ್ಮಸಭೆ ಕಾರ್ಯಕ್ರಮ ಹಾಗೂ ವಿರಾಟ್ ರೈತ ಸಮಾವೇಶದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಲ್ಲದೆ, ನಾಡಿನ ಶ್ರೇಷ್ಠ ಸಂತ - ಮಹಾಂತರ ದಿವ್ಯ ಸಾನಿಧ್ಯವಿರಲಿದೆ. ಅಲ್ಲದೆ, ಪ್ರಮುಖ ನಾಯಕರುಗಳು ಪಾಲ್ಗೊಳ್ಳಲಿದ್ದಾರೆ.

ಇನ್ನೊಂದು ಪೀಠದ ಅಗತ್ಯತೆ
ಇನ್ನೊಂದು ಪೀಠದ ಅಗತ್ಯತೆ ಬಹಳಷ್ಟಿತ್ತು. ನಮ್ಮ ಮೂಲ ಪೀಠದ ಜೊತೆಯಲ್ಲಿ ಹೆಜ್ಜೆ ಹಾಕುವಂತಹ ನೂತನ ಶಕ್ತಿ ಬೇಕಾಗಿತ್ತು ಈ ನಿಟ್ಟಿನಲ್ಲಿ ಇನ್ನೊಂದು ಪೀಠ ಸ್ಥಾಪನೆಯಾಗಿದೆ. ಆದರೆ, ಈಗಾಗಲೇ ಘೋಷಿಸಿರುವಂತೆ ಹರಿಹರ ಪೀಠ ಪಂಚಮಸಾಲಿಗಳ ಪಾಲಿಗೆ ಧರ್ಮಕ್ಷೇತ್ರವಾಗಿರಲಿದೆ. ನಾಡಿನ ಉದ್ದಗಲಕ್ಕೂ ಇನ್ನು ಕೆಲವು ಪೀಠಗಳು ಉದಯವಾಗಲಿ. ನಮ್ಮ ಪೀಠದ ಮೂಲತತ್ವಗಳನ್ನು ಪ್ರಚುರಪಡಿಸುವ ಎಲ್ಲಾ ಪೀಠಗಳಿಗೂ ನಮ್ಮ ಬೆಂಬಲ ಇರಲಿದೆ ಎಂದು ವಚನಾನಂದ ಮಹಾಸ್ವಾಮೀಜಿಗಳು ಹೇಳಿದರು.
ಪಂಚಮಸಾಲಿ 2ಎ ಮೀಸಲಾತಿ: ಬೆಳಗಾವಿಯಲ್ಲಿ ಸಿಎಂ ಹೇಳಿದ್ದೇನು?-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications